Subscribe to Updates
Get the latest creative news from FooBar about art, design and business.
Author: editor.udayarashmi@gmail.com
ಸಿಂದಗಿ: ನಾಡಿನ ಭವಿಷ್ಯಕ್ಕಾಗಿ, ನಾಳೆಯ ಸಾಮರಸ್ಯಕ್ಕಾಗಿ ಎಲ್ಲರೂ ಜವಾಬ್ದಾರಿಯುತರಾಗಿ ಮತ ಚಲಾಯಿಸಬೇಕು ಎಂದು ಸಿಎಂ ಮನಗೂಳಿ ಪದವಿ ಕಾಲೇಜಿನ ಪ್ರಾಚಾರ್ಯ ಡಾ.ಬಿ.ಜಿ.ಪಾಟೀಲ ಹೇಳಿದರು.ಪಟ್ಟಣದ ಸರಕಾರಿ ಪ್ರಥಮ ದರ್ಜೆ ಮಹಾವಿದ್ಯಾಲಯಲ್ಲಿ ಹಮ್ಮಿಕೊಂಡ ಮತದಾನ ಜಾಗೃತ ಅಭಿಯಾನ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ನನ್ನ ಮತ ನನ್ನ ಜವಾಬ್ದಾರಿ ಎಂಬ ಪರಿಜ್ಞಾನ ನಮಗಿರಬೇಕು. ೧೮ ವಯಸ್ಸು ಮೀರಿದ ಪ್ರತಿಯೊಬ್ಬರಿಗೂ ಜಾತಿ, ಮತ, ಧರ್ಮ, ಬಡವ, ಶ್ರೀಮಂತ ವೃದ್ಧ, ಮಹಿಳೆ ಎಂಬ ವ್ಯತ್ಯಾಸವಿಲ್ಲದೇ ಮತದಾನದ ಹಕ್ಕು ನೀಡಿದೆ ಎಂದರು.ಈ ವೇಳೆ ಕಾಲೇಜಿನ ಪ್ರಾಚಾರ್ಯ ಶೀವಲಿಂಗ ಹಳೆಮನಿ, ರವಿಕುಮಾರ ಹೊಸಮನಿ. ಎಸ್.ಪಿ.ತಳವಾರ, ಆರ್.ಎಸ್.ಗಾಯಕವಾಡ, ಶೋಭಾ ನಾಯ್ಕೋಡಿ ಸೇರಿದಂತೆ ಬೋಧಕ, ಬೋಧಕೇತರ ಸಿಬ್ಬಂದಿಗಳು ಮತ್ತು ವಿದ್ಯಾರ್ಥಿಗಳು ಇದ್ದರು.
ವಿಜಯಪುರ: ಭಾರತದ ದಕ್ಷಿಣ ಪ್ರದೇಶಗಳಲ್ಲೂ ಬಿಜೆಪಿನ್ನು ಜನತೆ ಒಪ್ಪುತ್ತಿದ್ದು, ಈ ಪ್ರದೇಶದಲ್ಲಿ ಭಾರತೀಯ ಜನತಾ ಪಕ್ಷವು 110 ರಿಂದ 160 ಸ್ಥಾನಗಳಲ್ಲಿ ಗೆಲ್ಲಲಿದೆ ಎಂದು ತಮಿಳುನಾಡು ಬಿಜೆಪಿ ಘಟಕದ ರಾಜ್ಯಾಧ್ಯಕ್ಷ ಅಣ್ಣಾಮಲೈ ವಿಶ್ವಾಸ ವ್ಯಕ್ತಪಡಿಸಿದ್ದಾರೆ.ನಗರದಲ್ಲಿ ಗುರುವಾರ ಸಂಜೆ ಬೈಕ್ ರ್‍ಯಾಲಿ, ಸಾರ್ವಜನಿಕ ಸಭೆಗಳಲ್ಲಿ ಪಾಲ್ಗೊಳ್ಳುವುದಕ್ಕೂ ಮುನ್ನ ಮಾತನಾಡಿದ ಅವರು, ಈ ಚುನಾವಣೆಯಲ್ಲಿ ಪಕ್ಷ ಬಹುದೊಡ್ಡ ಪರಿಣಾಮ ಉಂಟುಮಾಡಲಿದೆ ಎಂದು ಹೇಳಿದ್ದಾರೆ.ಭಾರತದ ದಕ್ಷಿಣ ಪ್ರಾಂತ್ಯದಲ್ಲಿ ನಾವು ಅತ್ಯುತ್ತಮವಾಗಿ ಸಂಘಟನೆ ಮಾಡುತ್ತಿದ್ದೇವೆ. ತೆಲಂಗಾಣದಲ್ಲಿ ನಾವು ಅತಿ ಹೆಚ್ಚು ಸ್ಥಾನಗಳನ್ನು ಪಡೆದ ಪಕ್ಷವಾಗಲಿದ್ದೇವೆ, ತಮಿಳುನಾಡಿನಲ್ಲಿ ನಾವು 2 ಅಂಕಿಯನ್ನು ದಾಟಲಿದ್ದೇವೆ. ಆಂಧ್ರಪ್ರದೇಶ, ಕೇರಳ, ಪಾಂಡಿಚೆರಿಗಳಲ್ಲೂ ಉತ್ತಮ ಫಲಿತಾಂಶ ಪಡೆಯಲಿದ್ದೇವೆ ಎಂದು ಅಣ್ಣಾಮಲೈ ಹೇಳಿದ್ದಾರೆ.ಪ್ರಜ್ವಲ್ ರೇವಣ್ಣ ಸೆಕ್ಸ್ ಹಗರಣದ ಬಗ್ಗೆ ಕೇಳಿದ ಪ್ರಶ್ನೆಗೆ ಪ್ರತಿಕ್ರಿಯೆ ನೀಡಿರುವ ಅಣ್ಣಾಮಲೈ, ಕಾಂಗ್ರೆಸ್ ಸರ್ಕಾರ ಪ್ರಜ್ವಲ್ ನ್ನು ವಿದೇಶದಿಂದ ವಾಪಸ್ ಕರೆಸುವುದಕ್ಕೆ ಪಾಲನೆ ಮಾಡಬೇಕಿರುವ ಪ್ರಕ್ರಿಯೆಗಳನ್ನು ಬಿಟ್ಟು ಈ ವಿಷಯದಲ್ಲಿ ರಾಜಕೀಯ ಮಾಡುತ್ತಿದೆ ಎಂದು ಆರೋಪಿಸಿದ್ದಾರೆ.ಈ ವಿಚಾರದಲ್ಲಿ ಮಧ್ಯಸ್ಥಿಕೆ ವಹಿಸುವಂತೆ ಪ್ರಧಾನಿ…
ವಿಜಯಪುರ: ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರದ ನಿರ್ದೇಶನದ ಮೇರೆಗೆ ೨೦೨೪ರ ಜುಲೈ ೧೩ರಂದು ಜಿಲ್ಲೆಯ ಜಿಲ್ಲಾ ಕೇಂದ್ರ ಹಾಗೂ ತಾಲೂಕಾ ಕೇಂದ್ರದ ಎಲ್ಲ ನ್ಯಾಯಾಲಯಗಳಲ್ಲಿ ರಾಷ್ಟ್ರೀಯ ಲೋಕ್ ಅದಾಲತ್ ಆಯೋಜಿಸಲಾಗಿದೆ.ರಾಷ್ಟ್ರೀಯ ಲೋಕ್- ಅದಾಲತ್ ನ ರಾಜಿಯಾಗಬಹುದಾದ ಎಲ್ಲಾ ಕ್ರಿಮಿನಲ್ ಪ್ರಕರಣಗಳು, ಚೆಕ್ ಬೌನ್ಸ್ ಪ್ರಕರಣಗಳು, ಮೋಟಾರು ವಾಹನ ಅಪಘಾತ ಪರಿಹಾರ ಕೋರಿ ಸಲ್ಲಿಸಿರುವ ಪ್ರಕರಣಗಳು, ಕೌಟುಂಬಿಕ ವ್ಯಾಜ್ಯಗಳು, ಆಸ್ತಿಯಲ್ಲಿ ಪಾಲು ವಿಭಾಗ ಕೋರಿ ಸಲ್ಲಿಸಿರುವ ದಾವೆಗಳು, ದೂರವಾಣಿ ಬಾಕಿ ಬಿಲ್ಲು ಪಾವತಿ ಪ್ರಕರಣಗಳು, ನೀರಿನ ಬಿಲ್ಲು ಬಾಕಿ ಪಾವತಿ ಪ್ರಕರಣಗಳು, ಜೀವನಾಂಶ ಕೊರಿ ಸಲ್ಲಿಸಿರುವ ಪ್ರಕರಣಗಳು, ಕಾರ್ಮಿಕ ವ್ಯಾಜ್ಯಗಳು, ಭೂ-ಸ್ವಾಧೀನ ಪ್ರಕರಣಗಳು, ಕಂದಾಯ ಪ್ರಕರಣಗಳು, ಸಾಲ ವಸೂಲಾತಿ ಪ್ರಕರಣಗಳು, ಬ್ಯಾಂಕ್ ವ್ಯಾಜ್ಯಗಳು ಹಾಗೂ ಇತರೆ ಸಿವಿಲ್ ಪ್ರಕರಣಳನ್ನು ಲೋಕ್ ಅದಾಲತ್‌ನಲ್ಲಿ ಇತ್ಯರ್ಥಪಡಿಸಲಾಗುವುದು.ಜುಲೈ ೧೩ರಂದು ಜಿಲ್ಲೆಯಾದ್ಯಂತ ಹಮ್ಮಿಕೊಳ್ಳುವ ಲೋಕ್ ಅದಾಲತ್‌ನಲ್ಲಿ ಕಕ್ಷಿದಾರರು ಭಾಗವಹಿಸಿ, ರಾಜಿ ಮೂಲಕ ಪ್ರಕರಣಗಳನ್ನು ಇತ್ಯರ್ಥಪಡಿಸಿಕೊಂಡು ನೆಮ್ಮದಿಯ ಜೀವನಕ್ಕೆ ನಾಂದಿ ಹಾಡಲು ಸುವರ್ಣಾವಕಾಶವಿದ್ದು, ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಪ್ರಕರಣವನ್ನು ಇತ್ಯರ್ಥಪಡಿಸಿಕೊಳ್ಳುವಂತೆ…
ವಿಜಯಪುರ: ವಿಜಯಪುರ ವಿಭಾಗದಲ್ಲಿ ಅಂಚೆ ಜೀವ ವಿಮೆ ಹಾಗೂ ಗ್ರಾಮೀಣ ಅಂಚೆ ಜೀವ ವಿಮೆ ಉತ್ಪನ್ನಗಳನ್ನು ಮಾರಾಟ ಮಾಡಲು ನೇರ ಪ್ರತಿನಿಧಿಗಳ ನಿಯುಕ್ತಿಗಾಗಿ ಮೇ.೨೦ ರಂದು ಬೆಳಗ್ಗೆ ೧೧ ಗಂಟೆಗೆ ನೇರ ಸಂದರ್ಶನ ಕರೆಯಲಾಗಿದೆ.ಅಭ್ಯರ್ಥಿಗಳು ೧೦ನೇ ತರಗತಿ ಉರ್ತ್ತಿಣರಾಗಿರಬೇಕು, ಕನಿಷ್ಠ ೧೮ ವರ್ಷ ದಾಟಿರಬೇಕು, ಸಂಹವನ ಕಲೆ ಹಾಗೂ ವಿಮಾ ಮಾರಾಟ ಕ್ಷೇತ್ರದಲ್ಲಿ ಪೂರ್ವಾನುಭವ ಹೊಂದಿದವರಿಗೆ ಆಧ್ಯತೆ ನೀಡಲಾಗುವುದು. ಆಯ್ಕೆಯಾದ ಅಭ್ಯರ್ಥಿಗಳು ರಾಷ್ಟ್ರೀಯ ಉಳಿತಾಯ ಪತ್ರ ಅಥವಾ ಕಿಸಾನ ವಿಕಾಸ ಪತ್ರದ ರೂಪದಲ್ಲಿ ಭದ್ರತಾ ಠೇವಣಿ ಇಡಬೇಕಾಗುತ್ತದೆ. ಆಯ್ಕೆಯಾದ ನೇರ ಪ್ರತಿನಿಧಿಗಳಿಗೆ ಅವರು ಮಾಡಿದ ವ್ಯವಹಾರಕ್ಕೆ ತಕ್ಕಂತೆ ಸೂಕ್ತ ಕಮೀಶನ್ ಕೊಡಲಾಗುವುದು.ಸಂದರ್ಶನಕ್ಕೆ ಆಗಮಿಸುವ ಅಭ್ಯರ್ಥಿಗಳು ಇತ್ತೀಚಿನ ಭಾವಚಿತ್ರ ಹೊಂದಿರುವ ಸ್ವವಿವರ, ಶೈಕ್ಷಣಿಕ ಪ್ರಮಾಣಪತ್ರದ ನಕಲುಗಳೊಂದಿಗೆ ಹಾಜರಾಗಬೇಕು. ಹೆಚ್ಚಿನ ಮಾಹಿತಿಗಾಗಿ ರೈಲ್ವೇ ಸ್ಟೇಶನ್ ರಸ್ತೆಯಲ್ಲಿನ ಗೋಲಗುಂಬಜ್ ಬಳಿ ಇರುವ ಅಂಚೆ ಅಧೀಕ್ಷಕರ ಕಚೇರಿಗೆ ಭೇಟಿ ನೀಡಿ ಮಾಹಿತಿ ಪಡೆದುಕೊಳ್ಳಬಹುಹುದು ಎಂದು ಅಂಚೆ ಅಧೀಕ್ಷರಾದ ಜಿ.ಬಿ. ನಾಯಕ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ವಿಜಯಪುರ: ಸಾರ್ವತ್ರಿಕ ಲೋಕಸಭಾ ಚುನಾವಣೆ ೨೦೨೪ ರ ಮತದಾನ ಮಹತ್ವ ಕುರಿತು ಜನರಲ್ಲಿ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಜಿಲ್ಲಾ ಪಂಚಾಯತ್, ಜಿಲ್ಲಾ ಸ್ವೀಪ್ ಸಮಿತಿ ವತಿಯಿಂದ ಮೇ ೪ ರಂದು ಟಾಂಗಾ ಜಾಥಾ ಅಭಿಯಾನ ಹಮ್ಮಿಕೊಳ್ಳಲಾಗಿದೆ.ನಗರದ ಸೆಟ್ ಲೈಟ್ ಬಸ್ ನಿಲ್ಲಾಣದಲ್ಲಿ ( ಹೊಸ ಬಸ್ ನಿಲ್ದಾಣ) ಸಂಜೆ ೪ ಗಂಟೆಗೆ ಚಾಲನೆಗೊಳ್ಳುವ ಜಾಥಾ ಅಭಿಯಾನವು ಗ್ಯಾಂಗ್ ಬಾವಡಿ, ಮಹಾತ್ಮಾ ಗಾಂಧಿ ಶಾಲೆ, ಮಾನಸ ರೆಸಿಡೆನ್ಸಿ, ದರ್ಗಾ ಕ್ರಾಸ್, ಚಾಲುಕ್ಯ ನಗರ, ಉಮದಿ ಸೂಪರ್ ಬಜಾರ್ ಎದುರಿನ ರಸ್ತೆ, ಮಹೇಶ್ವರಿ ಭವನ ರಸ್ತೆ, ರೀಲೈನ್ಸ್ ಮಾಲ್ ರಸ್ತೆ, ಮಾರವಾಡಿ ಕಾಲೋನಿ, ಸಿದ್ದೇಶ್ವರ ದೇವಸ್ಥಾನ, ಗಾಂಧಿ ವೃತ್ತ ಮಾರ್ಗವಾಗಿ ಸಂಚರಿಸಿ ಡಾ.ಬಿ.ಆರ್.ಅಂಬೇಡ್ಕರ್ ವೃತ್ತವನ್ನು ತಲುಪಲಿದೆ.ಡಾ.ಬಿ.ಆರ್.ಅಂಬೇಡ್ಕರ್ ವೃತ್ತದಲ್ಲಿ ಪ್ರತಿಜ್ಞಾವಿಧಿ ಭೋಧಿಸುವುದರೊಂದಿಗೆ ಕಾರ್ಯಕ್ರಮವನ್ನು ಮುಕ್ತಾಯಗೊಳಿಸಲಾಗುವುದು ಎಂದು ಜಿಲ್ಲಾ ಪಂಚಾಯತ್ ನ ಪ್ರಕಟಣೆ ತಿಳಿಸಿದೆ.
ದೇವರಹಿಪ್ಪರಗಿ: ಬಿಜೆಪಿ ಲೋಕಸಭಾ ಅಭ್ಯರ್ಥಿ ರಮೇಶ ಜಿಗಜಿಣಗಿ ಪರ ವಿಜಯಪುರ ಮತಕ್ಷೇತ್ರದ ಶಾಸಕ ಬಸನಗೌಡ ಪಾಟೀಲ(ಯತ್ನಾಳ) ರೋಡ್ ಶೋ ಕೈಗೊಂಡು ಮತಯಾಚನೆ ಮಾಡಲಿದ್ದಾರೆ.ಪಟ್ಟಣದ ಅಂಬೇಡ್ಕರ್ ವೃತ್ತದ ಮೂಲಕ ಶನಿವಾರ(ಇಂದು) ೮.೩೦ ಗಂಟೆಗೆ ಆರಂಭಗೊಳ್ಳುವ ರೋಡ್ ಶೋ ಮೊಹರೆ ಹಣಮಂತ್ರಾಯ ವೃತ್ತ, ಮೇನ್ ಬಜಾರ್, ಪತ್ತಾರಕಟ್ಟಿ, ಬೇವಿನಕಟ್ಟಿ ಮಾರ್ಗವಾಗಿ ಸಾಗಿ ಕರಿದೇವರ ದೇವಸ್ಥಾನದ ಮುಂಭಾಗದಲ್ಲಿ ಸಮಾವೇಶಗೊಳ್ಳಲಿದೆ. ಇಲ್ಲಿ ಸಾರ್ವಜನಿಕರನ್ನು ಉದ್ದೇಶಿಸಿ ಬಿಜೆಪಿ ಅಭ್ಯರ್ಥಿ ರಮೇಶ ಜಿಗಜಿಣಗಿ, ಶಾಸಕ ರಾಜುಗೌಡ ಪಾಟೀಲ (ಕುದರಿಸಾಲವಾಡಗಿ), ಮಾಜಿಶಾಸಕ ಸೋಮನಗೌಡ ಪಾಟೀಲ(ಸಾಸನೂರ), ಬಿಜೆಪಿ ಜಿಲ್ಲಾಧ್ಯಕ್ಷ ಆರ್.ಎಸ್.ಪಾಟೀಲ (ಕುಚಬಾಳ) ಸೇರಿದಂತೆ ಜಿಲ್ಲಾ ಪ್ರಮುಖರು ಮಾತನಾಡಿ ಮತಯಾಚನೆ ಮಾಡಲಿದ್ದಾರೆ ಎಂದು ಜಿಲ್ಲಾ ಬಿಜೆಪಿ ಕಾರ್ಯದರ್ಶಿ ರಮೇಶ ಮಸಬಿನಾಳ ಪ್ರಕಟಣೆ ಮೂಲಕ ತಿಳಿಸಿದ್ದಾರೆ.
ಇಂಡಿ: ಕೇಂದ್ರದಲ್ಲಿ ಕಾಂಗ್ರೆಸ್ ನೇತೃತ್ವದ ಸರಕಾರ ಅಧಿಕಾರಕ್ಕೆ ಬಂದರೆ ರೈತರ ಬೆಳೆಗಳಿಗೆ ಎಂಎಸ್‌ಪಿ ನಿಗದಿ ಹಾಗೂ ರೈತರ ಸಾಲ ಮನ್ನಾಕ್ಕೆ ಪ್ರಥಮಾಧ್ಯತೆ ನೀಡಲಾಗುವುದೆಂದು ಶಾಸಕ ಯಶವಂತರಾಯಗೌಡ ಪಾಟೀಲ ಹೇಳಿದರು.ತಾಲೂಕಿನ ಲಾಳಸಂಗಿ ಗ್ರಾಮದಲ್ಲಿ ೨೦೨೪ರ ಲೋಕಸಭಾ ಚುನಾವಣಾ ಅಭ್ಯರ್ಥಿ ರಾಜು ಅಲಗೂರ ಅವರ ಪ್ರಚಾರಾರ್ಥ ಸಭೆಯಲ್ಲಿ ಮಾತನಾಡಿದರು.ಮಹಾಲಕ್ಷ್ಮಿ ಯೋಜನೆಯಡಿ ಎಲ್ಲ ಜಾತಿ ವರ್ಗಗಳ ಬಡ ಮಹಿಳೆಯರಿಗೆ ರೂ ೧ ಲಕ್ಷ ಧನ ಸಹಾಯ ಸಿಗಲಿದೆ. ರಾಜ್ಯದಲ್ಲಿ ಘೋಷಿಸಿದ್ದ ಐದು ಗ್ಯಾರಂಟಿಗಳನ್ನು ಕಾಂಗ್ರೆಸ್ ಸರಕಾರ ಈಗಾಗಲೇ ಈಡೇರಿಸಿದೆ.ಕೇಂದ್ರದಲ್ಲೂ ಅಧಿಕಾರಕ್ಕೆ ಬಂದರೆ ಘೋಷಿತ ಎಲ್ಲ ಗ್ಯಾರಂಟಿಗಳನ್ನು ಈಡೇರಿಸಲಿದೆ ಎಂದರು.ಎಣ್ಣೆಯಿಂದ ಬೀದಿ ದೀಪ ಬೆಳಗುವ ಪರಸ್ಥಿತಿ ಇತ್ತು ಗುಂಡು ಸೂಚಿ ತಯಾರಿಸಲಾಗದ ದೇಶ ಕಾಂಗ್ರೆಸ್ ಆಡಳಿತದಲ್ಲಿ ಅಣೆಕಟ್ಟು, ವಿಜ್ಞಾನ ತಂತ್ರಜ್ಞಾನ, ಆಯ್.ಆಯ್.ಟಿ, ರಸ್ತೆ, ಸಾರಿಗೆ ವಿಮಾನಯಾನ, ಕೈಗಾರಿಕೆ,ಪ್ರವಾಸೋದ್ಯಮ ಬೆಳವಣಿಗೆ, ಬಡವರಿಗೆ ಒಳ್ಳೆಯ ಆರ್ಥಿಕ ಬದ್ರತೆ ಸೇರಿದಂತೆ ಸಾಕಷ್ಟು ಬೆಳವಣಿಗೆ ಕಂಡಿದೆ ಎಂದರು.೧೦ ವರ್ಷ ಆಡಳಿತದಲ್ಲಿ ಪ್ರಧಾನ ಮಂತ್ರಿ ಮೋದಿ ಸರಕಾರ ಒಂದೇ ಒಂದು ಯೋಜನೆ ಮಾಡಿಲ್ಲ. ಸ್ವೀಜ್…
ಇಂಡಿ: ಕೇಂದ್ರದ ಮಾಜಿ ಸಚಿವೆ ಶೋಭಾ ಕರಂದಾಜ್ಲೆ ಮೇ ೪ ರಂದು ತಾಲೂಕಿನ ತಡವಲಗಾ ಗ್ರಾಮಕ್ಕೆ ಆಗಮಿಸಲಿದ್ದಾರೆ ಎಂದು ವಿಜಯಪುರ ಜಿಲ್ಲಾ ರೈತ ಮೋರ್ಚಾ ಮಾಜಿ ಜಿಲ್ಲಾಧ್ಯಕ್ಷ ಕಾಸುಗೌಡ ಬಿರಾದಾರ ತಿಳಿಸಿದ್ದಾರೆ.ಅವರು ಬೆಳಗ್ಗೆ ೧೦ ಗಂಟೆಗೆ ಗ್ರಾಮದಲ್ಲಿ ೨೦೨೪ ಲೋಕಸಭಾ ಚುನಾವಣೆಯ ಅಭ್ಯರ್ಥಿ ರಮೇಶ ಜಿಗಜಿಣಗಿ ಪರವಾಗಿ ಬಹಿರಂಗ ಸಭೆಯಲ್ಲಿ ಮತಯಾಚನೆ ಮಾಡಲಿದ್ದಾರೆ.ಅದಲ್ಲದೆ ಮೇ ೫ ರಂದು ಇಂಡಿಗೆ ಬಸನಗೌಡ ಪಾಟೀಲ ಆಗಮಿಸಲಿದ್ದಾರೆ. ಬೆಳಗ್ಗೆ ೧೧ ಗಂಟೆಗೆ ಮಹಾವೀರ ವೃತ್ತದಿಂದ ಧನಶೆಟ್ಟಿ ಮಂಗಲ ಕಾರ್ಯಾಲಯದ ವರೆಗೆ ರೋಡ್ ಶೋ ನಡೆಸಲಿದ್ದಾರೆ. ನಂತರ ಧನಶೆಟ್ಟಿ ಮಂಗಲ ಕಾರ್ಯಾಲಯದಲ್ಲಿ ಲೋಕಸಭಾ ಅಭ್ಯರ್ಥಿ ರಮೇಶ ಜಿಗಜಿಣಗಿ ಪರ ಮತ ಯಾಚಿಸಲಿದ್ದಾರೆ ಎಂದು ಕಾಸುಗೌಡ ಬಿರಾದಾರ ತಿಳಿಸಿದ್ದಾರೆ.
ವಿಜಯಪುರ: ಭಾರತೀಯ ಜನತಾ ಪಾರ್ಟಿಯ ಲೋಕಸಭಾ ಅಭ್ಯರ್ಥಿ ರಮೇಶ ಜಿಗಜಿಣಗಿ ಪರ ನಗರ ಶಾಸಕರ ಚಿರಂಜೀವಿ ರಾಮನಗೌಡ ಪಾಟೀಲ ನೇತೃತ್ವದಲ್ಲಿ ಶುಕ್ರವಾರ ಚುನಾವಣಾ ಪ್ರಚಾರವನ್ನು ಶಿವಶಕ್ತಿ ನಗರ, ಪಾಣಿ ನಗರ, ಸರಸ್ವತಿ ನಗರ, ಸಾಯಿಸಮರ್ಥ ನಗರ, ರಾಜರತ್ನ ಕಾಲನಿ, ಮಿಣಿಮಾದರ ಓಣಿ, ರಜಪೂತ ಗಲ್ಲಿಯಲ್ಲಿ ಬಿರುಸಿನ ಪ್ರಚಾರ ಹಮ್ಮಿಕೊಳ್ಳಲಾಗಿದೆ.ಈ ಸಮಯದಲ್ಲಿ ರಾಮನಗೌಡ ಪಾಟೀಲ ರವರು ಮಾತನಾಡಿ, ೨೦೧೪ ಮತ್ತು ೨೦೧೯ರಲ್ಲಿ ಭಾರತೀಯ ಜನತಾ ಪಕ್ಷಕ್ಕೆ ದೇಶದ ಜನತೆ ಪೂರ್ಣ ಬಹುಮತ ನೀಡಿದ್ದು, ಬಿಜೆಪಿ ೧೦ ವರ್ಷಗಳಿಂದ ಪೂರ್ಣ ಬಹುಮತದ ಸರ್ಕಾರ ನಡೆಸುತ್ತಿದೆ, ಆದರೆ ಒಂದು ಬಾರಿಯೂ ಅಧಿಕಾರವನ್ನು ದುರ್ಬಳಕೆ ಮಾಡಿಕೊಂಡು, ಕಾಂಗ್ರೆಸ್ನAತೆ ತುರ್ತು ಪರಿಸ್ಥಿತಿ ಘೋಷಿಸಿಲ್ಲ ಅಥವಾ ಅವಧಿಯನ್ನು ವಿಸ್ತರಿಸಿಲ್ಲ. ಅದರ ಬದಲಿಗೆ ಮೋದಿ ನೇತೃತ್ವದ ಮತ್ತು ಅಮಿತ್ ಶಾ ಅವರ ಕೌಶಲ್ಯಪೂರ್ಣ ಮಾರ್ಗದರ್ಶನದ ಈ ಸರ್ಕಾರ ಪೂರ್ಣ ಬಹುಮತವನ್ನು ೩೭೦ ನೇ ವಿಧಿಯನ್ನು ತೆಗೆದುಹಾಕಲು, ತ್ರಿವಳಿ ತಲಾಖ್ ರದ್ದುಗೊಳಿಸಲು, ಬ್ರಿಟಿಷರು ಮಾಡಿದ ಕಾನೂನುಗಳನ್ನು ಬದಲಾಯಿಸಲು, ಕರೋನಾ ಸಾಂಕ್ರಾಮಿಕ ಸಮಯದಲ್ಲಿ ಲಾಕ್ಡೌನ್…
ಧಾರವಾಡದಲ್ಲಿ ಕೇಂದ್ರ ಗೃಹ ಮತ್ತು ಸಹಕಾರ ಸಚಿವ ಅಮಿತ್ ಶಾ, ಕಾಂಗ್ರೆಸ್ ವಿರುದ್ಧ ವಾಗ್ದಾಳಿ ಧಾರವಾಡ: 2024ರ ಐತಿಹಾಸಿಕ ಚುನಾವಣೆ ₹ 12 ಲಕ್ಷ ಕೋಟಿ ಹಗರಣ ಮಾಡಿರುವ ಭ್ರಷ್ಟ ಕಾಂಗ್ರೆಸ್ ಪಕ್ಷ ಮತ್ತು ನಯಾ ಪೈಸೆಯಷ್ಟು ಹಗರಣ ಮಾಡದ ಪ್ರಮಾಣಿಕ ಪ್ರಧಾನಿ ನರೇಂದ್ರ ಮೋದಿ ಅವರ ನಡುವಿನ ನೇರ ಸ್ಪರ್ಧೆಯಾಗಿದೆ. ಎಲ್ಲಾ ಸ್ಥಾನಗಳಲ್ಲಿ ಬಿಜೆಪಿಯನ್ನು ಗೆಲ್ಲಿಸುವ ಮೂಲಕ ಕರ್ನಾಟಕದ ಜನತೆ ಕಾಂಗ್ರೆಸ್ಗೆ ತಕ್ಕ ಉತ್ತರ ನೀಡಲಿದ್ದಾರೆ ಎಂದು ಕೇಂದ್ರ ಗೃಹ ಮತ್ತು ಸಹಕಾರ ಸಚಿವ ಹಾಗೂ ಬಿಜೆಪಿಯ ವರಿಷ್ಠ ನಾಯಕ ಅಮಿತ್ ಶಾ, ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದರು.ಧಾರವಾಡ ಲೋಕಸಭಾ ಕ್ಷೇತ್ರದಲ್ಲಿ ನಡೆದ ಬೃಹತ್ ಸಾರ್ವಜನಿಕ ಸಭೆಯನ್ನುದ್ದೇಶಿಸಿ ಅವರು ಮಾತನಾಡಿದರು.ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆಯವರ ಕಾಶ್ಮೀರದ ಬಗೆಗಿನ ಅರ್ಥಹೀನ ಟೀಕೆಗಳ ಬಗ್ಗೆ ತೀವ್ರ ವಾಗ್ದಾಳಿ ನಡೆಸಿದ ಅವರು, ಕರ್ನಾಟಕ ಮತ್ತು ರಾಜಸ್ಥಾನದ ಜನರಿಗೂ ಕಾಶ್ಮೀರಕ್ಕೂ ಯಾವುದೇ ಸಂಬಂಧವಿಲ್ಲ ಎಂದು ಖರ್ಗೆ ಹೇಳಿದ್ದಾರೆ, ಇದು ಭಾರತದ ರಾಜ್ಯಗಳ ಒಕ್ಕೂಟದ ಬಗ್ಗೆ ಅವರಿಗಿರುವ…
