ಕೊಲ್ಹಾರ: ಕೃಷ್ಣಾ ಮೇಲ್ದಂಡೆ ಯೋಜನೆಗಾಗಿ ವಿಜಯಪುರ -ಬಾಗಲಕೋಟ ಜಿಲ್ಲೆಯ ಜನರ ತ್ಯಾಗ ಬಹು ದೊಡ್ಡದು ಎನ್ನುವುದನ್ನು ಸರಕಾರ ಮರೆತಂತೆ ಕಾಣುತ್ತದೆ ಎಂದು ಭಾರತೀಯ ಜನತಾ ಪಕ್ಷದ ಜಿಲ್ಲಾ ಮುಖಂಡ ಟಿ.ಟಿ.ಹಗೇದಾಳ ಆರೋಪಿಸಿದರು.
ಈ ಕುರಿತು ಬುಧವಾರ ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿದ ಅವರು, ಯಾದಗಿರಿ ಮತ್ತು ಕಲಬುರ್ಗಿ ಜಿಲ್ಲೆಯ ರೈತರ ಕೂಗಿಗೆ ಸರಕಾರ ಸ್ಪಂದಿಸಿ ಕಾಲುವೆಗಳಿಗೆ ನೀರು ಹರಿಸಿರುವದು ಆ ಬಾಗದಲ್ಲಿ ಬರುವ ರೈತರಿಗೆ ಅನುಕೂಲಕರವಾಗಿರುವದು ಸ್ವಾಗತಾರ್ಹ ವಿಷಯ ಅದರಂತೆ ಅವಳಿ ಜಿಲ್ಲೆಯ ರೈತ ಬಾಂಧವರು ಮಳೆ ಸರಿಯಾಗಿ ಬಾರದೇ ಕೃಷಿ ಅವಲಂಬಿತ ನೀರಾವರಿ ಕ್ಷೇತ್ರದವರಿಗೆ ಕಾಲುವೆಗಳಿಗೆ ನೀರು ಹರಿಸುವುದರಿಂದ ಸ್ವಲ್ಪ ಮಟ್ಟಿಗೆ ಸಹಾಯವಾಗುತ್ತದೆ ಅದ್ದರಿಂದ ತಕ್ಷಣವೇ ಸರಕಾರವು ತನ್ನ ಜವಾನ್ದಾರಿಯನ್ನು ಅರಿತು ಮುಳವಾಡ ಏತ ನೀರಾವರಿಯ ಆಲಮಟ್ಟಿ ಆಣೆಕಟ್ಟಿನ ಎಡ ಮತ್ತು ಬಲದಂಡೆಯ ಕಾಲುವೆಗಳಿಗೆ ನೀರು ಹರಿಸಬೇಕೆಂದು ಆಗ್ರಹಿಸಿದರು.
ಕಾರಣ ಈ ಭಾಗದ ರೈತರ ಬೆಳೆಗಳಾದ ಜೋಳ, ಈರುಳ್ಳಿ, ತೊಗರಿ, ಮೆನಸಿನಕಾಯಿ,ಗೋದಿ ಇನ್ನೂ ಹಲವಾರು ಬೆಳೆಗಳನ್ನು ಬೆಳೆಯುವ ಸಲುವಾಗಿ ಬಿತ್ತನೆ ಮಾಡಿದ್ದು ಅವುಗಳು ಸರಿಯಾಗಿ ಬೆಳೆಯಲು ನೀರಿನ ಅವಶ್ಯಕತೆ ಬಹಳ ಪ್ರಾಮುಖ್ಯವಾಗಿದೆ ಮತ್ತು ದನಕರುಗಳಿಗೂ ಕೂಡ ಕುಡಿಯುವ ನೀರಿನ ಅಭಾವ ಸೃಷ್ಟಿಯಾಗಿದ್ದು ೧೫ ದಿನಕ್ಕೊಮ್ಮೆಯಾದರೂ ಕಾಲುವೆಗಳಿಗೆ ನೀರು ಹರಿಸಬೇಕು ಅದಕ್ಕೆ ತಯಾರಿ ಎಂಬಂತೆ ಎರಡು-ಮೂರು ದಿನದಲ್ಲಿ ಈ ಬಾಗದ ಕಾಲುವೆಗಳಿಗೆ ನೀರು ಹರಿಸಲು ಮುಖ್ಯಮಂತ್ರಿ ಎಸ್.ಸಿದ್ದರಾಮಯ್ಯ ಹಾಗೂ ಜಲಸಂಪನ್ಮೂಲ ಸಚಿವರಾದ ಡಿ.ಕೆ.ಶಿವಕುಮಾರ ಅಧಿಕಾರಿಗಳಿಗೆ ಆಧೇಶ ಮಾಡಬೇಕು ಈ ಆದೇಶ ಹೊರಡಿಸಲು ಜಿಲ್ಲಾ ಉಸ್ತುವಾರಿ ಸಚಿವ ಎಂ.ಬಿ.ಪಾಟೀಲ, ಸಚಿವ ಶಿವಾನಂದ ಪಾಟೀಲ, ಜಿಲ್ಲೆಯ ಶಾಸಕರು ಒತ್ತಡ ಹಾಕಬೇಕೆಂದು ಒತ್ತಾಯಿಸಿದರು.
Subscribe to Updates
Get the latest creative news from FooBar about art, design and business.
Related Posts
Add A Comment

