ವಿಜಯಪುರ: ಹೊನ್ನಾವರದ ಕಾಸರಕೋಡ್ ಟೊಂಕದಲ್ಲಿ ಮೀನುಗಾರರಿಗೆ ಮತ್ತು ವಾಣಿಜ್ಯ ಬಂದರು ವಿರೋಧಿ ಹೋರಾಟಗಾರರಿಗೆ ಕೆಲವು ಅಪರಿಚಿತ ವ್ಯಕ್ತಿಗಳು ತಾವು ಭೂಗತ ಲೋಕದವರು, ಹೊನ್ನಾವರ ಪೋರ್ಟ್ ಪ್ರೈವೇಟ್ ಲಿಮಿಟೆಡ್ ಕಂಪನಿ ಅವರ ವಾಣಿಜ್ಯ ಬಂದರು ನಿರ್ಮಾಣಕ್ಕೆ ಮತ್ತು ರಸ್ತೆ ಕಾಮಗಾರಿಕೆಗೆ ಅಡ್ಡಿಪಡಿಸಿದರೆ ಪ್ರಾಣಬೆದರಿಕೆಯೊಡ್ಡಿ ಹೆದರಿಸಲು ಪ್ರಯತ್ನಿಸಿದ್ದು ಖಂಡನೀಯ ಎಂದು ರಾಷ್ಟೀಯ ಮೀನುಗಾರರ ಸಂಘದ ರಾಷ್ಟೀಯ ಉಪಾಧ್ಯಕ್ಷ ಡಾ.ಗೌತಮ್.ಆರ್.ಚೌಧರಿ ತಿಳಿಸಿದ್ದಾರೆ.
ಮಂಗಳವಾರ ಈ ಕುರಿತು ಪತ್ರಿಕಾ ಹೇಳಿಕೆ ನೀಡಿದ ಅವರು, ಇದೇ ವೇಳೆ ಮೀನುಗಾರಿಕೆ ಸಚಿವ
ಮಂಕಾಳ ವೈದ್ಯ ಘಟನಾ ಸ್ಥಳದಲ್ಲಿದ್ದು, ತಪ್ಪಿತಸ್ಥರನ್ನು ಕೂಡಲೇ ಬಂಧಿಸಿ ಕ್ರಮಕೈಗೊಳ್ಳಬೇಕೆಂದು ಆದೇಶಿಸಿರುವುದು ಸ್ವಾಗತಾರ್ಹವಾಗಿದೆ ಎಂದರು.
ಆದರೆ ಮೀನುಗಾರರ ಹಿತರಕ್ಷಣೆಗಾಗಿ ಯಾವುದೇ ಒತ್ತಡ ಹಾಗೂ ಶಿಫಾರಸುಗಳಿಗೆ ಮಣಿಯದೆ ಮುಂದೆ ಇಂತಹ ಅಹಿತಕರ ಘಟನೆಗಳು ನಡೆಯದಂತೆ ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮಗಳನ್ನು ತೆಗೆದುಕೊಳ್ಳುವಂತೆ ಮುಖ್ಯಮಂತ್ರಿಗಳಲ್ಲಿ ಹಾಗೂ ಮೀನುಗಾರಿಕೆ ಸಚಿವರಿಗೆ ಡಾ.ಗೌತಮ್.ಆರ್.ಚೌಧರಿ ಆಗ್ರಹಿಸಿದ್ದಾರೆ.
Subscribe to Updates
Get the latest creative news from FooBar about art, design and business.
Related Posts
Add A Comment

