Author: editor.udayarashmi@gmail.com

ಉದಯರಶ್ಮಿ ದಿನಪತ್ರಿಕೆ ಆಲಮೇಲ: ಭೀಮಾ ನದಿಯ ಪ್ರವಾಹಕ್ಕೆ ಒಳಗಾಗಿರುವ ಗ್ರಾಮಗಳಿಗೆ ಅಧಿಕಾರಿಗಳು ಮೊಳಕಾಲು ಉದ್ಧದ ನೀರಿನಲ್ಲಿ ತೆವಳುತ್ತ ಸಾಗಿ ಭೇಟಿ ನೀಡಿ ಗ್ರಾಮಸ್ಥರಿಗೆ ಧೈರ್ಯ ತುಂಬಿ ಗ್ರಾಮಸ್ಥರ ಮೆಚ್ಚುಗೆಗೆ ಪಾತ್ರರಾಗಿದ್ದಾರೆಆಲಮೇಲ ತಾಲೂಕಿನ ದೇವಣಗಾಮ ಗ್ರಾಮದ ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಸಂಜೀವಕುಮಾರ್ ದೊಡ್ಡಮನಿ ಹಾಗೂ ಗ್ರಾಮ ಲೆಕ್ಕಾಧಿಕಾರಿ ಎಂ ಕೆ ಪೂಜಾರಿ ಅವರು ಭೀಮಾ ನದಿಯ ಪ್ರವಾಹಕ್ಕೆ ಒಳಗಾಗಿರುವ ಶಂಬೇವಾಡಿ ಗ್ರಾಮದ ಮುಖ್ಯರಸ್ತೆಯ ಮೇಲೆ ಟೊಂಕದವರೆಗೆ ನೀರು ಬಂದಿದ್ದರೂ ಕೂಡ ಧೃತಿಗಡದೆ ಅದೇ ನೀರಲ್ಲಿ ತಮ್ಮ ಪ್ಯಾಂಟನ್ನು ಕಳಚಿ ಕೈಯಲ್ಲಿ ಹಿಡಿದುಕೊಂಡು ಸಾಗಿ ಪ್ರವಾಹ ಪೀಡಿತ ಸ್ಥಳಗಳಿಗೆ ಭೇಟಿ ನೀಡಿ ಅಲ್ಲಿನ ಜನರಿಗೆ ಧೈರ್ಯ ತುಂಬುವ ಕೆಲಸ ಮಾಡಿದ್ದಾರೆ ಶಂಭೇವಾಡ ಗ್ರಾಮದ ತೋಟದ ವಸ್ತಿಯಲ್ಲಿರುವ ಹಾಗೂ ಹಳೆ ಗ್ರಾಮದಲ್ಲಿರುವ ಎಲ್ಲಾ ಜನರಿಗೆ ಎಚ್ಚರಿಕೆಯಿಂದ ಇರಬೇಕೆಂದು ತಿಳಿಸಿ ನಂತರ ಅಗತ್ಯವಿದ್ದರೆ ಕಾಳಜಿ ಕೇಂದ್ರ ಕೂಡ ತೆರೆಯುವ ಮೂಲಕ ತಮ್ಮೊಂದಿಗೆ ಅಧಿಕಾರಿ ವರ್ಗ ಸದಾ ಸಹಾಯಕ್ಕೆ ಇರುತ್ತದೆ ಯಾವುದೇ ಸಂದರ್ಭದಲ್ಲಿ ತೊಂದರೆ ಉಂಟಾದಾಗ ನಮಗೆ…

Read More

ಕೃಷಿ ಇಲಾಖೆಯ ಯಡವಟ್ಟು | ರೈತ ಶೀತಲ ಮುತ್ತಿನ ಅವರ ೨೦ ಎಕರೆ ನೀರಿನಲ್ಲಿ ನಿಂತ ಬೆಳೆ | ಪರಿಹಾರದ ನಿರೀಕ್ಷೆಯಲ್ಲಿ ರೈತ ಉದಯರಶ್ಮಿ ದಿನಪತ್ರಿಕೆ ಚಡಚಣ: ಮಹಾರಾಷ್ಟ್ರದ ಗಡಿಯಲ್ಲಿರುವ ಸೊಡ್ಡಿರಸ್ತೆಯಲ್ಲಿಯ ರೈತ ಶೀತಲ ಮುತ್ತಿನ ಇವರ ಜಮೀನಿನಲ್ಲಿರುವ ಫಲವತ್ತಾದ ಕರಿಮಣ್ಣು ಮಳೆಯ ರಭಸದ ನೀರಿಗೆ ಕೊಚ್ಚಿಕೊಂಡು ಹೋಗಿದೆ. ಸೊಡ್ಡಿ ಗ್ರಾಮದ ಹಳ್ಳದ ಮತ್ತು ಇನ್ನಿತರ ಜಮೀನುಗಳಲ್ಲಿಯ ನೀರು ಹರಿದು ಬಂದು ಬೆಳೆಗಳು ಸರ್ವನಾಶವಾಗಿದೆ ಇದರಿಂದ ರೈತ ಕಂಗಾಲಾಗಿರುವನು.ಕೃಷಿ ಇಲಾಖೆಯ ಎಡವಟ್ಟು: ಇವರ ಜಮೀನಿನ ಹಿಂದೆ ಕೃಷಿ ಇಲಾಖೆಯವರು ಅವೈಜ್ಞಾನಿಕವಾಗಿ ಚಿಕ್ಕಡ್ಯಾಮ ನಿರ್ಮಿಸಿರುವರು. ಅದಕ್ಕೆ ಮಳೆಯ ನೀರು ಸರಾಗವಾಗಿ ಹೋಗಲು ರಂಧ್ರಗಳು ಬಿಟ್ಟಿಲ್ಲ ಹಿಗಾಗಿ ನೀರು ಅದರ ಮೇಲೆ ಹರಿದು ಬಂದು ಜಮೀನು ಒಂದು ನದಿಯಂತೆ ಕಾಣಿಸುತ್ತದೆ ಎಂದು ರೈತ ಶೀತಲ ಮುತ್ತಿನ ಆರೋಪಿಸಿದ್ದಾರೆ.ಸಾವಯವ ಪದ್ದತಿಯನ್ನು ಕೃಷಿಯಲ್ಲಿ ಅಳವಡಿಸಿಕೊಂಡು ರೈತ ಫಲವತ್ತಾದ ಬೆಳೆಯನ್ನು ಬೆಳೆಯುತ್ತಿದ್ದ. ಈಗ ಎಲ್ಲವು ಹಾಳಾಗಿ ಮತ್ತಷ್ಟು ಹಾನಿಯಾಗಿದೆ ಈ ಹಾನಿ ಹೇಗೆ ನಿಭಾಯಿಸುವದು ಎಂಬ ಚಿಂತೆ ಕಾಡುತ್ತಿದೆ…

Read More

ಉದಯರಶ್ಮಿ ದಿನಪತ್ರಿಕೆ ಚಡಚಣ: ಮಹಾರಾಷ್ಟ್ರದ ಅಹಿಲ್ಯಾ ನಗರ,ಸೊಲಾಪೂರ ಮತ್ತು ಭೀಮಾನದಿ ತೀರದ ಎಲ್ಲ ಪ್ರದೇಶಗಳಲ್ಲಿ ಸತತವಾಗಿಸುರಿಯುತ್ತಿರುವ ಧಾರಾಕಾರ ಮಹಾ ಮಳೆಯಿಂದಾಗಿ ಉಜ್ಜನಿ ಹಾಗೂ ಸೀನಾ, ವೀರ ಜಲಾಶಯಗಳಿಂದ ಸುಮಾರು ೪ ಲಕ್ಷ ಕ್ಯೂಸೆಕ್ಸಕ್ಕು ಅಧಿಕ ಪ್ರಮಾಣದ ನೀರು ಹರಿದು ಬರುತ್ತಿದೆ. ಮತ್ತು ೨ ಲಕ್ಷ ೨೦ ಸಾವೀರ ದಷ್ಟು ನೀರು ಚಣೆಗಾಂವ ಹತ್ತಿರ ಇರುವ ಭೀಮಾನದಿ ಹಾಗೂ ಸೀನಾನದಿಗಳ ಸಂಗಮವಾಗಿರುವ ಕೂಡಲದಲ್ಲಿ ಸೀನಾ ನದಿಯ ನೀರು ಬಂದಿದ್ದರಿಂದ ಭಿಮಾನದಿಯ ನೀರಿನ ರಭಸ ಹಾಗೂ ಸಿನಿನದಿಯ ನೀರಿನ ರಭಸಕ್ಕೆ ಭೀಮಾನದಿಯ ಆಪಾರ ಪ್ರಮಾಣದ ನೀರು ಒಮ್ಮೆಲೆ ಭೀಮಾತೀರದ ಅಕ್ಕಪಕ್ಕದ ಗ್ರಾಮಗಳಿಗೆ ಹಾಗೂ ಹೊಲದಲ್ಲಿ ನೀರು ನುಗ್ಗಿ ಅಪಾರ ಪ್ರಮಾಣದ ಹೊಲಗದ್ದೆಗಳು ಬೇಳೆದ ಬೇಳೆಯೊಂದಿಗೆ ನದಿ ಪಾಲಾಗಿದೆ ಮತ್ತು ನದಿ ತೀರದ ಜನರ ನಿದ್ದೆಕೆಡಸಿದೆ ಮತ್ತು ಜನರು ಆತಂಕದಲ್ಲಿ ಕಾಲ ಕಳೆಯುವಂತಾಗಿದೆ.ಮುಂಬೈ ದಿಂದ ಬೆಂಗಳೂರು ಹಾಗೂ ಮಂಗಳೂರು ಸೇರಿದಂತೆ ಪ್ರಮುಖ ನಗರಗಳಿಗೆ ಸಂಪರ್ಕ ಕಲ್ಪಿಸುವ ರಾಷ್ಟ್ರೀಯ ಚತುಷ್ಪತ ಹೆದ್ದಾರಿ ಮಹಾರಾಷ್ಟ್ರದ ವಡಕಬಾಳ ಗ್ರಾಮದ ಸೇತುವೆ…

Read More

ಲೇಖನ- ವೀಣಾ ಹೇಮಂತಗೌಡ ಪಾಟೀಲ್ಮುಂಡರಗಿಗದಗ ಜಿಲ್ಲೆ ಉದಯರಶ್ಮಿ ದಿನಪತ್ರಿಕೆ ಮನುಷ್ಯನ ಜೀವನದಲ್ಲಿ ಶಿಕ್ಷಣ ಬಹು ಮುಖ್ಯ ಪಾತ್ರವನ್ನು ವಹಿಸುತ್ತದೆ. ಕಲಿಕೆಯಿಂದ ಶಿಕ್ಷಣದ ಪ್ರಾರಂಭವಾಗುತ್ತದೆ. ಶಿಕ್ಷಣಕ್ಕೆ ಒಂದು ಸೀಮಿತ ಚೌಕಟ್ಟು ಇದ್ದರೆ ಕಲಿಕೆ ಸೀಮಾತೀತ. ಒಬ್ಬ ವ್ಯಕ್ತಿ ತನ್ನ ಜೀವಿತದ ಕೊನೆಯವರೆಗೂ ಕಲಿಕೆಯಲ್ಲಿ ತೊಡಗಿಕೊಳ್ಳಬಹುದು.ಕಲಿಕೆಯೇ ಜೀವನಕಲಿಕೆಯ ಇಂಗ್ಲಿಷ್ ಪದ ಲರ್ನಿಂಗ್ ನಲ್ಲಿ(learning )ಮೊದಲ ಅಕ್ಷರ ಎಲ್ ತೆಗೆದಾಗ ನಮಗೆ ದೊರೆಯುವುದು ಅರ್ನಿಂಗ್(earning) ಅಂದರೆ ಗಳಿಕೆ.ಕಲಿಕೆಯಿಂದಲೂ ನಾವು ಗಳಿಸಲು ಸಾಧ್ಯ.. ಕಲಿಕೆಯ ಮೂಲಕ ನಾವು ವಿದ್ಯೆಯನ್ನು, ಜ್ಞಾನವನ್ನು, ಅನುಭವಗಳನ್ನು ಸಂಪಾದಿಸುತ್ತೇವೆ. ಹಣ ಗಳಿಕೆಆಮೇಲಿನ ಮಾತು.ಮನುಷ್ಯ ಜೀವನದಲ್ಲಿ ಮೊಟ್ಟಮೊದಲು ಪ್ರಾರಂಭವಾಗುವುದು ಕಲಿಕೆ.. ಹುಟ್ಟಿದ ಕೂಸು ಹಸಿವಾದರೆ ಅಳುವ ಮೂಲಕ ಬೇರೆಯವರ ಗಮನವನ್ನು ಸೆಳೆಯಲು ಕಲಿಯುತ್ತದೆ. ಮುಂದೆ ವಸ್ತುಗಳನ್ನು ಹಿಡಿಯಲು, ನಡೆಯಲು, ಮಾತನಾಡಲು ಕಲಿಯುವ ಮಗು ಮೂರು ವರ್ಷ ಪ್ರಾಯವಾಗುವ ಹೊತ್ತಿಗೆ ಲೌಕಿಕ ಜಗತ್ತಿನ ಹಲವಾರು ವಿಷಯಗಳನ್ನು ಕಲಿಯುತ್ತದೆ. ಈ ಕಲಿಕೆಯ ಮುಂದಿನ ಭಾಗವೇ ಶಿಕ್ಷಣ. ಅಕ್ಷರಗಳನ್ನು ತಿದ್ದಿ ತೀಡಿ ಬರೆಯುತ್ತಾ, ವಸ್ತುಗಳನ್ನು ಗುರುತಿಸುತ್ತಾ, ಪದಗಳನ್ನು ಜೋಡಿಸುತ್ತಾ…

Read More

ಉದಯರಶ್ಮಿ ದಿನಪತ್ರಿಕೆ ಆಲಮೇಲ: ತಾಲ್ಲೂಕಿನ ದೇವಣಗಾಂವ, ತಾವರಖೆಡ, ಕುಮಸಗಿ ಸೇರಿದಂತೆ ನೆರೆಗೆ ತುತ್ತಾದ ಗ್ರಾಮಗಳಿಗೆ ಸಿಂದಗಿ ವಿಧಾನಸಭಾ ಬಿಜೆಪಿ ಮುಖಂಡ ಶ್ರೀಶೈಲಗೌಡ ಬಿರಾದಾರ ಮಾಗಣಗೇರ ಅವರು ಬೇಟಿ ನೀಡಿ ಪ್ರವಾಹಕ್ಕೆ ತುತ್ತಾದ ಜನರಿಗೆ ಸಾಂತ್ವನ ಹೇಳಿದರು.ಬಳಿಕ ಮಾತನಾಡಿದ ಅವರು ನದಿ ತೀರದ ಗ್ರಾಮದಲ್ಲಿ ಅತಿ ಮಳೆ ಮತ್ತು ನಮಗೆ ಬಂದ ಮಾಹಿತಿ ಪ್ರಕಾರ ಮಹಾರಾಷ್ಟ ರಾಜ್ಯದ ಉಜ್ಜನಿ ಜಲಾಶಯದಿಂದ -45000 ಕ್ಯುಸೆಕ್, ಸಿನಾ ಜಲಾಶಯದಿಂದ-1.80 ಲಕ್ಷ ಕ್ಯುಸೆಕ್, ವಿರ ಜಲಾಶಯದಿಂದ-25000 ಕ್ಯುಸೆಕ್ ಮತ್ತು ಭೋರಿ ಹಳ್ಳದಿಂದ ಒಟ್ಟು- 2.90 ಲಕ್ಷ ಕ್ಯುಸೆಕ್ ನೀರು ಭೀಮಾ ನದಿಗೆ ಹರಿಬಿಡಲಾಗುತ್ತಿರುವದರಿಂದ ನದಿತೀರದ ಗ್ರಾಮಗಳಲ್ಲಿ ಪ್ರವಾಹ ಹೆಚ್ಚಾಗಿದೆ. ಇದರಿಂದ ಜನ ಜಾನುವಾರ ಜೀವನ ದುಸ್ಥಿತಿಗೆ ತಲುಪಿದ್ದು, ಕೂಡಲೇ ತಾಲ್ಲೂಕು ಆಡಳಿತ ಜಿಲ್ಲಾಡಳಿತ ಗಂಜಿ ಕೇಂದ್ರ ತೆಗೆದು ಜನರ ಹಾನಿ ನೋವಿಗೆ ಸ್ಪಂದಿಸಿ ಸೂಕ್ತ ಪರಿಹಾರ ನೀಡುವ ಕೇಲಸ ಆಗಬೇಕು. ಪ್ರತಿ ವರ್ಷ ನದಿತೀರದ ಗ್ರಾಮಗಳ ಜನರು ಪ್ರವಾಹ ಎದುರಿಸುವ ದುಸ್ಥಿತಿ ಬಂದೊದಗಿದೆ. ವಿಶೇಷವಾಗಿ ಸರ್ಕಾರ ಈ…

Read More

ಉದಯರಶ್ಮಿ ದಿನಪತ್ರಿಕೆ ವಿಜಯಪುರ: ನಗರದ ಖ್ಯಾತ ಚಾರ್ಟರ್ಡ್ ಅಕೌಂಟೆಂಟ್ ಎಸ್. ಎಸ್. ಸಿಂಧೆ ಅವರ ನಿಧನಕ್ಕೆ ಕೈಗಾರಿಕೆ, ಮೂಲಸೌಲಭ್ಯ ಅಭಿವೃದ್ಧಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎಂ. ಬಿ. ಪಾಟೀಲ‌ ಅವರು ಸಂತಾಪ ವ್ಯಕ್ತಪಡಿಸಿದ್ದಾರೆ.ಈ ಕುರಿತು ಮಾಧ್ಯಮ ಪ್ರಕಟಣೆ ನೀಡಿರುವ ಅವರು, ಎಸ್. ಎಸ್. ಸಿಂಧೆ ಅವರು ಅನಾರೋಗ್ಯದಿಂದ ನಿಧನರಾದ ಸುದ್ದಿ ತಿಳಿದು ಅತೀವ ದುಃಖವಾಗಿದೆ. ತಮ್ಮ ಉತ್ತಮ ಕಾಯಕದ ಮೂಲಕ‌ ಅವರು ಜನಸ್ನೇಹಿಯಾಗಿದ್ದರು. ಅವರ ತಂದೆಯವರ ಕಾಲದಿಂದಲೂ ನಮ್ಮ ಜೊತೆ ಒಡನಾಟ ಹೊಂದಿದ್ದರು. ದೇವರು ಅವರ ಆತ್ಮಕ್ಕೆ ಶಾಂತಿ ನೀಡಲಿ. ಮೃತರ ಕುಟುಂಬಕ್ಕೆ ಅಗಲಿಕೆಯ ನೋವನ್ನು ಭರಿಸುವ ಶಕ್ತಿಯನ್ನು ದೇವರು ನೀಡಲಿ ಎಂದು ಎಂ. ಬಿ. ಪಾಟೀಲ ಅವರು ಸಂತಾಪ‌ ಸೂಚಿಸಿದ್ದಾರೆ.

Read More

ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ಅಲೆಮಾರಿ ಸಮುದಾಯಗಳ ಕುಂದು ಕೊರತೆ ಪರಿಶೀಲನಾ ಸಭೆಯಲ್ಲಿ ಜಿಲ್ಲಾಧಿಕಾರಿ ಡಾ.ಆನಂದ ಕೆ ಸೂಚನೆ ಉದಯರಶ್ಮಿ ದಿನಪತ್ರಿಕೆ ವಿಜಯಪುರ: ಅಲೆಮಾರಿ ಜನಾಂಗಕ್ಕೆ ಸರ್ಕಾರದ ಜಾರಿಗೊಳಿಸಿದ ವಿವಿಧ ಯೋಜನೆಗಳನ್ನು ಸಮರ್ಪಕವಾಗಿ ಅನುಷ್ಠಾನಗೊಳಿಸಿ, ಈ ಜನಾಂಗಕ್ಕೆ ಸರ್ಕಾರದಿಂದ ದೊರೆಯುವ ವಿವಿಧ ಸೌಲಭ್ಯಗಳ ಕುರಿತು ಸೂಕ್ತ ಜಾಗೃತಿ ಹಾಗೂ ಅರಿವು ಮೂಡಿಸುವಂತೆ ಸಂಬಂಧಿಸಿದ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಡಾ.ಆನಂದ ಕೆ ಅವರು ಸೂಚಿಸಿದರು.ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಗುರುವಾರ ಕರ್ನಾಟಕ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ಅಲೆಮಾರಿ ಸಮುದಾಯಗಳ ಕುಂದು ಕೊರತೆ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ಅಲೆಮಾರಿ ಸಮುದಾಯದವರಿಗೆ ಸರ್ಕಾರ ನೀಡುವ ಯೋಜನೆಗಳನ್ನು ಸದುಪಯೋಗ ಪಡೆಸಿಕೊಂಡು ಇವರು ಆರ್ಥಿಕವಾಗಿ ಸಬಲ ಹಾಗೂ ಸದೃಢವಾಗಿ ಸ್ವಾವಲಂಬನೆ ಬದುಕು ಕಟ್ಟಿಕೊಳ್ಳಲು ಸರ್ಕಾರದ ಯೋಜನೆಗಳ ಲಾಭ ದೊರಕಿಸಲು ಕ್ರಮ ವಹಿಸುವಂತೆ ಅವರು ಸೂಚನೆ ನೀಡಿದರು.ಈ ಸಂದರ್ಭದಲ್ಲಿ ಜಿಲ್ಲಾ ಪೊಲೀಸ್ ವರಿಷಾಧಿಕಾರಿ ಲಕ್ಷ್ಮಣ ನಿಂಬರಗಿ, ಜಿಲ್ಲಾ…

Read More

ಮ್ಯಾನುವೆಲ್ ಸ್ಕಾರಿಯವೆಂಜರ್ ನಿಷೇಧ | ವಿಜಯಪುರ ಜಿಲ್ಲಾಧಿಕಾರಿ ಡಾ.ಆನಂದ ಕೆ. ಸೂಚನೆ ಉದಯರಶ್ಮಿ ದಿನಪತ್ರಿಕೆ ವಿಜಯಪುರ: ೨೦೧೩ರ ಕಾಯ್ದೆಯನ್ವಯ ಮ್ಯಾನುವೆಲ್ ಸ್ಕ್ಯಾವೆಂಜರ್‌ವನ್ನು ನಿಷೇಧಿಸಲಾಗಿದ್ದು, ಸ್ವಚ್ಛತಾ ಕರ್ಮಿಗಳಿಗೆ ಸರ್ಕಾರದಿಂದ ನೀಡಲಾಗಿರುವ ರಕ್ಷಣಾ ಪರಿಕರಗಳನ್ನು ವಿತರಣೆ ಮಾಡುವುದರೊಂದಿಗೆ ಅವುಗಳನ್ನು ಬಳಸುವಂತೆ ಪ್ರೋತ್ಸಾಹಿಸಬೇಕು ಎಂದು ಜಿಲ್ಲಾಧಿಕಾರಿ ಡಾ.ಆನಂದ.ಕೆ ಅವರು ಸಂಬಂಧಿಸಿದ ಅಧಿಕಾರಿಗಳಿಗೆ ಸೂಚಿಸಿದರು.ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಗುರುವಾರ ನಡೆದ ಮ್ಯಾನ್ಯುಯಲ್ ಸ್ಕ್ಯಾವೆಂಜರ್ ನೇಮಕಾತಿ ನಿಷೇಧ ಮತ್ತು ಪುನರ್ವಸತಿ ಅಧಿನಿಯಮ ೨೦೧೩ರನ್ವಯ ಜಿಲ್ಲಾ ಮಟ್ಟದ ೩ನೇ ತ್ರೈಮಾಸಿಕ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು ಒಳಚರಂಡಿ ಮತ್ತು ಸೆಪ್ಟಿಕ್ ಟ್ಯಾಂಕ್‌ಗಳನ್ನು ಹಸ್ತಚಾಲಿತವಾಗಿ ಸ್ವಚ್ಛಗೊಳಿಸುವುದನ್ನು ನಿಷೇಧಿಸಲಾಗಿದೆ. ಸ್ಕ್ಯಾವೆಂಜರ್‌ಗಳು ಮತ್ತು ಕುಟುಂಬಗಳಿಗೆ ಪುನರ್ವಸತಿ ಮತ್ತು ಪರ್ಯಾಯ ಉದ್ಯೋಗಗಳನ್ನು ಒದಗಿಸಲು ಕ್ರಮವಹಿಸಬೇಕು ಎಂದು ಅವರು ತಿಳಿಸಿದರು.ಪೌರಕಾರ್ಮಿಕರಿಗೆ ಹಾಗೂ ಸ್ವಚ್ಛತಾ ಕರ್ಮಿಗಳಿಗೆ ಕಡ್ಡಾಯವಾಗಿ ಯೂನಿಪಾರ್ಮ್ ಹಾಗೂ ಗುರುತಿನ ಚೀಟಿಗಳನ್ನು ಕಡ್ಡಾಯವಾಗಿ ವಿತರಣೆ ಮಾಡಬೇಕು. ಸಂಗ್ರಹಿಸಿದ ತ್ಯಾಜ್ಯಗಳನ್ನು ವಿಲೇವಾರಿ ಮಾಡಲಾಗುತ್ತಿದೆ ಎಂಬುದನ್ನು ಸಂಬAಧಿಸಿದ ಅಧಿಕಾರಿಗಳು ಕ್ರಮವಹಿಸಬೇಕು. ಕಾಲಕಾಲಕ್ಕೆ ಪೌರಕಾರ್ಮಿಕರ ಆರೋಗ್ಯ ತಪಾಸಣೆ ಮಾಡಬೇಕು. ಪೌರಕಾರ್ಮಿಕರ…

Read More

ವಿಜಯದಶಮಿ ವಿಶೇಷ ಲೇಖನ- ಮನು ಪತ್ತಾರ (ಕಲಕೇರಿ)ವಿಜಯಪುರ ಉದಯರಶ್ಮಿ ದಿನಪತ್ರಿಕೆ ವಿಜಯದಶಮಿ ಎಂದು ಹೆಸರಾದ ಈ ಹಬ್ಬಕ್ಕೆ, ಜನಪದರು “ಬನ್ನಿ ಹಬ್ಬ” ಮತ್ತು “ಮಣ್ಣಿನ ಹಬ್ಬ” ಎಂದು ಕರೆದು ಹೊನ್ನಿನ ಹೊನಲನ್ನು ಹರಿಸುವ ಈ ಶುಭ ಗಳಿಗೆಯನ್ನು ಹೃದಯ ತುಂಬಿ ಹಾಡಿ ಹರ್ಷದ ಹೊಳೆಯನ್ನೇ ಹರಿಸಿದ್ದಾರೆ.ಈ ಸಂದರ್ಭ, ಭೂ ಸಿರಿಯಲ್ಲಿ ಬೆಳೆದ ಕಾಳುಗಳು ಕಾಡನ್ನು ಬಿಟ್ಟು ಕೆಲವೇ ದಿನಗಳಲ್ಲಿ ನಾಡ ಸೇರುವ ಶುಭ ಘಳಿಗೆಯಾಗಿದೆ. ರೈತರು ತಮ್ಮ ಸಿರಿ ಸಂಪತ್ತು ಹೆಚ್ಚಾಗುವುದೆಂದು ನಂಬಿಕೊಂಡಿರುವ ಕಾಲವಿದು ಆದ್ದರಿಂದ ರೈತರು ಕೃಷಿ ಪರಿಕರಗಳನ್ನು ದೇವರ ಜಗುಲಿಯ ಪಕ್ಕದಲ್ಲಿಟ್ಟು, ಸಸಿಯನ್ನು ಹಾಕಿ ಬೀಜ ಮತ್ತು ಭೂಮಿಯ ಪೂಜೆ ಮಾಡಿ ಸಮೃದ್ಧತೆ ಎಲ್ಲಡೆಯೂ ತುಂಬಿ ತುಳುಕಲೆಂದು ಹರಕೆ ಹೊರುತ್ತಾರೆ ಹಾಗೂ ಈ ಜಗ ಅನ್ನಮಯವಾಗಲಿ ಎಂದು ಬೇಡಿಕೊಳ್ಳುವರು. ಭೂಮಿ ಪೂಜೆಯ ಪದ್ದತಿ ಶಾತವಾಹನರ ಕಾಲದಿಂದಲೂ ನಡೆದುಕೊಂಡು ಬಂದಿರುವ ಬಗೆಗೆ ಜನಪದರ ಹಾಡುಗಳು ಹಾಗೂ ಇತಿಹಾಸದ ಪುಟಗಳು ಸಾಕ್ಷಿಯಾಗಿವೆ.ವ್ಯಾಪಾರಿಯು ಕೂಡಾ ತನ್ನ ವ್ಯಾಪಾರಕ್ಕೆ ಈ ಹಬ್ಬ , ನವ…

Read More

ಉದಯರಶ್ಮಿ ದಿನಪತ್ರಿಕೆ ಆಲಮೇಲ: ತಾಲ್ಲೂಕಿನಲ್ಲಿ ನಡೆದ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ ಕಾರ್ಯದಲ್ಲಿ ತರಬೇತಿ ಪಡೆದ ಅನೇಕ ಶಿಕ್ಷಕರನ್ನು ಕೈ ಬಿಟ್ಟು ತರಬೇತಿ ಪಡೆಯದ ಹಲವು ಶಿಕ್ಷಕರನ್ನು ಸಮೀಕ್ಷೆಗೆ ತೆರಳುವಂತೆ ಆದೇಶ ಮಾಡಿದ್ದು, ಇದು ಗೊಂದಲವನ್ನುಂಟು ಮಾಡಿದೆ ಎಂದು ಅನುದಾನಿತ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ತಾಲೂಕು ಪ್ರಧಾನ ಕಾರ್ಯದರ್ಶಿ ಲಕ್ಷ್ಮೀಪುತ್ರ ಕಿರನಳ್ಳಿ ಆರೋಪಿಸಿ ಬುಧವಾರ ತಹಶಿಲ್ದಾರ ರಿಗೆ ಮನವಿ ಸಲ್ಲಿಸಿದ್ದಾರೆ.ಈ ವೇಳೆ ಮಾತನಾಡಿದ ಅವರು, ಕೂಡಲೇ ಸಂಬಂಧ ಪಟ್ಟ ಅಧಿಕಾರಿಗಳ ಗಮನಕ್ಕೆ ತಂದು ಪೂರ್ವದಲ್ಲಿ ತರಬೇತಿ ಪಡೆದ ಶಿಕ್ಷಕರನ್ನು ಸಮೀಕ್ಷೆಗೆ ನಿಯೋಜನೆ ಮಾಡಬೇಕು. ‌ಒಂದು ವೇಳೆ ಶಿಕ್ಷಕರು ಕಡಿಮೆ ಬಿದ್ದರೆ ಉಳಿದ ಶಿಕ್ಷಕರನ್ನು ಸೂಕ್ತ ತರಬೇತಿ ನೀಡಿ ಸಮೀಕ್ಷೆಗೆ ನಿಯೋಜಿಸಬೇಕು ಎಂದು ಒತ್ತಾಯಿಸಿದರು.ಕಂದಾಯ ನಿರೀಕ್ಷಕ ಎಮ್.ಎ.ಅತ್ತಾರ ಮನವಿ ಪತ್ರ ಸ್ವೀಕರಿಸಿದರು.ಈ ವೇಳೆ ತರಬೇತಿಗೆ ನಿಯೋಜಿತ ಶಿಕ್ಷಕರಾದ ಶ್ರೀಕಾಂತ ಜೋಶಿ, ಸಿ.ಎಸ್.ಪಾಟೀಲ, ಸಿಧ್ಧಾರಾಮ ಮಳ್ಳಿ, ಎಸ್.ಎಮ್.ಜಮಾದಾರ, ಕವಿತಾ ಪಶುಪತಿಮಠ, ರೂಪಾ ಪಾಟೀಲ, ಅಶೋಕ ರಾಠೋಡ, ಮೇಘು ನಾಯಕ ಮುಂತಾದವರು ಉಪಸ್ಥಿತರಿದ್ದರು.

Read More