ಬ್ರಹ್ಮದೇವನಮಡು: ಸಿಂದಗಿ ತಾಲೂಕಿನ ಗೋಲಗೇರಿ ಗ್ರಾಮದ ಪ್ರಾಥಮಿಕ ಆರೋಗ್ಶ ಕೇಂದ್ರದ ವೈದ್ಶಾಧಿಕಾರಿ ಡಾ.ವಿವೇಕಾನಂದ ಹೂವಿನಳ್ಳಿ ಸಕಾ೯ರದ ನಿಯಮ ಗಾಳಿಗೆ ತೂರಿ ಮೇಲಾಧಿಕಾರಿಗಳ ಭಯವಿಲ್ಲದೆ, ಕತ೯ವ್ಶಕ್ಕೆ ಹಾಜರಾಗದೆ ಸಂಬಳ ಪಡಿಯುತ್ತಿದ್ದಾರೆ. ಕೂಡಲೇ ಇವರನ್ನು ಕತ೯ವ್ಶದಿಂದ ಅಮಾನತು ಮಾಡಿಸುವಂತೆ ಒತ್ತಾಯಿಸಿ ಶನಿವಾರ ಪ್ರಗತಿಪರ ಸಂಘಟನೆ ಪ್ರಮುಖರು ಹಾಗೂ ಗ್ರಾಮಸ್ಥರು ಗ್ರಾಪಂ ಅಧ್ಶಕ್ಷೆ ರಜಿಯಾಬೇಗಂ ಕೋರವಾರ ಅವರಿಗೆ ಮನವಿ ಸಲ್ಲಿಸಿದರು.
ಈ ವೇಳೆ ದಲಿತ ಮುಖಂಡ ಶ್ರೀಶೈಲ್ ಜಾಲವಾದಿ, ಮುಖಂಡ ಮೊದಿನ್ ಶಾಬಾದಿ, ಪಿಕೆಪಿಎಸ್ ಬ್ಶಾಂಕ್ ಮಾಜಿ ನಿದೇ೯ಶಕ ಬಸನಗೌಡ ಪಾಟೀಲ ಮಾತನಾಡಿ, ಪ್ರಾಥಮಿಕ ಆರೋಗ್ಶ ಕೇಂದ್ರದ ಆಡಳಿತ ವ್ಶವಸ್ಥೆ ಸಂಪೂಣ೯ ಹದಗೆಟ್ಟು ಹೊಗಿದ್ದು, ಮುಖ್ಶ ವೈದ್ಶಾಧಿಕಾರಿ ಡಾ.ಹೂವಿನಳ್ಳಿ ಕತ೯ವ್ಶಕ್ಕೆ ಹಾಜರಾಗದ ಹಿನ್ನೆಲೆ ಇನ್ನುಳಿದ ಸಿಬ್ಬಂದಿ ಕೂಡಾ ಮನಸ್ಸಿಗೆ ಬಂದಂತೆ ವತಿ೯ಸುತ್ತಾ ಮಧ್ಶಾಹ್ನವೇ ಆಸ್ಪತ್ರೆಗೆ ಬೀಗ ಜಡಿದು ತಮ್ಮ ಖಾಸಗಿ ಕೆಲಸಗಳಿಗೆ ಹೋಗುತ್ತಿದ್ದಾರೆ. ಆಸ್ಪತ್ರೆಯಲ್ಲಿ ರೋಗಿಗಳಿಗೆ ಚಿಕಿತ್ಸೆ ಸಿಗುತ್ತಿಲ್ಲ ಇನ್ನಾದರೂ ಸಂಬಂಧಪಟ್ಟ ಅಧಿಕಾರಿಗಳು ಕೂಡಲೇ ಸ್ಪಂದಿಸಿ ಆಸ್ಪತ್ರೆಯ ವ್ಶವಸ್ಥೆಯನ್ನು ಸರಿಪಡಿಸಬೇಕು. ಡಾ.ಹೂವಿನಳ್ಳಿ ಅವರನ್ನು ಕತ೯ವ್ಶದಿಂದ ವಜಾಗೊಳಿಸಿ ಬೇರೆ ವೈದ್ಶರನ್ನು ನೇಮಕ ಮಾಡಬೇಕು. ಇಲ್ಲದಿದ್ದರೆ ಗ್ರಾಪಂ ಕಛೇರಿ ಮುಂದೆ ಹೋರಾಟ ಮಾಡಲಾಗುವದು ಎಂದು ಮುಖಂಡರು ಎಚ್ಚರಿಕೆ ನೀಡಿದ್ದಾರೆ.
ಈ ವೇಳೆ ಸೈಪುನಸಾಬ ಕೋರವಾರ, ಬಾಗು ಕೋಟೆಗೋಳ, ಗೋಲ್ಲಾಳಪ್ಪ ನಾಯ್ಕೋಡಿ, ರವಿ ಯಡ್ರಾಮಿ, ಮರಗು ಕುದರಗೊಂಡ, ಮಹಾದೇವ ಭಜಂತ್ರಿ, ಮಾಂತೇಶ ಗೊಂದಳಿ, ನಿಂಗಣ್ಣ ಚಲವಾದಿ, ಸಿದ್ದು ಭಜಂತ್ರಿ, ಶಿವು ಚಿಕ್ಕಸಿಂದಗಿ, ಶಾಹಿದ್ ಕೆರುಟಗಿ ಸೇರಿದಂತೆ ಮತ್ತಿತ್ತರಿದ್ದರು.
Subscribe to Updates
Get the latest creative news from FooBar about art, design and business.
Related Posts
Add A Comment

