ಬಸವನಬಾಗೇವಾಡಿ: ನಮ್ಮ ದೇಹ ಸದೃಢವಾಗಿದ್ದರೆ ಮನಸ್ಸು ಸದೃಢವಾಗಿರುತ್ತದೆ. ವಿದ್ಯಾರ್ಥಿಗಳು ಉತ್ತಮ ಆರೋಗ್ಯ ಕಾಪಾಡಿಕೊಂಡಾಗ ಮಾತ್ರ ಅಧ್ಯಯನದಲ್ಲಿ ಉತ್ಸಾಹ ಇಮ್ಮಡಿಗೊಳ್ಳುತ್ತದೆ ಎಂದು ವಿಜಯಪುರ ಸೌಖ್ಯದಾ ಆಸ್ಪತ್ರೆಯ ಡಾ.ಅಂಬಿಕಾ ಪಾಟೀಲ ಹೇಳಿದರು.
ಪಟ್ಟಣದ ಬಸವೇಶ್ವರ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ವಿಜಯಪುರದ ಸೌಖ್ಯದಾ ಮಲ್ಟಿಸ್ಪೆಶಾಲಿಟಿ ಆಸ್ಪತ್ರೆ ಸಹಯೋಗದಲ್ಲಿ ಬುಧವಾರ ಹಮ್ಮಿಕೊಂಡಿದ್ದ ಉಚಿತ ಆರೋಗ್ಯ ತಪಾಸಣೆ ಶಿಬಿರಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಅನಾರೋಗ್ಯದ ಲಕ್ಷಣಗಳು ಕಂಡು ಬಂದರೆ ತಕ್ಷಣ ವೈದ್ಯರ ಸಲಹೆ ಪಡೆದುಕೊಳ್ಳಬೇಕು. ಸಣ್ಣ ಪುಟ್ಟ ಕಾಯಿಲೆ ಎಂದು ನಿಷ್ಕಾಳಜಿ ಮಾಡಬಾರದು. ಪ್ರತಿದಿನ ನಿಯಮಿತ ವ್ಯಾಯಾಮ ರೂಢಿಸಿಕೊಳ್ಳಬೇಕು. ಪೌಷ್ಟಿಕ ಆಹಾರದೊಂದಿಗೆ ಹಾಲು, ಹಣ್ಣು ಸೇವಿಸಬೇಕು ಎಂದು ಹೇಳಿದರು.
ಪ್ರಾಚಾರ್ಯ ಎಸ್.ಡಿ.ಪಾಟೀಲ ಮಾತನಾಡಿ, ಪ್ರತಿಯೊಬ್ಬರ ಬದುಕಿನಲ್ಲಿ ಆರೋಗ್ಯ ಮುಖ್ಯವಾಗಿದೆ. ವಿದ್ಯಾರ್ಥಿಗಳು ಇಂತಹ ಶಿಬಿರಗಳ ಸದುಪಯೋಗ ಪಡೆದುಕೊಂಡು ಆರೋಗ್ಯದ ಕಡೆಗೆ ಹೆಚ್ಚಿನ ಗಮನ ಹರಿಸಬೇಕು ಎಂದು ಹೇಳಿದರು.
ಡಾ.ಸುಶ್ಮಿತಾ ಪಾಟೀಲ, ಅಸ್ಪತ್ರೆಯ ಸಿಬ್ಬಂದಿ ಭಾಗೇಶ, ರಮೇಶ, ಅರುಣ, ಸಾವಿತ್ರಿ, ಪವಿತ್ರಾ, ಜ್ಯೋತಿ, ಸಚೀನ, ಉಪ ಪ್ರಾಚಾರ್ಯ ರಮೇಶ ಪೂಜಾರಿ, ಉಪನ್ಯಾಸಕರಾದ, ಜಿ.ಎಸ್.ಡೊಮನಾಳ, ಎಸ್.ವಿ.ಅಗಸರ, ಆರ್.ಬಿ.ಐನಾಪುರ, ರಾಜಶೇಖರ ಮುರಗೋಡ, ಎಸ್.ಎಸ್.ಸಜ್ಜನ, ಎಂ.ಆರ್.ಇಟಗಿ, ಎಸ್.ಎಸ್.ಅರಕೇರಿ ಇದ್ದರು.
Subscribe to Updates
Get the latest creative news from FooBar about art, design and business.
Related Posts
Add A Comment

