ಬಸವನಬಾಗೇವಾಡಿ: ಪಟ್ಟಣದ ಪ್ರವಾಸಿ ಮಂದಿರದಲ್ಲಿ ಜ. ೧೨ ರಂದು ಬೆಳಗ್ಗೆ ೧೧ ಗಂಟೆಗೆ ಕರ್ನಾಟಕ ದಲಿತ ಸಂಘರ್ಷ ಸಮಿತಿ (ಬಿ.ಕೃಷ್ಣಪ್ಪ ಬಣ) ಪದಾಧಿಕಾರಿಗಳ, ಸದಸ್ಯರ ಪೂರ್ವಸಭೆ ಕರೆಯಲಾಗಿದೆ.
ಸಭೆಯಲ್ಲಿ ಸಮಿತಿಯ ಸುವರ್ಣ ಸಂಭ್ರಮ ಸಮಾವೇಶ, ಕಾಂತರಾಜ ವರದಿ ಜಾರಿಗೆ ಆಗ್ರಹಿಸಿ ಜಿಲ್ಲಾಧಿಕಾರಿಗಳ ಕಚೇರಿ ಮುಂದೆ ಪ್ರತಿಭಟನೆ ಸೇರಿದಂತೆ ವಿವಿಧ ವಿಷಯಗಳ ಕುರಿತು ಚರ್ಚೆ ಮಾಡಲಾಗುವುದು.
ಪೂರ್ವಭಾವಿ ಸಭೆಗೆ ಸಮಿತಿಯ ರಾಜ್ಯ ಸಮಿತಿ ಸದಸ್ಯ ಭೀಮರಾಯ ಜಿಗಜಿಣಗಿ, ವೈ.ಎಸ್.ಮ್ಯಾಗೇರಿ, ಹರೀಶ ಮ್ಯಾಗೇರಿ, ರಾಯಪ್ಪ ದೊಡಮನಿ, ಏಕನಾಥ ದಾಶ್ಯಾಳ, ಕನಕೇಶ ಬಾಗೇವಾಡಿ ಇತರರು ಆಗಮಿಸುತ್ತಾರೆ. ಪೂರ್ವಭಾವಿ ಸಭೆಗೆ ಹೆಚ್ಚಿನ ಸಂಖ್ಯೆಯಲ್ಲಿ ಸಮಿತಿಯ ಪದಾಧಿಕಾರಿಗಳು, ಸದಸ್ಯರು ಆಗಮಿಸಬೇಕೆಂದು ಸಂಚಾಲಕ ತಮ್ಮಣ್ಣ ಕಾನಾಗಡ್ಡಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
Subscribe to Updates
Get the latest creative news from FooBar about art, design and business.
Related Posts
Add A Comment
