ವಿಜಯಪುರ: ಉತ್ತರ ಕರ್ನಾಟಕ ಕೃಷಿ, ಶಿಕ್ಷಣ, ಸಾರಿಗೆ,ರೈಲು, ಆಡಳಿತರಾಜಕೀಯ, ಆಧ್ಯಾತ್ಮಿಕ ಮಾಧ್ಯಮ, ಉದ್ಯಮ, ಚಲನಚಿತ್ರ ಹಲವಾರು ಕ್ಷೇತ್ರಗಳಲ್ಲಿ ಆಗಿರುವ ಅನ್ಯಾಯ, ತಾರತಮ್ಯ ಮತ್ತು ಮಲತಾಯಿ ಧೋರಣೆ ಪ್ರತಿಭಟಿಸಿ ಪ್ರತ್ಯೇಕ ಉತ್ತರ ಕರ್ನಾಟಕ ರಾಜ್ಯಕ್ಕಾಗಿ ಆಗ್ರಹಿಸಿ ಮಂಗಳವಾರ ಸಂಸದ ರಮೇಶ ಜಿಗಜಿಣಿಗಿ ಕಚೇರಿಯಲ್ಲಿ ಉತ್ತರ ಕರ್ನಾಟಕ ಹೋರಾಟ ಸಮಿತಿ ರಾಜ್ಯ ಮತ್ತು ಜಿಲ್ಲಾ ಘಟಕಗಳ ಪದಾಧಿಕಾರಿಗಳು ಮನವಿ ಸಲ್ಲಿಸಿದರು.
ಈ ಸಂದರ್ಭದಲ್ಲಿ ಉತ್ತರ ಕರ್ನಾಟಕ ರಾಜ್ಯ ಹೋರಾಟ ಸಮಿತಿಯ ರಾಜ್ಯ ಪ್ರಧಾನ ಕಾರ್ಯದರ್ಶಿ ನಾಗೇಶ ಗೊಲಶೆಟ್ಟಿ, ವಿಜಯಪುರ ಜಿಲ್ಲಾ ಅಧ್ಯಕ್ಷ ಕಾಮಣ್ಣ ಗಂಗನಹಳ್ಳಿ, ಮಾಧ್ಯಮ ಸಲಹೆಗಾರ ಬಸವರಾಜ ಕನಕವಾಡಿ, ದೇವಕಾಂತ ಬಿಜ್ಜರಗಿ, ನ್ಯಾಯವಾದಿ ದಾನೇಶ ಅವಟಿ, ಸೋಮು ಜಗದಾಳ, ಗುರುಪಾದ ಕಲಾದಗಿ, ಬಾಬು ಚನ್ನಪ್ಪ ಗೌಡ, ಮೊದಲಾದರಿದ್ದರು.
Subscribe to Updates
Get the latest creative news from FooBar about art, design and business.
Related Posts
Add A Comment

