Author: editor.udayarashmi@gmail.com

ಉದಯರಶ್ಮಿ ದಿನಪತ್ರಿಕೆ ವಿಜಯಪುರ: ೨೦೨೫-೨೬ ನೇ ಸಾಲಿಗೆ ಕೃಷಿ ಇಲಾಖೆ ವತಿಯಿಂದ ಹೈಟೆಕ್ ಹಾರ್ವೆಸ್ಟರ್ ಹಬ್ ಕಾರ್ಯಕ್ರಮದಡಿ ಶುಗರ್ ಕೇನ ಹಾರ್ವೆಸ್ಟರ್ ಹಬ್ ಗಳನ್ನು ಹಾಗೂ ಕಂಬೈನ್ಸ್ ಹಾರ್ವೆಸ್ಟರ್ ಹಬ್‌ಗಳನ್ನು ಸಹಾಯಧನದಡಿ ವಿತರಿಸಲು ವೈಯಕ್ತಿಕ ಫಲಾನುಭವಿಗಳಿಗೆ ಹೈಟೆಕ್ ಹಾರ್ವೆಸ್ಟರ್ ಹಬ್ ಸ್ಥಾಪಿಸಲು ಅವಕಾಶ ನೀಡುವ ನಿಟ್ಟಿನಲ್ಲಿ ಅರ್ಜಿ ಆಹ್ವಾನಿಸಲಾಗಿದೆ. ಅರ್ಜಿ ಸಲ್ಲಿಸಲು ಸೆ,೧೮ ಕೊನೆಯ ದಿನಾಂಕವಾಗಿದೆ.ಸಾಮಾನ್ಯ ಹಾಗೂ ಪರಿಶಿಷ್ಟ ವರ್ಗದಡಿ ವೈಯಕ್ತಿಕ ಫಲಾನುಭವಿಗಳಿಗೆ ಶುಗರ್ ಕೇನ ಹಾರ್ವೆಸ್ಟರ್ ಹಾಗೂ ಕಂಬೈನ್ಸ್ ಹಾರ್ವೆಸ್ಟರ್ ಹಬ್‌ಗಳನ್ನು ಸಹಾಯಧನದಡಿ ಅನುಷ್ಠಾನಗೊಳಿಸಲಾಗುತ್ತಿದ್ದು, ಯಂತ್ರೋಪಕರಣ ಖರೀದಿಸಲು ಆದ್ಯತೆ ಹಾಗೂ ಅನುದಾನ ಲಭ್ಯತೆ ಮೇರೆಗೆ ಸಹಾಯಧನ ಒದಗಿಸಲಾಗುವುದು. ಆಸಕ್ತರು, ತಮ್ಮ ಅರ್ಜಿಗಳನ್ನು ಸಲ್ಲಿಸಲು ಹಾಗೂ ಹೆಚ್ಚಿನ ಮಾಹಿತಿಗಾಗಿ ಹತ್ತಿರದ ಸಹಾಯಕ ಕೃಷಿ ನಿರ್ದೇಶಕರ ಕಚೇರಿಗೆ ಭೇಟಿ ನೀಡಬಹುದು ಎಂದು ಜಂಟಿ ಕೃಷಿ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Read More

ಉದಯರಶ್ಮಿ ದಿನಪತ್ರಿಕೆ ವಿಜಯಪುರ: ವಿವಿಧ ಸಾಮಾಜಿಕ ಭದ್ರತೆ ಯೋಜನೆಗಳನ್ನು ಪರಿಣಾಮಕಾರಿ ಅನುಷ್ಠಾನಗೊಳಿಸಲು ಜಿಲ್ಲೆಯ ಹೋಬಳಿ ಮಟ್ಟದಲ್ಲಿ ಪಿಂಚಣಿ ಅದಾಲತ್ ನಡೆಸಲಾಗುತ್ತಿದ್ದು, ಇದೇ ಸೆಪ್ಟೆಂಬರ್ ೬ರಂದು ಬೆಳಿಗ್ಗೆ ೧೧ ಗಂಟೆಗೆ ಜಿಲ್ಲೆಯ ವಿವಿಧ ೧೫ ಗ್ರಾಮಗಳಲ್ಲಿ ಹೋಬಳಿ ಮಟ್ಟದ ಪಿಂಚಣಿ ಅದಾಲತ್ ಹಮ್ಮಿಕೊಳ್ಳಲಾಗಿದೆ.ವಿಜಯಪುರ ಉಪ ವಿಭಾಗಾಧಿಕಾರಿಗಳು ತಾಳಿಕೋಟೆ ತಾಲೂಕಿನ ಬಳಗಾನೂರ ಗ್ರಾಮದ ಮಾರುತಿ ದೇವಸ್ಥಾನದಲ್ಲಿ, ಇಂಡಿ ಉಪವಿಭಾಗಾಧಿಕಾರಿಗಳು ಸಿಂದಗಿ ತಾಲೂಕಿನ ಚಾಂದಕವಠೆ ಗ್ರಾಮದ ಪಂಚಾಯತಿ ಕಾರ್ಯಾಲದಲ್ಲಿ, ವಿಜಯಪುರ ಗ್ರೇಡ್-೨ ತಹಶೀಲ್ದಾರ ಅವರು ವಿಜಯಪುರ ನಗರದ ಕಸಬಾ ಚಾವಡಿ ಜೆ.ಎಂ.ರಸ್ತೆಯಲ್ಲಿನ ಗ್ರಾಮ ಆಡಳಿತಾಧಿಕಾರಿ ಕಾರ್ಯಾಲಯದಲ್ಲಿ, ಹಾಗೂ ತಿಕೋಟಾ ಗ್ರೇಡ್-೨ ತಹಶೀಲ್ದಾರ ಅವರು ಯತ್ನಾಳ ಗ್ರಾಮದ ಡಾ.ಬಿ.ಆರ್.ಅಂಬೇಡ್ಕರ್ ಸಮುದಾಯ ಭವನದಲ್ಲಿ ಪಿಂಚಣಿ ಅದಾಲತ್ ನಡೆಸಲಿದ್ದಾರೆ.ಬಬಲೇಶ್ವರ ಗ್ರೇಡ್-೨ ತಹಶೀಲ್ದಾರ ಅವರು ಹೊಸೂರ ಗ್ರಾಮದ ಶ್ರೀ ಹನುಮಾನ ದೇವಸ್ಥಾನದಲ್ಲಿ, ಬಸವನಬಾಗೇವಾಡಿ ಗ್ರೇಡ್-೨ ತಹಶೀಲ್ದಾರ ಅವರು ನಾಗೂರ ಗ್ರಾಮದ ಶ್ರೀ ಮಲ್ಲಯ್ಯನ ಗುಡಿಯಲ್ಲಿ, ನಿಡಗುಂದಿ ತಹಶೀಲ್ದಾರ ಅವರು ಹುಣಶ್ಯಾಳ ಪಿ.ಸಿ ಗ್ರಾಮದ ಶ್ರೀ ಬೀರಲಿಂಗೇಶ್ವರ ದೇವಸ್ಥಾನದಲ್ಲಿ, ಕೊಲ್ಹಾರ ತಹಶೀಲ್ದಾರ ಅವರು…

Read More

ಉದಯರಶ್ಮಿ ದಿನಪತ್ರಿಕೆ ಸಿಂದಗಿ: ನಗರದಲ್ಲಿ ಕರ್ನಾಟಕ ರಣಧೀರ ಪಡೆ ಸಂಘಟನೆಯ ವತಿಯಿಂದ ನೂತನ ಕನ್ನಡ ಸಾಹಿತ್ಯ ಪರಿಷತ್ತಿನ ತಾಲೂಕಾಧ್ಯಕ್ಷರಾಗಿ ಆಯ್ಕೆಯಾದ ವಾಯ್.ಸಿ.ಮಯೂರ ಅವರಿಗೆ ಸನ್ಮಾನಿಸಿ ಗೌರವಿಸಲಾಯಿತು.ಈ ವೇಳೆ ಕರಪ ಉ.ಅಧ್ಯಕ್ಷ ಸಂತೋಷ ಮಣಿಗಿರಿ, ಪುರಸಭೆ ಉಪಾಧ್ಯಕ್ಷ ಸಂದೀಪ ಚೌರ, ಸಿದ್ದು ತಮದೊಡ್ಡಿ ಸೇರಿದಂತೆ ಸಂಘಟನೆಯ ಪದಾಧಿಕಾರಿಗಳು, ಕಾರ್ಯಕರ್ತರು ಇದ್ದರು.

Read More

ದೇವರನಿಂಬರಗಿ ಗ್ರಾಮದಲ್ಲಿ ಬೆಳ್ಳಂ ಬೆಳಿಗ್ಗೆ ರೌಡಿ ಶೀಟರ್ ಬರ್ಬರ ಹತ್ಯೆ | ಗ್ರಾ.ಪಂ. ಅಧ್ಯಕ್ಷ ಭೀಮನಗೌಡ ಬಿರಾದಾರ ಕೊಲೆಯಾದ ದುರ್ಧೈವಿ ಉದಯರಶ್ಮಿ ದಿನಪತ್ರಿಕೆ ಚಡಚಣ: ಸಮೀಪದ ದೇವರನಿಂಬರಗಿ ಗ್ರಾಮದಲ್ಲಿ ಬುಧವಾರ ಬೆಳಿಗ್ಗೆ ರೌಡಿ ಶೀಟರ್‌ನ ಮೇಲೆ ಅಪರಿಚಿತರು ಏಕಾಏಕಿ ಗುಂಡಿನ ದಾಳಿ ಮಾಡಿ ಬರ್ಬರವಾಗಿ ಹತ್ಯೆ ಮಾಡಿದ ಘಟನೆ ದೇವರನಿಂಬರಗಿ ಗ್ರಾಮದಲ್ಲಿ ಬುಧವಾರ ನಡೆದಿದೆ.ಗುಂಡಿನ ದಾಳಿಯಲ್ಲಿ ಮೃತಪಟ್ಟ ವ್ಯಕ್ತಿಯನ್ನು ದೇವರನಿಂಬರಗಿ ಗ್ರಾ.ಪಂ. ಅಧ್ಯಕ್ಷ ಭೀಮನಗೌಡ ಕಲ್ಲನಗೌಡ ಬಿರಾದಾರ (೪೦) ಎಂದು ಗುರುತಿಸಲಾಗಿದೆ.ಭೀಮನಗೌಡ ಬೆಳಿಗ್ಗೆ ಸುಮಾರು ೮:೫೦ ಗಂಟೆಗೆ ದೇವರನಿಂಬರಗಿ ಗ್ರಮದಲ್ಲಿರುವ ಶ್ರೀಮಂತ ಭೀಮಾಶಂಕರ ನಾವಿ ಎಂಬುವವರ ಸಲೂನಿಗೆ ಹೇರ್ ಕಟಿಂಗ್ ಮಾಡಿಸಿಕೊಳ್ಳಲೆಂದು ತೆರಳಿದಾಗ ನಾಲ್ಕು ಜನ ಅಪರಿಚಿತ ಮುಸುಕುಧಾರಿಗಳು ಸಲೂನಿಗೆ ನುಗ್ಗಿ ಮೃತ ಭೀಮನಗೌಡನ ಕಣ್ಣಿಗೆ ಖಾರದ ಪುಡಿ ಎರಚಿ ಆತನ ತಲೆಗೆ ಗುಂಡು ಹಾರಿಸಿ ಹತ್ಯೆ ಮಾಡಿ, ಪರಾರಿಯಾಗಿದ್ದಾರೆ.ಘಟನಾ ಸ್ಥಳಕ್ಕೆ ಧಾವಿಸಿದ ಪೊಲೀಸರು ಘಟನೆಯ ಕುರಿತು ಶೋಧ ನಡೆಸಿ, ಆರೋಪಿಗಳನ್ನು ಬಂಧಿಸಿ, ತೀವ್ರ ತನಿಖೆಗೆ ಒಳಪಡಿಸಿದ್ದಾರೆ.ಸಾಯಂಕಾಲ ಮೃತ ಭೀಮನಗೌಡ ಶರೀರವನ್ನು…

Read More

ವಿಜಯಪುರದಲ್ಲಿ ಗಣೇಶ ಮೂರ್ತಿ ವಿಸರ್ಜನೆ ವೇಳೆ ನಡೆದ ದುರ್ಘಟನೆ ಉದಯರಶ್ಮಿ ದಿನಪತ್ರಿಕೆ ವಿಜಯಪುರ: ನಗರದಲ್ಲಿ ಏಳನೇ ದಿನದ ಗಣೇಶ ಮೂರ್ತಿ ವಿಸರ್ಜನೆ ವೇಳೆ ವಿದ್ಯುತ್ ಅವಘಡದಿಂದ ಓರ್ವ ಯುವಕ ಮೃತಪಟ್ಟಿದ್ದು, ಇನ್ನಿಬ್ಬರು ಗಂಭೀರ ಗಾಯಗೊಂಡಿರುವ ಘಟನೆ ಇಲ್ಲಿನ ಗಾಂಧಿಚೌಕ್ ಬಳಿಯ ಟಾಂಗಾ ಸ್ಟ್ಯಾಂಡ್ ಬಳಿ ನಡೆದಿದೆ.ಇಲ್ಲಿನ ಡೋಬಲೆ ಗಲ್ಲಿ ನಿವಾಸಿಶುಭಂ ಸಂಕಳ (21) ಮೃತ ಯುವಕ.ಗಣಪತಿ ಮೂರ್ತಿ ವಿಸರ್ಜನಾ ಮೆರವಣಿಗೆ ವೇಳೆ ಗಣೇಶನ ಮೂರ್ತಿ ಸಾಗಲು ಕೋಲಿನಿಂದ ವಿದ್ಯುತ್ ತಂತಿ ಎತ್ತುವ ಸಂದರ್ಭ ವಿದ್ಯುತ್ ಪ್ರವಹಿಸಿ ಈ ದುರ್ಘಟನೆ ನಡೆದಿದೆ.ಯುವಕ ಶುಭಂ ಸಂಕಳ ಸ್ಥಳದಲ್ಲಿಯೇ ಅಸುನೀಗಿದರೆ, ಪ್ರಭಾಕರ ಜಂಗಲೆ ಹಾಗೂ ಲಖನ್ ಚವ್ಹಾಣ ಇಬ್ಬರು ಗಂಭೀರವಾಗಿ ಗಾಯಗೊಂಡಿದ್ದು, ಗಾಯಗೊಂಡವರನ್ನು ಜಿಲ್ಲಾಸ್ಪತ್ರೆಗೆ ದಾಖಲು ಮಾಡಲಾಗಿದೆ.ನಗರದಲ್ಲಿ ಏಳನೇ ದಿನದ ನೂರಾರು ಗಣೇಶನ ಮೂರ್ತಿಗಳನ್ನು ರಾತ್ರಿಯಿಡಿ ವಿಸರ್ಜನೆ ಮಾಡಲಾಗಿದೆ.ಗಾಂಧಿಚೌಕ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.

Read More

ಉದಯರಶ್ಮಿ ದಿನಪತ್ರಿಕೆ ಆಲಮೇಲ: ಪಟ್ಟಣದ ವಿಶ್ವೇಶ್ವರ ಬಾಲಭಾರತಿ ಕನ್ನಡ ಅನುದಾನಿತ ಪ್ರಾಥಮಿಕ ಶಾಲೆಯ ಮಕ್ಕಳು ಕ್ಲಸ್ಟರ್ ಮಟ್ಟದ ಕ್ರೀಡಾಕೂಟದಲ್ಲಿ ವೀರಾಗ್ರಣಿ ಪ್ರಶಸ್ತಿ ಪಡೆದುವಲಯ ಮಟ್ಟದ ಕ್ರೀಡಾಕೂಟಕ್ಕೆ ಆಯ್ಕೆ ಆದ ಮಕ್ಕಳಿಗೆ ಪ್ರಶಸ್ತಿ ವಿತರಣೆ ಮಾಡಿ ಮಾತನಾಡಿದ ಸಂಸ್ಥೆಯ ಅದ್ಯಕ್ಷ ಎಸ್.ಆಯ್.ಜೋಗೂರ ನಮ್ಮ ಶಾಲೆಯ ಮಕ್ಕಳು ನಿರಂತರ ಆಟದ ಪ್ರಯತ್ನದ ಫಲವಾಗಿ ಓಟ, ಉದ್ದ ಜಿಗಿತ, ಡಿಸ್ಕಸ್ ಥ್ರೂ, ಗುಂಡು ಎಸೆತ ಹಾಗೂ ಖೋ-ಖೋ ಮತ್ತು ಕಬಡ್ಡಿಯಲ್ಲಿ ಉತ್ತಮ ಪ್ರದರ್ಶನ ನೀಡಿ ವಲಯ ಮಟ್ಟಕ್ಕೆ ಆಯ್ಕೆ ಆಗಿದ್ದು ಸಂತೋಷ ತಂದಿದೆ. ನಿಮ್ಮ ಕ್ರೀಡಾ ಸ್ಪೂರ್ತಿಯಿಂದ ನಿಮ್ಮ ಆರೋಗ್ಯ ಹಾಗೂ ಮಾನಸಿಕ ಶಕ್ತಿ ವೃಧ್ಧಿ ಆಗುತ್ತದೆ ಹಾಗಾಗಿ ಪಾಠದ ಜೊತೆಗೆ ಕ್ರೀಡೆಯೂ ಮುಖ್ಯ ಎಂದರು.ಈ ವೇಳೆ ಮುಖ್ಯ ಶಿಕ್ಷಕ ಲಕ್ಷ್ಮೀಪುತ್ರ ಕಿರನಳ್ಳಿ, ಶಿಕ್ಷಕರಾದ ಚಂದ್ರಕಾಂತ ದೇವರಮನಿ, ಪ್ರಶಾಂತ ಗಡದೆ, ಲಕ್ಷ್ಮೀಬಾಯಿ ಹಳೇಮನಿ, ಸುವರ್ಣ ಸಾರಂಗಮಠ, ದೈಹಿಕ ಶಿಕ್ಷಕಿಯರಾದ ಸೀತಾ ಆರೇಶಂಕರ, ಸರುಬಾಯಿ ಬಂಡಗರ, ಸುನೀತಾ ಗುಂಡದ, ವೀಣಾ ರಾಂಪೂರಮಠ, ರಕ್ಷಿತಾ ಹಡಪದ ಮುಂತಾದವರು ಇದ್ದರು

Read More

ಉದಯರಶ್ಮಿ ದಿನಪತ್ರಿಕೆ ವಿಜಯಪುರ: ಪುಸ್ತಕಗಳು ಮಾನವನ ಆತ್ಮೀಯ ಗೆಳೆಯನಂತಿರಬೇಕು. ಓದುವ ಹವ್ಯಾಸ ಸನ್ಮಾರ್ಗದ ದಾರಿಯತ್ತ ಕರೆದುಕೊಂಡು ಹೋಗುತ್ತವೆ. ಇದರಿಂದ ಮಾನಸಿಕ ಆರೋಗ್ಯ ವೃದ್ಧಿಗೊಳ್ಳುತ್ತದೆ ಎಂದು ಕನ್ನಡ ಪುಸ್ತಕ ಪ್ರಾಧಿಕಾರದ ಸದಸ್ಯ ಡಾ.ಕುಶಾಲ ಬರಗೂರ ಹೇಳಿದರು.ಅವರು ಶನಿವಾರ ಜಿಲ್ಲೆಯ ಸಿಂದಗಿ ಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಕನ್ನಡ ಪುಸ್ತಕ ಪ್ರಾಧಿಕಾರ ಹಮ್ಮಿಕೊಂಡಿದ್ದ “ನನ್ನ ಮೆಚ್ಚಿನ ಪುಸ್ತಕ” ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.ನಾಡಿನಾದ್ಯಂತ ಪುಸ್ತಕ ಪ್ರಾಧಿಕಾರವು ವಿದ್ಯಾರ್ಥಿಗಳಲ್ಲಿ ಪುಸ್ತಕ ಅಭಿರುಚಿಯನ್ನು ಬೆಳೆಸಿಕೊಳ್ಳಲು ಇಂತಹ ಕಾರ್ಯಕ್ರಮವನ್ನು ಹಮ್ಮಿಕೊಳ್ಳುತ್ತಿದೆ ಎಂದರು.ಉದ್ಘಾಟನೆಯನ್ನು ನೆರವೇರಿಸಿ ಕಲಬುರಗಿಯ ವಿಮರ್ಶಕ ಡಾ.ಶ್ರೀಶೈಲ ನಾಗರಾಳ ಮಾತನಾಡಿ ತಾಯಿ ಭಾಷೆ ಕನ್ನಡವಾಗಿರುವುದರಿಂದ ಕನ್ನಡವನ್ನೇ ಹೆಚ್ಚಾಗಿ ಬಳಸಿಕೊಳ್ಳಲು ಕರೆ ನೀಡಿದರು. ಯುವಕರು ಪುಸ್ತಕವನ್ನು ಪ್ರೀತಿಸುವುದರಿಂದ ಅವರಲ್ಲಿ ಕೀರ್ತಿ, ಸಂಪತ್ತು ಎಲ್ಲವೂ ದೊರೆಯುತ್ತದೆ, ವಿಧ್ಯಾರ್ಥಿಗಳಲ್ಲಿ ಇಂತಹ ಆಸಕ್ತಿ ಶಾಲಾ ಕಾಲೇಜುಗಳು ಬೆಳೆಸಬೇಕಿದೆ ಎಂದರು.ಯುವ ಸಾಹಿತಿ ದೇವು ಮಾಕೊಂಡ ವಿದ್ಯಾರ್ಥಿಗಳಲ್ಲಿ ಜ್ಞಾನಾಬಿರುಚಿ ಎಂಬ ವಿಷಯದ ಕುರಿತು ಉಪನ್ಯಾಸ ನೀಡಿದರು. ಆಲಮೇಲದ ಪ್ರಕಾಶಕ ಡಾ. ರಮೇಶ ಕತ್ತಿ ಅತಿಥಿಗಳಾಗಿ ಮಾತನಾಡಿದರು. ಅಧ್ಯಕ್ಷತೆಯನ್ನು…

Read More

ಉದಯರಶ್ಮಿ ದಿನಪತ್ರಿಕೆ ಚಿಮ್ಮಡ: ಗ್ರಾಮದಲ್ಲಿ ಸೆ. ೪ ರಂದು ನಡೆಯಲಿರುವ ಕಿಚಡಿ ಜಾತ್ರೆಗಾಗಿ ನಿರ್ಮಿಸಲಾದ ಬೃಹತ್ ರಥದ ಕಳಶ ಹಾಗೂ ಉಚ್ಚಾಯಿ (ಉತ್ಸವ ಮೂರ್ತಿ)ಯ ಪುರ ಪ್ರವೇಶ ಕಾರ್ಯಕ್ರಮ ಸೋಮವಾರ ನಡೆಯಿತು.ಸ್ಥಳಿಯ ವಿರಕ್ತಮಠದ ಶ್ರೀ ಪ್ರಭು ಮಹಾಸ್ವಾಮಿಗಳ ಹಾಗೂ ಶ್ರೀ ಜನಾರ್ಧನ ಮಹಾರಾಜರ ಸಾನಿಧ್ಯದಲ್ಲಿ ನಡೆದ ವಿಶೇಷ ಪೂಜೆಯೊಂದಿಗೆ ಸ್ಥಳಿಯ ಬಸ್ ನಿಲ್ದಾಣದ ಮಹಾದ್ವಾರದಿಂದ ನೂರಾರು ಮಹಿಳೆಯರಿಂದ ಆರತಿ ಕುಂಭ, ಸಕಲ ವಾದ್ಯ ವೃಂದಗಳೊಂದಿಗೆ ಗ್ರಾಮದ ಶ್ರೀ ಪ್ರಭುಲಿಂಗೇಶ್ವರ ದೇವಸ್ಥಾನದ ವರೆಗೆ ಮೆರವಣಿಗೆ ಮೂಲಕ ತರಲಾಯಿತು ಪ್ರಭುಲಿಂಗ ಸೇವಾ ಸಮೀತಿಯ ಪ್ರಮುಖರಾದ ರಾಮಣ್ಣ ಮುಗಳಖೋಡ, ಪುಂಡಲಿಕಪ್ಪಾ ಪೂಜಾರಿ, ಅಣ್ಣಪ್ಪಗೌಡ ಪಾಟೀಲ, ಬಾಳಪ್ಪ ಹಳಿಂಗಳಿ, ರಾಚಯ್ಯ ಮಠಪತಿ, ರಾಮಣ್ಣ ಬಗನಾಳ, ಗುರಪ್ಪ ಬಳಗಾರ, ಗ್ರಾ.ಪಂ. ಮಾಜಿ ಅಧ್ಯಕ್ಷ ಗುರಲಿಂಗಪ್ಪ ಪೂಜಾರಿ, ಪರಪ್ಪಾ ಪಾಲಭಾವಿ, ಬೀರಪ್ಪ ಹಳೆಮನಿ, ಪ್ರಕಾಶ ಪಾಟೀಲ, ಬಸವರಾಜ ಕುಂಚನೂರ, ಅಶೋಕ ಧಡೂತಿ, ಆನಂದ ಕವಟಿ, ಅಶೋಕ ಮೋಟಗಿ, ಪ್ರಭು ಮುಧೋಳ, ಅವ್ವನಪ್ಪ ಮುಗಳಖೋಡ ಸೇರಿದಂತೆ ಹಲವಾರು ಜನ ಪ್ರಮುಖರು ಭಾಗವಹಿಸಿದ್ದರು.

Read More

ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾನಿಲಯ ಕುಲಪತಿ ಪ್ರೊ.ವಿಜಯಾ ಕೋರಿಶೆಟ್ಟಿ ಭರವಸೆ ಉದಯರಶ್ಮಿ ದಿನಪತ್ರಿಕೆ ವಿಜಯಪುರ: ವಿದ್ಯಾರ್ಥಿನಿಯರ ಸರ್ವತೋಮುಖ ಅಭಿವೃದ್ಧಿಗೆ ಮತ್ತು ವ್ಯಕ್ತಿತ್ವದ ಬೆಳವಣಿಗೆಗೆ ಕರ್ನಾಟಕ ರಾಜ್ಯ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾನಿಲಯ ಕಟಿಬದ್ಧವಾಗಿದೆ ಎಂದು ಕುಲಪತಿ ಪ್ರೊ.ವಿಜಯಾ ಕೋರಿಶೆಟ್ಟಿ ಭರವಸೆ ನೀಡಿದರು.ಇಲ್ಲಿಯ ಮಹಿಳಾ ವಿವಿಯ ಆವರಣದಲ್ಲಿರುವ ಡಾ.ಬಿ.ಆರ್.ಅಂಬೇಡ್ಕರ್ ಸಭಾಂಗಣದಲ್ಲಿ ಮಂಗಳವಾರ ಏರ್ಪಡಿಸಿದ್ದ ಸ್ನಾತಕೋತ್ತರ ತರಗತಿಗಳ ಪ್ರವೇಶಾತಿ ಕೌನ್ಸಿಲಿಂಗ್ ಉದ್ಘಾಟಿಸಿ ಮಾತನಾಡಿದ ಅವರು, ವಿದ್ಯಾರ್ಥಿನಿಯರ ಜ್ಞಾನಾರ್ಜನೆಗೆ ಬೇಕಾದ ಎಲ್ಲ ಬಗೆಯ ಅವಕಾಶಗಳನ್ನು ಮಹಿಳಾ ವಿವಿ ಸೃಷ್ಟಿಸುತ್ತದೆ ಎಂದರು.ಮಹಿಳಾ ವಿಶ್ವವಿದ್ಯಾನಿಲಯದಲ್ಲಿ ಅತ್ಯಾಧುನಿಕ ಬೋಧನಾ ತಂತ್ರಗಳು- ಸ್ಮಾರ್ಟಬೋರ್ಡ್ ಮತ್ತು ಡಿಜಿಟಲ್ ಕ್ಲಾಸ್‌ರೂಂ, ಮಲ್ಟಿಮೀಡಿಯಾ ಲ್ಯಾಬ್ ಮತ್ತು ಲಾಂಗ್ವೇಜ್ ಲ್ಯಾಬ್, ಸುಸಜ್ಜಿತ ಪ್ರಯೋಗಾಲಯಗಳು, ಸುಸಜ್ಜಿತ ಹಾಸ್ಟೆಲ್ ವ್ಯವಸ್ಥೆ, ಸಾಪ್ಟವೇರ್ ಟೆಕ್ನಾಲಜಿ ಪಾರ್ಕ್, ೨೪x೭ ಇಂಟರ್‌ನೆಟ್ ಸೌಲಭ್ಯ, ಮಕ್ಕಳ ಲಾಲನೆ-ಪಾಲನೆಗೆ ಡೇಕೇರ್ ಸೆಂಟರ್, ನಗರದ ವಿವಿಧ ಭಾಗಗಳಿಂದ ವಿಶ್ವವಿದ್ಯಾಲಯಕ್ಕೆ ವಾಹನ ವ್ಯವಸ್ಥೆ ಮುಂತಾದ ಸೌಲಭ್ಯಗಳನ್ನು ವಿದ್ಯಾರ್ಥಿನಿಯರ ಅನುಕೂಲಕ್ಕಾಗಿ ಒದಗಿಸಲಾಗಿದೆ ಎಂದು ಅವರು ವಿವರಿಸಿದರು.ಮಹಿಳೆಯರಿಗೆ ಉನ್ನತ ಶಿಕ್ಷಣದ ಅವಕಾಶಗಳ ಹೆಬ್ಬಾಗಿಲನ್ನೇ ತೆರೆದಿರುವ ಅಕ್ಕಮಹಾದೇವಿ…

Read More