Author: editor.udayarashmi@gmail.com

ವಿಜಯಪುರ: ಜ್ಞಾನಕ್ಕಿಂತ ಮಿಗಿಲಾದುದು ಯಾವುದು ಇಲ್ಲ. ಎಲ್ಲ ಕಡೆ ಶಿಕ್ಷಣವಂತರಿಗೆ ಮಾತ್ರ ಬೆಲೆಯಿದ್ದು, ಪ್ರತಿಯೊಬ್ಬರೂ ಉತ್ತಮ ಶಿಕ್ಷಣವಂತರಾಗಿ ಸಮಾಜಮುಖಿ ಜೀವನ ರೂಪಿಸಿಕೊಳ್ಳಬೇಕೆಂದು ಮಹಾನಗರ ಪಾಲಿಕೆ ಆಯುಕ್ತ ಬಿ ಎ ಸೌದಾಗರ ಹೇಳಿದರು.ನಗರದ ಮನಗೂಳಿ ಅಗಸಿ ಹತ್ತಿರದ ಫತ್ಹೇ ದರವಾಜಾ ಮಸೀದಿ ಜಮಾತ್ ವತಿಯಿಂದ ವಕ್ಫ ಸಲಹಾ ಸಮಿತಿ ಪದಾಧಿಕಾರಿಗಳು ಹಾಗೂ ಚಿನ್ನದ ಪದಕ ಪಡೆದ ಸಾಧಕರಿಗೆ ಹಮ್ಮಿಕೊಂಡ ಸನ್ಮಾನ ಸಮಾರಂಭದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಉತ್ತಮ ಶಿಕ್ಷಣದಿಂದಲೇ ನಮ್ಮ ಜೀವನ ರೂಪಗೊಳ್ಳುವುದು ಸಮಾಜದಲ್ಲಿ ಹುದ್ದೆಗಳು ಸಿಗಬೇಕೆಂದರೆ ಜ್ಞಾನವಂತರಾಗಿರಬೇಕು ಎಂದರು.ಮುಖ್ಯ ಅತಿಥಿಗಳಾಗಿದ್ದ ಮಹಾನಗರ ಪಾಲಿಕೆ ಮಾಜಿ ಮೇಯರ್ ಸಜ್ಜಾದೆಪೀರಾ ಮುಶ್ರೀಫ್ ಹಾಗೂ ಜಿಲ್ಲಾ ವಕ್ಫ ಕಮೀಟಿಯ ಉಪಾಧ್ಯಕ್ಷ ಅಲ್ತಾಪ ಲಕ್ಕೂಂಡಿ ಮಾತನಾಡಿ, ನಮ್ಮ ಸಮಾಜದಲ್ಲಿ ಸಾಕಷ್ಟು ಶಿಕ್ಷಣದ ಕೊರತೆಯಿದೆ. ಒಂದೊತ್ತು ಊಟ ಕಡಿಮೆ ಮಾಡಿಯಾದರೂ ಮಕ್ಕಳಿಗೆ ಉತ್ತಮ ಶಿಕ್ಷಣ ಕೊಡಸಬೇಕೆಂದರು.ಸನ್ಮಾನ ಸ್ವೀಕರಿಸಿ ಮಾತನಾಡಿದ ಜಿಲ್ಲಾ ವಕ್ಫ ಕಮೀಟಿ ನೂತನ್ ಚೇರಮನ್ ನಿಯಾಜ ಕೌಸರ್ ಇನಾಮದಾರ, ನನ್ನ ಅಧಿಕಾರವಧಿಯಲ್ಲಿ ಜಿಲ್ಲಾ ವಕ್ಫ ಕಮೀಟಿ ವ್ಯವಸ್ಥೆಯನ್ನು…

Read More

ಆಲಮೇಲ: ಮಹಿಳೆಯರು ಸಮಾಜದ ಮುಖ್ಯವಾಹಿನಿಗೆ ಬರಬೇಕು ಎಂದರೆ ಪುರುಷರ ಸಹಕಾರ ಇದ್ದರೆ ಮಾತ್ರ ಸಾದ್ಯ. ಹೆಣ್ಣು ಹೆಣ್ಣಿಗೆ ವೈರಿಗಳಾಗಬಾರದು, ಮಹಿಳೆಯರ ಶೋಷಣೆ ಮಹಿಳೆಯರಿಂದಲೆ ನಡೆಯುತ್ತಿದೆ ಅದಕ್ಕೆ ಪುರುಷರ ಹೆಸರು ಮುಂದೆ ಬರುತ್ತಿದೆ ಎಂದು ಶಾಸಕ ಅಶೋಕ ಮನಗೂಳಿ ಪತ್ನಿ ನಾಗರತ್ನ ಮನಗೂಳಿ ಹೇಳಿದರು.ಸೋಮವಾರ ಪಟ್ಟಣದ ನಿರ್ಮಲಾಲಯ ಸಮಾಜ ಸೇವಾ ಸಂಸ್ಥೆಯ, ಭಾಂದವ್ಯ ಮಹಿಳಾ ಸ್ವ-ಸಹಾಯ ಸಂಘಗಳ ಒಕ್ಕೂಟ, ಭೀಮಬಾಯಿ ದೇವದಾಸಿ ಮಹಿಳಾ ತಾಲೂಕ ಒಕ್ಕೂಟ, ನವಜ್ಯೋತಿ ಮಹಿಳಾ ಸ್ವ-ಸಹಾಯ ಸಂಘಗಳ ಒಕ್ಕೂಟ ಇವರ ಸಹಯೋಗದಲ್ಲಿ ಹಮ್ಮಿಕೊಂಡ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.ಮಹಿಳೆ ಮತ್ತು ಪುರುಷ ಇಬ್ಬರು ಸಮಾನರಾಗಿ ಸಹಕಾರದಿಂದ ಹೋಗಬೇಕಾಗಿದೆ. ಅದಕ್ಕೆ ಯಾರನ್ನೂ ದೂರುವುದು ಸರಿಯಲ್ಲ. ಮಹಿಳಾ ಸ್ವಸಹಾಯ ಸಂಘಕ್ಕೆ ಸರ್ಕಾರ ಸಾಕಷ್ಟು ಅನುಕೂಲ ಕಲ್ಪಿಸಿದ್ದು ಅದರ ಸದುಪಯೋಗ ಪಡೆದುಕೊಳ್ಳಬೇಕು ಎಂದರು.ಇಂಜಿನಿಯರ ಶ್ರೀಶೈಲ ಮಠಪತಿ ಮಾತನಾಡಿದರು.ವಿಜಯಪುರದ ಮಿಷನ್ ಸುಪೀರಿಯರ್ ಫ್ರಾನ್ಸಿಸ್ ಮಿನೇಜಸ್ ಎಸ್.ಜೆ. ಮಾತನಾಡಿದರು.ಬೆಂಗಳೂರಿನ ಕರ್ನಾಟಕ ಮಹಿಳಾ ಹಕ್ಕುಗಳ ಕಾರ್ಯಕರ್ತೆ, ಗಮನ ಮಹಿಳಾ ಸಮೂಹದ ಮುಖ್ಯಸ್ಥೆ ಮಮತಾ…

Read More

ಆಲಮೇಲ: ಮಕ್ಕಳ ಕವನ ಸಂಕಲನ “ಸೀಸದ ಕಡ್ಡಿ” ಕೃತಿ ಲೋಕಾರ್ಪಣೆ ಕಾರ್ಯಕ್ರಮ ಮಾರ್ಚ ೫ರಂದು ಮಂಗಳವಾರ ಬೆಳಗ್ಗೆ ೧೧ ಗಂಟೆಗೆ ಬಳಗಾನೂರ ಗ್ರಾಮದ ಗುರು ಕೇದಾರಲಿಂಗೇಶ್ವರ ಪ್ರೌಢಶಾಲೆಯಲ್ಲಿ ನಡೆಯಲಿದೆ.ಬಳಗಾನೂರ ಗ್ರಾಮದ ಸರಕಾರಿ ಹೆಣ್ಣು ಮಕ್ಕಳ ಮಾದರಿ ಪ್ರಾಥಮಿಕ ಶಾಲೆಯ ಶಿಕ್ಷಕ ರಾಚು ಎಸ್. ಕೊಪ್ಪ ವಿರಚಿತ ಸೀಸದ ಕಡ್ಡಿ ಮಕ್ಕಳ ಕವನ ಸಂಕಲನ ಕೃತಿ ಬಂಥನಾಳದ ಮಾಧುರಿ ಪ್ರಕಾಶನ ಪ್ರಕಟಿಸಿರುವ ಕೃತಿ ಲೋಕಾರ್ಪಣೆಗೊಳ್ಳಲಿದೆ.ರಾಷ್ಟ್ರ ಪ್ರಶಸ್ತಿ ಪುರಸ್ಕೃತ ನಿವೃತ್ತ ಶಿಕ್ಷಕ ಹಾಗೂ ಮಕ್ಕಳ ಸಾಹಿತಿ ಸಿಂದಗಿಯ ಹ.ಮ. ಪೂಜಾರ ಕೃತಿ ಲೋಕಾರ್ಪಣೆ ಮಾಡಲಿದ್ದಾರೆ. ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಹಾಗೂ ಮಕ್ಕಳ ಸಾಹಿತಿ ಪ.ಗು. ಸಿದ್ದಾಪೂರ ಕೃತಿ ಪರಿಚಯಿಸಲಿದ್ದಾರೆ. ಗುರು ಕೇದಾರಲಿಂಗೇಶ್ವರ ವಿದ್ಯಾವರ್ಧಕ ಸಂಘದ ಅಧ್ಯಕ್ಷೆ ಎಸ್.ಎಸ್. ಪಾಟೀಲ ಅಧ್ಯಕ್ಷತೆ ವಹಿಸಲಿದ್ದಾರೆ. ರಾಜ್ಯ ಪ್ರೌಢಶಾಲಾ ಸಹಶಿಕ್ಷಕರ ಸಂಘದ ಜಿಲ್ಲಾಧ್ಯಕ್ಷ ಶಿವರಾಜ ಬಿರಾದಾರ, ಮುಖ್ಯ ಶಿಕ್ಷಕ ಎಂ.ಎಸ್. ಸಾವಳಸಂಗ, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ತಾಲೂಕ ಅಧ್ಯಕ್ಷ ಆನಂದ ಭೂಸನೂರ, ಅವಧೂತ ಬಂಡಗಾರ, ಎಸ್.ಎಚ್. ಬಿರಾದಾರ,…

Read More

ಸಿಂದಗಿ: ಬಿಜೆಪಿ ಪಕ್ಷದ ಮಾಜಿ ಶಾಸಕರು ಮಾ.೫ರಂದು ಗಂಗಾ ಕಲ್ಯಾಣ ಯೋಜನೆಯಲ್ಲಿ ಅರ್ಹ ರೈತ ಫಲಾನುಭವಿಗಳ ಹೆಸರನ್ನು ರದ್ದುಗೊಳಿಸಿದ್ದಾರೆ ಎಂದು ಹೇಳಿ ಅದರ ವಿರುದ್ಧ ಪ್ರತಿಭಟನೆ ಮಾಡುತ್ತೇವೆ ಎಂದಿದ್ದಾರೆ. ಆದರೆ ಪ್ರತಿಭಟನೆ ಮಾಡುವ ಮೊದಲು ಫಲಾನುಭವಿಗಳನ್ನು ಸರಕಾರ ರದ್ದುಗೊಳಿಸಿರುವ ಆದೇಶವಿದ್ದರೆ ಅದನ್ನು ಪ್ರದರ್ಶಿಸಿ ಪ್ರತಿಭಟನೆ ಮಾಡಲಿ ಎಂದು ಸಿಂದಗಿ ಬ್ಲಾಕ್ ಕಾಂಗ್ರೆಸ್ ತಾಲೂಕಾಧ್ಯಕ್ಷ ಸುರೇಶ ಪೂಜಾರ ಗುಡುಗಿದ್ದಾರೆ.ಸರಕಾರ ಆದೇಶ ಮಾಡಿರುವ ಆದೇಶವಿಲ್ಲದೆ ಸುಖಾ ಸುಮ್ಮನೆ ಪ್ರತಿಭಟನೆ ಮಾಡಿ ಜನರ ದಾರಿ ತಪ್ಪಿಸುವ ಹುನ್ನಾರ ಮತ್ತು ಸಾರ್ವಜನಿಕರಿಗೆ ತಪ್ಪು ಸಂದೇಶ ಕಲ್ಪಿಸಿಕೊಟ್ಟಿರುವಂತಾಗುತ್ತದೆ.ಈ ಹಿಂದಿನ ೨೦೨೧ರ ಅಧಿಕಾರದ ಅವಧಿಯಲ್ಲಿ ಮಾಜಿ ಶಾಸಕರು ಸಿಂದಗಿಗೆ ೫೦೦೦, ಆಲಮೇಲ ಪಟ್ಟಣಕ್ಕೆ ೨೦೦೦ ಮನೆಗಳನ್ನು ತಂದಿದ್ದೇವೆ ಎಂದು ಹೇಳಿದ್ದಾರೆ. ತಂದಿರುವುದಕ್ಕೆ ನಾವು ದಾಖಲೆ ಕೇಳಿದ್ದೇವೆ. ಆದರೆ ಇಲ್ಲಿಯವರೆಗೂ ಯಾವುದೇ ಸೂಕ್ತ ದಾಖಲೆಗಳನ್ನು ಪ್ರಸ್ತುತ ಪಡಿಸಿಲ್ಲ. ಅನುದಾನದ ವಿಚಾರದಲ್ಲಿ ನೀವು ಹೇಳಿದ ಹಾಗೆ ನಾವು ದಾಖಲೆ ನೀಡಿದ್ದೇವೆ. ನೀವು ಸೂಕ್ತ ದಾಖಲೆ ನೀಡುತ್ತೀರೆಂಬ ನಿರಿಕ್ಷೇಯಲ್ಲಿದ್ದೇವೆ ಎಂದಿದ್ದಾರೆ.ಮಾಜಿ ಶಾಸಕರು ಜನತೆಯಲ್ಲಿ ಗೊಂದಲ…

Read More

ಸಿಂದಗಿ: ಚಿಮ್ಮಲಗಿ ಏತ ನೀರಾವರಿ ಕಾಲುವೆಯಿಂದ ಹರಿಸಿದ ನೀರು, ಸಿಂದಗಿ ತಾಲೂಕಿಗೆ ಫೆ.೨೯ಕ್ಕೆ ನೀರು ಪ್ರವೇಶಿಸಿದೆ. ಮಾ.೧ಕ್ಕೆ ಕೆರೆಗಳಿಗೆ ಪ್ರವೇಶಿಸಲು ಪ್ರಾರಂಬಿಸಿ, ಮಾ.೦೪ಕ್ಕೆ ತಾಲೂಕಿನ ಪುರದಾಳ ಕೆರೆಯಲ್ಲಿ ಶೇ.೨೫%ರಷ್ಟು ನೀರು ಸಂಗ್ರಹವಾಗಿದೆ ಎಂದು ತಹಶೀಲ್ದಾರ್ ಪ್ರದೀಪಕುಮಾರ ಹಿರೇಮಠ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Read More

ಸಿಂದಗಿ: ತಾಲೂಕಿನ ರಾಂಪೂರ ಪಿಎ ಗ್ರಾಮದ ಕೃಷ್ಣಾ ಭಾಗ್ಯ ಜಲ ನಿಗಮ ಕ್ಯಾಂಪ್‌ನಲ್ಲಿ ಮಾ.೦೫ರಂದು ಬಿಜೆಪಿ ಮಂಡಲದ ವತಿಯಿಂದ ಪ್ರತಿಭಟನೆಯನ್ನು ಹಮ್ಮಿಕೊಳ್ಳಲಾಗುತ್ತಿದೆ ಎಂದು ಬಿಜೆಪಿ ಮಂಡಲ ಅಧ್ಯಕ್ಷ ಸಂತೋಷ ಪಾಟೀಲ ಡಂಬಳ ತಿಳಿಸಿದ್ದಾರೆ.ಹಾಲಿ ಶಾಸಕರು ಗಂಗಾ ಕಲ್ಯಾಣ ಯೋಜನೆಯಲ್ಲಿ ಅರ್ಹರಾದ ರೈತ ಫಲಾನುಭವಿಗಳನ್ನು ರದ್ದುಗೊಳಿಸಿ ಹೊಸ ಫಲಾನುಭವಿಗಳನ್ನು ಆಯ್ಕೆ ಮಾಡಲು ಜಲಸಂಪನ್ಮೂಲ ಅಚಿವರಿಗೆ ಶಿಫಾರಸ್ಸು ಮಾಡಿದ್ದಾರೆಂದು ಪ್ರತಿಭಟನೆಗೆ ತಾಲೂಕು ಬಿಜೆಪಿ ಮಂಡಲ ಮುಂದಾಗಿದೆ. ಈ ಪ್ರತಿಭಟನೆಯಲ್ಲಿ ಮಾಜಿ ಶಾಸಕರು, ಮೋರ್ಚಾಗಳ ಅಧ್ಯಕ್ಷರು, ರೈತರು ಹಾಗೂ ಕಾರ್ಯಕರ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಲಿದ್ದಾರೆ ಎಂದು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ,

Read More

ಇಂಡಿ: ಸರಕಾರಿ ಶಾಲೆಗಳ ಅಭಿವೃದ್ದಿಗೆ ಸ್ಥಳೀಯ ಮತ್ತು ಸಾರ್ವಜನಿಕರ ಸಹಕಾರ ಅಗತ್ಯವಾಗಿದೆ ಎಂದು ವಿಜಯಪುರ ಜಿಲ್ಲಾ ಉಸ್ತುವಾರಿ ಸಚಿವರು ಮತ್ತು ಬೃಹತ್ ಕೈಗಾರಿಕೆ ಸಚಿವ ಎಂ.ಬಿ.ಪಾಟೀಲ ಹೇಳಿದರು.ತಾಲೂಕಿನ ಅಥರ್ಗಾ ಗ್ರಾಮದ ಸರಕಾರಿ ಗಂಡು ಮಕ್ಕಳ ಶಾಲೆಗೆ ನವೀಕೃತ ಕಟ್ಟಡ ಲೋಕಾರ್ಪಣೆ ಮಾಡಿ, ಗುರುವಂದನಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.ಸಂಸದ ರಮೇಶ ಜಿಗಜಿಣಗಿಯವರು ಕಲಿತ ಶಾಲೆಗೆ ಒಂದು ಕೋಟಿ ರೂ ಅನುದಾನ, ಶಾಸಕ ಯಶವಂತರಾಯಗೌಡ ಪಾಟೀಲರು, ಗ್ರಾ.ಪಂ ಅಧ್ಯಕ್ಷರು, ಸದಸ್ಯರು ಹಾಗೂ ಗ್ರಾಮದ ಶಿಕ್ಷಣ ಪ್ರೇಮಿಗಳು ಹಳೆಯ ಶಾಲೆಗೆ ಹೊಸ ರೂಪ ಕೊಟ್ಟಿರುವುದನ್ನು ಪ್ರಶಂಸಿದರು.ಪೂಜ್ಯ ಶ್ರೀ ಸಿದ್ದೇಶ್ವರ ಶ್ರೀಗಳು ಈ ಭಾಗ ನೀರಾವರಿ ಆಗಬೇಕೆಂಬುದು ಅವರ ಕನಸಾಗಿತ್ತು. ಕಳೆದ ಬಾರಿ ನೀರಾವರಿ ಸಚಿವನಿದ್ದಾಗ ಪ್ರಯತ್ನ ಮಾಡಿದ್ದೇನೆ. ಈ ಬಾರಿಯೂ ಜಿಲ್ಲೆ ಎಲ್ಲ ಭಾಗಗಳಿಗೆ ಮತ್ತು ಇಂಡಿ ತಾಲೂಕಿನ ಕೊನೆಯ ಭಾಗದವರೆಗೆ ನೀರು ಹರಿಸಲು ಪ್ರಯತ್ನ ಮಾಡುವುದಾಗಿ ತಿಳಿಸಿದರು.ಗ್ರಾ.ಪಂ ಅಧ್ಯಕ್ಷ ನಾಗುಗೌಡ ಪಾಟೀಲ ಮಾತನಾಡಿದರು.ಸಾನಿದ್ಯ ವಹಿಸಿದ ಅಥರ್ಗಾ ವಿರಕ್ತಿಮಠದ ಮುರಗೇಂದ್ರ ಶಿವಾಚಾರ್ಯರು ಮಾತನಾಡಿದರು.ಗಣಪತಿ ಭಾಣಿಕೋಲ, ರಮೇಶ…

Read More

ಜಿಲ್ಲಾ ಕಾರಾಗೃಹದಲ್ಲಿ ಶುದ್ಧ ನೀರಿನ ಘಟಕ ಹಾಗೂ ಜಿಮ್ ಉದ್ಘಾಟಿಸಿದ ಶಾಸಕ ಬಸನಗೌಡ ಪಾಟೀಲ ಭರವಸೆ ವಿಜಯಪುರ: ದೇಶದಲ್ಲಿಯೇ ಅತೀ ಹೆಚ್ಚು ಶುದ್ಧ ಗಾಳಿ ಇರುವ ನಗರ ವಿಜಯಪುರ 6ನೇ ಸ್ಥಾನದಲ್ಲಿದೆ ಎನ್ನುವುದು ಹೆಮ್ಮೆಯ ವಿಷಯ. ನಿರೀಕ್ಷೆ ಮೀರಿ ಅಭಿವೃದ್ಧಿ ಆಗಿರುವುದೇ ಕಾರಣ ಎಂದು ನಗರ ಶಾಸಕ ಬಸನಗೌಡ ಪಾಟೀಲ ಯತ್ನಾಳ ಅಭಿಪ್ರಾಯ ಪಟ್ಟರು.ನಗರದ ಜಿಲ್ಲಾ ಕಾರಾಗೃಹ ವಸತಿಗೃಹದಲ್ಲಿ ಶುಕ್ರವಾರ ಸಿದ್ಧಸಿರಿ ಸೌಹಾರ್ದ ಸಹಕಾರಿ ಸಂಘದ ವತಿಯಿಂದ ಸ್ಥಾಪಿಸಲಾದ ಶುದ್ಧ ಕುಡಿಯುವ ನೀರಿನ ಘಟಕ ಹಾಗೂ ಓಪನ್ ಜಿಮ್ ಉದ್ಘಾಟಿಸಿ ಅವರು ಮಾತನಾಡಿದರು.ನಗರದಲ್ಲಿ ಒಳಚರಂಡಿ ನಿರ್ಮಾಣ ಮಾಡುವ ಜೊತೆಗೆ ಆಂತರಿಕ ರಸ್ತೆಗಳು ಸೇರಿ ಪ್ರಮುಖ ರಸ್ತೆಗಳನ್ನು ಮಾದರಿ ರಸ್ತೆಗಳನ್ನಾಗಿ ಅಭಿವೃದ್ಧಿ ಪಡಿಸಲಾಗಿದೆ. ಈಗ 10 ಕೋಟಿ ಅನುದಾನದಲ್ಲಿ ದರ್ಗಾ ರಸ್ತೆಯಿಂದ ಇಟ್ಟಂಗಿ ಕ್ರಾಸ್ ವರೆಗೆ ಅಗಲೀಕರಣಗೊಳಿಸಿ ಮಾದರಿ ರಸ್ತೆಯನ್ನಾಗಿ ಮಾಡಲಾಗುವುದು ಎಂದರು.ನಗರದಲ್ಲಿರುವ ಪುರಾತನ ಬಾವಿಗಳನ್ನು ನಗರಾಭಿವೃದ್ಧಿ ಇಲಾಖೆಯಿಂದ ಸ್ವಚ್ಛಗೊಳಿಸಲಾಗುವುದು. ಇದರಿಂದ ನಗರಕ್ಕೆ ಉಂಟಾಗುವ ನೀರಿನ ಸಮಸ್ಯೆ ನೀಗಿಸಬಹುದು. ಈಗಾಗಲೇ ನಿರಂತರ ಕುಡಿಯುವ…

Read More

1998ರ ತೀರ್ಪು ರದ್ದುಪಡಿಸಿ ಸುಪ್ರೀಂಕೋರ್ಟ್ ಮಹತ್ವದ ತೀರ್ಪು | ಜನಪ್ರತಿನಿಧಿಗಳಿಗೆ ಸುಪ್ರೀಂಕೋರ್ಟ್‌ ಶಾಕ್! ನವದೆಹಲಿ: ಲಂಚ ಪಡೆದ ಪ್ರಕರಣಗಳಲ್ಲಿ ಸಂಸದರು ಹಾಗೂ ಶಾಸಕರಿಗೆ ಕಾನೂನು ರಕ್ಷಣೆ ನೀಡಲು ಸಾಧ್ಯವಿಲ್ಲ ಎಂದು ಮಹತ್ವದ ತೀರ್ಪು ನೀಡಿರುವ ಸುಪ್ರೀಂಕೋರ್ಟ್, ಶಾಸಕರಿಗೆ ಕಾನೂನು ಕ್ರಮದಿಂದ ವಿನಾಯಿತಿ ನೀಡುವ ಹಿಂದಿನ ಆದೇಶವನ್ನು ಸೋಮವಾರ ರದ್ದುಪಡಿಸಿದೆ.ಮುಖ್ಯ ನ್ಯಾಯಮೂರ್ತಿ ಡಿ ವೈ ಚಂದ್ರಚೂಡ್‌ ಅವರ ನೇತೃತ್ವದ ಏಳು ಸದಸ್ಯರ ಸಂವಿಧಾನಿಕ ಪೀಠ ಇಂದು ತೀರ್ಪು ನೀಡಿದೆ.ಮುಖ್ಯ ನ್ಯಾಯಮೂರ್ತಿ ಡಿ.ವೈ. ಚಂದ್ರಚೂಡ್ ನೇತೃತ್ವದ ಪೀಠದಲ್ಲಿ ನ್ಯಾಯಮೂರ್ತಿಗಳಾದ ಎ.ಎಸ್.ಬೋಪಣ್ಣ, ಎಂ.ಎಂ.ಸುಂದರೇಶ್, ಪಿ.ಎಸ್.ನರಸಿಂಹ, ಜೆ.ಬಿ.ಪರ್ಡಿವಾಲ, ಸಂಜಯ್ ಕುಮಾರ್ ಮತ್ತು ಮನೋಜ್ ಮಿಶ್ರಾ ಇದ್ದರು.ಸಂಸತ್ ಸದಸ್ಯರು ಹಾಗೂ ರಾಜ್ಯಗಳ ವಿಧಾನ ಮಂಡಲದ ಸದಸ್ಯರು ಲಂಚ ಪಡೆದಾಗ, ಭ್ರಷ್ಟಾಚಾರ ಎಸಗಿದಾಗ ಅವರ ವಿರುದ್ಧ ತನಿಖೆ ನಡೆಯದಂತೆ ಕಾನೂನು ರಕ್ಷಣೆ ನೀಡಲು ಸಾಧ್ಯವಿಲ್ಲ ಎಂದು ಹೇಳುವ ಮೂಲಕ ಜನಪ್ರತಿನಿಧಿಗಳಿಗೆ ಸುಪ್ರೀಂಕೋರ್ಟ್‌ ಶಾಕ್ ಕೊಟ್ಟಿದೆ.ಅಕ್ಟೋಬರ್ 5, 2023 ರಂದು ತನ್ನ ತೀರ್ಪನ್ನು ಕಾಯ್ದಿರಿಸಿದ್ದ ಮುಖ್ಯ ನ್ಯಾಯಮೂರ್ತಿಗಳ ನೇತೃತ್ವದ ಸಂವಿಧಾನ ಪೀಠವು…

Read More

ವಿಜಯಪುರ: ಕಳೆದ 2024 ರ ಪೂರ್ವದಲ್ಲಿ ಕಾಂಗ್ರೆಸ್ ಘೋಷಿಸಿದ ಗ್ಯಾರಂಟಿ ಯೋಜನೆಗಳನ್ನು ಸಮರ್ಪಕವಾಗಿ ಅನುಷ್ಟಾನಗೊಳಿಸಿ ಬಡವರ ಸರ್ವಾಂಗೀಣ ಪ್ರಗತಿಗೆ ಶ್ರಮಿಸಲಾಗುತ್ತಿದೆ ಎಂದು ಕಾಂಗ್ರೆಸ್ ಜಿಲ್ಲಾಧ್ಯಕ್ಷ ರಾಜು ಆಲಗೂರ ಹೇಳಿದರು.ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬಿಜೆಪಿ ಪ್ರತಿ ವರ್ಷಕ್ಕೆ ಎರಡು ಕೋಟಿ ಉದ್ಯೋಗ ಕೊಡುತ್ತೇವೆ, ಸ್ವಿಸ್ ಬ್ಯಾಂಕ್ ನ ಕಪ್ಪು ಹಣ ತಂದು ಬಡವರ ಖಾತೆಗೆ ಹದಿನೈದು ಲಕ್ಷ ರೂಪಾಯಿ ಹಾಕುತ್ತೇವೆ, ರೈತರ ಆದಾಯ ದುಪ್ಪಟ್ಟು ಮಾಡುತ್ತೇವೆ ಎಂದಿದ್ದರು. ಆದರೆ ನುಡಿದಂತೆ ನಡೆಯದೇ ದೇವರು, ಧರ್ಮದ ಮೊರೆ ಹೋಗಿದೆ ಎಂದು ಹೇಳಿದರು.ಕಾಂಗ್ರೆಸ್ ಪಕ್ಷ ನುಡಿದಂತೆ ನಡೆದಿದೆ. ಐದು ಗ್ಯಾರಂಟಿ ಯೋಜನೆ ಜಾರಿಗೆ ತಂದಿದೆ. ಈ ಯೋಜನೆಗಳಿಂದ ಜನರ ಆದಾಯ ದ್ವಿಗುಣಗೊಂಡಿದೆ ಎಂದರು.ಜಾತ್ಯತೀತವಾಗಿ, ಪಕ್ಷಾತೀತವಾಗಿ ಎಲ್ಲರಿಗೂ ಈ ಯೋಜನೆಗಳು ಅನುಕೂಲವಾಗಿವೆ. ರಾಜ್ಯದ ಸುಮಾರು ಏಳೂವರೆ ಕೋಟಿ ಜನಸಂಖ್ಯೆಯ ಪೈಕಿ ಅಂದಾಜು 3.5 ಕೋಟಿ ಜನ ಉಚಿತ ಬಸ್ ಪ್ರಯಾಣದ ಸೌಲಭ್ಯ ಪಡೆದಿದ್ದಾರೆ. ಬಡವರಿಗೆ ಹತ್ತು ಕೆಜಿ ಅಕ್ಕಿ ನೀಡಲಾಗುತ್ತಿದೆ. ಐದು ಕೆಜಿ ಅಕ್ಕಿ ಜೊತೆಗೆ…

Read More