ವಿಜಯಪುರ: ದೇಶದ ಬೆನ್ನೆಲುಬಾಗಿರುವ ರೈತರಿಗೆ ಹೆಚ್ಚಿನ ಸಹಕಾರ ಮತ್ತು ಸುಸ್ತಿದಾರರಿಗೆ ಸಾಲದ ಬಗ್ಗೆ ಮಾಹಿತಿ ನೀಡಬೇಕೆಂದು ವಿಜಯಪುರ ಜಿಲ್ಲಾ ಸಹಕಾರ ಯೂನಿಯನ್ ಅಧ್ಯಕ್ಷ ಎಂ ಎಸ್ ಪಾಟೀಲ್ ಕರೆ ನೀಡಿದರು.
ಬುಧವಾರ ನಗರದ ಡಿಸಿಸಿ ಸಭಾ ಭವನದಲ್ಲಿ ಕರ್ನಾಟಕ ರಾಜ್ಯ ಸಹಕಾರ ಮಹಾಮಂಡಳ. ನಿ.. ಬೆಂಗಳೂರ ಹಾಗೂ ಜಿಲ್ಲಾ ಸಹಕಾರಿ ಯೂನಿಯನ್ ನಿ. ವಿಜಯಪುರ ಹಾಗೂ ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕ್ ನಿ..ಮತ್ತು ಸಹಕಾರ ಇಲಾಖೆ ಇವರ ಸಂಯುಕ್ತ ಆಶ್ರಯದಲ್ಲಿ ವಿಜಯಪುರ ಮತ್ತು ಬಸವನ ಬಾಗೇವಾಡಿ ತಾಲೂಕಿನ ವಿವಿದೋದ್ದೇಶ ಪ್ರಾಥಮಿಕ ಗ್ರಾಮೀಣ ಕೃಷಿ ಸಹಕಾರ ಸಂಘಗಳ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಹಾಗೂ ಕಂಪ್ಯೂಟರ್ ಆಪರೇಟರ್ ಗಳ ಒಂದು ದಿನದ ವಿಶೇಷ ತರಬೇತಿ ಉದ್ಘಾಟನೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಗ್ರಾಮೀಣ ಭಾಗದ ಜನತೆಗೆ ಸಹಕಾರ ಸಂಘಗಳಿಂದ ಹೆಚ್ಚಿನ ಸೌಲಭ್ಯಗಳು ದೊರೆಯುವಂತೆ ಕಾರ್ಯನಿರ್ವಹಿಸಲು ತರಬೇತು ದಾರರಿಗೆ ತಿಳಿಸಿದರು.
ಕಾರ್ಯಕ್ರಮ ಉದ್ಘಾಟಿಸಿದ ಡಿಸಿಸಿ ಬ್ಯಾಂಕಿನ ನೂತನ ನಿರ್ದೇಶಕ ಚಂದ್ರಶೇಖರ್ ಗೌಡ ಪಾಟೀಲ(ಮನಗೂಳಿ ) ಮಾತನಾಡಿದರು.
ಸಹಕಾರಿ ಯೂನಿಯನ್ ನಿರ್ದೇಶಕ ಶಿವನಗೌಡ ಎಸ್ ಬಿರಾದಾರ, ನಿಂಗಪ್ಪ ನಾವಿ, ಸಹಕಾರ ಸಂಘಗಳ ಪ್ರಭಾರ ಉಪ ನಿಬಂಧಕ ಎಸ್ ಕೆ ಭಾಗ್ಯಶ್ರೀ, ವಿಜಯಪುರ ಉಪ ವಿಭಾಗ ಸಹಕಾರ ಸಂಘಗಳ ನಿಬಂಧಕ ಚೇತನ ಬಾವಿಕಟ್ಟಿ, ಬಸವನ ಬಾಗೇವಾಡಿ ತಾಲೂಕು ಸಹಕಾರಿ ಅಭಿವೃದ್ಧಿ ಅಧಿಕಾರಿ ಶ್ರೀಶೈಲ ಹಂಗರಗಿ, ವಿಜಯಪುರ ಸಹಕಾರ ಸಂಘಗಳ ಅಭಿವೃದ್ಧಿ ಅಧಿಕಾರಿ ಎಸ್ ಡಿ ಮನಗೂಳಿ, ಶ್ರೀಧರ ರತ್ನಾಕರ್, ಮುಖ್ಯ ಕಾರ್ಯ ನಿರ್ವಹಣಾ ಅಧಿಕಾರಿ ಸವಿತಾ ಬಿಸನಾಳ ಮುಂತಾದವರು ವೇದಿಕೆ ಮೇಲಿದ್ದರು
Subscribe to Updates
Get the latest creative news from FooBar about art, design and business.
Related Posts
Add A Comment

