ಇಂಡಿ: ಕೇಂದ್ರದಲ್ಲಿ ಕಾಂಗ್ರೆಸ್ ನೇತೃತ್ವದ ಸರಕಾರ ಅಧಿಕಾರಕ್ಕೆ ಬಂದರೆ ರೈತರ ಬೆಳೆಗಳಿಗೆ ಎಂಎಸ್‌ಪಿ ನಿಗದಿ ಹಾಗೂ ರೈತರ ಸಾಲ ಮನ್ನಾಕ್ಕೆ ಪ್ರಥಮಾಧ್ಯತೆ ನೀಡಲಾಗುವುದೆಂದು ಶಾಸಕ ಯಶವಂತರಾಯಗೌಡ ಪಾಟೀಲ ಹೇಳಿದರು.
ತಾಲೂಕಿನ ಲಾಳಸಂಗಿ ಗ್ರಾಮದಲ್ಲಿ ೨೦೨೪ರ ಲೋಕಸಭಾ ಚುನಾವಣಾ ಅಭ್ಯರ್ಥಿ ರಾಜು ಅಲಗೂರ ಅವರ ಪ್ರಚಾರಾರ್ಥ ಸಭೆಯಲ್ಲಿ ಮಾತನಾಡಿದರು.
ಮಹಾಲಕ್ಷ್ಮಿ ಯೋಜನೆಯಡಿ ಎಲ್ಲ ಜಾತಿ ವರ್ಗಗಳ ಬಡ ಮಹಿಳೆಯರಿಗೆ ರೂ ೧ ಲಕ್ಷ ಧನ ಸಹಾಯ ಸಿಗಲಿದೆ. ರಾಜ್ಯದಲ್ಲಿ ಘೋಷಿಸಿದ್ದ ಐದು ಗ್ಯಾರಂಟಿಗಳನ್ನು ಕಾಂಗ್ರೆಸ್ ಸರಕಾರ ಈಗಾಗಲೇ ಈಡೇರಿಸಿದೆ.ಕೇಂದ್ರದಲ್ಲೂ ಅಧಿಕಾರಕ್ಕೆ ಬಂದರೆ ಘೋಷಿತ ಎಲ್ಲ ಗ್ಯಾರಂಟಿಗಳನ್ನು ಈಡೇರಿಸಲಿದೆ ಎಂದರು.
ಎಣ್ಣೆಯಿಂದ ಬೀದಿ ದೀಪ ಬೆಳಗುವ ಪರಸ್ಥಿತಿ ಇತ್ತು ಗುಂಡು ಸೂಚಿ ತಯಾರಿಸಲಾಗದ ದೇಶ ಕಾಂಗ್ರೆಸ್ ಆಡಳಿತದಲ್ಲಿ ಅಣೆಕಟ್ಟು, ವಿಜ್ಞಾನ ತಂತ್ರಜ್ಞಾನ, ಆಯ್.ಆಯ್.ಟಿ, ರಸ್ತೆ, ಸಾರಿಗೆ ವಿಮಾನಯಾನ, ಕೈಗಾರಿಕೆ,ಪ್ರವಾಸೋದ್ಯಮ ಬೆಳವಣಿಗೆ, ಬಡವರಿಗೆ ಒಳ್ಳೆಯ ಆರ್ಥಿಕ ಬದ್ರತೆ ಸೇರಿದಂತೆ ಸಾಕಷ್ಟು ಬೆಳವಣಿಗೆ ಕಂಡಿದೆ ಎಂದರು.
೧೦ ವರ್ಷ ಆಡಳಿತದಲ್ಲಿ ಪ್ರಧಾನ ಮಂತ್ರಿ ಮೋದಿ ಸರಕಾರ ಒಂದೇ ಒಂದು ಯೋಜನೆ ಮಾಡಿಲ್ಲ. ಸ್ವೀಜ್ ಬ್ಯಾಂಕಿನಿಂದ ಕಪ್ಪ ಹಣತರುತ್ತೇನೆ ಎಂದರು.
ಕೇಂದ್ರದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದರೆ ರೈತರ ಆದಾಯ ದ್ವೀಗುಣ, ನದಿಗಳ ಜೊಡಣೆ ,ಯುವಕರಿಗೆ ಉದ್ಯೋಗ ಈಡೇರಿಸಿಲ್ಲ ಎಂದರು.
ಲೋಕಸಭಾ ಚುನಾವಣೆಯಲ್ಲಿ ಮತದಾರ ಬಂಧುಗಳು ಇದೊಂದು ಬಾರಿ ರಾಜು ಆಲಗೂರ ಇವರಿಗೆ ಆರ್ಶೀವಾದ ಮಾಡಬೇಕು ಎಂದು ಮನವಿ ಮಾಡಿದರು.
ಮದ್ದಾನೆ ಮಹಾರಾಜರು ದಿವ್ಯಸಾನಿಧ್ಯವಹಿಸಿದರು.
ಗ್ಯಾರಂಟಿ ಸಮಿತಿ ಜಿಲ್ಲಾಧ್ಯಕ್ಷ ಇಲಿಯಾಸ ಬೋರಾಮಣಿ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಜಾವೀದ ಮೋಮಿನ್, ರುದ್ರೇಶ ಅಲಗೊಂಡ, ಭೀಮಣ್ಣಾ ಕೌಲಗಿ, ಮಾತನಾಡಿದರು.
ಗ್ರಾ.ಪಂ ಅಧ್ಯಕ್ಷ ದಸ್ತಗೀರ ದೇವರ ನಾವದಗಿ, ಸಂಜು ಮಾರನೂರ, ಸಿದ್ದರಾಮಗೌಡ ಪಾಟೀಲ, ವೈ.ಬಿ.ಬಗುಂಡಿ, ಮಾಡಪ್ಪ ಪೂಜಾರಿ, ಸಿಧಾರ್ಥ ಮೈದರಗಿ, ಸೊಂದೆಸಾಬ ದೇವರನಾವದಗಿ, ಪ್ರಕಾಶ ಶಿವಪುರ, ಪ್ರಕಾಶ ಅಲಗೊಂಡ ಮತ್ತಿತರಿದ್ದರು.
Subscribe to Updates
Get the latest creative news from FooBar about art, design and business.
ರೈತರ ಸಾಲಮನ್ನಾಕ್ಕೆ ಕಾಂಗ್ರೆಸ್ ಆದ್ಯತೆ :ಶಾಸಕ ಯಶವಂತರಾಯಗೌಡ
Related Posts
Add A Comment

