Subscribe to Updates
Get the latest creative news from FooBar about art, design and business.
Author: editor.udayarashmi@gmail.com
ಉದಯರಶ್ಮಿ ದಿನಪತ್ರಿಕೆ ಇಂಡಿ: ಧರ್ಮಸ್ಥಳ ಸಂಘವು ಕೇವಲ ಸಾಲ ಕೊಡುವದಷ್ಟೇ ಅಲ್ಲದೆ ನೂರಾರು ಜನಪಯೋಗಿ ಯೋಜನೆ ಕೈಗೆತ್ತಿ ಕೊಂಡಿದೆ. ವಯೋವೃದ್ದರಿಗೆ ಮಾಶಾಸನವನ್ನು ನೀಡಿ ಸಹಕರಿಸುತ್ತಿದೆ ಎಂದು ನಟರಾಜ ಎಂ.ಎಲ್ ಹೇಳಿದರು.ತಾಲೂಕಿನ ಅಂಜುಟಗಿ ಗ್ರಾಮದಲ್ಲಿ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ವತಿಯಿಂದ ಹೊಸದಾಗಿ ಮಂಜುರಾದ ಮಾಶಾಸನ ಪತ್ರ ವಿತರಿಸಿ ಮಾತನಾಡಿದರು.ತಾಲೂಕಿನಲ್ಲಿ ೯೩ ನಿರ್ಗತಿಕ ವೃದ್ದ ಮಹಿಳೆಯರು ಮಾಶಾಸನ ನೀಡಿದ್ದು ಅಂಜುಟಗಿ ಗ್ರಾಮದಲ್ಲಿ ಇಂದು ಐದು ಮಹಿಳೆಯರಿಗೆ ನೀಡಿದೆ. ಇದರಿಂದ ಅವರಿಗೆ ಪ್ರತಿ ತಿಂಗಳು ರೂ ಒಂದು ಸಾವಿರ ಜೀವಿತ ಅವಧಿಯ ವರೆಗೂ ಬರುತ್ತದೆ ಎಂದರು.ಗುರುಬಾಯಿ ಇಚ್ಚೂರ್, ಕಾಂತಬಾಯಿ ಅಗಸನಾಳ, ಮರೆಂಬು ಬಳಿಗಾರ, ಪಾರ್ವತಿ ವಾಲಿ ಇವರಿಗೆ ಮಾಶಾಸನ ಪತ್ರ ವಿತರಿಸಲಾಯಿತು.ಅಣ್ಣಾರಾಯ ರೇವಪ್ಪ ಬಬಲಾದಿ, ವಿಜಯಕುಮಾರ ಪೈಗೊಂಡ, ಶಂಕರ ದಡ್ಡಣ್ಣವರ್, ಸಾಯಿಕುಮಾರ ಬನಪಟ್ಟಿ, ಸುರೇಸ ಮಾದರ, ಬಂಡೆಪ್ಪ ಅಲ್ಲಬಗೊಂಡ,ಜ್ಞಾನ ವಿಕಾಸ ಸಮನ್ವಯ ಅಧಿಕಾರಿ ಜಯಶ್ರೀ ಎಸ್.ಎಂ, ವಲಯ ಮೇಲ್ವಿಚಾರಕಿ ಅಶ್ವಿನಿ ಸಂಗೋಳಿ, ಸೇವಾ ಪ್ರತಿನಿಧಿ ಸೇವಾ ಸಾಬ್ಳೆ,ಸಿದ್ದಲಿಂಗ ಮಡಿವಾಳ ಮತ್ತಿತರಿದ್ದರು.
ಉದಯರಶ್ಮಿ ದಿನಪತ್ರಿಕೆ ವಿಜಯಪುರ: ಮಾಜಿ ಉಪ ಪ್ರಧಾನಿ ಡಾ.ಬಾಬು ಜಗಜೀವನ್ ರಾಮ್ ಅವರ ಆದರ್ಶಗಳು ಮತ್ತು ಚಿಂತನೆಗಳು ಎಲ್ಲಾ ಕಾಲಕ್ಕೂ ಮಾದರಿಯಾಗಿವೆ. ಅವರ ವ್ಯಕ್ತಿತ್ವ ಹಾಗೂ ನಡೆದು ಬಂದ ಜೀವನ ಇಂದಿನ ಯುವ ಪೀಳಿಗೆಗೆ ಮಾದರಿಯಾಗಿದೆ ಎಂದು ಮಾದಿಗ ಯುವ ಸೇನೆಯ ಅಧ್ಯಕ್ಷ ನಂದಕುಮಾರ್ ಬಾಂಬೆಕರ್ ಹೇಳಿದರು.ತಾಲೂಕಿನ ಹೊನ್ನಳ್ಳಿ ಗ್ರಾಮದಲ್ಲಿ ಡಾ ಬಿ ಆರ್ ಅಂಬೇಡ್ಕರ್, ಬಾಬು ಜಗಜೀವನರಾಮ್ ಜಯಂತ್ಯೋತ್ಸವ ಮತ್ತು ಮಾದಿಗ ಯುವ ಸೈನ್ಯ ಶಾಖೆ ಉದ್ಘಾಟನೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.ಮಾದಿಗ ಸಮಾಜವು ಶತಮಾನಗಳಿಂದಲೂ, ಶೋಷಣೆ ದಬ್ಬಾಳಿಕೆಯಿಂದ ನಲುಗಿದೆ. ಆದರೆ ಯಾರೂ ಮಾದಿಗರ ನ್ಯಾಯಯುತ ಬೇಡಿಕೆಯಾದ ಒಳ ಮೀಸಲಾತಿ ಕೊಡಿಸಲು ವಿಫಲರಾಗಿದ್ದಾರೆ ಎಂದರು.ಕಾರ್ಯಕ್ರಮದಲ್ಲಿ ಪ್ರಾಸ್ತಾವಿಕವಾಗಿ ಮಾತನಾಡಿದ ಮಾದಿಗ ಯುವ ಮುಖಂಡ ಸಾಯಬಣ್ಣ ಪುರದಾಳ, ಬಾಬು ಜಗಜೀವನ್ ರಾಮ್ ಅವರು ಸ್ವಾತಂತ್ರ್ಯ ನಂತರ ಕೃಷಿ ಸಚಿವರಾಗಿ ಬಡ ರೈತರ ಬಾಳಿಗೆ ಬೆಳಕಾಗಿ ಹಸಿರು ಕ್ರಾಂತಿಯನ್ನೇ ಮಾಡಿ ಈ ದೇಶಕ್ಕೆ ಆಹಾರ ಭದ್ರತೆಯನ್ನು ನೀಡಿದವರು. ಅವರ ಸಾಮಾಜಿಕ ಕಳಕಳಿ ಹಾಗೂ…
ಉದಯರಶ್ಮಿ ದಿನಪತ್ರಿಕೆ ಬಸವನಬಾಗೇವಾಡಿ: ರಾಜ್ಯದಲ್ಲಿ ಗ್ಯಾರಂಟಿ ಯೋಜನೆಗಳಿಂದ ಮಹಿಳಾ ಸಬಲೀಕರಣವಾಗಿದೆ. ಮಹಿಳೆಯರು ಸ್ವಾವಲಂಬಿಗಳಾಗಿ ಜೀವನ ನಡೆಸಲು ಯೋಜನೆಗಳು ಅನುಕೂಲಕರವಾಗಿವೆ ಎಂದು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸುರೇಶ ಹಾರಿವಾಳ ಹೇಳಿದರು.ತಾಲೂಕಿನ ಡೋಣೂರು ಗ್ರಾಮದಲ್ಲಿ ತಾಲೂಕು ಗ್ಯಾರಂಟಿ ಯೋಜನೆ ಅನುಷ್ಠಾನ ಸಮಿತಿ ಶುಕ್ರವಾರ ಹಮ್ಮಿಕೊಂಡಿದ್ದ ಪಂಚ ಗ್ಯಾರಂಟಿ ಯೋಜನೆಗಳ ಪ್ರಗತಿ ಪರಿಶೀಲನ ಸಭೆಯಲ್ಲಿ ಮಾತನಾಡಿದ ಅವರು, ಜನರು ಪಂಚಗ್ಯಾರಂಟಿ ಯೋಜನೆಗಳ ಪ್ರಯೋಜನ ಮಾಡಿಕೊಳ್ಳಬೇಕೆಂದರು.ಗ್ಯಾರಂಟಿ ಯೋಜನೆ ತಾಲೂಕ ಅಧ್ಯಕ್ಷ ಮಹಿಬೂಬ್ ನಾಯ್ಕೋಡಿ ಮಾತನಾಡಿ, ಎಲ್ಲ ಫಲಾನುಭವಿಗಳಿಗೆ ಅಧಿಕಾರಿಗಳು ಗ್ಯಾರಂಟಿ ಯೋಜನೆಗಳು ಮುಟ್ಟಿಸುವಂತೆ ಕ್ರಮವಹಿಸಬೇಕು. ಯೋಜನೆಗಳು ಅರ್ಹರ ಮನೆ ತಲುಪದಿದ್ದಲ್ಲಿ ಅದಕ್ಕೆ ಸಂಬಂಧಿತ ಅಧಿಕಾರಿಗಳನ್ನೇ ಹೊಣೆಗಾರರನ್ನಾಗಿ ಮಾಡಲಾಗುತ್ತದೆ ಎಂದರು.ಸಭೆಯಲ್ಲಿ ಮಹಿಳಾ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷೆ ರುಕ್ಮಿಣಿ ರಾಥೋಡ, ತಾಲೂಕು ಪಂಚಾಯತ ಕಾರ್ಯನಿರ್ವಾಹಕ ಅಧಿಕಾರಿ ಪ್ರಕಾಶ್ ದೇಸಾಯಿ, ಡೋಣೂರು ಗ್ರಾಮದ ಪಿಡಿಒ ರಾಜೇಶ್ವರಿ ಪಾಟೀಲ, ಡೋಣೂರು ಗ್ರಾಮದ ಮುಖಂಡರಾದ ಮಲ್ಲಿಕಾರ್ಜುನ ಪಡಗಾನೂರ, ಯುವರಾಜ ಪಡಗಾನೂರ, ಬಸವರಾಜ ಮಸಳಿ, ಪರಶುರಾಮ ಜ್ಯೋತಿ, ಮಹಿಬೂಬ್ ಹಿಪ್ಪರಗಿ, ಶಂಕ್ರಪ್ಪ ಹುಲ್ಲೂರ, ಗ್ಯಾರಂಟಿ ಯೋಜನೆಯ…
ಉದಯರಶ್ಮಿ ದಿನಪತ್ರಿಕೆ ಮುದ್ದೇಬಿಹಾಳ: ಪ್ರತಿಯೊಬ್ಬರೂ ತಮ್ಮ ಮನೆಯ ಸುತ್ತ, ಮುತ್ತ ಕೊಳಚೆ ನೀರು ನಿಲ್ಲದಂತೆ ಜಾಗೃತಿವಹಿಸುವುದು, ಸೊಳ್ಳೆ ಉತ್ಪತ್ತಿಯಾಗದಂತೆ ನಿಗಾವಹಿಸುವುದು ಹಾಗೂ ಸೊಳ್ಳೆ ಕಡಿತಕ್ಕೆ ಒಳಗಾಗದಂತೆ ರಕ್ಷ ಣೆ ಮಾಡಿಕೊಳ್ಳುವುದರಿಂದ ಮಲೇರಿಯಾ ರೋಗವನ್ನು ತಡೆಗಟ್ಟಬಹುದು ಎಂದು ತಂಗಡಗಿ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ. ಸಂಗಮೇಶ ದಶವಂತ್ ಹೇಳಿದರು.ಪಟ್ಟಣದ ಹೊರಪೇಟೆ ಗಲ್ಲಿಯಲ್ಲಿರುವ ತಾಲೂಕ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಿಂದ ಹಮ್ಮಿಕೊಳ್ಳಲಾಗಿದ್ದ ವಿಶ್ವ ಮಲೇರಿಯಾ ದಿನಾಚರಣೆಯಲ್ಲಿ ಅವರು ಮಾತನಾಡಿದರು.ಹರಿಯದೆ ನಿಂತುಕೊಳ್ಳುವ ಕೊಳಚೆ ನೀರು, ಮನೆಯ ಸುತ್ತಮುತ್ತಲಿನ ಪರಿಸರ ಸ್ವಚ್ಛತೆ ಇಲ್ಲದ ಸ್ಥಳಗಳಲ್ಲಿ ಮಲೇರಿಯಾ ಹರಡುವ ಸೊಳ್ಳೆಗಳು ಉತ್ಪಪತ್ತಿಯಾಗುತ್ತವೆ. ಸೊಳ್ಳೆ ಒಬ್ಬನಿಂದ ಮತ್ತೊಬ್ಬನಿಗೆ ಕಡಿಯುವ ಮೂಲಕ ಸಾಂಕ್ರಾಮಿಕವಾಗಿ ಬರುತ್ತದೆ. ಇಂತಹ ಸಂದರ್ಭದಲ್ಲಿ ವ್ಯಕ್ತಿಗೆ ಚಳಿ-ಜ್ವರ ಬರುವ ಲಕ್ಷಣಗಳು ಕಾಣಿಸಿಕೊಳ್ಳುತ್ತದೆ. ಹೀಗಾದಾಗ ಕೂಡಲೇ ಹತ್ತಿರದಲ್ಲಿರುವ ಆಸ್ಪತ್ರೆಗೆ ಭೇಟಿ ನೀಡಿ ರಕ್ಷ ಪರೀಕ್ಷೆ ಮಾಡಿಸಿಕೊಳ್ಳುವುದರ ಜೊತೆಗೆ ಚಿಕಿತ್ಸೆ ಪಡೆಯಬೇಕು ಎಂದು ಸಲಹೆ ನೀಡಿದರು.ತಾಲೂಕು ಕ್ಷೆತ್ರ ಆರೋಗ್ಯ ಶಿಕ್ಷ ಣಾಧಿಕಾರಿ ಅನುಸೂಯಾ ತೇರದಾಳ ಮಾತನಾಡಿ, ಮನೆ ಸುತ್ತಲಿನ…
ಉದಯರಶ್ಮಿ ದಿನಪತ್ರಿಕೆ ಜಮಖಂಡಿ: ಗ್ರಾಪಂ ಜಿಲ್ಲೆಯಲ್ಲಿಯೇ ಅತಿ ಹೆಚ್ಚು ಕೂಲಿ ಕಾರ್ಮಿಕರನ್ನು ಹೊಂದಿರುವ ಗ್ರಾಮ ಪಂಚಾಯತಿ. ಪ್ರತಿ ವರ್ಷವೂ ನರೇಗಾ ಯೋಜನೆಯನ್ನು ಯಶಸ್ವಿಯಾಗಿ ನಡೆಸಿಕೊಂಡು ಬಂದಿದೆ. ಸಾಕಷ್ಟು ಅಭಿವೃದ್ಧಿ ಕೆಲಸವನ್ನು ಮಾಡಿದ ಕೀರ್ತಿ ಅರಟಾಳ ಪಂಚಾಯತಿಗೆ ಸಲ್ಲುತ್ತದೆ ಎಂದು ಬೆಳಗಾವಿ ಜಿಪಂ ಯೋಜನಾ ನಿರ್ದೇಶಕ ರವಿ ಬಂಗಾರಪ್ಪನವರ ಹೇಳಿದರು.ಅಥಣಿ ತಾಲೂಕಿನ ಅರಟಾಳ ಗ್ರಾಮದ ಗ್ರಾಪಂಗೆ ಭೇಟಿ ನೀಡಿ, ನೂತನ ಗ್ರಾಮ ಪಂಚಾಯತ ಕಟ್ಟಡ ವಿಕ್ಷಣೆ ಹಾಗೂ ವಿವಿಧ ಕಾಮಗಾರಿಗಳ ಪರಿಶೀಲಿಸಿ ಮಾತನಾಡಿ, ಕಡಿಮೆ ಅವಧಿಯಲ್ಲಿ ಉತ್ತಮವಾಗಿ ನೂತನ ಗ್ರಾಪಂ ಕಟ್ಟಡ ನಿರ್ಮಾಣ ಮಾಡಿ ಉದ್ಘಾಟನೆ ಮಾಡಿದಿರಿ. ಗ್ರಾಪಂ ಅಧ್ಯಕ್ಷರು, ಉಪಾಧ್ಯಕ್ಷರು, ಸದಸ್ಯರ ಸಹಕಾರ ಅಧಿಕಾರಿಗಳಿಗೆ ಸಿಕ್ಕರೆ ಸರಕಾರದ ಯೋಜನೆಗಳು ಯಶಸ್ವಿಯಾಗುತ್ತವೆ. ಅರಟಾಳ ಗ್ರಾಪಂ ವ್ಯಾಪ್ತಿಯಲ್ಲಿ ಕೂಲಿಕಾರ್ಮಿಕರು ಹೆಚ್ಚು ಇರುವುದರಿಂದ ಹೆಚ್ಚಿಗೆ ನರೇಗಾ ಕೆಲಸ ಕೊಡಿ. ಬೇಸಿಗೆ ಇರುವುದರಿಂದ ಕುಡಿಯುವ ನೀರಿನ ಸಮಸ್ಯೆಯಾಗದಂತೆ ನೋಡಿಕೊಳ್ಳಿ. ಹಾಗೇನಾದರು ಕುಡಿಯುವ ನೀರಿನ ಸಮಸ್ಯೆ ಉಂಟಾದರೆ ಮೇಲಾಧಿಕಾರಿಗಳ ಗಮನಕ್ಕೆ ತನ್ನಿ ಎಂದರು.ಗ್ರಾಪಂ ಪಿಡಿಒ ಎ. ಜಿ.ಎಡಕೆ ಮಾತನಾಡಿ,…
ಉದಯರಶ್ಮಿ ದಿನಪತ್ರಿಕೆ ಮುದ್ದೇಬಿಹಾಳ: ತಾಲೂಕಿನ ನೆರಬೆಂಚಿ ಗ್ರಾಮದ ಎಚ್ಚರೇಶ್ವರ ದೇವಸ್ಥಾನದಲ್ಲಿ ಏ.೨೭ ರಂದು ಬೆಳಿಗ್ಗೆ ೧೦:೩೦ ಕ್ಕೆ ೨೦೮ನೇ ಶಿವಾನುಭವ ಗೋಷ್ಠಿ ಹಾಗೂ ಡಾ.ಪ್ರಕಾಶ ನರಗುಂದ ರಚಿತ, ನಿವೃತ್ತ ಶಿಕ್ಷಕ ಎನ್.ಎಸ್.ಪೊಲೇಶಿ ಅವರ ಶಿಕ್ಷಣ ಶಿಲ್ಪಿ ಎಂಬ ಅಭಿನಂದನಾ ಗ್ರಂಥ ಲೋಕಾರ್ಪಣೆ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ.ಸಾನಿಧ್ಯವನ್ನು ಕೂಡಲ ಸಂಗಮದ ಲಿಂಗಾಯತ ಪಂಚಮಸಾಲಿ ಪೀಠದ ಬಸವ ಜಯಮೃತ್ಯುಂಜಯ ಮಹಾಸ್ವಾಮಿಗಳು ಮತ್ತು ಇಟಗಿ ಭೂಕೈಲಾಸ ಮೇಲ್ಗದ್ದುಗೆಯ ಗುರುಶಾಂತವೀರ ಶಿವಾಚಾರ್ಯ ಮಹಾಸ್ವಾಮಿಗಳು ವಹಿಸಲಿದ್ದು, ಮಾಜಿ ಗ್ರಾ.ಪಂ ಅಧ್ಯಕ್ಷ ಸಂಗಯ್ಯ ಹಾಲಗಂಗಾಧರಮಠ ಅಧ್ಯಕ್ಷತೆ ವಹಿಸುವರು. ಎಂ.ಜಿ.ವ್ಹಿ.ಸಿ ಕಾರ್ಯದರ್ಶಿ ಅಶೋಕ ತಡಸದ ಉದ್ಘಾಟಿಸಲಿದ್ದು, ಶರಣಮ್ಮ ಗಿರೇಗೌಡರ ಉಪಸ್ಥಿತಿಯಲ್ಲಿ ಗುರುಲಿಂಗಪ್ಪಗೌಡ ಹಿರೇಗೌಡರ, ಎಸ್.ಎನ್.ಕಂಗಳ ಮುಖ್ಯ ಅತಿಥಿಯಾಗಿ ಭಾಗವಹಿಸುವರು. ಗಂಗಾಯಪೀಠ ಮಹಾಸ್ವಾಮಿಗಳು, ಶಿವಣ್ಣ ಗುಡಗುಂಟಿ, ಬಸನಗೌಡ ಪಾಟೀಲ, ಡಾ.ರಾಜಶೇಖರ ಹತ್ತರಸಂಘ, ಬಿ.ಪಿ.ಪಾಟೀಲ, ಜಿ.ಎಚ್.ಪಾಟೀಲ, ಎಂ.ಎಸ್.ಬಿರಾದಾರ, ಪರಶುರಾಮ ಚೌಡಕೇರ ಅನುಭವಗೋಷ್ಟಿ ನಿರೂಪಿಸಲಿದ್ದಾರೆ.
ಉದಯರಶ್ಮಿ ದಿನಪತ್ರಿಕೆ ಸಿಂದಗಿ: ವೃತ್ತಿಧರ್ಮ ಪ್ರತಿಯೊಬ್ಬರ ಅಧ್ಯಕರ್ತವ್ಯವಾಗಿದೆ ಎಂದು ಮಾಜಿ ಇನ್ನರ್ವಿಲ್ ಕ್ಲಬ್ ಅಧ್ಯಕ್ಷ ನಾಗರತ್ನ ಮನಗೂಳಿ ಹೇಳಿದರುಸಿಂದಗಿ ನಗರದ ಓಂ ಶಾಂತಿ ಭವನದಲ್ಲಿ ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರೀಯ ವಿಶ್ವವಿದ್ಯಾಲಯ ಹಾಗೂ ತಾಲೂಕಾ ಆರೋಗ್ಯ ಇಲಾಖೆ ಇವರ ಸಹಯೋಗದಲ್ಲಿ ನಡೆದ ಆಶಾ ಕಾರ್ಯಕರ್ತೆಯರಿಗಾಗಿ ವೃತ್ತಿ ಕೌಶಲ್ಯ ತರಬೇತಿ ಶಿಬಿರವನ್ನು ಉದ್ಘಾಟಿಸಿ ಮಾತನಾಡಿದ ಅವರು ಆಶಾ ಕಾರ್ಯಕರ್ತೆಯರು ಸಮಾಜದ ಭರವಸೆಯ ಬೆಳಕಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಆಶಾ ಎಂದರೆ ಆಸೆ,ಹಾರೈಕೆ, ಭರವಸೆಯಲ್ಲಿ ಪ್ರತಿ ವ್ಯಕ್ತಿಯ ಬದುಕಿಗೆ ಮತ್ತು ಸ್ವಾಸ್ತ್ಯ ಸಮಾಜದ ಸರ್ವತೋಮುಖ ಬೆಳವಣಿಗೆಯಲ್ಲಿ ಇವರ ಕಾರ್ಯ ಶ್ಲಾಘನೀಯವಾಗಿದೆ. ಜನಸೇವೆ ಅವಕಾಶ ಸಿಕ್ಕಾಗ ಬಿಡದೆ ಅದನ್ನ ಸದುಪಯೋಗ ಮಾಡಿಕೊಳ್ಳಬೇಕು ಎಂದು ಹೇಳಿದರು.ಅತಿಥಿಯಾಗಿ ಮಾತನಾಡಿದ ತೋಟಗಾರಿಕಾ ಇಲಾಖೆಯ ಹಿರಿಯ ಸಹಾಯಕ ನಿರ್ದೇಶಕ ಸಚಿನ ಉಟಗಿ ಧರ್ಮ-ದೇವರುಗಳ ಪರಿಕಲ್ಪನೆಯಲ್ಲಿ ಪ್ರಕೃತಿದತ್ತ ತೋಟಗಾರಿಕೆ ಮತ್ತು ಆದ್ಯಾತ್ಮ ಎರಡು ಒಂದೇ, ಆಧ್ಯಾತ್ಮ ಮನವನ್ನು ಅರಳಿಸಿದರೆ ಪ್ರಕೃತಿ ಹೂಗಳನ್ನ ಸಸಿಗಳನ್ನು ಅರಳಿಸುತ್ತದೆ ಹಾಗೆ ಬ್ರಹ್ಮಕುಮಾರಿ ಈಶ್ವರೀಯ ವಿಶ್ವವಿದ್ಯಾಲಯವು ಆಧ್ಯಾತ್ಮದ ಮೂಲಕ ಸ್ವಾಸ್ಥ್ಯ ಸಮಾಜ ನಿರ್ಮಾಣ…
ಉದಯರಶ್ಮಿ ದಿನಪತ್ರಿಕೆ ಮೋರಟಗಿ: ಅನಾಪೆಲೀಸ್ ಎನ್ನುವ ಹೆಣ್ಣು ಸೊಳ್ಳೆ ಕಚ್ಚುವುದರಿಂದ ಮಲೇರಿಯಾ ರೋಗ ಹರಡುತ್ತದೆ, ಇದು ಒಬ್ಬರಿಂದ ಇನ್ನೊಬ್ಬರಿಗೆ ಸೊಳ್ಳೆ ಕಚ್ಚಿದರೆ ಆ ವ್ಯಕ್ತಿಗೂ ಕೂಡಾ ಮಲೇರಿಯಾ ಹರಡುವ ಎಲ್ಲ ಸಾಧ್ಯತೆಗಳು ಇರುತ್ತದೆ ಹೀಗಾಗಿ ಮಲೇರಿಯಾ ಮುಕ್ತ ರೋಗಕ್ಕೆ ಸ್ವಚ್ಛತೆ ಕಾಪಾಡಿಕೊಳ್ಳಿ ಎಂದು ಹಿರಿಯ ಅರೋಗ್ಯ ನೀರಿಕ್ಷಣ ಅಧಿಕಾರಿ ಎಂ ಆರ್ ಮಾಶ್ಯಾಳ ಸಲಹೆ ನೀಡಿದರು.ಗ್ರಾಮದ ಸಮುದಾಯ ಅರೋಗ್ಯ ಕೇಂದ್ರದಲ್ಲಿ ವಿಶ್ವ ಮಲೇರಿಯಾ ದಿನದ ಅಂಗವಾಗಿ ಹಮ್ಮಿಕೊಂಡ ಮಲೇರಿಯಾ ವಿರೋಧಿ ಮಸಾಚರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.ಈ ರೋಗ ನಿಯಂತ್ರಣಕ್ಕಾಗಿ ಪ್ರತಿಯೊಬ್ಬ ಸಾರ್ವಜನಿಕರು ತಮ್ಮ ಮನೆಯ ಅಕ್ಕಪಕ್ಕದಲ್ಲಿ ಗಡಸು ನೀರು ನಿಲ್ಲದಂತೆ ನಿಗಾ ವಹಿಸಬೇಕು ಮನೆಯಲ್ಲಿ ಸೊಳ್ಳೆ ಬತ್ತಿ ಪರದಿ ಉಪಯೋಗಿಸಬೇಕು ಕಿಟಗಿ ಬಾಗಿಲಿಗೆ ಸೊಳ್ಳೆ ಜಾಲರಿ ಅಳವಡಿಸಬೇಕು ಬೆಳಿಗ್ಗೆ ಮತ್ತು ಸಾಯಂಕಾಲ ಬೇವಿನ ಸೋಪ್ಪೆಯಿಂದ ಹೋಗೆ ಹಾಕಿದರೆ ಸೊಳ್ಳೆಗಳು ಮನಯೊಳಗಡೆ ಪ್ರವೇಶ ಮಾಡಲು ಅವಕಾಶ ಇರುವುದಿಲ್ಲ ಎಂದರು.ಮುನ್ನೆಚ್ಚರಿಕೆ ಕ್ರಮ: ಶೀಘ್ರ ಚಳಿ ಮತ್ತು ಆಗಾಗ ಜ್ವರ ಬರುವುದು ಹಾಗೂ ತೆಲೆ ನೋವು,…
ಉದಯರಶ್ಮಿ ದಿನಪತ್ರಿಕೆ ವಿಜಯಪುರ: ತಾಲೂಕಿನ ಕತ್ನಳ್ಳಿ ಗ್ರಾಮದಲ್ಲಿ ಶನಿವಾರ 7 ನೇ ಸುತ್ತಿನ ಕಾಲುಬಾಯಿ ಜ್ವರ ಮತ್ತು ಚರ್ಮ ಗಂಟು ರೋಗ, ಲಸಿಕಾ ಕಾರ್ಯಕ್ರಮದ ಅಭಿಯಾನಕ್ಕೆ ಚಾಲನೆ ನೀಡಲಾಯಿತು.ವಿಜಯಪುರ ವಿಭಾಗಾಧಿಕಾರಿಗಳಾದ ಗುರುನಾಥ ದಡ್ಡೆ ಅವರು ಗ್ರಾಮದ ಗಣ್ಯರ ಸಮ್ಮುಖದಲ್ಲಿ, ಅಭಿಯಾನ ಕಾರ್ಯಕ್ರಮವನ್ನು ಉದ್ಘಾಟಿಸಿದರು.ಲಸಿಕಾ ಕಾರ್ಯಕ್ರಮದ ಪ್ರಯೋಜನಗಳ ಕುರಿತು ಡಾ.ಬಸವರಾಜ್ ಕನಮಡಿ ಗ್ರಾಮಸ್ಥರಿಗೆ ವಿವರಿಸಿದರು.ಈ ವೇಳೆ ಡಾ.ಸುಜಾತ ಪಾಟೀಲ್, ಡಾ.ಬಂಡಿ, LDO ಮನಗುಳಿ, ಹಿರಿಯ ಪಶುವೈದ್ಯಕೀಯ ಪರೀಕ್ಷಕ ಜುಮ್ಮನಾಳ, ಗಂಗನಲ್ಲಿ, ಸೂರ್ಯವಂಶಿ ಮತ್ತು ಸಿಬ್ಬಂದಿ ಉಪಸ್ಥಿತರಿದ್ದರು.
ಚಿಂತನೆ- ನಾಗರಾಜ ಮತ್ತಿಹಳ್ಳಮುಖ್ಯ ಉಪಾಧ್ಯಾಯರುಸರ್ಕಾರಿ ಪ್ರೌಢಶಾಲೆಕೊಟ್ಟೂರು ಉದಯರಶ್ಮಿ ದಿನಪತ್ರಿಕೆ ಹೆಸರು: ಚೆನ್ನಬಸವಣ್ಣಕಾಲ : ಕ್ರಿ.ಶ.ಹನ್ನೆರಡನೆಯ ಶತಮಾನದೊರೆತಿರುವ ವಚನಗಳು: 1776ವಚನಗಳ ಅಂಕಿತನಾಮ: ಕೂಡಲಚೆನ್ನಸಂಗಯ್ಯ / ಕೂಡಲಚೆನ್ನಸಂಗಮದೇವ ನಿಷ್ಠೆಯುಳ್ಳಾತಂಗೆ ನಿತ್ಯ ನೇಮದ ಹಂಗೇಕೆಸತ್ಯವುಳ್ಳಾತಂಗೆ ತತ್ವ ವಿಚಾರದ ಹಂಗೇಕೆಅರಿವುಳ್ಳಾತಂಗೆ ಅಗ್ಘವಣಿಯ ಹಂಗೇಕೆಮನಶುದ್ಧವುಳ್ಳವಂಗೆ ಮಂತ್ರದ ಹಂಗೇಕೆಭಾವಶುದ್ಧವುಳ್ಳವಂಗೆ ಹೂವಿನ ಹಂಗೇಕೆಕೂಡಲಚೆನ್ನಸಂಗಯ್ಯಾನಿಮ್ಮನರಿದಾತಂಗೆ ನಿಮ್ಮ ಹಂಗೇಕೆ ವಚನ ವಿಶ್ಲೇಷಣೆ ಒಳ್ಳೆಯ ನಡೆನುಡಿಯುಳ್ಳ ವ್ಯಕ್ತಿಗೆ ದೇವರನ್ನು ಪೂಜಿಸುವ ಇಲ್ಲವೇ ದೇವರ ಇರುವಿಕೆಯ ಬಗೆಗಿನ ಸಂಗತಿಗಳನ್ನು ಮನನ ಮಾಡಿಕೊಳ್ಳುವ ಅಗತ್ಯವಿಲ್ಲ ಎಂಬುದನ್ನು ಈ ವಚನದಲ್ಲಿ ಹೇಳಲಾಗಿದೆ. “ಒಳ್ಳೆಯ ನಡೆನುಡಿ“ ಎಂದರೆ ಜೀವನದಲ್ಲಿ ವ್ಯಕ್ತಿಯು ತನಗೆ ಒಳಿತನ್ನು ಬಯಸುವಂತೆಯೇ, ಸಹಮಾನವರಿಗೆ ಮತ್ತು ಸಮಾಜಕ್ಕೆ ಒಳಿತನ್ನುಂಟುಮಾಡುವಂತಹ ನಡೆನುಡಿಗಳನ್ನು ಹೊಂದಿರುವುದು.ನಿಷ್ಠೆಯುಳ್ಳಾತಂಗೆ ನಿತ್ಯನೇಮದ ಹಂಗೇಕೆ=ಜೀವನದ ವ್ಯವಹಾರಗಳಲ್ಲಿ ಸಹಮಾನವರ ಒಲವು ನಲಿವು ನಂಬಿಕೆಗೆ ಪಾತ್ರನಾಗಿ ಪ್ರಾಮಾಣಿಕತನದ ನಡೆನುಡಿಗಳಿಂದ ಬಾಳುತ್ತಿರುವ ವ್ಯಕ್ತಿಗೆ ಯಾವುದೇ ಬಗೆಯ ಜಪ ತಪ ಪೂಜೆಗಳ ಮೂಲಕ ದೇವರನ್ನು ಪೂಜಿಸಬೇಕಾದ ಅಗತ್ಯವಿಲ್ಲ;ಸತ್ಯವುಳ್ಳಾತಂಗೆ ತತ್ವವಿಚಾರದ ಹಂಗೇಕೆ=ದಿನನಿತ್ಯದ ಜೀವನದಲ್ಲಿ ಕೆಟ್ಟದ್ದನ್ನು/ಸುಳ್ಳನ್ನು/ಕಪಟತನದ ನಡೆನುಡಿಗಳನ್ನು ಬಿಟ್ಟು, ತನ್ನ ವ್ಯಕ್ತಿತ್ವದ ಇತಿಮಿತಿಗಳನ್ನು ಚೆನ್ನಾಗಿ ಅರಿತುಕೊಂಡು ಒಳ್ಳೆಯತನದಿಂದ ಬಾಳುತ್ತಿರುವ…
