ದೇವರಹಿಪ್ಪರಗಿ: ಕೋರವಾರ ವಿವಿಧೋದ್ಧೇಶ ಪ್ರಾಥಮಿಕ ಗ್ರಾಮೀಣ ಕೃಷಿ ಸಹಕಾರಿ ಸಂಘದ ಅಧ್ಯಕ್ಷರಾಗಿ ಸತತ ಮೂರನೇ ಬಾರಿಗೆ ಅವಿರೋಧವಾಗಿ ಸಂಗಮೇಶ್ ಛಾಯಾಗೊಳ್ ಆಯ್ಕೆಯಾದರು.
ಮಂಗಳವಾರ ಜರುಗಿದ ಚುನಾವಣಾ ಪ್ರಕ್ರಿಯೆಯಲ್ಲಿ ಉಪಾಧ್ಯಕ್ಷರಾಗಿ ಶರಣಪ್ಪ ತಾಳಿಕೋಟಿ ನೂತನ ಸದಸ್ಯರಾಗಿ ಸುಬ್ಬನಗೌಡ ಪೊಲೀಸ್ ಪಾಟೀಲ್, ನಾನಾಗೌಡ ಬೋರಾವತ್, ಶರಣಬಸವ ಸುಂಬಡ, ಗುರಣ್ಣ ಅಂಗಡಿ, ಸೋಮಶೇಖರ್ ಹಿರೇಮಠ, ಬಾಬಾಸಾಹೇಬ್ ಕೋಟಗಿ, ಇಸ್ಮಾಯಿಲ್ ವಡಗೇರಿ, ಚಿದಾನಂದ ಚವ್ಹಾಣ್, ಭೀಮರಾಯ ತಳವಾರ್ ಆಯ್ಕೆಯಾದರು. ನಂತರ ಇವರನ್ನು ಸನ್ಮಾನಿಸಲಾಯಿತು. ಚುನಾವಣಾಧಿಕಾರಿಗಳಾಗಿ ಲೀಲಾವತಿಗೌಡ ಕಾರ್ಯನಿರ್ವಹಿಸಿದರು.
ಗ್ರಾಮದ ಪ್ರಮುಖರಾದ ಮಲ್ಲನಗೌಡ ಬಿರಾದರ್, ಅಪ್ಪುಗೌಡ ಪಾಟೀಲ್, ಶ್ರೀನಾಥ್‌ಗೌಡ ಪಾಟೀಲ, ಹನುಮಂತರಾಯ ಪಾಟೀಲ, ಭೋಜಪ್ಪಗೌಡ ಬಿರಾದಾರ, ಬಸನಗೌಡ ಬಿರಾದಾರ, ಶರಣಗೌಡ ಪಾಟೀಲ, ಸಂಗಮೇಶ ಮ್ಯಾಗೇರಿ, ಬಿ.ಸಿ.ಹೊನಮಟ್ಟಿ, ಪ್ರಭುಲಿಂಗಯ್ಯ ಮೇಲಿನಮಠ, ಮತ್ತು ರೈತ ಸಂಘದ ಅಧ್ಯಕ್ಷರು, ಉಪಾಧ್ಯಕ್ಷರು, ಸರ್ವಸದಸ್ಯರು ಭಾಗವಹಿಸಿದ್ದರು.
Subscribe to Updates
Get the latest creative news from FooBar about art, design and business.
Related Posts
Add A Comment

