Close Menu
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ

Subscribe to Updates

Get the latest creative news from FooBar about art, design and business.

What's Hot

ಉದಯರಶ್ಮಿ ಇಂದಿನ ದಿನಪತ್ರಿಕೆ ಮಾರ್ಚ್ 26, 2026

ಕ್ರೀಡೆಯಿಂದ ಶಿಸ್ತು ಮತ್ತು ನಾಯಕತ್ವ ಗುಣ ಅಭಿವೃದ್ಧಿ

ಕೆಜಿಐಎಸ್ ೨.೦ ಅನುಷ್ಠಾನಕ್ಕೆ ಅಧಿಕಾರಿಗಳ ಸಮನ್ವಯತೆ ಅವಶ್ಯ

Facebook X (Twitter) Instagram
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ
Facebook X (Twitter) Instagram YouTube WhatsApp
udayarashminews.comudayarashminews.com
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ
udayarashminews.comudayarashminews.com
Home»(ರಾಜ್ಯ ) ಜಿಲ್ಲೆ»ಆಸ್ತಿಗಳಿಗೆ ಇ-ಖಾತಾ ನೀಡುವಆಂದೋಲನ ಯಶಸ್ವಿಗೊಳಿಸಿ
(ರಾಜ್ಯ ) ಜಿಲ್ಲೆ

ಆಸ್ತಿಗಳಿಗೆ ಇ-ಖಾತಾ ನೀಡುವಆಂದೋಲನ ಯಶಸ್ವಿಗೊಳಿಸಿ

By Updated:No Comments4 Mins Read
Facebook Twitter Pinterest LinkedIn Telegram WhatsApp
Share
Facebook Twitter LinkedIn Email Telegram WhatsApp

ನಿಗದಿತ ಅವಧಿಯೊಳಗೆ ಗುರಿ ಸಾಧನೆಗೆ ಜಿಲ್ಲಾಧಿಕಾರಿ ಟಿ.ಭೂಬಾಲನ್ ಸೂಚನೆ

ಉದಯರಶ್ಮಿ ದಿನಪತ್ರಿಕೆ

ವಿಜಯಪುರ: ಮಹಾನಗರ ಪಾಲಿಕೆ ಹಾಗೂ ನಗರ ಸ್ಥಳೀಯ ಸಂಸ್ಥೆಯ ವ್ಯಾಪ್ತಿಯ ಎಲ್ಲ ಆಸ್ತಿಗಳಿಗೆ ಇ-ಖಾತಾ ನೀಡಲು ಅಭಿಯಾನವನ್ನು ಹಮ್ಮಿಕೊಂಡಿದ್ದು, ನಿಗದಿತ ಅವಧಿಯೊಳಗೆ ಎಲ್ಲ ಆಸ್ತಿಗಳಿಗೆ ಈ ಖಾತಾ ನೀಡಲು ಸಂಬಂಧಿಸಿದ ಅಧಿಕಾರಿಗಳು ಕ್ರಮ ವಹಿಸುವಂತೆ ಜಿಲ್ಲಾಧಿಕಾರಿ ಟಿ.ಭೂಬಾಲನ್ ಅವರು ಸಂಬಂಧಿಸಿದ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ.
ರಾಜ್ಯದ ನಗರ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿ ಬರುವ ಎಲ್ಲ ಆಸ್ತಿಗಳಿಗೆ ತೆರಿಗೆಗಳನ್ನು ವಿಧಿಸುವ ಕುರಿತು ಕರ್ನಾಟಕ ಪೌರ ನಿಗಮಗಳ ಅಧಿನಿಯಮ-೧೯೭೬ ಪ್ರಕರಣ ೧೧೨ (ಬಿ) ಹಾಗೂ ಪುರಸಭೆಗಳ ಅಧಿನಿನ-೧೯೬೪ ಪ್ರಕರಣ ೧೦೬ರ ತಿದ್ದುಪಡಿಯಂತ ಕರ್ನಾಟಕ ಮುನಿಸಿಪಾಲಿಟಿ ಟ್ಯಾಕ್ಷೇಶನ್ (ತಿದ್ದುಪಡಿ) ನಿಯಮಗಳು-೨೦೨೫ನ್ನು ಜಾರಿಗೊಳಿಸಿದ್ದು, ಜಿಲ್ಲೆಯ ಎಲ್ಲ ನಗರ ಸ್ಥಳೀಯ ಸಂಸ್ಥೆಗಳು ನಗರ ವ್ಯಾಪ್ತಿಯ ಎಲ್ಲ ಆಸ್ತಿಗಳಿಗೆ ತೆರಿಗೆ ವಿಧಿಸುವ ಪ್ರಕ್ರಿಯೆ ಅನುಷ್ಠಾನಗೊಳಿಸಲಾಗುತ್ತಿದೆ.
ಸರ್ಕಾರದ ನಿರ್ದೇಶನದಂತೆ ಎಲ್ಲ ನಗರ ಸ್ಥಳೀಯ ಸಂಸ್ಥೆಗಳ ಮುಖ್ಯಾಧಿಕಾರಿಗಳು, ಇ-ಆಸ್ತಿ ತಂತ್ರಾಂಶದ ಮೂಲಕ ಇ-ಖಾತಾ ನೀಡುವ ಕುರಿತು ವ್ಯಾಪಕ ಪ್ರಚಾರ ಕೈಗೊಳ್ಳಬೇಕು. ಕರಪತ್ರ ಸೇರಿದಂತೆ ವಿವಿಧ ಅಭಿಯಾನಗಳ ಮೂಲಕ ಸಾರ್ವಜನಿಕರಲ್ಲಿ ತಿಳುವಳಿಕೆ-ಜಾಗೃತಿ ಮೂಡಿಸಿ, ತೆರಿಗೆ ಪಾವತಿಸದೇ ಇರುವ ಅಧಿಕೃತ-ಅನಧಿಕೃತ ಆಸ್ತಿಗಳ ವಾರ್ಡವಾರು ಪಟ್ಟಿ ಮಾಡಿ ಬಡಾವಣೆಗಳವಾರು, ವಾರ್ಡವಾರು ಇ-ಖಾತಾ ಆಂದೋಲನವನ್ನು ಹಮ್ಮಿಕೊಂಡು ೩ ತಿಂಗಳೊಳಗಾಗಿ ನಿಗದಿಪಡಿಸಿದ ಗುರಿ ಸಾಧಿಸಿ ನಗರ ಸ್ಥಳೀಯ ಸಂಸ್ಥೆಗಳ ಎಲ್ಲ ಆಸ್ತಿಗಳಿಗೆ ಇ-ಖಾತಾ ನೀಡಲು ಅವರು ಸೂಚನೆ ನೀಡಿದ್ದಾರೆ.
ಸಹಾಯವಾಣಿ ಕೇಂದ್ರಗಳ ವಿವರ : ವಿಜಯಪುರ ಮಹಾನಗರ ಪಾಲಿಕೆಯ ವಲಯ ಕಚೇರಿ-೧ : ಸಹಾಯವಾಣಿ ಸಂಖ್ಯೆ ೦೮೩೫೨-೨೨೨೪೭೪, ಕೇಂದ್ರಕ್ಕೆ ನಿಯೋಜಿಸಿದ ಸಿಬ್ಬಂದಿ ಸಹಾಯಕ ಕಂದಾಯ ಅಧಿಕಾರಿ ವಿನೋದ ಕನಸೆ ಮೊ ೯೯೦೦೭೬೩೧೧೧, ವಲಯ ಕಚೇರಿ-೨ : ಸಹಾಯಕ ಕಂದಾಯ ಅಧಿಕಾರಿ ಶ್ರೀಮತಿ ಶಿಲ್ಪಶ್ರೀ ಸಾಗರ ಮೊ: ೮೮೬೭೪೫೭೨೩೩, ವಲಯ ಕಚೇರಿ-೩ : ಸಹಾಯಕ ಕಂದಾಯ ಅಧಿಕಾರಿ ಎಸ್.ಆರ್.ಕುಲಕರ್ಣಿ ಮೊ: ೮೦೯೫೬೫೮೮೭೩, ಇವರನ್ನು ನಿಯೋಜಿಸಲಾಗಿದೆ.
ಬಸವನಬಾಗೇವಾಡಿ ಪುರಸಭೆ : ಸಹಾಯವಾಣಿ ಸಂಖ್ಯೆ ೦೮೩೫೮-೨೪೪೧೧೧, ಕಂದಾಯ ನಿರೀಕ್ಷಕ ಶ್ರೀಮತಿ ಗಿತಾಂಜಲಿ ದಾಸರ ಮೊ: ೯೯೦೧೧೩೬೪೬೦, ಇಂಡಿ ಪುರಸಭೆ : ಸಹಾಯವಾಣಿ ಸಂಖ್ಯೆ ೦೮೩೫೯-೨೨೫೦೨೫, ಕಂದಾಯ ನಿರೀಕ್ಷಕ ಎಸ್.ಎನ್.ನಿಂಬಾಳಕರ ಮೊ: ೮೯೭೧೧೮೯೪೫೮,
ಮುದ್ದೇಬಿಹಾಳ ಪುರಸಭೆ : ಸಹಾಯವಾಣಿ ಸಂಖ್ಯೆ ೦೮೩೫೬-೨೫೦೨೭೬, ಕಂದಾಯ ನಿರೀಕ್ಷಕ ಸಂತೋಷ ಮಠ ಮೊ: ೭೨೫೯೩೦೩೮೯೪, ಸಿಂದಗಿ ಪುರಸಭೆ : ಸಹಾಯವಾಣಿ ಸಂಖ್ಯೆ ೦೮೩೫೨-೨೨೧೪೪೪, ಕಂದಾಯ ನಿರೀಕ್ಷಕ ಹಬೀಬ ಯಲಗೊಂಡ ಮೊ: ೭೩೫೩೮೫೮೦೬೮, ತಾಳಿಕೋಟೆ ಪುರಸಭೆ : ಸಹಾಯವಾಣಿ ಸಂಖ್ಯೆ ೦೮೩೫೬-೨೦೦೦೯೫, ಕಂದಾಯ ನಿರೀಕ್ಷಕ ಶರಣಗೌಡ ಡಿ.ಪೊಲೀಸ್‌ಪಾಟೀಲ ಮೊ: ೮೯೦೪೭೪೮೯೯೩, ಆಲಮೇಲ ಪಟ್ಟಣ ಪಂಚಾಯತಿ : ಸಹಾಯವಾಣಿ ಸಂಖ್ಯೆ ೦೮೪೮೮-೨೦೦೧೦೬, ಕಂದಾಯ ನಿರೀಕ್ಷಕ ಬಿ.ಜಿ. ನಾರಾಯಣಕರ ಮೊ: ೯೫೩೫೭೪೪೨೩೦, ಆಲಮೇಲ ಪಟ್ಟಣ ಪಂಚಾಯತಿ : ಸಹಾಯವಾಣಿ ಸಂಖ್ಯೆ ೦೮೪೨೨-೨೦೦೦೧೧, ಕಂದಾಯ ನಿರೀಕ್ಷಕ ಆರ್.ಬಿ.ಭಂಡಾರಿ ಮೊ: ೯೭೪೦೮೦೨೫೦೬ ಇವರನ್ನು ನಿಯೋಜಿಸಲಾಗಿದೆ.
ದೇವರಹಿಪ್ಪರಗಿ ಪಟ್ಟಣ ಪಂಚಾಯತಿ : ಸಹಾಯವಾಣಿ ಸಂಖ್ಯೆ ೦೮೪೨೪-೨೯೫೦೦೪, ಕಂದಾಯ ನಿರೀಕ್ಷಕ ಸತ್ಯಪ್ಪ ಪೂಜಾರಿ ಮೊ: ೯೭೪೧೬೧೦೫೭೮, ಕೊಲ್ಹಾರ ಪಟ್ಟಣ ಪಂಚಾಯತಿ : ಸಹಾಯವಾಣಿ ಸಂಖ್ಯೆ ೦೮೪೨೬-೨೮೩೦೨೯, ಕಂದಾಯ ನಿರೀಕ್ಷಕ ಅರುಣಕುಮಾರ ಪೂಜಾರಿ ಮೊ: ೮೬೬೦೩೨೧೬೮೨, ಮನಗೂಳಿ ಪಟ್ಟಣ ಪಂಚಾಯತಿ : ಸಹಾಯವಾಣಿ ಸಂಖ್ಯೆ ೦೮೩೫೮-೨೪೦೨೫೫, ಕಂದಾಯ ನಿರೀಕ್ಷಕ ವಿಜಯ ರೋಕಡೆ ಮೊ: ೭೩೩೮೫೩೯೮೫೩, ನಾಲತವಾಡ ಪಟ್ಟಣ ಪಂಚಾಯತಿ : ಸಹಾಯವಾಣಿ ಸಂಖ್ಯೆ ೦೮೩೫೬-೨೯೮೯೨೪, ಕಂದಾಯ ನಿರೀಕ್ಷಕ ಸಿದ್ದಲಿಂಗ ಪೂಜಾರಿ ಮೊ: ೯೯೬೪೨೨೧೦೦೦, ನಿಡಗುಂದಿ ಪಟ್ಟಣ ಪಂಚಾಯತಿ : ಸಹಾಯವಾಣಿ ಸಂಖ್ಯೆ ೦೮೪೨೬-೨೮೧೦೫೭, ಕಂದಾಯ ನಿರೀಕ್ಷಕ ಶ್ರೀಮತಿ ಜಿ.ಬಿ.ವಾಲಿಕಾರ ಮೊ: ೮೨೧೭೨೪೩೬೬೫, ತಿಕೋಟಾ ಪಟ್ಟಣ ಪಂಚಾಯತಿ : ಸಹಾಯವಾಣಿ ಸಂಖ್ಯೆ ೦೮೩೫೨-೨೯೫೨೫೬, ಕಂದಾಯ ನಿರೀಕ್ಷಕ ಶ್ರೀಮತಿ ಬಿ.ಆರ್.ಸಿಂಗೆ ಮೊ: ೯೯೧೬೭೭೦೫೦೧, ಬಬಲೇಶ್ವರ ಪಟ್ಟಣ ಪಂಚಾಯತಿ : ಸಹಾಯವಾಣಿ ಸಂಖ್ಯೆ ೦೮೩೫೫-೨೯೮೯೩೩, ಕಂದಾಯ ನಿರೀಕ್ಷಕ ಖಾಜಾಹುಸೇನ ಮೊ: ೯೦೬೦೦೨೨೩೫೯, ಇವರನ್ನ ನಿಯೋಜಿಸಲಾಗಿದೆ.
ಇ-ಖಾತಾ ಕುರಿತು ನಿಯೋಜಿಸಿದ ನೋಡಲ್ ಅಧಿಕಾರಿಗಳ ವಿವರ : ವಿಜಯಪುರ ಮಹಾನಗರ ಪಾಲಿಕೆಗೆ ಪ್ರಭಾರ ಉಪ ಆಯುಕ್ತ ಸಂಗಣ್ಣ ಲಕ್ಕಣವರ ಮೊ: ೯೪೪೮೭೮೬೨೮೦, ಬಸವನಬಾಗೇವಾಡಿ ಪುರಸಭೆಗೆ ಕಚೇರಿ ವ್ಯವಸ್ಥಾಪಕ ಸುರೇಶ ಬಾಗೇವಾಡಿ ಮೊ: ೭೦೧೯೪೬೧೩೬೯, ಇಂಡಿ ಪುರಸಭೆಗೆ ಕಚೇರಿ ವ್ಯವಸ್ಥಾಪಕ ಪ್ರವೀಣ ಸೋನಾರ ಮೊ: ೯೯೮೬೫೬೨೮೬೭, ಮುದ್ದೇಬಿಹಾಳ ಪುರಸಭೆಗೆ ಕಂದಾಯ ಅಧಿಕಾರಿ ಮೊ: ಶ್ರೀಮತಿ ಎನ್.ಎಸ್.ಪಾಟೀಲ ಮೊ: ೭೨೫೯೩೦೩೮೯೪, ಸಿಂದಗಿ ಪುರಸಭೆಗೆ ಕಚೇರಿ ವ್ಯವಸ್ಥಾಪಕ ದತ್ತಾತ್ರೇಯ ಹಳ್ಳಿ ಮೊ: ೮೯೭೧೬೩೬೧೦೮, ತಾಳಿಕೋಟೆ ಪುರಸಭೆಗೆ ಕಂದಾಯ ಅಧಿಕಾರಿ ಸುರೇಶ ಅಮರಣ್ಣವರ ಮೊ: ೮೯೦೪೭೪೮೯೯೩, ಇವರನ್ನು ನಿಯೋಜಿಸಲಾಗಿದೆ.
ಆಲಮೇಲ ಪಟ್ಟಣ ಪಂಚಾಯತಿಗೆ ಕಂದಾಯ ನಿರೀಕ್ಷಕ ಬಿ.ಜಿ.ನಾರಾಯಣಕರ ಮೊ: ೯೫೩೫೭೪೪೨೩೦, ಚಡಚಣ ಪಟ್ಟಣ ಪಂಚಾಯತಿಗೆ ಕಂದಾಯ ನಿರೀಕ್ಷಕರಾದ ಶ್ರೀಮತಿ ಆರ್.ಬಿ.ಭಂಡಾರಿ ಮೊ: ೯೭೪೦೮೦೨೫೦೬, ದೇವರಹಿಪ್ಪರಗಿ ಪಟ್ಟಣ ಪಂಚಾಯತಿಗೆ ಕಂದಾಯ ನಿರೀಕ್ಷಕ ಸತ್ಯಪ್ಪ ಪೂಜಾರಿ ಮೊ:೯೭೪೧೬೧೦೫೭೮, ಕೊಲ್ಹಾರ ಪಟ್ಟಣ ಪಂಚಾಯತಿಗೆ ಕಂದಾಯ ನಿರೀಕ್ಷಕ ಅರುಣಕುಮಾರ ಪೂಜಾರಿ ಮೊ:೮೬೬೦೩೨೧೬೮೨, ಮನಗೂಳಿ ಪಟ್ಟಣ ಪಂಚಾಯತಿಗೆ ಕಂದಾಯ ನಿರೀಕ್ಷಕ ವಿಜಯ ರೋಕಡೆ ಮೊ: ೭೩೩೮೫೩೯೮೫೩, ನಾಲತವಾಡ ಪಟ್ಟಣ ಪಂಚಾಯತಿಗೆ ಕಂದಾಯ ನಿರೀಕ್ಷಕ ಸಿದ್ದಲಿಂಗ ಪೂಜಾರಿ ಮೊ:೯೯೬೪೨೨೧೦೦೦, ನಿಡಗುಂದಿ ಪಟ್ಟಣ ಪಂಚಾಯತಿಗೆ ಕಂದಾಯ ನಿರೀಕ್ಷಕ ಶ್ರೀಮತಿ ಜಿ.ಬಿ.ವಾಲಿಕಾರ ಮೊ: ೮೨೧೭೨೪೩೬೬೫, ತಿಕೋಟಾ ಪಟ್ಟಣ ಪಂಚಾಯತಿಗೆ ಕಂದಾಯ ನಿರೀಕ್ಷಕ ಬಿ.ಆರ್.ಸಿಂಗೆ ಮೊ: ೯೯೧೬೭೭೦೫೦೧, ಬಬಲೇಶ್ವರ ಪಟ್ಟಣ ಪಂಚಾಯತಿಗೆ ಕಂದಾಯ ನಿರೀಕ್ಷಕ ಖಾಜಾಹುಸೇನ ಮೊ: ೯೦೬೦೦೨೨೩೫೯ ಇವರನ್ನು ನಿಯೋಜಿಸಲಾಗಿದೆ.
ಇ-ಖಾತಾ ಕುರಿತು ನಿಯೋಜಿಸಿದ ಉಸ್ತುವಾರಿ ಅಧಿಕಾರಿಗಳ ವಿವರ : ವಿಜಯಪುರ ಮಹಾನಗರ ಪಾಲಿಕೆಗೆ ಅಪರ ಜಿಲ್ಲಾಧಿಕಾರಿಗಳು, ಬಸವನಬಾಗೇವಾಡಿ ಪುರಸಭೆಗೆ ಆಹಾರ, ನಾಗರಿಕ ಸರಬರಾಜು ಹಾಗೂ ಗ್ರಾಹಕರ ವ್ಯವಹಾರಗಳ ಇಲಾಖೆ ಉಪನಿರ್ದೇಶಕು, ಇಂಡಿ ಪುರಸಭೆಗೆ ಇಂಡಿ ಉಪವಿಭಾಗಾಧಿಕಾರಿಗಳು, ಮುದ್ದೇಬಿಹಾಳ ಪುರಸಭೆಗೆ ಅಕ್ಕ ಮಹಾದೇವಿ ವಿಶ್ವ ವಿದ್ಯಾಲಯದ ರಜಿಸ್ಟಾರ್, ಸಿಂದಗಿ ಪುರಸಭೆಗೆ ವಿಜಯಪುರ ನಗರಾಭಿವೃದ್ದಿ ಪ್ರಾಧಿಕಾರದ ಆಯುಕ್ತರನ್ನು ಹಾಗೂ ತಾಳಿಕೋಟೆ ಪುರಸಭೆಗೆ ವಿಜಯಪುರ ಉಪವಿಭಾಗಾಧಿಕಾರಿಗಳನ್ನು ನಿಯೋಜಿಸಲಾಗಿದೆ.
ಆಲಮೇಲ ಪಟ್ಟಣ ಪಂಚಾಯತಿಗೆ ಆಲಮೇಲ ತಹಶೀಲ್ದಾರ, ಚಡಚಣ ಪಟ್ಟಣ ಪಂಚಾಯತಿಗೆ ಚಡಚಣ ತಹಶೀಲ್ದಾರ, ದೇವರಹಿಪ್ಪರಗಿ ಪಟ್ಟಣ ಪಂಚಾಯತಿಗೆ ದೇವಹಿಪ್ಪರಗಿ ತಹಶೀಲ್ದಾರ, ಕೊಲ್ಹಾರ ಪಟ್ಟಣ ಪಂಚಾಯತಿಗೆ ಕೊಲ್ಹಾರ ತಹಶೀಲ್ದಾರ, ಮನಗೂಳಿ ಪಟ್ಟಣ ಪಂಚಾಯತಿಗೆ ಬಸವನಬಾಗೇವಾಡಿ ತಹಶೀಲ್ದಾರ, ನಾಲತವಾಡ ಪಟ್ಟಣ ಪಂಚಾಯತಿಗೆ ಮುದ್ದೇಬಿಹಾಳ ತಹಶೀಲ್ದಾರ, ನಿಡಗುಂದಿ ಪಟ್ಟಣ ಪಂಚಾಯತಿಗೆ ನಿಡಗುಂದಿ ತಹಶೀಲ್ದಾರ, ತಿಕೋಟಾ ಪಟ್ಟಣ ಪಂಚಾಯತಿಗೆ ತಿಕೋಟಾ ತಹಶೀಲ್ದಾರ ಹಾಗೂ ಬಬಲೇಶ್ವರ ಪಟ್ಟಣ ಪಂಚಾಯತಿಗೆ ಬಬಲೇಶ್ವರ ತಹಶೀಲ್ದಾರ ಅವರನ್ನು ನಿಯೋಜಿಸಲಾಗಿದೆ.
ಇ-ಖಾತಾ ಆಂದೋಲನದಲ್ಲಿ ನಗರ ಸ್ಥಳೀಯ ಸಂಸ್ಥೆಗಳಲ್ಲಿ ಇ-ಖಾತಾ ನೀಡಲು ಬಾಕಿ ಇರುವ ಆಸ್ತಿಗಳನ್ನು ಗುರುತಿಸುವುದು, ಆಸ್ತಿ ಮಾಲೀಕರು ಇ-ಖಾತಾ ಪಡೆಯಲು ಬೇಕಾದ ದಾಖಲೆಗಳನ್ನು ಸಲ್ಲಿಸಲು ಮಾಹಿತಿ ಒದಗಿಸಬೇಕು. ಇ-ಖಾತಾ ಪಡೆಯಲು ಮಾಹಿತಿಗಾಗಿ ಸಹಾಯವಾಣಿ ಸ್ಥಾಪಿಸಬೇಕು. ಇ-ಖಾತಾ ಅಭಿಯಾನದ ಬಗ್ಗೆ ಲಭ್ಯವಬಿರುವ ಮೊಬೈಲ್ ಸಂಖ್ಯೆಗಳಿಗೆ ಸಂದೇಶಗಳ ಮೂಲಕ ಮಾಹಿತಿ ನೀಡುವುದು, ವಿವಿಧ ಕಡೆಗಳಲ್ಲಿ ಇ-ಖಾತಾ ಪಡೆಯಲು ಬೇಕಾಗುವ ದಾಖಲೆಗಳ ಕುರಿತು ಪ್ರಚರುಪಡಿಸುವುದು, ಇ-ಖಾತಾ ನಮೂನೆ ೨/೩ ಹಾಗೂ ನಮೂನೆ ೨ಎ/೩ಎ ನೀಡಲು ನಗರ ಸ್ಥಳೀಯ ಸಂಸ್ಥೆಗಳಿಂದ ನಿಗದಿಪಡಿಸಲಾದ ಶುಲ್ಕವನ್ನು ಸಾರ್ವಜನಿಕವಾಗಿ ಪ್ರಕಟಿಸಿ ಮಾತ್ರ ಪಡೆಯುವುದು, ನಾಗರಿಕರ ಅನುಕೂಲಕ್ಕಾಗಿ ಇ-ಆಸ್ತಿ ತಂತ್ರಾಂಶದಲ್ಲಿ ನಮೂನೆ ೨/೩ನ್ನು ಸೃಜಿಸಿ ನಾಗರಿಕರಿಗೆ ಒದಗಿಸಲು ಕ್ಷೇತ್ರವಾರು ವಿಶೇಷ ಮೇಳಗಳನ್ನು ಆಯೋಜಿಸುವುದು, ಸೇರಿದಂತೆ ಅಗತ್ಯ ಎಲ್ಲ ಕ್ರಮ ಕೈಗೊಂಡು ಅಭಿಯಾನವನ್ನು ಯಶಸ್ವಿಗೊಳಿಸುವಂತೆ ಅವರು ಸೂಚನೆ ನೀಡಿದ್ದಾರೆ.
ನಗರ ಸ್ಥಳೀಯ ಸಂಸ್ಥೆಯ ಮುಖ್ಯಸ್ಥರು ಹಾಗೂ ನೋಡಲ್ ಅಧಿಕಾರಿಗಳು ಸರ್ಕಾರದ ನಿಯಮಾವಳಿಗಳನ್ನು ಕಟ್ಟುನಿಟ್ಟಾಗಿ ಪಾಲಿಸಿ ಕ್ರಮ ವಹಿಸಬೇಕು. ಈ ವಿಷಯದಲ್ಲಿ ನಿರ್ಲಕ್ಷ್ಯತನ ವಹಿಸಿದ್ದಲ್ಲಿ ಅಂತಹ ಅಧಿಕಾರಿ-ನೌಕರರ ವಿರುದ್ಧ ತಿದ್ದುಪಡಿ ಕಾಯ್ದೆಯಂತೆ ಕ್ರಮ ಕೈಗೊಳ್ಳುವುದರ ಜೊತೆಗೆ ಕೆ.ಸಿ.ಎಸ್.ಆರ್.ನಿಯಮಾವಳಿಯಂತ ಶಿಸ್ತು ಕ್ರಮಕ್ಕಾಗಿ ಪ್ರಸ್ತಾವನೆ ಸಲ್ಲಿಸಲಾಗುವುದು ಎಂದು ಅವರು ಎಚ್ಚರಿಕೆ ನೀಡಿದ್ದಾರೆ.

public public news udaya rashmi Udayarashmi today newspaper udayarashminews.com
Share. Facebook Twitter Pinterest Email Telegram WhatsApp
  • Website

Related Posts

ಉದಯರಶ್ಮಿ ಇಂದಿನ ದಿನಪತ್ರಿಕೆ ಮಾರ್ಚ್ 26, 2026

ಕ್ರೀಡೆಯಿಂದ ಶಿಸ್ತು ಮತ್ತು ನಾಯಕತ್ವ ಗುಣ ಅಭಿವೃದ್ಧಿ

ಕೆಜಿಐಎಸ್ ೨.೦ ಅನುಷ್ಠಾನಕ್ಕೆ ಅಧಿಕಾರಿಗಳ ಸಮನ್ವಯತೆ ಅವಶ್ಯ

ತೋಟಗಾರಿಕೆ ತರಬೇತಿಗೆ ರೈತರ ಮಕ್ಕಳಿಂದ ಅರ್ಜಿ ಆಹ್ವಾನ

Add A Comment

Leave A Reply Cancel Reply

Categories
  • (ರಾಜ್ಯ ) ಜಿಲ್ಲೆ
  • Uncategorized
  • ಆರೋಗ್ಯ
  • ಇತರೆ
  • ಕಾವ್ಯರಶ್ಮಿ
  • ಚಿಂತನ
  • ದಿನಪತ್ರಿಕೆ
  • ಪುಸ್ತಕ ಪರಿಚಯ
  • ಪ್ರೇಮಲೋಕ
  • ಭಾವರಶ್ಮಿ
  • ರಾಷ್ಚ್ರ
  • ವಿಜಯಪುರ
  • ವಿದ್ಯಾರ್ಥಿ ನಿಧಿ
  • ವಿಶೇಷ ಲೇಖನ
  • ಸಾಹಿತ್ಯ
  • ಸಿನಿಮಾ
  • ಹೊತ್ತಿಗೆ ಹೊರಣ
Recent Posts
  • ಉದಯರಶ್ಮಿ ಇಂದಿನ ದಿನಪತ್ರಿಕೆ ಮಾರ್ಚ್ 26, 2026
    In ದಿನಪತ್ರಿಕೆ
  • ಕ್ರೀಡೆಯಿಂದ ಶಿಸ್ತು ಮತ್ತು ನಾಯಕತ್ವ ಗುಣ ಅಭಿವೃದ್ಧಿ
    In (ರಾಜ್ಯ ) ಜಿಲ್ಲೆ
  • ಕೆಜಿಐಎಸ್ ೨.೦ ಅನುಷ್ಠಾನಕ್ಕೆ ಅಧಿಕಾರಿಗಳ ಸಮನ್ವಯತೆ ಅವಶ್ಯ
    In (ರಾಜ್ಯ ) ಜಿಲ್ಲೆ
  • ತೋಟಗಾರಿಕೆ ತರಬೇತಿಗೆ ರೈತರ ಮಕ್ಕಳಿಂದ ಅರ್ಜಿ ಆಹ್ವಾನ
    In (ರಾಜ್ಯ ) ಜಿಲ್ಲೆ
  • ಮಾ.೨೬ ರಂದು ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯ
    In (ರಾಜ್ಯ ) ಜಿಲ್ಲೆ
  • ಪರೀಕ್ಷಾ ಕೇಂದ್ರಗಳಿಗೆ ಜಿಲ್ಲಾಧಿಕಾರಿ ಡಾ.ಆನಂದ.ಕೆ ಭೇಟಿ, ಪರಿಶೀಲನೆ
    In (ರಾಜ್ಯ ) ಜಿಲ್ಲೆ
  • ಪರೀಕ್ಷಾರ್ಥಿಗಳಿಗೆ ಆತ್ಮವಿಶ್ವಾಸ ತುಂಬಿದ ಜಿಪಂ ಸಿಇಒ ರಿಷಿ ಆನಂದ
    In (ರಾಜ್ಯ ) ಜಿಲ್ಲೆ
  • ಸೇತುವೆ ಕಾರ್ಯ: ಮಾರ್ಗ ಬದಲಾವಣೆ
    In (ರಾಜ್ಯ ) ಜಿಲ್ಲೆ
  • ಕುಡಿವ ನೀರಿನ ಸಮಸ್ಯೆ ತಲೆದೋರದಂತೆ ಮುಂಜಾಗೃತೆವಹಿಸಿ
    In (ರಾಜ್ಯ ) ಜಿಲ್ಲೆ
  • ಕ್ಷಯರೋಗ ಗುಣವಾಗಬಹುದಾದ ಕಾಯಿಲೆ :ಡಾ.ರಾಜೇಶ
    In (ರಾಜ್ಯ ) ಜಿಲ್ಲೆ
Editors Picks
Top Reviews
udayarashminews.com
Facebook X (Twitter) Instagram Pinterest Vimeo YouTube
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ
© 2026 udayarashminews.com. Designed by udayarashmi news .

Type above and press Enter to search. Press Esc to cancel.