Subscribe to Updates
Get the latest creative news from FooBar about art, design and business.
Author: editor.udayarashmi@gmail.com
ಉದಯರಶ್ಮಿ ದಿನಪತ್ರಿಕೆ ವಿಜಯಪುರ: ಕರ್ನಾಟಕ ರಕ್ಷಣಾ ವೇದಿಕೆ ವತಿಯಿಂದ ಸ್ಲಂ ಏರಿಯಾದ ಬಡ ಜನರಿಗೆ ಜಾಗ ಕಲ್ಪಿಸಿಕೊಡಬೇಕೆಂದು ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಲಾಯಿತು.ಈ ಸಂದರ್ಭದಲ್ಲಿ ಉತ್ತರ ಕರ್ನಾಟಕದ ಅಧ್ಯಕ್ಷ ಸಂತೋಷ ಡಂಬಳ ಮಾತನಾಡಿ, ಜಿಲ್ಲೆಯ ಸಿಂದಗಿ ತಾಲೂಕಿನ ಸಿಂದಗಿ ಪಟ್ಟಣದ ವಾರ್ಡ ನಂ. ೧೩ ರ ಸ್ಲಂ ಏರಿಯದಲ್ಲಿ ಹಿರಿಯ ನಾಗರಿಕರು, ಅಂಗವಿಕಲರು, ಕಡು ಬಡ ಜನರು, ದಲಿತರು ಮತ್ತು ಅಲ್ಪಸಂಖ್ಯಾತರು, ಬಾಣಂತಿಯರು ದಿನಗೂಲಿ ಕೆಲಸ ಮಾಡಿಕೊಂಡು ತಮ್ಮ ತಮ್ಮ ಜೀವನ ಸಾಗಿಸುತ್ತಿದ್ದಾರೆ. ಇಲ್ಲಿ ವಾಸ ಮಡುವ ಜನರಲ್ಲಿ ತಮ್ಮದೇ ಅಂತ ಯಾವುದೇ ರೀತಿಯ ಸ್ವಂತ ಜಾಗ ಅಥವಾ ಯಾವುದೇ ರೀತಿಯ ಆಸ್ತಿ ಏನು ಇರುವುದಿಲ್ಲಾ. ಸದರಿ ಎಲ್ಲಾ ಜನರು ಸೂಮಾರು ೪೩ ವರ್ಷಗಳಿಂದ ಇಲ್ಲಿಯೇ ವಾಸವಾಗಿದ್ದಾರೆ. ಅವರಿಗೆ ಬೇರೆ ಕಡೆ ಸೂರು (ಜಾಗ) ಕಲ್ಪಿಸಿ ಆನಂತರ ಅಲ್ಲಿಯ ಜನರಿಗೆ ಸ್ಥಳಾಂತಿರಸಬೇಕು ಹಾಗೂ ಸ್ಲಮ್ ಜನರಿಗೆ ಸೂರು(ಜಾಗ) ಕಲ್ಪಿಸುವ ವರೆಗೆ ಅಲ್ಲಿಯೇ ಇರಲು ಅವಕಾಶ ಮಾಡಿ ಕೊಡಬೇಕೆಂದು ಜಿಲ್ಲಾಧಿಕಾರಿಗಳಿಗೆ ಒತ್ತಾಯಿಸಲಾಯಿತು.ಈ ಸಂದರ್ಭದಲ್ಲಿ ಕರವೇ…
ಉದಯರಶ್ಮಿ ದಿನಪತ್ರಿಕೆ ಬೆಂಗಳೂರು: ಕರ್ನಾಟಕ ಮಾಹಿತಿ ಆಯೋಗ ನ್ಯಾಯಾಲಯ ಪೀಠ-೨ರ ವಿಚಾರಣೆಯನ್ನು ಬೆಳಗಾವಿ ಸುವರ್ಣ ವಿಧಾನಸೌಧದಲ್ಲಿರುವ ಆಯೋಗದ ಪೀಠದಲ್ಲಿ ಫೆ.೧೨ ರಂದು ಏರ್ಪಡಿಸಲಾಗಿದೆ.ಸಾರ್ವಜನಿಕ ಮಾಹಿತಿ ಅಧಿಕಾರಿಗಳು ಹಾಗೂ ಕಕ್ಷಿದಾರರು ಹಾಜರಾಗಬಹುದು.ಈ ಹಿಂದೆ ಕಳುಹಿಸಿದ್ದ ನೋಟಿಸಿನಲ್ಲಿ ʼಬೆಳಗಾವಿ ಪೀಠʼ ಎಂದು ನಮೂದಿಸಿರುವುದನ್ನು ಕರ್ನಾಟಕ ಮಾಹಿತಿ ಆಯೋಗದ ʼನ್ಯಾಯಾಲಯ ಪೀಠ -೨ ʼ ಎಂದು ಓದಿಕೊಳ್ಳಲು ಆಯೋಗದ ಕಾರ್ಯದರ್ಶಿಗಳಾದ ಸುಷಮಾ ಗೋಡಬೋಲೆ ಅವರು ಪ್ರಕಟಣೆ ಮೂಲಕ ಕೋರಿದ್ದಾರೆ.
ಉದಯರಶ್ಮಿ ದಿನಪತ್ರಿಕೆ ಚಡಚಣ: ಸಮೀಪದ ಉಮರಜದ ಶ್ರೀ ರೇವಣಸಿದ್ದೇಶ್ವರ ಜಾತ್ರೆಯಲ್ಲಿ ಭಕ್ತರು ದೀರ್ಘದಂಡ ನಮಸ್ಕಾರ ಹಾಕಿ ಹರಕೆ ಸಲ್ಲಿಸಿದರು.ಮಂಗಳವಾರದ ನಸುಕಿನ ಜಾವ ೪ ಗಂಟೆಯಿಂದ ಸಾಮೂಹಿಕವಾಗಿ ಭೀಮಾ ನದಿಯಲ್ಲಿ ಮಿಂದ ಭಕ್ತರು ರೇವಣಸಿದ್ಧೇಶ್ವರ ದೇವಾಸ್ಥಾನದವರಗೆ ದೀರ್ಘದಂಡ ನಮಸ್ಕಾರ ಹಾಕಿದರು. ಭಾವೈಕ್ಯತೆ ಸಾರುವ ಎಲ್ಲ ಧರ್ಮದ ಕಿರಿಯರಿಂದ ಹಿರಿಯ ಎಲ್ಲ ವಯೋಮಾನದವರು ದೀರ್ಘದಂಡ ನಮಸ್ಕಾರವನ್ನು ಹಾಕಿ ದೇವರ ದರ್ಶನ ಪಡೆದರು.ನಸುಕಿನ ಜಾವ ೬ ಗಂಟೆಗೆ ರೇವಣಸಿದ್ದೇಶ್ವರ ದೇವಾಸ್ಥಾನಕ್ಕೆ ಮಹಾಮಜ್ಜನ ಹಾಗೂ ೭ ಗಂಟೆಗೆ ಮಹಾರುದ್ರಾಭಿಷೇಕ ಮತ್ತು ವಿಶೇಷ ಪೂಜೆ ನೆರವೇರಿತು. ಮುಂಜಾನೆ ೧೦ ಗಂಟೆಗೆ ವಿಶೇಷ ಆಹ್ವಾನಿತರ ಸಮ್ಮುಖದಲ್ಲಿ ಶ್ರೀ ಘೂಳೇಶ್ವರ ಮಹಾರಾಜರ ವಿರಚಿತ ಗ್ರಂಥಗಳನ್ನು ಬಿಡುಗಡೆ ಮಾಡಲಾಯಿತು.
ಉದಯರಶ್ಮಿ ದಿನಪತ್ರಿಕೆ ವಿಜಯಪುರ: ಕರ್ನಾಟಕ ರಾಜ್ಯ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾನಿಲಯದ, ವಿಜಯಪುರದ ಸ್ನಾತಕ ಎನ್.ಇ.ಪಿ. ಕೋರ್ಸುಗಳಿಗೆ ಪೂರ್ಣಕಾಲಿಕೆ/ಅರೆಕಾಲಿಕೆ ಅತಿಥಿ ಉಪನ್ಯಾಸಕರು ಅವಶ್ಯವಿದ್ದು, ಆಸಕ್ತಿಯುಳ್ಳ ಅರ್ಹ ಪದವಿ ಹೊಂದಿದ ಅಭ್ಯರ್ಥಿಗಳಿಗೆ ನೇರ ಸಂದರ್ಶನವನ್ನು ಇದೇ ದಿ. ೧೮ ರಂದು ಬೆಳಿಗ್ಗೆ ೧೧:೦೦ ಗಂಟೆಗೆ ಇಲ್ಲಿಯ ವಿವಿಯ ಆಡಳಿತ ಭವನದ ಸಿಂಡಿಕೇಟ್ ಸಭಾಭವನದಲ್ಲಿ ಏರ್ಪಡಿಸಲಾಗಿದೆ.ಆಸಕ್ತಿಯುಳ್ಳ ಅರ್ಹ ಅಭ್ಯರ್ಥಿಗಳು ಮೂಲ ದಾಖಲಾತಿಗಳೊಂದಿಗೆ ಹಾಜರಿರಬೇಕು. ಹೆಚ್ಚಿನ ಮಾಹಿತಿಗಾಗಿwww.kswu.ac.in£ÀÄß ಸಂಪರ್ಕಿಸಬಹುದು ಎಂದು ವಿವಿಯ ಕುಲಸಚಿವ ಶಂಕರಗೌಡ ಸೋಮನಾಳ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ
ಉದಯರಶ್ಮಿ ದಿನಪತ್ರಿಕೆ ಮುದ್ದೇಬಿಹಾಳ: ತಾಲೂಕಿನ ತಾರನಾಳ ಗ್ರಾಮದ ಚಂದ್ರಶೇಖರ ಮಾಳಳ್ಳಿ ಅವರಿಗೆ ಬೆಳಗಾವಿಯ ವಿಶ್ವೇಶ್ವರಯ್ಯ ಟೆಕ್ನಾಲಜಿ ವಿಶ್ವ ವಿದ್ಯಾಲಯವು ಗೌರವ ಡಾಕ್ಟರೇಟ್ ಪದವಿ ನೀಡಿ ಗೌರವಿಸಿದೆ.ಸರ್ಕಾರಿ ಶಾಲೆಯಲ್ಲಿ ವಿದ್ಯಾಭ್ಯಾಸ ಮಾಡಿದ ರೈತರ ಮಗನಾದ ಚಂದ್ರಶೇಖರ ಬೆಂಗಳೂರಿನ ಬಿಎಂಎಸ್ ಇಂಜನೀಯರಿಂಗ್ ಕಾಲೇಜಿನಲ್ಲಿ ಮೆಕ್ಯಾನಿಕಲ್ ಸೈನ್ಸ್ ವಿಷಯದಲ್ಲಿ ಸಂಶೋಧನೆ ಮಾಡಿದ್ದರ ಪ್ರಯುಕ್ತ ಈ ಪದವಿ ಲಭಿಸಿದೆ.
ಉತ್ತರ ಕರ್ನಾಟಕದ ಸುಮಾರು 200 ಪತ್ರಿಕೋದ್ಯಮ ವಿದ್ಯಾರ್ಥಿಗಳು ಭಾಗಿಯಾಗುವ ನಿರೀಕ್ಷೆ ಉದಯರಶ್ಮಿ ದಿನಪತ್ರಿಕೆ ಕಲಬುರಗಿ: ಕಲ್ಯಾಣ ಕರ್ನಾಟಕದ ಕೇಂದ್ರಸ್ಥಾನ ಕಲಬುರಗಿಯಲ್ಲಿ ಇದೇ ಮೊದಲ ಬಾರಿಗೆ ಸರ್ಕಾರದಿಂದ ಕಲಬುರಗಿ ಶರಣಬಸವ ವಿಶ್ವವಿದ್ಯಾಲಯದಲ್ಲಿ ಫೆಬ್ರವರಿ 17 ಮತ್ತು 18 ರಂದು ಎರಡು ದಿನಗಳ ಕಾಲ ಭವಿಷ್ಯದಲ್ಲಿ ಪತ್ರಕರ್ತರಾಗುವ ಪತ್ರಿಕೋದ್ಯಮ ವಿದ್ಯಾರ್ಥಿಗಳಿಗಾಗಿ ಮೀಡಿಯಾ ಫೆಸ್ಟ್-2025 ಕಾರ್ಯಕ್ರಮ ಆಯೋಜಿಸಿದೆ ಎಂದು ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಕಲಬುರಗಿ ಉಪನಿರ್ದೇಶಕ ಜಡಿಯಪ್ಪ ಗೆದ್ಲಗಟ್ಟಿ ತಿಳಿಸಿದರು.ಮಂಗಳವಾರ ಕಲಬುರಗಿ ನಗರದ ಪತ್ರಿಕಾ ಭವನದಲ್ಲಿ ಜಂಟಿ ಪತ್ರಿಕಾಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯು ಕರ್ನಾಟಕ ಮಾಧ್ಯಮ ಅಕಾಡೆಮಿ, ಶರಣಬಸವ ವಿಶ್ವವಿದ್ಯಾಲಯ ಹಾಗೂ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ ಕಲಬುರಗಿ ಇವರ ಸಹಯೋಗದೊಂದಿಗೆ ಈ ಕಾರ್ಯಕ್ರಮ ಆಯೋಜಿಸಲಾಗುತ್ತಿದ್ದು, ಕಾರ್ಯಾಗಾರ, ನುರಿತ ಪತ್ರಕರ್ತರಿಂದ ಗೋಷ್ಠಿ, ಸ್ಪರ್ಧೆಗಳು ನಡೆಯಲಿವೆ. ಕಲಬುರಗಿ ಮತ್ತು ಬೆಳಗಾವಿ ವಿಭಾಗದ ವಿಶ್ವವಿದ್ಯಾಲಯ, ಪದವಿ ಹಾಗೂ ಸ್ನಾತಕೋತ್ತರ ಪದವಿ ಪತ್ರಿಕೋದ್ಯಮ ವಿಭಾಗದ ಸುಮಾರು 200 ವಿದ್ಯಾರ್ಥಿಗಳು ಮತ್ತು…
ಉದಯರಶ್ಮಿ ದಿನಪತ್ರಿಕೆ ಇಂಡಿ: ಮೂಢನಂಬಿಕೆಗಳು, ಜಾತಿ ಪದ್ಧತಿ, ಅಸಮಾನತೆಯ ವಿರುದ್ಧ ವಚನಗಳ ಮೂಲಕ ಜನರಲ್ಲಿ ಜಾಗೃತಿ ಮೂಡಿಸಿ, ಸಮಸಮಾಜ ಕಟ್ಟುವಲ್ಲಿ ಕಾಯಕ ನಿಷ್ಠೆ ಮೆರೆದ ಕಾಯಕ ಶರಣರ ಕೊಡುಗೆ ಅಪಾರ ಎಂದು ಶಿಕ್ಷಕ ಸಂತೋಷ ಬಂಡೆ ಹೇಳಿದರು.ಸೋಮವಾರದಂದು ತಾಲೂಕಿನ ಹಿರೇರೂಗಿ ಗ್ರಾಮದ ಕೆಬಿಎಸ್, ಕೆಜಿಎಸ್, ಯುಬಿಎಸ್ ಶಾಲೆಯ ವತಿಯಿಂದ ಹಮ್ಮಿಕೊಂಡ ಕಾಯಕ ಶರಣರ ಜಯಂತಿಯನ್ನು ಉದ್ಧೇಶಿಸಿ ಮಾತನಾಡಿದರು.ಕಾಯಕ ಶರಣರ ವಚನಗಳೇ ನಮ್ಮೆಲ್ಲರ ಬದುಕಿಗೆ ಸಂವಿಧಾನವಾಗಿದೆ. ಐವರು ಕೂಡ ಜಾತಿ, ಧರ್ಮ, ವರ್ಣ, ವರ್ಗವನ್ನು ಮೀರಿದವರು. ಸರಳ ಜೀವನ, ಶುದ್ಧ ಧ್ಯಾನ, ನಿಷ್ಕಲ್ಮಶ ಭಕ್ತಿ ಮಾರ್ಗದಿಂದ ಮುಕ್ತಿ ಸಾಧ್ಯವೆಂದು ಸಾರಿದ ಕಾಯಕ ಶರಣರ ವಚನಗಳು ಇಂದಿಗೂ ಪ್ರಸ್ತುತ ಎಂದರು.ಮುಖ್ಯ ಶಿಕ್ಷಕ ಅನಿಲ ಪತಂಗಿ ಮಾತನಾಡಿ, ಕಾಯಕ ಶರಣರಾದ ಮಾದಾರ ಚನ್ನಯ್ಯ, ಮಾದರ ಧೂಳಯ್ಯ, ಢೋಹರ ಕಕ್ಕಯ್ಯ, ಸಮಗಾರ ಹರಳಯ್ಯ ಹಾಗೂ ಉರಿಲಿಂಗ ಪೆದ್ದಿ ಅವರು ತಮ್ಮ ಕಾಯಕದಿಂದ ಗುರುತಿಸಿಕೊಂಡು, ಕಾಯಕದ ಮೇಲೆ ಜಾತಿ ಮಾಡಬಾರದು ಎಂದು ಸಾರಿದ್ದಾರೆ ಎಂದು ಅಭಿಪ್ರಾಯಪಟ್ಟರು.ಮುಖ್ಯ ಶಿಕ್ಷಕರಾದ ಎಸ್…
ಉದಯರಶ್ಮಿ ದಿನಪತ್ರಿಕೆ ವಿಜಯಪುರ: ಅನಾಮಧೇಯ ಅಂದಾಜು ೪೫ ವಯಸ್ಸಿನ ವ್ಯಕ್ತಿಯ ಶವ ಪತ್ತೆಯಾಗಿರುವ ಕುರಿತ ವಿಜಯಪುರ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಅನಾಮಧೇಯ ವ್ಯಕ್ತಿ ವಾರಸುದಾರರ ಪತ್ತೆಗೆ ಸಾರ್ವಜನಿಕರಲ್ಲಿ ಸಂಚಾರಿ ಪೊಲೀಸ್ ಠಾಣೆ ಇನ್ಸಪೆಕ್ಟರ್ ಅವರು ಮನವಿ ಮಾಡಿದ್ದಾರೆ.ಪತ್ತೆಯಾದ ವ್ಯಕ್ತಿಯು ೪.೮ ಪೂಟ್ ಎತ್ತರ, ಸಾಧಾರಣ ಮೈಕಟ್ಟು, ದುಂಡು ಮುಖ, ಸೀದಾ ಮೂಗು ಹೊಂದಿದ್ದು, ನೀಲಿ ಬಣ್ಣದ ನೈಟ್ ಪ್ಯಾಂಟ್, ತಿಳಿ ನೀಲಿ ಬಣ್ಣದ ಕುರ್ತಾ ಧರಿಸಿರುತ್ತಾನೆ.ಈ ಚಹರೆಪಟ್ಟಿಯುಳ್ಳ ವ್ಯಕ್ತಿಯ ವಾರಸುದಾರರು ಪತ್ತೆಯಾದಲ್ಲಿ ಸಾರ್ವಜನಿಕರು ಜಿಲ್ಲೆಯ ಡಿ.ಎಸ್.ಪಿ ಮೊಬೈಲ್ ನಂಬರ್ ೯೪೮೦೮೦೪೨೨೦, ವಿಜಯಪುರ ಸಂಚಾರಿ ಪೊಲೀಸ್ ಠಾಣೆ ದೂರವಾಣಿ ಸಂಖ್ಯೆ ೦೮೩೫೨-೨೫೨೬೦೦ ಹಾಗೂ ೯೪೮೦೮೦೪೨೪೬, ವಿಜಯಪುರ ಕಂಟ್ರೋಲ್ ರೂಮ್ ದೂರವಾಣಿ ನಂಬರ್ ೦೮೩೫೨-೨೫೦೮೪೪ ಸಂಪರ್ಕಿಸಬಹುದು ಎಂದು ಸಂಚಾರಿ ಪೊಲೀಸ್ ಠಾಣೆ ಇನ್ಸಪೆಕ್ಟರ್ ಅವರು ಪ್ರಕಟಣೆಯಲ್ಲಿ ಕೋರಿದ್ದಾರೆ.
ಉದಯರಶ್ಮಿ ದಿನಪತ್ರಿಕೆ ವಿಜಯಪುರ: ಜಿಲ್ಲೆಯಲ್ಲಿರುವ ನೊಂದಾಯಿತ ಸಹಕಾರ ಸಂಘಗಳು ೨೦೨೩-೨೪ನೇ ಸಾಲಿನ ಲೆಕ್ಕಪರಿಶೋಧನೆಗೆ ಈವರೆಗೂ ಠರಾವನ್ನು ಸಲ್ಲಿಸದ ಸಹಕಾರ ಸಂಘಗಳು ಈ ಪ್ರಕಟಣೆಯ ೭ ದಿನಗಳೊಳಗಾಗಿ ವಾರ್ಷಿಕ ಮಹಾಸಭೆಯಲ್ಲಿ ಲೆಕ್ಕಪರಿಶೋಧಕರನ್ನು-ಲೆಕ್ಕಪರಿಶೋಧನಾ ಫರ್ಮನ್ನು ನೇಮಕಾತಿ ಮಾಡಿಕೊಂಡು ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಹಾಗೂ ಅಧ್ಯಕ್ಷರ ಸಹಿಯೊಂದಿಗೆ ಮಾಹಿತಿಯನ್ನು ಜಂಟಿ ನಿರ್ದೇಶಕರ ಕಚೇರಿ, ಲೆಕ್ಕಪರಿಶೋಧನಾ ಇಲಾಖೆ, ಕಾರ್ಮಿಕ ಇಲಾಖಾ ಕಟ್ಟಡ, ಸಿಂದಗಿ ನಾಕಾ ಹತ್ತಿರ, ಅಲ್ಲಾಪೂರ ಓಣಿ, ವಿಜಯಪುರ ಕಚೇರಿಗೆ ಸಲ್ಲಿಸುವಂತೆ ಜಂಟಿ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.ಈ ಕುರಿತಂತೆ ಹೆಚ್ಚಿನ ಮಾಹಿತಿಗಾಗಿ ದೂ: ೦೮೩೫೨-೨೫೧೯೩೭ ಸಂಖ್ಯೆಗೆ ಸಂಪರ್ಕಿಸಬಹುದಾಗಿದೆ.
ಉದಯರಶ್ಮಿ ದಿನಪತ್ರಿಕೆ ವಿಜಯಪುರ: ಅಂತರ್ಜಾಲವು ಒಂದು ಶಕ್ತಿಯುತ ಸಾಧನವಾಗಿದೆ. ಸರಿಯಾದ ಬಳಕೆಯು ಜೀವನವನ್ನು ಸುಲಭಗೊಳಿಸಬಹುದಾಗಿದ್ದು, ತಂತ್ರಜ್ಞಾನವನ್ನು ಜವಾಬ್ದಾರಿಯುತವಾಗಿ ಬಳಸಬೇಕು. ಸಮರ್ಪಕ ಬಳಕೆಗೆ ಅರಿವು ಅತ್ಯಗತ್ಯವಾಗಿದೆ ಎಂದು ಜಿಲ್ಲಾಧಿಕಾರಿ ಟಿ.ಭೂಬಾಲನ್ ಅವರು ಹೇಳಿದರು.ನಗರದ ಜಿಲ್ಲಾ ಪಂಚಾಯತ ಸಭಾಂಗಣದಲ್ಲಿ ಮಂಗಳವಾರ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ ಹಾಗೂ ಮಾಹಿತಿ ತಂತ್ರಜ್ಞಾನ ಇಲಾಖೆಯ ಸಂಯುಕ್ತಾಶ್ರದಲ್ಲಿ ಹಮ್ಮಿಕೊಂಡಿದ್ದ ಸುರಕ್ಷಿತ ಅಂತರ್ಜಾಲ ದಿನದ ಅಂಗವಾಗಿ ಹಮ್ಮಿಕೊಂಡ ಕಾರ್ಯಾಗಾರಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಆಧುನಿಕ ಜಗತ್ತಿನಲ್ಲಿ ಅಂತರ್ಜಾಲವು ಮಾನವ ಬದುಕಿನ ಅವಿಭಾಜ ಅಂಗವಾಗಿದೆ. ಇದರ ನಡುವೆಯೇ ವಿವಿಧ ಮಾದರಿಗಳಲ್ಲಿ ಸೈಬರ್ ವಂಚನೆ ನಡೆಯುತ್ತಿದೆ. ಸೈಬರ್ ವಂಚನೆಗಳನ್ನು ತಡೆಗಟ್ಟಲು ಸಾರ್ವಜನಿಕರು ಜಾಗೃತಿ ಹೊಂದಬೇಕು. ದತ್ತಾಂಶ ಹಾಗೂ ಮಾಹಿತಿಯ ಸಂರಕ್ಷಣೆಯ ಅರಿವು ಹೊಂದುವುದು ಅತ್ಯವಶ್ಯಕವಾಗಿದೆ. ಸಮರ್ಪಕವಾಗಿ ಅರಿವು ಹೊಂದಿದಾಗ ಮಾತ್ರ ಸೈಬರ್ ವಂಚನೆಯನ್ನು ತಪ್ಪಿಸಬಹುದಾಗಿದೆ ಎಂದು ಹೇಳಿದರು.ಜಿಲ್ಲಾ ಮಟ್ಟದ ಅಧಿಕಾರಿಗಳು ಕಚೇರಿಗಳಲ್ಲಿ ತಮ್ಮ ವೈಯಕ್ತಿಕ ಲಾಗಿನ್‌ಗಳ ಬಗ್ಗೆ ಅರಿವು ಹೊಂದಿ ಸುರಕ್ಷಿತವಾಗಿರುವುದನ್ನು ಖಾತ್ರಿಪಡಿಸಿಕೊಳ್ಳುವ ಮೂಲಕ ಬೇರೆಯವರಿಗೆ ಮಾಹಿತಿ ಹಂಚಿಕೆಯಾಗದಂತೆ ಎಚ್ಚರಿಕೆ ವಹಿಸಬೇಕು. ಅಂತರಜಾಲಯು…
