ಚಿಮ್ಮಡ: ಪ್ರಧಾನಿ ಮೋದಿಯವರು ಸರ್ವ ಧರ್ಮಿಯರಿಗೂ ಜನಪರ ಯೋಜನೆಗಳನ್ನು ಜಾರಿ ಮಾಡುವ ಮೂಲಕ ದೇಶದ ಅಭಿವೃದ್ದಿಗೆ ಪೂರಕ ವಾತಾವರಣ ಸೃಷ್ಠಿಸುತಿದ್ದಾರೆಂದು ತೇರದಾಳ ಶಾಸಕ ಸಿದ್ದು ಸವದಿ ಹೇಳಿದರು.
ಇಲ್ಲಿನ ಗ್ರಾಮ ಪಂಚಾಯತಿ ಆವರಣದಲ್ಲಿ ಮಂಗಳವಾರ ಹಮ್ಮಿಕೊಳ್ಳಲಾಗಿದ್ದ ವಿಕಸಿತ ಭಾರತ ಸಂಕಲ್ಪ ಯಾತ್ರೆ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಯಾವುದೇ ಜಾತಿ ಧರ್ಮ ಭೇದವಿಲ್ಲದೇ ಯೋಜನೆಗಳನ್ನು ರೂಪಿಸುತ್ತಾ ಕೇಂದ್ರ ಸರಕಾರ ಬಲಿಷ್ಠ ಭಾರತ ನಿರ್ಮಾಣಕ್ಕೆ ಫನ ತೊಟ್ಟಿದೆ, ಮಹಿಳಾ ಸಬಲಿಕರಣಕ್ಕೆ ಹೆಚ್ಚು ಉತ್ತೇಜನ ನೀಡುತ್ತಿರುವ ಸರಕಾರ, ರೈತರ ಆದಾಯ ವೃದ್ದಿಗೂ ಅದ್ಯತೆ ನೀಡಿದೆ. ಜೊತೆಗೆ ೩೭೦ ಕಲಂ ರದ್ದುಗೊಳಿಸುವ ಮೂಲಕ ಕಾಶ್ಮೀರವನ್ನು ದೇಶದೊಂದಿಗೆ ಜೋಡಿಸಿಕೊಂಡಿದೆಯಲ್ಲದೇ. ರಾಮಮಂದಿರ ನಿರ್ಮಿಸುವ ಮೂಲಕ ಬಹುಸಂಖ್ಯಾತ ಹಿಂದುಗಳ ಭಾವನೆಗೂ ಬೆಲೆ ನೀಡುವ ಮೂಲಕ ದೇಶವನ್ನು ಸರ್ವ ಸಂಪನ್ನಗೊಳಿಸುತ್ತಿದೆ. ಬಡವರ ಕಲ್ಯಾಣ, ಆರೋಗ್ಯ, ಆಹಾರ ಭದ್ರತೆ, ಯುವಕರಿಗೆ ಸ್ವಯಂ ಉದ್ಯೋಗ, ಹೊಸ ಉದ್ದಿಮೆಗಳನ್ನು ಪ್ರಾರಂಭಿಸುವ ಮೂಲಕ ದೇಶವು ಪ್ರಗತಿಯ ಹಾದಿಯಲ್ಲಿ ಮುನ್ನಡೆಯುತ್ತಿದೆ ಎಂದರು.
ಕೆನರಾ ಬ್ಯಾಂಕ ಹಿರಿಯ ವ್ಯವಸ್ಥಾಪಕ ಶ್ರೀಮತಿ ಉಮಾದೇವಿ, ಶಾಖಾವ್ಯವಸ್ಥಾಪಕರಾದ ಆಶಾ, ಕ್ಷೇತ್ರಾಧಿಕಾರಿ ರಾಖಿ, ಆನಂದ, ಸ್ಥಳಿಯ ಕೆವಿಜಿ ಶಾಖಾ ವ್ಯವಸ್ಥಾಪಕ ಎಸ್.ಐ.ಗಡ್ಡಿ, ಗ್ರಾ.ಪಂ. ಅಧ್ಯಕ್ಷೆ ಶ್ರೀಮತಿ ಮಾಲಾ ಮೋಟಗಿ, ಅಭಿವೃದ್ದಿ ಅಧಿಕಾರಿ ಶಿವಾನಂದ ಬಿರಾದರ, ಗ್ರಾಮ ಆಡಳಿತ ಅಧಿಕಾರಿ ಮಂಜುನಾಥ ನೀಲನ್ನವರ,
ಗ್ರಾಮದ ಪ್ರಮುಖರಾದ ರಾಮಣ್ಣ ಮುಗಳಖೋಡ, ಗ್ರಾ.ಪಂ. ಮಾಜಿ ಅಧ್ಯಕ್ಷ ಗುರಲಿಂಗಪ್ಪಾ ಪೂಜಾರಿ, ಆನಂದ ಕವಟಿ, ಬೀರಪ್ಪಾ ಹಳೆಮನಿ, ಎಪಿಎಂಸಿ ನಿರ್ದೇಶಕ ಪ್ರಭು ಮುಧೋಳ, ಪ್ರಕಾಶ ಪಾಟೀಲ, ನಿಂಗಣ್ಣ ಪೂಜಾರಿ, ಅಶೋಕ ಮೋಟಗಿ, ಪ್ರಭು ನೇಸೂರ, ರಾಚಯ್ಯ ಮಠಪತಿ, ಪರಪ್ಪಾ ಮುಗಳಖೋಡ,ಸುರೇಶ ಅಕ್ಕಿವಾಟ, ಆನಂದ ಕಂಪು ಸೇರಿದಂತೆ ಹಲವರು ಉಪಸ್ಥಿತರಿದ್ದರು.
ಇದೇ ಸಂದರ್ಭದಲ್ಲಿ ವಿಕಸಿತ ಭಾರತ ನಿರ್ಮಾಣಕ್ಕೆ ಪಣ ತೊಡುವ ಪ್ರತಿಜ್ಞಾವಿಧಿ ಭೋದಿಸಲಾಯಿತು. ಹಾಗೂ ಸರಕಾರಿ ಪ್ರೌಢಶಾಲೆಯ ಆವರಣದಲ್ಲಿ ರೈತರು ಡ್ರೋನ ಮೂಲಕ ರಾಸಾಯಣಿಕ ಸಿಂಪರಣೆ ಮಾಡುವ ವಿಧಾನದ ಪ್ರಾತ್ಯಕ್ಷತೆಯನ್ನು ಪ್ರದರ್ಶಿಸಲಾಯಿತು.
Subscribe to Updates
Get the latest creative news from FooBar about art, design and business.
Related Posts
Add A Comment

