ಮುದ್ದೇಬಿಹಾಳ: ಪ್ರತಿ ವರ್ಷದಂತೆ ಈ ವರ್ಷವೂ ಕೂಡ ಪಟ್ಟಣದ ಹಳೆಯ ತರಕಾರಿ ಮಾರುಕಟ್ಟೆಯಲ್ಲಿರುವ ಖಾಸ್ಗತೇಶ್ವರ ಮಠದಲ್ಲಿ ಸಂಜೀವಿನಿ ಯುವಕ ಸಂಘದ ವತಿಯಿಂದ ಪ್ರಸಾದ ಸೇವೆ ಕಲ್ಪಿಸಲಾಗಿತ್ತು.
ಈ ವೇಳೆ ಸಂಘದ ಪ್ರಮುಖರಾದ ರಾಜೇಂದ್ರಗೌಡ ರಾಯಗೊಂಡ, ಪಿಡಿಓ ಮುತ್ತು ಗಣಾಚಾರಿ, ಶರಣು ಪಡದಾಳಿ, ಹರೀಶ ಬೆವೂರ ಮತ್ತೀತರರು ಮಾತನಾಡಿ, ಕಳೆದ ಮೂವತ್ತು ವರ್ಷದಿಂದ ಮಂತ್ರಾಲಯಕ್ಕೆ ತೆರಳುವ ಪಾದಯಾತ್ರಿಗಳಿಗೆ ಕುಶಲೋಪರಿ ವಿಚಾರಿಸಿ ರಾತ್ರಿಯ ಊಟ ಹಾಗೂ ಬೆಳಿಗ್ಗೆ ಉಪಹಾರ ಸೇವೆ ಕಲ್ಪಿಸುವ ಸೇವಾ ಕಾರ್ಯವನ್ನು ಸಂಜೀವಿನಿ ಯುವಕ ಸಂಘ ಮಾಡುತ್ತ ಬಂದಿದೆ. ನಮ್ಮೆಲ್ಲರ ಸ್ನೇಹಿತ ದಿ.ಶರಣು ಬೂದಿಹಾಳಮಠ ಅವರ ಮಾರ್ಗದರ್ಶನದಂತೆ ಈ ಸೇವೆಯಲ್ಲಿ ಪ್ರತಿಯೊಬ್ಬರೂ ಕಾಯಾ ವಾಚಾ ಮನಸಾ ತೊಡಗಿಕೊಳ್ಳುತ್ತೇವೆ ಎಂದರು.
ಸೇವೆಯಲ್ಲಿ ರಮೇಶ ಕೆಂಧೂಳಿ, ಶಿವು ಬಿಜಾಪೂರ, ಅಶೋಕ ವನಹಳ್ಳಿ, ಶೇಖರ ಪತ್ತಾರ, ಮಹಾಂತೇಶ ಮಡಿವಾಳರ, ಸಂತು ಬಾವೂರ, ರಾಜು ಬಳ್ಳೊಳ್ಳಿ, ರಾಜು ಹೊಳಿ, ಮಹಾಂತೇಶ ಬೂದಿಹಾಳಮಠ ಸೇರಿದಂತೆ ಅನೇಕರು ಪಾಲ್ಗೊಂಡಿದ್ದರು.
Subscribe to Updates
Get the latest creative news from FooBar about art, design and business.
Related Posts
Add A Comment

