ವಿಜಯಪುರ: ಕ್ರೀಡೆ ಸದೃಢ ಸಮಾಜಕ್ಕೆ ಬೆಂಬಲವಾಗಿ ನಿಲ್ಲುತ್ತದೆ. ಕ್ರೀಡೆಯಿಂದ ಮಾನಸಿಕವಾಗಿ ದೈಹಿಕವಾಗಿ ವ್ಯಕ್ತಿಗಳ ನಿರ್ಮಾಣವಾಗುತ್ತದೆ. ಯುವಶಕ್ತಿ ಅತಿ ಹೆಚ್ಚು ಕ್ರೀಡಾ ಚಟುವಟಿಕೆಗಳಲ್ಲಿ ಭಾಗವಹಿಸಬೇಕು ಎಂದು ಎಬಿವಿಪಿಯ ಉತ್ತರ ಪ್ರಾಂತ ರಾಜ್ಯ ಕಾರ್ಯದರ್ಶಿ ಸಚಿನ ಕುಳಗೇರಿ ಹೇಳಿದರು.
ನಗರದ ಡಾ. ಬಿ ಆರ್ ಅಂಬೇಡ್ಕರ ಕ್ರೀಡಾಂಗಣದಲ್ಲಿ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಹಾಗೂ ಖೇಲೋ ಭಾರತ ವತಿಯಿಂದ ಸ್ವಾಮಿ ವಿವೇಕಾನಂದರ ಜಯಂತಿ ಅಂಗವಾಗಿ “ವಿವೇಕ ಟ್ರೋಫಿ” -೨೦೨೪ ನ್ನು ಉದ್ಘಾಟಿಸಿ ಮಾತನಾಡಿದ ಅವರು, ಪಠ್ಯ ಚಟುವಟಿಕೆಗಳ ಜೊತೆಗೆ ವಿದ್ಯಾರ್ಥಿಗಳು ಕ್ರೀಡೆಯ ಆಸಕ್ತಿ ಬೆಳೆಸಿಕೊಳ್ಳಬೇಕು ಎಂದರು.
ಬಿ.ಎಲ್.ಡಿ.ಇ. ಆಯುರ್ವೇದ ಕಾಲೇಜಿನ ಪ್ರಾಚಾರ್ಯ ಡಾ, ಸಂಜಯ ಕಡ್ಲಿಮಟ್ಟಿ ಮಾತನಾಡಿದರು.
ಖೇಲೋ ಭಾರತ ಪ್ರಮುಖ ಅಪ್ಪು ಹೂಗಾರ ಮಾತನಾಡಿ, ಎಬಿವಿಪಿಯು ಹೋರಾಟ, ಕಾರ್ಯಕ್ರಮಗಳ ಜೊತೆಗೆ ಈ ರೀತಿಯ ಕ್ರೀಡಾ ಚಟುವಟಿಕೆಗಳನ್ನು ಮಾಡುವ ದೃಷ್ಟಿಯಿಂದ ಈ ಸ್ಪರ್ಧೆಯನ್ನು ಹಮ್ಮಿಕೊಳ್ಳಲಾಗಿದೆ. ಜಿಲ್ಲಾ ಕೇಂದ್ರಗಳಲ್ಲಿ ಆಯ್ಕೆಯಾದ ತಂಡಗಳು ಮುಂದೆ ರಾಜ್ಯಮಟ್ಟದಲ್ಲಿ ಆಡಲಿವೆ ಎಂದರು.
ಎಬಿವಿಪಿಯ ಪ್ರಮುಖರಾದ ಅಮಿತಕುಮಾರ ಬಿರಾದಾರ, ಎಮ್ ಎಸ್ ಬಿರಾದಾರ, ಎಸ್ ಎಸ್ ಹೀರೆಮಠ, ಎಚ್ ವೆಂಕಟೇಶ, ಹರ್ಷಾ ನಾಯಕ, ಮಂಜುನಾಥ ಹಳ್ಳಿ ಶಿವನಗೌಡ ಬಿರಾದಾರ, ಮಲ್ಲಿಕಾರ್ಜುನ ಮಾಳಿ, ಸಿದ್ದು ಪತ್ತಾರ, ರೇಖಾ ಮಾಳಿ, ಕವಿತಾ ಬಿರಾದಾರ, ಶಾಂತವೀರಯ್ಯ ಮಠ ಇತರರು ಇದ್ದರು
Subscribe to Updates
Get the latest creative news from FooBar about art, design and business.
Related Posts
Add A Comment

