Author: editor.udayarashmi@gmail.com

ಮುದ್ದೇಬಿಹಾಳ: ಹೆಲ್ಮೆಟ್ ಇಲ್ಲದೇ ದ್ವಿಚಕ್ರ ವಾಹನ ಸವಾರಿ ಸೇರಿದಂತೆ ಸಂಚಾರಿ ನಿಯಮ ಪಾಲಿಸದ ವಾಹನ ಸವಾರರಿಗೆ ಇಲ್ಲಿನ ಪಿಎಸ್‌ಐ ಸಂಜೀವ ತಿಪರೆಡ್ಡಿ ದಂಡದ ಮತ್ತು ಪ್ರಕರಣದ ಬಿಸಿ ಮುಟ್ಟಿಸಿದರು.ಸೋಮುವಾರ ಬೆಳಿಗ್ಗೆಯಿಂದಲೇ ಖುದ್ದು ತಾವೇ ಪ್ರಮುಖ ರಸ್ತೆಗಳಲ್ಲಿ ನಿಂತು ಸುಮಾರು ೮೦ ಕ್ಕೂ ಹೆಚ್ಚು ವಾಹನಗಳ ದಾಖಲೆಗಳನ್ನು ಪರಿಶೀಲಿಸಿದರು. ನಂಬರ್ ಪ್ಲೇಟ್ ಮೇಲೆ ಬರೆಸಲಾದ ಚಿತ್ರ ವಿಚಿತ್ರ ಸಂದೇಶಗಳನ್ನು ಕಿತ್ತಿಸಿದರು. ಆರ್.ಸಿ ಪುಸ್ತಕ, ಚಾಲನಾ ಪರವಾನಗೆ, ವಿಮೆ ಸೇರಿದಂತೆ ಅಗತ್ಯ ದಾಖಲೆಗಳನ್ನು ಪರಿಶೀಲಿಸಿ ದಾಖಲೆಗಳನ್ನು ನೀಡದವರ ಮೇಲೆ ಪ್ರಕರಣ ದಾಖಲಿಸಿದರು.ಈ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ದ್ವಿಚಕ್ರ ವಾಹನ ಸವಾರರು ಕಡ್ಡಾಯವಾಗಿ ಹೆಲ್ಮೆಟ್ ಧರಿಸಿ ವಾಹನ ಸವಾರಿ ಮಾಡಬೇಕು. ಸುರಕ್ಷತಾ ನಿಯಮಗಳನ್ನು ತಪ್ಪದೇ ಪಾಲಿಸಬೇಕು. ಬಹಳ ಜನರು ಅಪ್ರಾಪ್ತ ವಯಸ್ಕರಿಗೆ ತಮ್ಮ ವಾಹನಗಳನ್ನು ಕೊಡುತ್ತಿದ್ದಾರೆ. ಇದು ನಿಯಮಬಾಹಿರ, ಬಿಸಿ ರಕ್ತದ ಪಡ್ಡೆ ಹುಡುಗರು ಯಾವ ನಿಯಮವನ್ನೂ ಪಾಲಿಸದೇ ಎಲ್ಲಂದರಲ್ಲಿ ಅತೀ ವೇಗವಾಗಿ ವಾಹನ ಚಲಾಯಿಸುತ್ತಿರುವ ಬಗ್ಗೆ ದೂರುಗಳು ಕೇಳಿ ಬರುತ್ತಿವೆ. ಯಾರೂ ಕೂಡ…

Read More

ಬಸವನಬಾಗೇವಾಡಿ: ಪಟ್ಟಣದ ಬಸವೇಶ್ವರ ವೃತ್ತದಲ್ಲಿ ಸೋಮವಾರ ರಾಜ್ಯದಲ್ಲಿ ಆಡಳಿತಕ್ಕೆ ಬಂದ ಕಾಂಗ್ರೆಸ್ ಸರ್ಕಾರಕ್ಕೆ ಒಂದು ವರ್ಷ ಪೂರ್ಣಗೊಂಡ ಹಿನ್ನೆಲೆಯಲ್ಲಿ ಕಾಂಗ್ರೆಸ್ ಮುಖಂಡರು, ಕಾರ್ಯಕರ್ತರು ಪಟಾಕ್ಷಿ ಸಿಡಿಸಿ, ಸಿಹಿ ಹಂಚಿ ಸಂಭ್ರಮಾಚರಣೆ ಮಾಡಿದರು.ಈ ಸಂದರ್ಭದಲ್ಲಿ ಕಾಂಗ್ರೆಸ್ ಪಕ್ಷದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಈರಣ್ಣ ಪಟ್ಟಣಶೆಟ್ಟಿ, ಬ್ಲಾಕ್ ಅಧ್ಯಕ್ಷ ಸುರೇಶ ಹಾರಿವಾಳ, ನಗರ ಘಟಕದ ಅಧ್ಯಕ್ಷ ಸುರೇಶಗೌಡ ಪಾಟೀಲ, ಮಾತನಾಡಿ, ರಾಜ್ಯದಲ್ಲಿ ನಮ್ಮ ಸರ್ಕಾರ ಚುನಾವಣೆ ಮುನ್ನ ಘೋಷಣೆ ಮಾಡಿರುವ ಪಂಚ ಗ್ಯಾರಂಟಿ ಯೋಜನೆಗಳನ್ನು ರಾಜ್ಯದಲ್ಲಿ ಜಾರಿ ತರುವ ಮೂಲಕ ನುಡಿದಂತೆ ನಡೆದಿದೆ. ಈ ಯೋಜನೆಗಳು ಜನರಿಗೆ ತಲುಪಿವೆ. ಪಂಚ ಗ್ಯಾರಂಟಿ ಯೋಜನೆಗಳಿಂದ ರಾಜ್ಯದ ಅನೇಕ ಜನರಿಗೆ ಸದುಪಯೋಗವಾಗುತ್ತಿದೆ. ಸಿಎಂ ಸಿದ್ದರಾಮಯ್ಯ, ಡಿಸಿಎಂ ಶಿವಕುಮಾರ ನೇತೃತ್ವದಲ್ಲಿ ಕಾಂಗ್ರೆಸ್ ಸರ್ಕಾರ ಮುಂಬರುವ ನಾಲ್ಕು ವರ್ಷ ಯಶಸ್ವಿಯಾಗಿ ಪೂರ್ಣಗೊಳಿಸುವ ಮೂಲಕ ರಾಜ್ಯ ಅಭಿವೃದ್ಧಿ ಪಥದತ್ತ ಸಾಗಲಿದೆ ಎಂದರು.ಸಂಭ್ರಮಾಚರಣೆಯಲ್ಲಿ ಮುಖಂಡರಾದ ಲೋಕನಾಥ ಅಗರವಾಲ, ಬಸಣ್ಣ ದೇಸಾಯಿ, ಎಂ.ಜಿ.ಆದಿಗೊಂಡ,ಶೇಖರ ಗೊಳಸಂಗಿ, ಬಸವರಾಜ ಹಾರಿವಾಳ, ರವಿ ರಾಠೋಡ, ರವಿ ಚಿಕ್ಕೊಂಡ, ಬಸವರಾಜ…

Read More

ಸಿಂದಗಿ: ನಗರದ ಆರ್.ಡಿ.ಪಾಟೀಲ ಕಾಲೇಜಿನ ಎದುರುಗಡೆ ಇರುವ ಶ್ರೀ ಶ್ರೀಧರಸ್ವಾಮಿ ವಿದ್ಯಾವರ್ಧಕ ಸಂಘ ಮತ್ತು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ವಿಜಯಪುರ ಅವರ ಸಹಯೋಗದಲ್ಲಿ ನಡೆಯುತ್ತಿರುವ ಮೆಟ್ರಿಕ್ ನಂತರದ ಬಾಲಕಿಯರ ವಸತಿ ನಿಲಯ ಪ್ರವೇಶಕ್ಕೆ ೨೦೨೪-೨೫ನೆಯ ಸಾಲಿನ ಅರ್ಜಿಗಳನ್ನು ಅಹ್ವಾನಿಸಿದ್ದು, ಇಚ್ಚೆಯುಳ್ಳ ಮೆಟ್ರಿಕ್ ನಂತರದ ವಿದ್ಯಾರ್ಥಿನಿಯರು ಜೂ. ೧೫ರೊಳಗಾಗಿ ಬಾಲಕಿಯರ ವಸತಿ ನಿಲಯದಲ್ಲಿ ತಮ್ಮ ಮೂಲ ದಾಖಲೆಗಳೊಂದಿಗೆ ಅರ್ಜಿ ಸಲ್ಲಿಸಬಹುದು. ಹೆಚ್ಚಿನ ಮಾಹಿತಿಗಾಗಿ ೯೯೮೬೫೦೮೬೮೩ /೯೪೪೮೭೫೨೭೮೧ ಸಂಪರ್ಕಿಸಿ ಮಾಹಿತಿ ತಿಳಿದುಕೊಳ್ಳಬೇಕು ಎಂದು ಸಂಸ್ಥೆಯ ಅಧ್ಯಕ್ಷ ಕೆ.ಎನ್.ಮೇಟಿ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Read More

ಸಿಂದಗಿ: ಪಾಲಕರು ತಮ್ಮ ಮಕ್ಕಳಿಗೆ ಕೇವಲ ಪಠ್ಯ ಬೋಧನೆಗೆ ಸಿಮೀತಗೊಳಿಸದೇ ಪಠ್ಯೇತರ ಚಟುವಟಿಕೆಯಲ್ಲಿ ತೊಡಗಿಸಿಕೊಳ್ಳುವಂತೆ ಮಾಡಿದ್ದು ಸಂತಸ ತಂದಿದೆ ಎಂದು ಸಂಸ್ಥೆಯ ಅಧ್ಯಕ್ಷ ವೀಠ್ಠಲ ಕೋಳೂರ ಹೇಳಿದರು.ಪಟ್ಟಣದ ಹೊರವಲಯದ ಭೀಮಾ ಯುನಿವರ್ಸಲ್ ಸೆಂಟ್ರಲ್ ಶಾಲೆಯಲ್ಲಿ ಹಮ್ಮಿಕೊಂಡ ಬೇಸಿಗೆ ಶಿಬಿರ ಮುಕ್ತಾಯ ಸಮಾರಂಭವನ್ನು ಉದ್ದೇಶಿಸಿ ಮಾತನಾಡಿದ ಅವರು, ಪಠ್ಯೇತರ ಚಟುವಟಿಕೆಯಲ್ಲಿ ಆಸಕ್ತಿ ಹೊಂದಿದ ಮಕ್ಕಳಿಗೆ ಪ್ರೋತ್ಸಾಹ ನೀಡಬೇಕು ಮತ್ತು ಅವರಿಗೆ ಸಹಕರಿಸಬೇಕು ಅಂದಾಗ ಮಾತ್ರ ಮಗುವಿನ ಸರ್ವತೋಮುಖ ಅಭಿವೃದ್ಧಿಯಾಗುವುದು ಎಂದರು.ಇದೇ ಸಂದರ್ಭದಲ್ಲಿ ಮಕ್ಕಳ ತಮ್ಮ ಅನಿಸಿಕೆಗಳನ್ನು ವ್ಯಕ್ತಪಡಿಸಿದರು.ಬಳಿಕ ಹಾಡು, ನೃತ್ಯ, ಸಂಗೀತ ಮತ್ತು ಯೋಗವನ್ನು ಪ್ರದರ್ಶಿಸಿದರು.ಈ ವೇಳೆ ಶಿವಶರಣ ಮಾವೂರ, ಭೀಮಾಶಂಕರ ತಾರಾಪೂರ, ಪ್ರಶಾಂತ ಕಮತಗಿ ಸೇರಿದಂತೆ ಪ್ರಾಚಾರ್ಯರು, ಬೋಧಕ-ಬೋಧಕೇತರ ಸಿಬ್ಬಂದಿಗಳು ಉಪಸ್ಥಿತರಿದ್ದರು.

Read More

ವಿಜಯಪುರ: ನಡೆದಾಡುವ ದೇವರೆಂದೇ ಎಲ್ಲರ ಪ್ರೀತಿಗೆ ಪಾತ್ರರಾಗಿದ್ದ ಪೂಜ್ಯ ಸಿದ್ಧೇಶ್ವರ ಸ್ವಾಮೀಜಿಯವರ ಬದುಕಿನ ಕೊನೆಯ ಗಳಿಗೆಯಲ್ಲಿ ಅವರಿಗೆ ಚಿಕಿತ್ಸೆ ನೀಡುವ ಮೂಲಕ ಭಕ್ತಿಯ ಸಮರ್ಪಣೆ ಮಾಡಿದ ವೈದ್ಯರು ಇಂದು ನಮ್ಮ ಆಸ್ಪತ್ರೆಯಲ್ಲಿ ಕಾರ್ಯ ನಿರ್ವಹಣೆ ಮಾಡುತ್ತಾರೆ ಎಂದರೆ ಇದು ನಿಜಕ್ಕೂ ನಮಗೆಲ್ಲ ಅಭಿಮಾನದ ವಿಷಯವಾಗುತ್ತದೆ. ಪೂಜ್ಯರ ಮಾರ್ಗದಲ್ಲಿ ಹೆಜ್ಜೆ ಹಾಕಿದರೆ ವೈದ್ಯರಿಂದ ಸಾರ್ಥಕ ಸೇವೆ ನೀಡುವುದಕ್ಕೆ ಸಾಧ್ಯವಾಗುತ್ತದೆ ಎಂದು ವಿಜಯಪುರ ನಗರ ಶಾಸಕ ಬಸನಗೌಡ ರಾ. ಪಾಟೀಲ್ ಯತ್ನಾಳ ಅವರು ಹೇಳಿದರು.ನಗರದ ಜ್ಞಾನಯೋಗಿ ಶ್ರೀ ಸಿದ್ಧೇಶ್ವರ ಸ್ವಾಮೀಜಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯ ವತಿಯಿಂದ ಸಿದ್ಧೇಶ್ವರ ಶಿವಾನುಭವ ಮಂಟಪದ ಪಕ್ಕದ ಸಿದ್ಧೇಶ್ವರ ಮೆಡಿಕಲ್ ಪಕ್ಕ ನೂತನವಾಗಿ ನಿರ್ಮಾಣ ಮಾಡಲಾದ ಕ್ಲೀನಿಕ್‌ನ್ನು ಲೋಕಾರ್ಪಣೆಗೊಳಿಸಿ ಮಾತನಾಡಿದ ಅವರು; ಭಾರತದ ಎರಡನೇ ವಿವೇಕಾನಂದ ಎಂದು ಗುರುತಿಸಿಕೊಂಡಿರುವ ಪೂಜ್ಯ ಸಿದ್ಧೇಶ್ವರರು ಅನುಭಾವದ ಬದುಕನ್ನು ತೊರೆದು ಚಿರಶಾಂತಿಗೆ ತೆರಳುವ ಸಂದರ್ಭದಲ್ಲಿ ಅವರಿಗೆ ಚಿಕಿತ್ಸೆ ನೀಡಿದ ಡಾ.ಸಂತೋಷ ಬಿ.ಟಿಯವರು ಇಂದು ನಮ್ಮ ಸಂಸ್ಥೆಯ ಜೆಎಸ್‌ಎಸ್ ಹಾಸ್ಪಿಟಲ್ಸ್ ವತಿಯಿಂದ ನಿರ್ಮಾಣ ಮಾಡಲಾಗಿರುವ ಓಪಿಡಿ…

Read More

ಇಂಡಿ: ಕೆಇಬಿ ವಿದ್ಯುತ್ ವಿತರಣಾ ಕೇಂದ್ರದ ಆವರಣದಲ್ಲಿ ಅಧಿಕಾರಿಯೋರ್ವ ಎಣ್ಣೆ ಪಾರ್ಟಿ ಮಾಡಿರುವ ಘಟನೆ ಜಿಲ್ಲೆಯ ಇಂಡಿ ತಾಲ್ಲೂಕಿನ ಹಿರೇಮಸಳಿ ಗ್ರಾಮದ ವಿದ್ಯುತ್ ವಿತರಣಾ ಕೇಂದ್ರದ ಆವರಣದಲ್ಲಿ ನಡೆದಿದೆ. ಕೆಇಬಿ ಜೆಇ ಗೊಲ್ಲಾಳಪ್ಪ ನಾನಾಗೌಡ ಪಾಟೀಲ ಎಣ್ಣೆ ಪಾರ್ಟಿ ಮಾಡಿದ್ದಾನೆ. ನೈಟ್ ಡ್ಯೂಟಿಯಲ್ಲಿ ಖಾಸಗಿ ವ್ಯಕ್ತಿಗಳೊಂದಿಗೆ ಜೆಇ ಪಾಟೀಲ ಸಕತ್ ಎಣ್ಣೆ ಪಾರ್ಟಿ ಮಾಡುವಾಗ ಸ್ಥಳೀಯರ ಕೈಗೆ ರೈಡ್‌ಹ್ಯಾಂಡ್‌ಯಾಗಿ ಸಿಕ್ಕಿಬಿದ್ದಿದ್ದಾನೆ. ನನಗೆ ಅವಕಾಶ ಇದೆ. ನಾನು ಪಾರ್ಟಿ ಮಾಡುತ್ತೇನೆ ಎಂದು ಜೆಇ ಪಾಟೀಲ ಹೇಳಿದ್ದಾನೆ. ಅದಕ್ಕಾಗಿ ಸ್ಥಳೀಯರು ಜೆಇ ವಿರುದ್ಧ ಸೂಕ್ತ ಕ್ರಮಕೈಗೊಳ್ಳಬೇಕು ಎಂದು ಆಗ್ರಹಿಸಿದ್ದಾರೆ. ವಿದ್ಯುತ್ ವಿತರಣಾ ಕಛೇರಿಯ ಆವರಣದಲ್ಲಿ ಎಣ್ಣೆ ಪಾರ್ಟಿ ಮಾಡಿದ್ದು, ಇಲಾಖೆಗೆ ಹಾಗೂ ತಾಲ್ಲೂಕು ಮುಜಗರ ಪಡುವಂತಾಗಿದೆ. ವಿದ್ಯುತ್ ಅವಘಡದಿಂದ ಅನೇಕ ರೈತರು ಸಾವು ನೋವಿನ ಹಾನಿ ಅನುಭವಿಸಿದ್ದು ಉದಾಹರಣೆಗಳಿವೆ. ಎಷ್ಟೋ ಕುಟುಂಬಗಳು ಬೀದಿಗೆ ಬಂದಿವೆ. ಆದರೆ ಹಿರೇಮಸಳಿ ಹೆಸ್ಕಾಂ ಜೆಇ ಕುಡಿದ ಬಗ್ಗೆ ಹಲವು ಬಾರಿ ಪೋನ್ ಕರೆ ಮೂಲಕ ಮೇಲಾಧಿಕಾರಿಗಳ ಗಮನಕ್ಕೂ ತಂದರೂ…

Read More

ವಿಜಯಪುರ: ಸಿಂದಗಿ ರಸ್ತೆಯಲ್ಲಿರುವ ಅಲ್ಲಾಪುರ ತಾಂಡಾದ ಶ್ರೀಧರ ಪೋಮ್‌ಸಿಂಗ ರಾಠೋಡ(೨೯) ಎಂಬ ಯುವಕ ಕಾಣೆಯಾಗಿದ್ದಾನೆ ಎಂದು ಗೋಲ್‌ಗುಮ್ಮಜ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.ಈತ ಮಹಾರಾಷ್ಟ್ರದ ವಿಪ್ರೋ ಎನ್ನುವ ಕಂಪನಿಯಲ್ಲಿ ನೌಕರನಾಗಿದ್ದು, ಮೇ.೪ರಂದು ನಸುಕಿನ ಜಾವ ೫ ಗಂಟೆ ಸುಮಾರಿಗೆ ಪುಣೆಗೆ ಹೊಗಿ ತನಗೆ ಬರುವ ಬಾಕಿ ಸಂಬಳವನ್ನು ತೆಗೆದುಕೊಂಡು ಬರುತ್ತೇನೆಂದು ಹೋದವನು ಮನೆಗೆ ಬಾರದೇ ಹಾಗೂ ಪೋನ್ ಸಂಪರ್ಕಕ್ಕೆ ಸಿಗದೆ ಕಾಣೆಯಾಗಿದ್ದಾನೆಂದು ಕಾಣೆಯಾದ ಯುವಕನ ಅಣ್ಣ ಸತೀಶ್ ಪೋಮಸಿಂಗ್ ರಾಠೋಡ ದೂರು ದಾಖಲಿಸಿದ್ದಾರೆ.ಕಾಣೆಯಾದ ಯುವಕ ಮೈಯಿಂದ ಸಾದಾರಣ ಮೈಕಟ್ಟು, ಕೋಲುಮುಖ, ನೆಟ್ಟನೆಯ ಮೂಗು, ಸಾದಗಪ್ಪು ಮೈ ಬಣ್ಣ, ತಲೆಯಲ್ಲಿ ಕರಿ-ಬಿಳಿ ಕೂದಲು, ಚಿಗುರು ಮೀಸೆ, ಕುರುಚಲ ಗಡ್ಡ ಬಿಟ್ಟಿದ್ದು, ಕನ್ನಡಕ ಧರಿಸಿದ್ದು, ಕನ್ನಡ, ಹಿಂದಿ, ಇಂಗ್ಲೀಷ್, ಲಂಬಾಣಿ ಭಾಷೆ ಮಾತನಾಡುತ್ತಾನೆ. ಬಲಗೈಯಲ್ಲಿ ಮಾಮ ಮತ್ತು ಡ್ಯಾಡ್ ಅಂತ ಇಂಗ್ಲಿಷ್‌ನಲ್ಲಿ ಟ್ಯಾಟೋ ಹಾಕಿಸಿದ್ದು ಇರುತ್ತದೆ.ಸಾರ್ವಜನಿಕರು ಈ ವ್ಯಕ್ತಿಯ ಸುಳಿವು ಸಿಕ್ಕಲ್ಲಿ ಗೋಲಗುಮ್ಮಜ್ ದೂರವಾಣಿ ಠಾಣೆ ಸಂಖ್ಯೆ ೦೮೩೫೨-೨೫೦೨೧೪, ೦೮೩೫೨-೨೫೦೨೫೨, ೦೮೩೫೨-೨೫೩೧೦೦, ೦೮೩೫೨-೨೫೦೧೫೨, ೦೮೩೧-೨೪೦೫೨೦೧…

Read More

ವಿಜಯಪುರ: ಯುವ ಜನರು ನಮ್ಮ ಹಿಂದಿನ ಗತಕಾಲದ ವೈಭವವನ್ನು ಅರಿಯುವ ದೃಷ್ಟಿಕೋನ ಹೊಂದಿರಬೇಕು, ಪ್ರಾಚೀನ ಸ್ಮಾರಕಗಳ ರಕ್ಷಣೆ ನಮ್ಮೆಲ್ಲರ ಹೊಣೆಯಾಗಬೇಕು ಎಂದು ಸಿಕಾಬ್ ಎಆರ್‌ಎಸ್‌ಐ ಕನ್ನಡ ವಿಭಾಗದ ಮುಖ್ಯಸ್ಥ ಡಾ.ಮಲ್ಲಿಕಾರ್ಜುನ ಎಸ್. ಮೇತ್ರಿ ಹೇಳಿದರು.ಭಾರತೀಯ ಪುರಾತತ್ವ ಸರ್ವೇಕ್ಷಣ, ಧಾರವಾಢ ವಲಯದ ವತಿಯಿಂದ ಗೋಳಗುಮ್ಮಟದ ಆವರಣದಲ್ಲಿರುವ ಪ್ರಾಚ್ಯವಸ್ತು ಸಂಗ್ರಹಾಲಯದಲ್ಲಿ ಇತ್ತಿಚಿಗೆ ಹಮ್ಮಿಕೊಂಡ “ಅಂತರರಾಷ್ಟ್ರೀಯ ವಸ್ತುಸಂಗ್ರಹಾಲಯ ದಿನಾಚರಣೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು.ಇತಿಹಾಸವನ್ನು ತಿಳಿಯದವನ್ನು ಇತಿಹಾಸವನ್ನು ಸೃಷ್ಟಿಸಲಾರ ಎಂಬ ಮಾತಿದೆ. ಅದರಂತೆ ತಮ್ಮ ಊರಿನಲ್ಲಿ ಮಹತ್ವಪೂರ್ಣ ದಾಖಲೆಗಳು ಹಾಳಾಗುತ್ತಿದ್ದರೆ, ಅವುಗಳನ್ನು ವಸ್ತುಸಂಗ್ರಹಾಲಯದಲ್ಲಿ ತಂದು ಕೊಟ್ಟರೆ ತಮ್ಮ ಊರಿನ ವಿಳಾಸ, ಮತ್ತು ತಂದು ಕೊಟ್ಟವರ ಹೆಸರು ಹಾಕುವುದರ ಜೊತೆಗೆ ಅದರ ಸಂರಕ್ಷಣೆಯನ್ನು ಜವಾಬ್ದಾರಿಯನ್ನು ಮಾಡುತ್ತಾರೆ. ಹೀಗಾಗಿ ಯಾವುದೇ ಐತಿಹಾಸಿಕ ಮಹತ್ವವುಳ್ಳ ಪ್ರಾಚ್ಯಾವೇಶಗಳನ್ನು ನಾಶವಾಗದಂತೆ ಸಂರಕ್ಷಣೆ ಮಾಡುವುದು ನಮ್ಮೆಲ್ಲರ ಕರ್ತವ್ಯವಾಗಿದೆ ಎಂದು ಹೇಳಿದರು.ಸಹಾಯಕ ಪುರಾತತ್ವವಿದರಾದ ಎನ್. ಪ್ರಸನ್ನಕುಮಾರ್ ಪ್ರಾಸ್ತಾವಿಕವಾಗಿ ಮಾತನಾಡುತ್ತಾ, ಭಾರತವು ಅನೇಕ ವೈವಿಧ್ಯಮಯ ಸಾಂಸ್ಕöÈತಿಕ ಪರಂಪರೆಯನ್ನು ಹೊಂದಿದೆ. ಅವುಗಳು ಮುಂದಿನ ಜನಾಂಗಕ್ಕೆ ಸ್ಪೂರ್ತಿದಾಯಕ ಚರಿತ್ರೆ, ಕಥೆಗಳು ಹೇಳುತ್ತವೆ.…

Read More

ವಿಜಯಪುರ: ರೈತರ ಪರಿಹಾರದ ಹಣವನ್ನು ಸಾಲದ ಖಾತೆಗೆ ಜಮೆ ಮಾಡಿಕೊಂಡಿರುವ ಬಗ್ಗೆ ದೂರುಗಳು ಬಂದಿರುವುದರಿಂದ ತಕ್ಷಣ ಮರುಪಾವತಿಸುವಂತೆ ಜಿಲ್ಲೆಯ ಎಲ್ಲಾ ಬ್ಯಾಂಕ್‌ಗಳಿಗೆ ಜಿಲ್ಲಾಧಿಕಾರಿ ಟಿ. ಭೂಬಾಲನ್ ಸೂಚಿಸಿದ್ದಾರೆ.ಈ ಕುರಿತು ಪ್ರಕಟಣೆ ಬಿಡುಗಡೆ ಮಾಡಿದ ಅವರು, ಕರ್ನಾಟಕ ಸರ್ಕಾರ ಜಿಲ್ಲೆಯ ರೈತರಿಗೆ ಬರ ಪರಿಹಾರವಾಗಿ ೩೬೦೧೦.೨೦ ಲಕ್ಷ ರೂಪಾಯಿಗಳನ್ನು ಬಿಡುಗಡೆ ಮಾಡಲಾಗಿದ್ದು, ಇದು ರೈತರ ಬರ ಪರಿಹಾರ ಹಣವಾಗಿರುತ್ತದೆ. ರಾಜ್ಯ ಸರ್ಕಾರದಿಂದ ನೇರವಾಗಿ ರೈತರ ಖಾತೆಗಳಿಗೆ ಬರ ಪರಿಹಾರದ ಹಣ ಬಿಡುಗಡೆ ಮಾಡಿದೆ. ಇದನ್ನು ರೈತರ ಸಾಲದ ಖಾತೆಗೆ ಜಮೆ ಮಾಡಿಕೊಳ್ಳಬಾರದು ಎಂದು ಲೀಡ್ ಬ್ಯಾಂಕ್ ವ್ಯವಸ್ಥಾಪಕರು ಹಾಗೂ ವಿಜಯಪುರ ಸಹಕಾರ ಸಂಘಳ ಇಲಾಖೆಯ ಉಪ ನಿಬಂಧಕರಿಗೆ ಸೂಚಿಸಲಾಗಿದೆ. ಆದಾಗ್ಯೂ ಸಾಲದ ಖಾತೆಗಳಿಗೆ ಪರಿಹಾರದ ಹಣ ಜಮೆ ಮಾಡಿಕೊಂಡಿರುವುದು ಕಂಡು ಬಂದಿದೆ. ಹಾಗಾಗಿ ಕಡಿತಗೊಳಿಸಿದ ಹಣವನ್ನು ತಕ್ಷಣ ಮರುಪಾವತಿಸಬೇಕು. ಇಲ್ಲದಿದ್ದಲ್ಲಿ ಬ್ಯಾಂಕ್‌ಗಳ ವಿರುದ್ಧ ವಿಪತ್ತು ನಿರ್ವಹಣಾ ಕಾಯ್ದೆ-೨೦೦೫ರನ್ವಯ ಮತ್ತು ಇತರ ಕಾಯ್ದೆಯಡಿಯಲ್ಲಿ ಕ್ರಮ ಜರಗಿಸಲಾಗುವು ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.ರೈತರ ಸಹಮತ ಪಡೆಯದೇ ಅವರ…

Read More

ವಿಜಯಪುರ: ವಿಕಲಚೇತನ ಯುವಕ ಯುವತಿಯರು ಸ್ವಯಂ ಉದ್ಯೋಗ ಕೈಗೊಳ್ಳುವ ಉದ್ದೇಶದಿಂದ ವಿಕಲಚೇತನನರ ಹಾಗೂ ಹಿರಿಯ ನಾಗರೀಕರ ಸಬಲೀಕರಣ ಇಲಾಕೆಯ ವತಿಯಿಂದ ಉಚಿತ ಕೌಶಲ್ಯಾಭಿವೃದ್ಧಿ ತರಬೇತಿ ಹಮ್ಮಿಕೊಳ್ಳಲಾಗಿದೆ. ಮೇ.೨೫ ಅರ್ಜಿಗಳನನು ಸಲ್ಲಿಸಲು ಕೊನೆಯ ದಿನವಾಗಿದೆ.ಕಂಪ್ಯೂಟರ್ ತರಬೇತಿ, ಮೊಬೈಲ್ ರಿಪೇರಿ, ತೋಟಗಾರಿಕೆ, ನರ್ಸರಿ, ಬಿಸಿನೆಸ್ ಪ್ರೋಸೆಸ್ ಔಟ್‌ಸೊರ್ಸೊಂಗ್, ಬ್ಯೂಟೀಷಿಯನ್, ಟೈಲರಿಂಗ್, ಹೈನುಗಾರಿಕೆ, ಹೋಂ ಅಪ್ಲೈಯನ್ಸಸ್ ರಿಪೇರ್ ವಿಷಯದ ಕುರಿತು ಉಚಿತವಾಗಿ ತರಬೇತಿ ನೀಡಲಾಗುವುದು. ಅರ್ಜದಾರರು ಮೇಲಿನ ಗರಿಷ್ಠ ಎರಡು ವಿಷಯಗಳನ್ನು ಆಯ್ಕೆ ಮಾಡಬಹುದಾಗಿದೆ. ಆಸಕ್ತರು ಅರ್ಜಿ ಸಲ್ಲಿಸಲು ರವಿ ರಾಥೋಡ(ವಿಜಯಪುರ-೯೦೦೩೫೫೫೩೩೭), ಪರಶುರಾಮ ಬೋಸಲೆ (ಇಂಡಿ-೯೯೭೨೪೪೧೪೬೪), ಮುತ್ತುರಾಜ ಸಾತಿಹಾಳ(ಸಿಂದಗಿ-೯೯೮೦೦೧೯೬೩೫), ಎಸ್.ಡಿ. ಬಿರಾದಾರ ( ಬಸವನ ಬಾಗೇವಾಡಿ-೮೭೨೨೧೩೫೬೬೦) ಎಸ್. ಕೆ. ಘಾಟಿ(ಮುದ್ದೇಬಿಹಾಳ-೯೭೪೦೬೮೨೯೭೯) ಇವರನ್ನು ಹಾಗೂ ಕಚೇರಿ ದೂರವಾಣಿ ೦೮೩೫೨-೭೯೬೦೬೦ಗೆ ಸಂಒರ್ಕಿಸಬಹುದು ಎಂದು ಜಿಲ್ಲಾ ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲಿಕರಣದ ಅಧಿಕಾರಿ ರಾಜಶೇಖರ ಧೈವಾಡಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Read More