ಸಿಂದಗಿ: ಮಹಿಳೆಯರು ಬದುಕು ಸ್ವಾವಲಂಬನೆಯಾಗಿರಬೇಕು ಎಂದು ಧರ್ಮಸ್ಥಳ ಸಂಘವು ಮಹಿಳೆಯರಿಗೆ ಉತ್ತೇಜನ ನೀಡುತ್ತಿದೆ ಎಂದು ಲೋಯಲ್ ಕೈಗಾರಿಕಾ ತರಬೇತಿ ಸಂಸ್ಥೆಯ ಉಪನ್ಯಾಸಕ ದ್ಯಾಮಣ್ಣ ಹೇಳಿದರು.
ಪಟ್ಟಣದ ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮೀಣ ಅಭಿವೃದ್ಧಿ ಯೋಜನಾ ಕಛೇರಿಯ ವತಿಯಿಂದ ಸ್ವ-ಸಹಾಯ ಸಂಘಗಳಿಗೆ ಸ್ವ-ಉದ್ಯೋಗ ಅಧ್ಯಯನ ಪ್ರವಾಸ ಕೈಗೊಂಡು ವಿಜಯಪುರ ನಗರದ ಲೋಯಲ್ ಕೈಗಾರಿಕಾ ತರಬೇತಿ ಸಂಸ್ಥೆಗೆ ಬೇಟಿ ನೀಡದ ಸಂದರ್ಭದಲ್ಲಿ ಅಲ್ಲಿನ ಉಪನ್ಯಾಸಕ ದ್ಯಾಮಣ್ಣ ಮಾಹಿತಿ ನೀಡಿದರು.
ಗೃಹ ಬಳಕೆಯ ಸ್ವ ಉದ್ಯೋಗಗಳಾದ ರೊಟ್ಟಿ ತಯಾರಿಕೆ, ಹಗ್ಗ ತಯಾರಿಕೆ, ಹಾಲು ಕರೆಯುವ ಮಿಲ್ಕಿಂಗ್ ಯಂತ್ರ, ಕುಂಬಾರಿಕೆ ಸೇರಿದಂತೆ ವಿವಿಧ ಸ್ವ-ಉದ್ಯೋಗಗಳ ಕುರಿತಾಗಿ ಮಾಹಿತಿ ನೀಡದರು.
ತದನಂತರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ರುಡ್‌ಸೆಟ್ ಸಂಸ್ಥೆಗೆ ಬೇಟಿ ನೀಡಿ ಜಗದೀಶ ಅವರಿಂದ ಟೈಲರಿಂಗ್ ಮತ್ತು ಕೃಷಿಯೇತರ ಮತ್ತು ಕೃಷಿಗೆ ಪೂರಕವಾದಂತ ಹಲವಾರು ಸ್ವ ಉದ್ಯೋಗಗಳ ಕುರಿತು ಮಾಹಿತಿ ಪಡೆದುಕೊಂಡರು. ಆರ್ಥಿಕವಾಗಿ ಅಭಿವೃದ್ಧಿಯಾಗುವಲ್ಲಿ ಹೆಣ್ಣು ಮಕ್ಕಳ ಪಾತ್ರದ ಬಹಲ ಮುಖ್ಯ. ಮಹಿಳೆಯರು ಸೌ-ಉದ್ಯೋಗಿಗಳಾಗುವ ಮೂಲಕ ಸ್ವಾವಲಂಬನೆಯ ಬದುಕು ಸಾಗಿಸಿರಿ ಎಂದರು.
ಈ ವೇಳೆ ಕೃಷಿ ಮೇಲ್ವಿಚಾರಕ ಸುರೇಶ, ವೆಂಕಟೇಶ, ಸೇವಾ ಪ್ರತಿನಿಧಿ ಪರ್ವಿನ ಸೇರಿದಂತೆ ಸ್ವ-ಸಹಾಯ ಸಂಘದ ಸದಸ್ಯರು ಭಾಗವಹಿಸಿದ್ದರು.
Subscribe to Updates
Get the latest creative news from FooBar about art, design and business.
Related Posts
Add A Comment

