ಚಡಚಣ: ಸ್ವಚ್ಛ ಭಾರತ್ ಮಿಷನ್ (ನಗರ) 1.0 ಯೋಜನೆಯಡಿ ಬಯಲು ಶೌಚಮುಕ್ತ ನಗರ ಪ್ರದೇಶಗಳಾಗಿ ಘೋಷಿಸಲಾಗಿರುತ್ತದೆ. ಇತ್ತೀಚೆಗೆ ದಿನೇ ದಿನೇ ನಗರ ವ್ಯಾಪ್ತಿಯು ಹೆಚ್ಚಾಗುತ್ತಿರುವದರಿಂದ ಕೇಂದ್ರ ಸರ್ಕಾರವು ನಗರ ಪ್ರದೇಶಗಳಲ್ಲಿ ನೈಮ್ರ್ಯಲೀಕರಣ, ಸ್ವಚ್ಛತೆ ಮತ್ತು ಶುಚಿತ್ವದ ಮೇಲೆ ಹೆಚ್ಚು ಗಮನಹರಿಸಿ ಸ್ವಚ್ಛ ಭಾರತ್ ಮಿಷನ್ (ನಗರ)2.0 ಯೋಜನೆಯಡಿ, ಚಡಚಣ ಪಟ್ಟಣ ಪಂಚಾಯತಿಗೆ ವೈಯಕ್ತಿಕ ಶೌಚಾಲಯ ನಿರ್ಮಾಣಕ್ಕೆ 90 ಸೀಟ್ ಶೌಚಾಲಯ ನಿರ್ಮಾಣ ಮಾಡಲು ಮಂಜೂರಿಯಾಗಿದ್ದು, ಸದರಿ ಶೌಚಾಲಯ ನಿರ್ಮಾಣಕ್ಕೆ ಅರ್ಹ ಫಲಾನುಭವಿಗಳಿಂದ ಅರ್ಜಿ ಕರೆಯಲಾಗಿರುತ್ತದೆ ಎಂದು ಪಟ್ಟಣ ಪಂಚಾಯ್ತಿ ಮುಖ್ಯಾಧಿಕಾರಿ ಶಿವಾನಂದ ಪೂಜಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಅರ್ಹ ಫಲಾನುಭವಿಗಳು ಜ.17 ಸಂಜೆ 5.30ರೊಳಗೆ ಪಟ್ಟಣ ಪಂಚಾಯ್ತಿ ಕಾರ್ಯಾಲಯಕ್ಕೆ ಅರ್ಜಿಯನ್ನು ಸಲ್ಲಿಸಲು ತಿಳಿಸಿದ ಅವರು, ಅರ್ಜಿಗಳು ಪಟ್ಟಣ ಪಂಚಾಯತಿಯ ಆರೋಗ್ಯ ವಿಭಾಗದಲ್ಲಿ ಲಭ್ಯವಿರುತ್ತದೆ ಎಂದು ತಿಳಿಸಿದ್ದಾರೆ .
Subscribe to Updates
Get the latest creative news from FooBar about art, design and business.
Related Posts
Add A Comment
