Author: editor.udayarashmi@gmail.com

ಬೆಂಬಲ ಬೆಲೆ ಯೋಜನೆಯಡಿ ಜಿಲ್ಲೆಯ ರೈತರಿಂದ ಬಿಳಿಜೋಳ ಖರೀದಿ ಉದಯರಶ್ಮಿ ದಿನಪತ್ರಿಕೆ ವಿಜಯಪುರ: ೨೦೨೪-೨೫ನೇ ಸಾಲಿನಲ್ಲಿ ಬೆಂಬಲ ಬೆಲೆ ಯೋಜನೆಯಡಿ ಮಾಲ್ದಂಡಿ ಬಿಳಿಜೋಳ ಪ್ರತಿ ಕ್ವಿಂಟಲ್‌ಗೆ ರೂ.೩,೪೨೧ ಹಾಗೂ ಹೈಬ್ರಿಡ್ ಬಿಳಿಜೋಳ ಪ್ರತಿ ಕ್ವಿಂಟಲ್‌ಗೆ ರೂ.೩,೩೭೧ ರಂತೆ ಸರ್ಕಾರ ಬೆಂಬಲ ಬೆಲೆ ನಿಗದಿಪಡಿಸಿದ್ದು, ಜಿಲ್ಲೆಯ ರೈತರಿಂದ ಖರೀದಿಸಲಾಗುತ್ತಿದೆ ಎಂದು ಜಿಲ್ಲಾಧಿಕಾರಿಗಳಾದ ಟಿ. ಭೂಬಾಲನ್ ಅವರು ತಿಳಿಸಿದ್ದಾರೆ.ಕರ್ನಾಟಕ ಆಹಾರ ಮತ್ತು ನಾಗರಿಕ ಸರಬರಾಜು ನಿಗಮವು ಖರೀದಿ ಏಜೆನ್ಸಿಯಾಗಿದ್ದು, ಇವರು ಜಿಲ್ಲೆಯಲ್ಲಿ ರೈತರ ನೋಂದಣಿ ಕಾರ್ಯ ಕೈಗೊಳ್ಳಲಿದ್ದು, ಮಾರ್ಚ್ ೩೧ರವರೆಗೆ ಖರೀದಿ ಪ್ರಕ್ರಿಯೆ ನಡೆಸಲಾಗುತ್ತಿದೆ. ಏಳು ಖರೀದಿ ಕೇಂದ್ರಗಳನ್ನು ಜಿಲ್ಲೆಯಲ್ಲಿ ಸ್ಥಾಪಿಸಲಾಗಿದ್ದು, ವಿಜಯಪುರದ ಎಪಿಎಂಸಿ ಆವರಣ, ಬಸವನ ಬಾಗೇವಾಡಿಯ ಎಪಿಎಂಸಿ ಆವರಣ, ತೆಲಗಿ ರೇಲ್ವೆ ನಿಲ್ದಾಣ ಹತ್ತಿರ, ಮುದ್ದೇಬಿಹಾಳದ ಎಸ್‌ಡಬ್ಲ್ಯುಸಿ ಬಿದರಕುಂದಿ, ತಾಳಿಕೋಟೆಯ ಸರ್ಕಾರಿ ಆಸ್ಪತ್ರೆ ಹಿಂದುಗಡೆ, ಇಂಡಿಯ ಕೆಇಬಿ ಹತ್ತಿರ ಹಾಗೂ ಗೋಲಗೇರಿ ರೋಡ ಸಿಂದಗಿಯಲ್ಲಿ ಸ್ಥಾಪಿಸಲಾಗಿದೆ.ಈ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ಜಿಲ್ಲೆಯಲ್ಲಿ ಸ್ಥಾಪಿಸಲಾದ ಖರೀದಿ ಕೇಂದ್ರಗಳನ್ನು ಹಾಗೂ ವಿಜಯಪುರದ ಕೆಎಫ್‌ಸಿಎಸ್‌ಸಿ ನಿಗಮದ…

Read More

ಉದಯರಶ್ಮಿ ದಿನಪತ್ರಿಕೆ ವಿಜಯಪುರ: ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವರು ಹಾಗೂ ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವರಾದ ದಿನೇಶ್ ಗುಂಡೂರಾವ್ ಅವರು ಫೆ.೨೨ ರಂದು ಜಿಲ್ಲೆಯಲ್ಲಿ ಪ್ರವಾಸ ಕೈಗೊಂಡಿದ್ದಾರೆ.ಅಂದು ಬೆಳಿಗ್ಗೆ ೮.೨೫ಕ್ಕೆ ಬೆಳಗಾವಿಯಿಂದ ಹೊರಟು, ಮಧ್ಯಾಹ್ನ ೧೨.೨೫ಕ್ಕೆ ವಿಜಯಪುರಕ್ಕೆ ಆಗಮಿಸುವರು. ನಗರದ ಕಂದಗಲ್ ಶ್ರೀ ಹನುಮಂತರಾಯ ರಂಗಮಂದಿರದಲ್ಲಿ ನಡೆಯುವ ೩೧ನೇ ಕರ್ನಾಟಕ ರಾಜ್ಯ ಸರ್ಕಾರಿ ವೈದ್ಯಾಧಿಕಾರಿಗಳ ಸಂಘದ ರಾಜ್ಯ ಮಟ್ಟದ ಸಮ್ಮೇಳನ ಅನುಭಾವ-೨೫ರ ಉದ್ಘಾಟನಾ ಸಮಾರಂಭದಲ್ಲಿ ಭಾಗವಹಿಸುವರು. ಅದೇ ದಿನ ಮಧ್ಯಾಹ್ನ ೩.೩೦ಕ್ಕೆ ವಿಜಯಪುರದಿಂದ ಹುಬ್ಬಳ್ಳಿಗೆ ಪ್ರಯಾಣ ಬೆಳಸಲಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.

Read More

ಮಾರ್ಚ್ ೮ ರಂದು ಜಿಲ್ಲೆಯಾದ್ಯಂತ ರಾಷ್ಟ್ರೀಯ ಲೋಕ್ ಅದಾಲತ್ | ಜಿಲ್ಲಾ ನ್ಯಾಯಾಧೀಶ ಶಿವಾಜಿ ನಲವಡೆ ಮಾಹಿತಿ ಉದಯರಶ್ಮಿ ದಿನಪತ್ರಿಕೆ ವಿಜಯಪುರ: ಜಿಲ್ಲೆಯಾದ್ಯಂತ ಇರುವ ಎಲ್ಲ ಅಧೀನ ನ್ಯಾಯಾಲಯಗಳಲ್ಲಿ ಮಾರ್ಚ್-೦೮ ರಂದು ರಾಷ್ಟ್ರೀಯ ಲೋಕ್ ಅದಾಲತ್ ಆಯೋಜಿಸಲಾಗಿದ್ದು, ಈ ಅದಾಲತ್‌ನಲ್ಲಿ ಕಕ್ಷಿದಾರರು ಭಾಗವಹಿಸಿ ರಾಜಿ ಸಂಧಾನದ ಮೂಲಕ ಪ್ರಕರಣ ಇತ್ಯರ್ಥಕ್ಕೆ ಅವಕಾಶವಿರುವುದರಿಂದ ಈ ಅದಾಲತ್ ಕಾರ್ಯಕ್ರಮದ ಸದುಪಯೋಗ ಪಡೆದುಕೊಳ್ಳುವಂತೆ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಅಧ್ಯಕ್ಷರಾದ ಶಿವಾಜಿ ಅನಂತ ನಲವಡೆ ತಿಳಿಸಿದರು.ಶುಕ್ರವಾರ ಜಿಲ್ಲಾ ನ್ಯಾಯಾಲಯ ಸಂಕೀರ್ಣದ ಎಡಿಆರ್ ಕಟ್ಟಡದಲ್ಲಿ ಆಯೋಜಿಸಿದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಷ್ಟ್ರೀಯ ಕಾನೂನು ಸೇವೆಗಳ ಪ್ರಾಧಿಕಾರ ಹಾಗೂ ಕರ್ನಾಟಕ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರದ ನಿರ್ದೇಶನದಂತೆ ಎಲ್ಲ ವರ್ಗದ ಕಕ್ಷಿದಾರರಿಗೆ ಅನುಕೂಲವಾಗುವ ದೃಷ್ಟಿಯಿಂದ ಜಿಲ್ಲಾ ಕೇಂದ್ರ ಹಾಗೂ ಜಿಲ್ಲೆಯ ಎಲ್ಲ ತಾಲೂಕಾ ನ್ಯಾಯಾಲಯಗಳಲ್ಲಿ ಮಾರ್ಚ್ ೦೮ ರಂದು ರಾಷ್ಟ್ರೀಯ ಲೋಕ್ ಅದಾಲತ್ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಹೇಳಿದರು.ಲೋಕ್ ಅದಾಲತ್…

Read More

ನಿಗದಿತ ಅವಧಿಯೊಳಗೆ ಗುರಿ ಸಾಧನೆಗೆ ಜಿಲ್ಲಾಧಿಕಾರಿ ಟಿ.ಭೂಬಾಲನ್ ಸೂಚನೆ ಉದಯರಶ್ಮಿ ದಿನಪತ್ರಿಕೆ ವಿಜಯಪುರ: ಮಹಾನಗರ ಪಾಲಿಕೆ ಹಾಗೂ ನಗರ ಸ್ಥಳೀಯ ಸಂಸ್ಥೆಯ ವ್ಯಾಪ್ತಿಯ ಎಲ್ಲ ಆಸ್ತಿಗಳಿಗೆ ಇ-ಖಾತಾ ನೀಡಲು ಅಭಿಯಾನವನ್ನು ಹಮ್ಮಿಕೊಂಡಿದ್ದು, ನಿಗದಿತ ಅವಧಿಯೊಳಗೆ ಎಲ್ಲ ಆಸ್ತಿಗಳಿಗೆ ಈ ಖಾತಾ ನೀಡಲು ಸಂಬಂಧಿಸಿದ ಅಧಿಕಾರಿಗಳು ಕ್ರಮ ವಹಿಸುವಂತೆ ಜಿಲ್ಲಾಧಿಕಾರಿ ಟಿ.ಭೂಬಾಲನ್ ಅವರು ಸಂಬಂಧಿಸಿದ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ.ರಾಜ್ಯದ ನಗರ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿ ಬರುವ ಎಲ್ಲ ಆಸ್ತಿಗಳಿಗೆ ತೆರಿಗೆಗಳನ್ನು ವಿಧಿಸುವ ಕುರಿತು ಕರ್ನಾಟಕ ಪೌರ ನಿಗಮಗಳ ಅಧಿನಿಯಮ-೧೯೭೬ ಪ್ರಕರಣ ೧೧೨ (ಬಿ) ಹಾಗೂ ಪುರಸಭೆಗಳ ಅಧಿನಿನ-೧೯೬೪ ಪ್ರಕರಣ ೧೦೬ರ ತಿದ್ದುಪಡಿಯಂತ ಕರ್ನಾಟಕ ಮುನಿಸಿಪಾಲಿಟಿ ಟ್ಯಾಕ್ಷೇಶನ್ (ತಿದ್ದುಪಡಿ) ನಿಯಮಗಳು-೨೦೨೫ನ್ನು ಜಾರಿಗೊಳಿಸಿದ್ದು, ಜಿಲ್ಲೆಯ ಎಲ್ಲ ನಗರ ಸ್ಥಳೀಯ ಸಂಸ್ಥೆಗಳು ನಗರ ವ್ಯಾಪ್ತಿಯ ಎಲ್ಲ ಆಸ್ತಿಗಳಿಗೆ ತೆರಿಗೆ ವಿಧಿಸುವ ಪ್ರಕ್ರಿಯೆ ಅನುಷ್ಠಾನಗೊಳಿಸಲಾಗುತ್ತಿದೆ.ಸರ್ಕಾರದ ನಿರ್ದೇಶನದಂತೆ ಎಲ್ಲ ನಗರ ಸ್ಥಳೀಯ ಸಂಸ್ಥೆಗಳ ಮುಖ್ಯಾಧಿಕಾರಿಗಳು, ಇ-ಆಸ್ತಿ ತಂತ್ರಾಂಶದ ಮೂಲಕ ಇ-ಖಾತಾ ನೀಡುವ ಕುರಿತು ವ್ಯಾಪಕ ಪ್ರಚಾರ ಕೈಗೊಳ್ಳಬೇಕು. ಕರಪತ್ರ…

Read More

ಬಿ.ಎಲ್ ಡಿ ಇ ಸಂಸ್ಥೆಯ ಎಸ್.ಬಿ.ಕಲಾ ಮತ್ತು ಕೆ ಸಿ ಪಿ ವಿಜ್ಞಾನ ಮಹಾವಿದ್ಯಾಲಯದಲ್ಲಿ ಎರಡು ದಿನಗಳ ರಾಷ್ಟ್ರೀಯ ಸಮ್ಮೇಳನ ಉದಯರಶ್ಮಿ ದಿನಪತ್ರಿಕೆ ವಿಜಯಪುರ: ಸಸ್ಯಗಳು ಮಾನವನ ಅವಿಭಾಜ್ಯ ಅಂಗವಾಗಿದ್ದು ಪ್ರಾಕೃತಿಕ ಸಮತೋಲನ ಕಾಪಾಡುವುದರ ಜೊತಗೆ ಜೀವರಾಶಿಗಳಿಗೆ ಆಹಾರವನ್ನು ಪೂರೈಕೆ ಮಾಡುತ್ತವೆ ಹಾಗಾಗಿ ಜೈವಿಕ ಅಧ್ಯಯನ ಅತೀ ಮುಖ್ಯ ಎಂದು ಹಿಟ್ನಳ್ಳಿ ಕೃಷಿ ವಿವಿ ಡೀನ್ ಡಾ.ಅಶೋಕ ಸಜ್ಜನ ಹೇಳಿದರು.ನಗರದ ಬಿ.ಎಲ್.ಡಿ.ಇ ಸಂಸ್ಥೆಯ ಎಸ್.ಬಿ.ಕಲಾ ಮತ್ತು ವಿಜ್ಞಾನ ಮಹಾವಿದ್ಯಾಲಯದಲ್ಲಿ ಹಮ್ಮಿಕೊಳ್ಳಲಾಗಿರುವ `ಜೈವಿಕ ವಿಜ್ಞಾನದ ಗಡಿಗಳು ; ಸಂಶೋಧನೆ, ನಾವೀನ್ಯತೆ ಮತ್ತು ಸಹಯೋಗ ಎಂಬ ವಿಷಯದ ಎರಡು ದಿನಗಳ ರಾಷ್ಟ್ರೀಯ ಸಮ್ಮೇಳನ ಉದ್ಘಾಟಿಸಿ ಮಾತನಾಡಿದ ಅವರು, ರೈತರ ಬೆಳೆಗಳ ಇಳುವರಿ ಹೆಚ್ಚಿಸಿ ಆರ್ಥಿಕ ಬೆಳವಣಿಗೆ ಕಾಣಬೇಕಾದರೆ ಸುಧಾರಿತ ಕೃಷಿ ಅಳವಡಿಸಿಕೊಳ್ಳುವುದು ಅನಿವಾರ್ಯವಾಗಿದೆ. ಹಾಗಾಗಿ ಸಸ್ಯಶಾಸ್ತ್ರವು ಆರ್ಥಿಕ ಉತ್ಪಾದನಾ ಕ್ಷೇತ್ರದಲ್ಲಿಯೂ ಪ್ರಮುಖ ಪಾತ್ರ ನಿರ್ವಹಿಸುತ್ತದೆ. ಭಾರತ ಹಸಿರು ಕ್ರಾಂತಿಯ ಪರಿಣಾಮವಾಗಿ ಆಹಾರ ಉತ್ಪಾದನೆಯಲ್ಲಿ ಸ್ವಾವಂಭಿಯಾಗಿದೆ. ಅದಕ್ಕೆ ಮೂಲ ಕಾರಣ ಕೃಷಿ ವಿಜ್ಞಾನಿ ಡಾ.ಎಂ.ಎಸ್.ಸ್ವಾಮೀನಾಥನ್. ೧೯೬೫-೬೮…

Read More

ಲೇಖನ- ವೀಣಾ ಹೇಮಂತ್ ಗೌಡ ಪಾಟೀಲ್ಮುಂಡರಗಿಗದಗ ಜಿಲ್ಲೆ ಉದಯರಶ್ಮಿ ದಿನಪತ್ರಿಕೆ ಅಲ್ಲೊಂದು ಪ್ರಕರಣ ನಡೆದಿದೆ. ಕೂಡಲೇ ಕಾರ್ಯಪ್ರವೃತ್ತವಾದ ಮಾಧ್ಯಮಗಳು ತಂತಮ್ಮ ಮೂಗಿನ ನೇರಕ್ಕೆ ವಿಷಯವನ್ನು ಅರ್ಥೈಸಿಕೊಂಡು ತಮ್ಮದೇ ರೋಚಕವಾದ ಮಾತುಗಳಲ್ಲಿ, ಸಿನಿಮೀಯ ರೀತಿಯಲ್ಲಿ ನಮ್ಮಲ್ಲಿಯೇ ಮೊದಲು ಬಿತ್ತರವಾಗುತ್ತಿರುವ ಬ್ರೇಕಿಂಗ್ ನ್ಯೂಸ್ ಎಂಬಂತೆ ವಿಷಯವನ್ನು ಹೇಳುತ್ತಾರೆ. ಹಾಗಾದರೆ ಮಾಧ್ಯಮಗಳದ್ದು ತಪ್ಪೇ? ಖಂಡಿತವಾಗಿಯೂ ತಪ್ಪು. ಪ್ರತಿಯೊಂದು ಘಟನೆಗೂ ಮೂರು ಆಯಾಮಗಳಿವೆ. ಒಂದು ನೀನು ನೋಡುವ ದೃಷ್ಟಿ ಮತ್ತೊಂದು ಪರರು ಅದನ್ನು ಅವಲೋಕಿಸುವ ರೀತಿ ಮತ್ತು ಮೂರನೆಯದ್ದು ನಿಜ ಸ್ಥಿತಿ. ಇದರಲ್ಲಿ ಯಾವುದನ್ನು ಹೇಳಬೇಕು? ಎಂಬುದು ಮಿಲಿಯನ್ ಡಾಲರ್ ಪ್ರಶ್ನೆಯಾದರೆ ಉತ್ತರ ಅತ್ಯಂತ ಸರಳ ಮತ್ತು ಸುಲಭ. ಮಾಧ್ಯಮದವರು ಸಂಪೂರ್ಣವಾಗಿ ನಿಜ ಸ್ಥಿತಿಯ ವಿವರವನ್ನು ಇಲ್ಲವೇ ಅದಕ್ಕೆ ಹತ್ತಿರವಾದ ವಿವರವನ್ನು ಬಿತ್ತರಗೊಳಿಸಬೇಕು. ನಾವು ನಂಬಿಕೊಂಡಿರುವುದು ಕೇವಲ ನಮ್ಮ ವೈಯುಕ್ತಿಕ ಅಭಿಪ್ರಾಯ ಬೇರೆಯವರು ನಂಬಿಕೊಂಡಿರುವುದು ಅವರ ವೈಯಕ್ತಿಕ ಅಭಿಪ್ರಾಯ … ಅದು ಸಾರ್ವತ್ರಿಕವಲ್ಲ. ವಸ್ತುನಿಷ್ಠ ವರದಿ ಮಾತ್ರ ಮಾಧ್ಯಮಗಳ ಕಾರ್ಯ ವ್ಯಾಪ್ತಿಗೆ ಬರಬೇಕು. ನಮಗೆ ಸರಿ ಕಂಡದ್ದೆಲ್ಲ…

Read More

ಲೇಖನ- ಸಂತೋಷ್ ರಾವ್ ಪೆರ್ಮುಡಪಟ್ರಮೆ ಗ್ರಾಮ ಮತ್ತು ಅಂಚೆಬೆಳ್ತಂಗಡಿ ತಾಲೂಕುದ.ಕ ಜಿಲ್ಲೆ-574198ದೂ: 9742884160 ಉದಯರಶ್ಮಿ ದಿನಪತ್ರಿಕೆ ಕಲಾವಿದ ನಿದ್ದೆಯಲ್ಲೂ ಕಲೆಯನ್ನು ಆರಾಧಿಸುವವನು. ಕಲೆ ಎಂಬುದು ಒಂದೇ ಕ್ಷೇತ್ರದ ಸೊತ್ತಲ್ಲ, ಯಾವುದೇ ಕ್ಷೇತ್ರವಿರಲಿ ಅಲ್ಲಿ ಆಸಕ್ತಿ ಮತ್ತು ಶ್ರದ್ಧೆಯಿಂದ ಕೌಶಲವನ್ನು ಧಾರೆಯೆರೆದರೆ ಸಾಧಕನ ಪಟ್ಟ ದೊರೆತು ಸಾಧನೆಯ ತೃಪ್ತಿಯೂ ಶೀಘ್ರವಾಗಿ ದೊರೆಯುತ್ತದೆ. ಇಂತಹ ಸಾಧನೆಯ ಹಾದಿಯಲ್ಲಿರುವವನು ಧಾರವಾಡ ಜಿಲ್ಲೆಯ ಕೇಲಗೇರಿಯ ಯುವಕ ಅಮೃತ್ ಗೌಡ ಭಾವಿಕಟ್ಟಿ.ಹದಿನೆಂಟು ವರ್ಷದ ಯುವಕ ಅಮೃತ್ ಗೌಡ ಭಾವಿಕಟ್ಟಿ ಪ್ರಸ್ತುತ ಪಿ.ಯು.ಸಿ ವಿಜ್ಞಾನ ವಿಭಾಗದಲ್ಲಿ ಧಾರವಾಡದ ಜೆ.ಎಸ್.ಎಸ್ ಕಾಲೇಜಿನಲ್ಲಿ ಓದುತ್ತಿದ್ದಾನೆ. ಯುವಕ ಎಂದಾಕ್ಷಣ ನಮ್ಮ ಮುಂದೆ ಬರುವ ಚಿತ್ರಣ ಕೈಯಲ್ಲಿ ಮೊಬೈಲ್ ಹಿಡಿದು ಸಾಮಾಜಿಕ ಜಾಲತಾಣಗಳಲ್ಲಿ ಸದಾ ಸಕ್ರಿಯವಾಗಿರುವ ಯುವಕರದ್ದು. ಆದರೆ ಈ ಯುವಕನ ಕೈಯಲ್ಲಿ ಮೊಬೈಲ್ ಬದಲಿಗೆ ಕಲ್ಲಂಗಡಿ ಹಣ್ಣು ಇದೆ. ಇದೇನಪ್ಪಾ ಈತ ಇಷ್ಟೊಂದು ಕಲ್ಲಂಗಡಿ ಹಣ್ಣುಗಳನ್ನು ತಿನ್ನುತ್ತಾನೆಯೇ ಎಂಬ ಪ್ರಶ್ನೆಯು ಮನದಲ್ಲಿ ಮೂಡಬಹುದು. ಇಲ್ಲ ಈತ ಹಿಡಿಯುವ ಕಲ್ಲಂಗಡಿ ಹಣ್ಣುಗಳಲ್ಲಿ ವಿಭಿನ್ನವಾದ ಚಿತ್ರಗಳು ಮೂಡುತ್ತವೆ.…

Read More

ಉದಯರಶ್ಮಿ ದಿನಪತ್ರಿಕೆ ಆಲಮಟ್ಟಿ: ತೆಲಂಗಾಣ ರಾಜ್ಯಕ್ಕೆ 5 ಟಿಎಂಸಿ ಅಡಿ ನೀರನ್ನು ಯಾವುದೇ ಕಾರಣಕ್ಕೂ ಹರಿಸಬಾರದು ಎಂದು ಆಗ್ರಹಿಸಿ ಅಖಂಡ ಕರ್ನಾಟಕ ರೈತ ಸಂಘದ ಕಾರ್ಯಕರ್ತರು ಗುರುವಾರ, ಆಲಮಟ್ಟಿಯಲ್ಲಿ ಪ್ರತಿಭಟನೆ ನಡೆಸಿದರು.ಈ ಸಂದರ್ಭದಲ್ಲಿ ಮಾತನಾಡಿದ ಅಖಂಡ ಕರ್ನಾಟಕ ರೈತ ಸಂಘದ ವಿಜಯಪುರ ಜಿಲ್ಲಾ ಘಟಕದ ಪ್ರಧಾನ ಕಾರ್ಯದರ್ಶಿ ಅರವಿಂದ ಕುಲಕರ್ಣಿ ಮಾತನಾಡಿ, ತೆಲಂಗಾಣ ಸರ್ಕಾರ 5 ಟಿಎಂಸಿ ಅಡಿ ನೀರನ್ನು ಹರಿಸಿ ಎಂದು ರಾಜ್ಯ ಸರ್ಕಾರಕ್ಕೆ ಪತ್ರಬರೆದಿದೆ. ಎರಡೂ ರಾಜ್ಯಗಳಲ್ಲಿ ಒಂದೇ ಪಕ್ಷದ ಅಧಿಕಾರ ಇದೆ. ರಾಜಕೀಯ ಹಿತದೃಷ್ಠಿಯಿಂದ ರಾಜ್ಯದ ರೈತರ ಹಿತಾಸಕ್ತಿ ಕಡೆಗಣಿಸಿ ನೀರು ಹರಿಸಿದರೇ ಉಗ್ರ ಹೋರಾಟ ನಡೆಸಬೇಕಾಗುತ್ತದೆ ಎಂದು ಎಚ್ಚರಿಸಿದರು.ಆಲಮಟ್ಟಿ, ನಾರಾಯಣಪುರ ಎರಡೂ ಜಲಾಶಯಗಳಲ್ಲಿ ಕುಡಿಯುವ ನೀರು, ಜಲಚರ, ನೀರು ಆವಿ ಆಗುವಿಕೆ, ಕೈಗಾರಿಕೆ, ವಿದ್ಯುತ್ ಸ್ಥಾವರಗಳು ಮತ್ತೀತರ ಬಳಕೆಗೆ ಕನಿಷ್ಠ 35 ಟಿಎಂಸಿ ಅಡಿ ನೀರು ಕಾಯ್ದಿರಿಸಬೇಕಾಗುತ್ತದೆ. ಬೇಸಿಗೆಯಲ್ಲಿ ಜಿಲ್ಲೆಯ ಎಲ್ಲಾ ಕೆರೆಗಳನ್ನು ಪೂರ್ಣ ಪ್ರಮಾಣದಲ್ಲಿ ಭರ್ತಿ ಮಾಡಬೇಕಾಗುತ್ತದೆ. ಆದರೆ ಸದ್ಯ ಸಂಗ್ರಹವಿರುವ ನೀರಿನಲ್ಲಿ ಹಿಂಗಾರು…

Read More

ನಿಡಗುಂದಿಯ ಬನಶಂಕರಿ ಪಬ್ಲಿಕ್ ಶಾಲೆಯಲ್ಲಿ ಮಕ್ಕಳ ಕಲರವ | ಹಳ್ಳಿಯ ಸಂತೆ ವಾತಾವರಣ ಸೃಷ್ಟಿಸಿದ ವಿದ್ಯಾರ್ಥಿಗಳು ಉದಯರಶ್ಮಿ ದಿನಪತ್ರಿಕೆ ವಿಜಯಪುರ: ಜಿಲ್ಲೆಯ ನಿಡಗುಂದಿಯಲ್ಲಿರುವ ಬನಶಂಕರಿ ಪಬ್ಲಿಕ್ ಸ್ಕೂಲ್ ಮತ್ತು ಪಿ ಯು ಕಾಲೇಜ್, ನೆಸ್ಟ್ (Nest) ಆಕಾಡೆಮಿ ಹೈದರಾಬಾದ ಸಹಯೋಗದೊಂದಿಗೆ ಮಕ್ಕಳ ಸಂತೆ ವಿನೂತನ ಕಾರ್ಯಕ್ರಮ ಜರುಗಿತು.ಈ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳು ತರಕಾರಿ ಮಾರ್ಕೆಟ್ ಹೂವಿನ ಅಂಗಡಿ, ಜ್ಯೂಸು, ಮಿಟಾಯಿ ಪಾಪಡಿ, ತರಕಾರಿ ಅಂಗಡಿ , ಹಣ್ಣಿನ ಅಂಗಡಿ, Food counters ರೈಸ್, ಬಜಿ ವಡಾ ಪಾವ್, ತಾಜಾ ತಾಜಾ ತರಕಾರಿಗಳನ್ನು ಇಟ್ಟಿದ್ದು ವಿಶೇಷವಾಗಿತ್ತು.ಅದರಲ್ಲೂ ವಿದ್ಯಾರ್ಥಿಗಳು ತರಕಾರಿ ವಸ್ತುಗಳನ್ನ ಇಳಕಲ್ ಸೀರೆಯನ್ನು ಧರಿಸಿದ ವಿದ್ಯಾರ್ಥಿನಿಯರು ನೋಡುವವರಿಗೆ ಹಳ್ಳಿಯ ಸಂತೆಯ ವಾತಾವರಣವನ್ನು ಸೃಷ್ಟಿಸಿದ್ದರು.ಕೆಲ ವಿದ್ಯಾರ್ಥಿಗಳು ಮನೆಯಿಂದ ತಿನುಸುಗಳನ್ನು ತಂದು ಮಾರಾಟ ಮಾಡಿದರೆ, ಕೆಲ ವಿದ್ಯಾರ್ಥಿಗಳು ಮನೆಯಿಂದ ಶಾಲೆಗೆ ಗ್ಯಾಸ್ ಗಳನ್ನು ತಂದು ವಿದ್ಯಾರ್ಥಿಗಳೇ ಬಜಿಯನ್ನ ಮಾಡಿದ್ದು ಎಲ್ಲ ಪಾಲಕರ ಗಮನ ಸೆಳೆಯಿತು.ಮಕ್ಕಳ ಸಂತೆ ಕಾರ್ಯಕ್ರಮದಲ್ಲಿ ಪ್ರಾಸ್ತಾವಿಕವಾಗಿ ಮಾತನಾಡಿದ ಎನ್ ಎಸ್ ಪಾಟೀಲ್, ಮಕ್ಕಳಿಗೆ ವ್ಯವಹಾರಿಕವಾದ…

Read More

11,000 ಪುಟಗಳ ತನಿಖಾ ವರದಿ ಕೋರ್ಟ್’ಗೆ ಸಲ್ಲಿಕೆ | ಸಿಎಂ ಸಿದ್ದರಾಮಯ್ಯ, ಅವರ ಪತ್ನಿ ಪಾರ್ವತಿ, ಮಲ್ಲಿಕಾರ್ಜುನ ಸ್ವಾಮಿ ಮತ್ತು ದೇವರಾಜ್ ಅವರಿಗೆ ಕ್ಲೀನ್ ಚಿಟ್ ಬೆಂಗಳೂರು: ಮುಡಾ ಪ್ರಕರಣದಲ್ಲಿ ಲೋಕಾಯುಕ್ತ ಪೊಲೀಸರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಕ್ಲೀನ್‌ ಚಿಟ್‌ ನೀಡಿದ್ದು, ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯಕ್ಕೆ ತನಿಖಾ ವರದಿಯನ್ನು ಸಲ್ಲಿಕೆ ಮಾಡಿದ್ದಾರೆ.ತನಿಖಾಧಿಕಾರಿ ಎಸ್‌ಪಿ ಉದೇಶ್ ಅವರು, ಇಂದು ಬೆಳಗ್ಗೆ ಅಂತಿಮ ವರದಿಯನ್ನು ನ್ಯಾಯಾಲಯಕ್ಕೆ ಸಲ್ಲಿಕೆ ಮಾಡಿದ್ದಾರೆ.82ನೇ ಸಿಟಿ ಸಿವಿಲ್ ಕೋರ್ಟ್ ನ ನ್ಯಾ.ಸಂತೋಷ್ ಗಜಾನನ ಭಟ್ ಅವರ ಮುಂದೆ 11, 000 ಸಾವಿರ ಪುಟಗಳ ವರದಿಯನ್ನು ಸಲ್ಲಿಸಿದ್ದಾರೆ.50 ಜನರ ಹೇಳಿಕೆಗಳನ್ನು ದಾಖಲು ಮಾಡಿದ ಪೊಲೀಸರು, 27 ಸಂಪುಟ, 11,000 ಪುಟಗಳ ತನಿಖಾ ವರದಿಯನ್ನು ಬಿ ರಿಪೋರ್ಟ್‌ ಎಂದೇ ಉಲ್ಲೇಖಿಸಿದ್ದಾರೆ.ಸಾಕ್ಷ್ಯಾಧಾರಗಳ ಕೊರತೆಯಿಂದಾಗಿ ಲೋಕಾಯುಕ್ತ ಪೊಲೀಸರು ಬಿ ರಿಪೋರ್ಟ್ ಸಲ್ಲಿಸಿದ್ದಾರೆ. ಪೊಲೀಸರು 50ಕ್ಕೂ ಹೆಚ್ಚು ಜನರ ಹೇಳಿಕೆಗಳನ್ನು ದಾಖಲಿಸಿಕೊಂಡಿದ್ದಾರೆ. ಪ್ರಕರಣದಲ್ಲಿ ಯಾವುದೇ ಸಾಕ್ಷ್ಯಾಧಾರಗಳು ದೊರೆತಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ. ಇದರಿಂದಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಅವರ…

Read More