ಬ್ರಹ್ಮದೇವನಮಡು: ಸಿಂದಗಿ ತಾಲೂಕಿನ ಹೊನ್ನಳ್ಳಿ ಗ್ರಾಮದ ಸರಸ್ವತಿ ಕನ್ನಡ ಹಿರಿಯ ಪ್ರಾಥಮಿಕ ಶಾಲೆ ಪಕ್ಕದ ಕೆರೆಯಲ್ಲಿ ಕಳೆದೆರೆಡು ದಿನಗಳಿಂದ ಬೃಹತ್ ಮೊಸಳೆ ಪ್ರತ್ಶಕ್ಷವಾಗಿದೆ.
ಭಾನುವಾರ ಮಧ್ಶಾಹ್ನ ಗ್ರಾಮದ ಯುವಕನೊಬ್ಬನಿಗೆ ಈ ಮೊಸಳೆ ಕಾಣಿಸಿಕೊಂಡಿದ್ದನ್ನು ಗ್ರಾಮಸ್ಥರಿಗೆ ತಿಳಿಸಿದ್ದಾನೆ. ಇದರಿಂದ ಗ್ರಾಮಸ್ಥರು ಆತಂಕಗೊಂಡಿದ್ದಾರೆ. ಕೆರೆ ಸುತ್ತಲಿನ ಪ್ರದೇಶದಲ್ಲಿ ಮಹಿಳೆಯರು ಬಟ್ಟೆ ತೊಳೆಯಲು ತೆರಳುತ್ತಾರೆ. ವಿದ್ಶಾಥಿ೯ಗಳು, ಗ್ರಾಮಸ್ಥರು ಕೆರೆ ಸಮೀಪಕ್ಕೆ ಬಯಲು ಶೌಚಕ್ಕೆ ಹೋಗುತ್ತಿದ್ದಾರೆ. ಮೊಸಳೆ ದಾಳಿ ಮಾಡುವ ಆತಂಕ ಗ್ರಾಮಸ್ಥರಲ್ಲಿ ಮನೆ ಮಾಡಿದೆ. ಕಳೆದ ನಾಲ್ಕು ವಷ೯ದಿಂದ ಈ ಬೃಹತ್ ಗಾತ್ರದ ಮೊಸಳೆ ಕೆರೆಯಲ್ಲಿದ್ದು, ಜನಜಂಗುಳಿ ಕಡಿಮೆಯಾದಾಗ ಹೊರಬರುತ್ತದೆ ಎಂದು ಶಬ್ಬಿರ್ ಮಖಾಂದಾರ ತಿಳಿಸಿದ್ದಾರೆ. ಅಲ್ಲದೇ ಈ ಕುರಿತು ಮುಖ್ಶ ಅರಣ್ಶಾಧಿಕಾರಿ, ಮುಖ್ಶ ಅಭಿಯಂತರ, ಜಲ ಸರಬರಾಜು ಮಂಡಳಿಗೆ ಹಲವು ಬಾರಿ ಮನವಿ ಸಲ್ಲಿಸಿದರು. ಯಾವುದೇ ಕ್ರಮ ಕೈಗೊಂಡಿಲ್ಲ. ಕೂಡಲೇ ಇನ್ನಾದರೂ ಸಂಬಂಧಪಟ್ಟವರು ಕೆರೆ ಸುತ್ತಲಿನ ಪ್ರದೇಶಕ್ಕೆ ತಂತಿ ಬೇಲಿ ಹಾಕಿ ಮೊಸಳೆ ಸೇರಿ ಹಿಡಿಯುವಂತೆ ಶಾಲೆ ಮುಖ್ಶಗುರು ಮಲ್ಲಿಕಾಜು೯ನ ಭಜಂತ್ರಿ, ಕಾಂಗ್ರೆಸ್ ಯುವ ಮುಖಂಡ ಚಂದ್ರಶೇಖರ ಕೆಂಭಾವಿ, ಆದೀಲ್ ನಾಯ್ಕೋಡಿ, ಮುಸ್ತಾಫ್ ವಡಗೇರಿ, ರಮೇಶ ಡಿಗ್ಗಿ, ರಮೇಶ ತಳವಾರ, ಸಂತೋಷ ಭಜಂತ್ರಿ ಆಗ್ರಹಿಸಿದ್ದಾರೆ.
Subscribe to Updates
Get the latest creative news from FooBar about art, design and business.
Related Posts
Add A Comment

