Subscribe to Updates
Get the latest creative news from FooBar about art, design and business.
Author: editor.udayarashmi@gmail.com
ಸಿಂದಗಿ: ತಾಲೂಕಿನ ರಾಂಪೂರ ಪಿಎ ಗ್ರಾಮದ ಹತ್ತಿರ ಕಾರಿನ ಟೈರ್ ಸ್ಫೋಟಗೊಂಡ ಪರಿಣಾಮ ಕಾರು ಪಲ್ಟಿಯಾಗಿ ನಾಲ್ವರು ಗಂಭೀರವಾಗಿ ಗಾಯಗೊಂಡ ಘಟನೆ ಬುಧವಾರ ನಡೆದಿದೆ.ಕಾರಿನ ಒಳಗಡೆ ಇದ್ದ ನಿಂಗಪ್ಪ ಕುಡಕಿ (೭೫), ಪಾರ್ವತಿ ಕುಡಕಿ (೬೦), ಅಯ್ಯಪ್ಪ ಕುಡಕಿ (೩೬), ಸಿದ್ದಾರೂಢ ಕುಡಕಿ (೨೦) ಎಂಬುವವರು ಗಂಬೀರ ಗಾಯಗೊಂಡಿದ್ದಾರೆ.ಸಿಂದಗಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ಸಂಭವಿಸಿದೆ.
ಮುದ್ದೇಬಿಹಾಳ : ತಾಲೂಕಿನ ಕೃಷ್ಣಾ ನದಿ ತೀರದ ಗ್ರಾಮಗಳ ವ್ಯಾಪ್ತಿಯಲ್ಲಿ ಬರುವ ಜಮೀನಿಗೆ ವಿದ್ಯುತ್ ಕಂಬಗಳನ್ನು ಅಳವಡಿಸುವಂತೆ ಕಳೆದ ವರ್ಷದಿಂದ ಮನವಿ ಕೊಡುತ್ತಾ ಬಂದಿದ್ದರೂ ನೀವು(ಹೆಸ್ಕಾಂ ಅಧಿಕಾರಿಗಳು) ಕಂಬ ಅಳವಡಿಸದೇ ಇನ್ನೂ ಅಂದಾಜು ಪತ್ರಿಕೆಯ ನೆಪಗಳನ್ನೇ ಹೇಳುತ್ತಿದ್ದೀರಿ. ಇದರಿಂದ ನಮಗೆ ಸಮರ್ಪಕ ವಿದ್ಯುತ್ ಪೂರೈಕೆ ಆಗದೇ ತೊಂದರೆಯುAಟಾಗಿದೆ. ಬೆಳೆಗಳನ್ನು ಬೆಳೆಯಲು ಸಾಧ್ಯವಾಗುತ್ತಿಲ್ಲ ಎಂದು ತಾಲೂಕಿನ ಹಂಡರಗಲ್ಲ ಗ್ರಾಮದ ರೈತರು ಪಟ್ಟಣದ ಹೆಸ್ಕಾಂ ಸೆಕ್ಷನ್ ಅಧಿಕಾರಿ ಬಿ.ಎಸ್.ಯಲಗೋಡ ಅವರನ್ನು ತೀವ್ರ ತರಾಟೆಗೆ ತೆಗೆದುಕೊಂಡರು.ಪಟ್ಟಣದ ಹೆಸ್ಕಾಂ ಕಚೇರಿಗೆ ಬುಧವಾರ ಆಗಮಿಸಿದ್ದ ಹಂಡರಗಲ್ ಗ್ರಾಮದ ರೈತರು ಕೆಲಕಾಲ ಕಚೇರಿ ಮುಂಬಾಗಿಲ ಬಳಿ ಪ್ರತಿಭಟನೆ ನಡೆಸಿದರು.ಈ ವೇಳೆ ಮಾತನಾಡಿದ ರೈತರಾದ ಸದಾನಂದ ವಾಲೀಕಾರ, ಶರಣಪ್ಪ ನರಸಣಗಿ, ಬಸವರಾಜ ನರಸಣಗಿ ಮತ್ತಿತರರು, ಕಳೆದ ಹಲವು ವರ್ಷಗಳಿಂದ ಕೃಷ್ಣಾ ನದಿ ತೀರದ ಗ್ರಾಮಗಳ ರೈತರು ತಮ್ಮ ಜಮೀನುಗಳಲ್ಲಿ ಕಬ್ಬು ಇತ್ಯಾದಿ ವಾಣಿಜ್ಯ ಬೆಳೆಗಳನ್ನು ಬಿತ್ತನೆ ಮಾಡಿದ್ದಾರೆ. ಸದ್ಯಕ್ಕೆ ಕಾಲುವೆಗಳ ನೀರು ಬಳಸಿಕೊಳ್ಳಲು ಮತ್ತು ಬೋರ್‌ವೆಲ್ ಮೂಲಕ ನೀರು ಬಳಸಿಕೊಳ್ಳಲು ಹೆಸ್ಕಾಂ…
Udayarashmi kannada daily newspaper
Udayarashmi kannada daily newspaper
ವಿಜಯಪುರ: ಮಾಜಿ ಸಚಿವ ಅಪ್ಪು ಪಟ್ಟಣಶೆಟ್ಟಿ ಅವರು ಎಲ್ಲ ಜಾತಿ-ಜನಾಂಗದವರನ್ನು ಪ್ರೀತಿಯಿಂದ ಕಾಣುವ ವ್ಯಕ್ತಿತ್ವ ಉಳ್ಳವರು. ಎಲ್ಲ ಸಮಾಜಗಳೊಂದಿಗೆ ಅನೋನ್ಯತೆ ಹೊಂದಿದವರು. ಈ ಬಾರಿ ಚುನಾವಣೆಗೆ ವಿಜಯಪುರ ನಗರ ಕ್ಷೇತ್ರದ ಭಾರತೀಯ ಜನತಾ ಪಕ್ಷದ ಟಿಕೆಟನ್ನು ಪಕ್ಷವು ಅಪ್ಪು ಅವರಿಗೆ ನೀಡಬೇಕೆಂದು ವಿವಿಧ ಸಮಾಜದ ಮುಖಂಡರು ಒಕ್ಕೊರಲಿನಿಂದ ಆಗ್ರಹಿಸಿದರು.ಮಂಗಳವಾರ ನಗರದಲ್ಲಿ ನಡೆದ ಜಂಟಿ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿದರು.ನಾವೆಲ್ಲ ಬಿಜೆಪಿಯ ನಿಷ್ಠಾವಂತ ಕಾರ್ಯಕರ್ತರು. ಹಲವಾರು ವರ್ಷಗಳಿಂದ ಪಕ್ಷಕ್ಕಾಗಿ ಸತತ ದುಡಿದವರು. ನಮ್ಮಂಥ ಕಾರ್ಯಕರ್ತರ ದುಡಿಮೆ ಫಲದಿಂದ ಪಕ್ಷ ಇಂದು ಹೆಮ್ಮರವಾಗಿ ಬೆಳೆದಿದೆ. ನಗರ ಕ್ಷೇತ್ರದಲ್ಲಿ ಪಕ್ಷ ಸಂಘಟನೆಗೆ ತಮ್ಮನ್ನು ಅರ್ಪಿಸಿಕೊಂಡ ಅಪ್ಪು ಪಟ್ಟಣಶೆಟ್ಟಿ ಅವರಿಗೆ ಪಕ್ಷ ಟಿಕೆಟ್ ಕೊಡಬೇಕು. ಈ ಹಿಂದೆ ಎರಡು ಸಲ ಅವರಿಗೆ ಟಿಕೆಟ್ ಕೈ ತಪ್ಪಿದರೂ ಸಹ ಅಪ್ಪು ಅವರು ಪಕ್ಷ ನಿಷ್ಠರಾಗಿಯೇ ಮುಂದುವರೆದಿದ್ದಾರೆ. ಕಾರ್ಯಕರ್ತರ ಒಲವು ಸಂಪಾದಿಸಿ ಅವರ ವಿಶ್ವಾಸಕ್ಕೆ ಪಾತ್ರರಾಗಿದ್ದಾರೆ. ಆದರೆ ಹಾಲಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರು ಕಾರ್ಯಕರ್ತರ ಕಡೆಗಣನೆ ಮಾಡಿದ್ದಲ್ಲದೆ, ಅನ್ಯ…
ಅಪ್ಪು ಪಟ್ಟಣಶೆಟ್ಟಿಗೆ ಬಿಜೆಪಿ ಟಿಕೆಟ್ ನೀಡಲು ಆಗ್ರಹ | ಶಾಸಕ ಯತ್ನಾಳ ವಿರುದ್ಧ ವಾಗ್ದಾಳಿ | ಭ್ರಷ್ಟಾಚಾರದ ಆರೋಪ ವಿಜಯಪುರ: ನಗರದಲ್ಲಿ ಭಾರತೀಯ ಜನತಾ ಪಕ್ಷವು ಶಾಸಕ ಬಸನಗೌಡ ಪಾಟೀಲ್ ಯತ್ನಾಳರ ನಿಯಂತ್ರಣದಲ್ಲಿದೆ. ಮೂಲ ಕಾರ್ಯಕರ್ತರಿಗೆ ಇಲ್ಲಿ ಬೆಲೆ ಇಲ್ಲ. ವಿಜಯಪುರ ನಗರ ಕ್ಷೇತ್ರದಲ್ಲಿ ಬಿಜೆಪಿ ಪಕ್ಷ ಉಳಿಯಬೇಕಾದರೆ ಈ ಬಾರಿ ಶಾಸಕ ಬಸನಗೌಡ ಯತ್ನಾಳ ಅವರಿಗೆ ಟಿಕೆಟ್ ಕೊಡದೆ, ಕಾರ್ಯಕರ್ತರ ಭಾವನೆಗಳನ್ನು ಗೌರವಿಸುವ ಮಾಜಿ ಸಚಿವ ಅಪ್ಪು ಪಟ್ಟಣಶೆಟ್ಟಿ ಅವರಿಗೆ ಟಿಕೆಟ್ ಕೊಡಬೇಕೆಂದು ಬಿಜೆಪಿಯ ಉಚ್ಛಾಟಿತ ನಾಯಕರಾದ ರವಿ ಬಗಲಿ ಮತ್ತು ರಾಜು ಬಿರಾದಾರ ಆಗ್ರಹಿಸಿದರು.ಮಂಗಳವಾರ ನಗರದಲ್ಲಿ ನಡೆದ ಜಂಟಿ ಸುದ್ದಿಗೋಷ್ಟಿಯಲ್ಲಿ ಅವರು ಮಾತನಾಡಿದರು.ಬಿಜೆಪಿ ಜಿಲ್ಲಾಧ್ಯಕ್ಷರು ತಪ್ಪು ಸಂದೇಶದಿಂದ ಹಾಗೂ ಶಾಸಕ ಯತ್ನಾಳ್ ಅವರ ಒತ್ತಡಕ್ಕೆ ಮಣಿದು ನಮ್ಮನ್ನು ಉಚ್ಚಾಟಿಸಿದ್ದರೂ ನಾವು ಯಾವ ಪಕ್ಷಕ್ಕೂ ಹೋಗದೆ ಈಗಲೂ ಪಕ್ಷದ ಸಾಮಾನ್ಯ ಕಾರ್ಯಕರ್ತರಾಗಿ ಮುಂದುವರೆದಿದ್ದೇವೆ. ನಮ್ಮೊಂದಿಗೆ ನೂರಾರು ಕಾರ್ಯಕರ್ತರಿದ್ದಾರೆ. ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಮೂಲ ಕಾರ್ಯಕರ್ತರನ್ನು ಶಾಸಕ ಯತ್ನಾಳ ಅವರು ಕಡೆಗಣಿಸಿ…
ಸಿಂದಗಿ: ತಾಲೂಕಿನ ಚಿಕ್ಕಸಿಂದಗಿ ಬೈಪಾಸ್ ಹತ್ತಿರ ಅನುಮಾನಾಸ್ಪದವಾಗಿ ಓಡಾಡುತ್ತಿರುವ ಈರ್ವರನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆ ಮಾಡಿದಾಗ ಕಳೆದ ೨ ವರ್ಷದಿಂದ ಅವರು ಕಳ್ಳತನ ಮಾಡುತ್ತಿದ್ದ ಸಂಗತಿ ಬೆಳಕಿಗೆ ಬಂದಿದೆ.ಸಿAದಗಿಯ ಹುಡ್ಕೊ ನಿವಾಸಿ ಸಿದ್ದಪ್ಪ ಜೇರಟಗಿ (೩೭), ಆಲಮೇಲ ತಾಲೂಕಿನ ನಾಗರಾಳ ಗ್ರಾಮದ ಸಿದ್ರಾಮ ಪಾಟೀಲ (೩೫) ಬಂಧಿತ ಅರೋಪಿಗಳು.ಇವರಿಂದ ೧೪೧.೩೭೯ಗ್ರಾಂ ತೂಕದ ಚಿನ್ನಾಭರಣಗಳನ್ನು ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದಾರೆ. ಇವುಗಳ ಅಂದಾಜು ಬೆಲೆ ೫ ಲಕ್ಷದ ೫೧ ಸಾವಿರದ ೭೩೨ರೂ. ಆಗಿದೆ. ಬಂಧಿತರನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.ಸಿಪಿಐ ಡಿ.ಹುಲುಗೆಪ್ಪ ಅವರ ಮಾರ್ಗದರ್ಶನದಲ್ಲಿ ಪಿಎಸ್‌ಐ ಶಿವರಾಜ ನಾಯಕವಾಡ ಅವರ ನೇತೃತ್ವದಲ್ಲಿ ಸಿಬ್ಬಂದಿಗಳಾದ ಎಸ್.ಪಿ ಹುಣಸಿಕಟ್ಟಿ, ಆರ್.ಎಲ್. ಕಟ್ಟಿಮನಿ, ಸಿ.ಡಿ.ಕಲ್ಲೂರ, ಎಸ್.ಎಸ್.ಕೊಂಡಿ, ಪಿ.ಕೆ.ನಾಗರಾಳ ಸೇರಿ ಕಾರ್ಯಾಚರಣೆ ನಡೆಸಿ ಆರೋಪಿಗಳನ್ನು ಬಂಧಿಸಿದ್ದಾರೆ.
ಶಾಸಕ ನಡಹಳ್ಳಿ Vs ಮಾಜಿ ಶಾಸಕ ನಾಡಗೌಡ ಚುನಾವಣಾ ಅಖಾಡದಲ್ಲಿ ಸೆಣಸಲು ಸನ್ನದ್ಧ -ಹುಸನಪ್ಪ ನಡುವಿನಮನಿತಾಳಿಕೋಟಿ: ಮುದ್ದೇಬಿಹಾಳ ಮತಕ್ಷೇತ್ರ ವಿಜಯಪುರ ಜಿಲ್ಲೆಯ ೮ ವಿಧಾನ ಸಭೆ ಕ್ಷೇತ್ರಗಳಲ್ಲಿ ಈ ಬಾರಿ ಅತಿ ಹೆಚ್ಚು ಕುತೂಹಲ ಕೆರಳಿಸಿದ ಹಾಗೂ ಭಾರಿ ಜಿದ್ದಾ ಜಿದ್ದಿನ ಕ್ಷೇತ್ರವಾಗಿದೆ ಎಂದೆನಿಸುತ್ತಿದೆ.೨೦೧೮ರ ಚುನಾವಣೆಯಲ್ಲಿ ಬಿಜೆಪಿಯಿಂದ ಸ್ಪರ್ಧಿಸಿದ ಎ.ಎಸ್. ಪಾಟೀಲ (ನಡಹಳ್ಳಿ) ಅವರು ಕಾಂಗ್ರೆಸ್‌ನ ಹಿರಿಯ ರಾಜಕಾರಣಿ ಅಪ್ಪಾಜಿ ನಾಡಗೌಡರನ್ನು ಪರಾಭವಗೊಳಿಸಿ ಪಕ್ಷಕ್ಕೆ ಐತಿಹಾಸಿಕವಾದ ಗೆಲುವು ತಂದುಕೊಟ್ಟಿದ್ದರು. ಈ ಬಾರಿ ಮತ್ತೆ ಈ ಇಬ್ಬರು ದಿಗ್ಗಜ ನಾಯಕರು ಅಖಾಡಾದಲ್ಲಿ ಮುಖಾಮುಖಿಯಾಗಲು ಸರ್ವಸನ್ನದ್ಧರಾಗಿದ್ದಾರೆ. ಆದರೆ ಈ ಬಾರಿ ಕ್ಷೇತ್ರದಲ್ಲಿ ಸಾಕಷ್ಟು ರಾಜಕೀಯ ಬೆಳವಣಿಗೆಗಳಾಗಿವೆ. ಯಾರ ಕೈ ಮೇಲಾಗುತ್ತದೆ ಎಂದು ಈಗಲೇ ಹೇಳಲು ಅಸಾಧ್ಯವಾಗಿದೆಯಾದರೂ ಈವರೆಗಿನ ಸಮೀಕ್ಷೆಗಳು ಸಧ್ಯಕ್ಕೆ ನಡಹಳ್ಳಿಯವರು ಒಂದು ಹೆಜ್ಜೆ ಮುಂದಿದ್ದಾರೆಂದು ಹೇಳುತ್ತಿವೆ. ಆದರೆ ಚುನಾವಣೆಗಿನ್ನೂ ಒಂದು ತಿಂಗಳಿಗೂ ಅಧಿಕ ಕಾಲಾವಧಿ ಇರುವುದರಿಂದ ಈ ಅವಧಿಯಲ್ಲಿ ಏನು ಬೇಕಾದರೂ ಆಗಬಹುದಾಗಿದೆ. ಜೆಡಿಎಸ್‌ನಿಂದ ಡಾ.ಸಿ.ಎಸ್. ಸೋಲಾಪೂರ ಅಧಿಕೃತ ಅಭ್ಯರ್ಥಿ ಎಂದು ಈಗಾಗಲೇ…
Udayarashmi kannada daily newspaper