ವಿಜಯಪುರ: ಕೃಷ್ಣಾ ನದಿಯ ಅಚ್ಚುಕಟ್ಟು ಪ್ರದೇಶದ ಹಿಂಗಾರು ಹಂಗಾಮಿನ ಬೆಳೆಗಳ ರಕ್ಷಣೆಗೆ ಆಲಮಟ್ಟಿ ಮತ್ತು ನಾರಾಯಣಪುರ ಜಲಾಶಯದಿಂದ ನೀರು ಹರಿಸಿದ ರಾಜ್ಯ ಸರ್ಕಾರದ ನಿರ್ದಾರ ತುಂಬಾ ಸ್ವಾಗತಾರ್ಹವಾದುದೆಂದು ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರೊ.ಎಂ.ಜಿ ಎಂಕಂಚಿ ಹೇಳಿದ್ದಾರೆ.
ಈ ಕುರಿತು ಗುರುವಾರ ಪತ್ರಿಕಾ ಹೇಳಿಕೆ ನೀಡಿದ ಅವರು, ಅದರಂತೆ ಕೃಷ್ಣಾ ಮೇಲ್ದಂಡೆ ಯೋಜನೆಯ ಅವಳಿ ಜಿಲ್ಲೆಗಳ (ವಿಜಯಪುರ ಬಾಗಲಕೋಟೆ) ರೈತರ ತ್ಯಾಗ ಬಹುದೊಡ್ಡದೆಂಬುವುದು ಸರ್ಕಾರ ಮರೆಯಬಾರದು. ಅವಳಿ ಜಿಲ್ಲೆಯ ಕೃಷಿ ಅವಲಂಬಿತ ರೈತ ಸಮುದಾಯಕ್ಕೆ ನಿರಾಸೆ ಉಂಟು ಮಾಡದೆ ಒಂದು ಕಣ್ಣಿಗೆ ಬೆಣ್ಣೆ ಮತ್ತೊಂದು ಕಣ್ಣಿಗೆ ಸುಣ್ಣ ಎಂಬಂತೆ ಸರ್ಕಾರ ಮಲತಾಯಿ ಧೊರಣೆ ಬಿಟ್ಟು ಕೃಷಿ ಅವಲಂಬಿತ ಎಲ್ಲ ರೈತಾಪಿ ವರ್ಗಕ್ಕೆ ಕಾಲುವೆಗಳ ಮೂಲಕ ನೀರು ಹರಸುಸುವುದರಿಂದ ತುಂಬಾ ಸಹಾಯವಾಗುತ್ತದೆ. ಕಾರಣ ಈ ನಿಟ್ಟಿನಲ್ಲಿ ತಕ್ಷಣ ಸರ್ಕಾರ ಮುತುವರ್ಜಿಯನ್ನು ವಹಿಸಿ ಮುಳವಾಡ ಮತ್ತು ಚಿಮ್ಮಲಗಿ ಏತ ನೀರಾವರಿಯ ಕಾಲುವೆಗಳಿಗೆ ಆಲಮಟ್ಟಿ ಆಣೆಕಟ್ಟಿನ ಎಡ ಮತ್ತು ಬಲ ದಂಡೆಯಿಂದ ನೀರು ಹರಿಸಬೇಕೆಂದು ಆಗ್ರಹಿಸಿದರು.
ರೈತರ ಹಿಂಗಾರು ಹಂಗಾಮಿನ ಬೆಳೆಗಳಾದ ಜೋಳ,ಗೋಧಿ, ಮೆಣಸಿನಕಾಯಿ,ಹಾಗೂ ಈರುಳ್ಳಿ ಬೆಳೆಗಳನ್ನು ಬೆಳೆಯುವ ಸಲುವಾಗಿ ಸಾರ್ವಜನಿಕರ ಮತ್ತು ಜಾನುವಾರಗಳಿಗೆ ಕುಡಿಯುವ ನೀರಿನ ಸಮಸ್ಯೆ ತಲೆದೋರದಂತೆ ಕನಿಷ್ಟ ೨೦ ದಿನಗಳಿಗೊಮ್ಮೆ ಕಾಲುವೆಗೆ ನೀರು ಹರಿಸಬೇಕೆಂದು ಮುಖ್ಯಮಂತ್ರಿ, ನೀರಾವರಿ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎಂ.ಬಿ.ಪಾಟೀಲ್ ಹಾಗೂ ಜಿಲ್ಲೆಯ ಸಚಿವರು ಮತ್ತು ಶಾಸಕರಲ್ಲಿ ಅವರು ಮನವಿ ಮಾಡಿದ್ದಾರೆ.
Subscribe to Updates
Get the latest creative news from FooBar about art, design and business.
Related Posts
Add A Comment

