ವಿಜಯಪುರ: ವಿಕಲಚೇತನ ಯುವಕ ಯುವತಿಯರು ಸ್ವಯಂ ಉದ್ಯೋಗ ಕೈಗೊಳ್ಳುವ ಉದ್ದೇಶದಿಂದ ವಿಕಲಚೇತನನರ ಹಾಗೂ ಹಿರಿಯ ನಾಗರೀಕರ ಸಬಲೀಕರಣ ಇಲಾಕೆಯ ವತಿಯಿಂದ ಉಚಿತ ಕೌಶಲ್ಯಾಭಿವೃದ್ಧಿ ತರಬೇತಿ ಹಮ್ಮಿಕೊಳ್ಳಲಾಗಿದೆ. ಮೇ.೨೫ ಅರ್ಜಿಗಳನನು ಸಲ್ಲಿಸಲು ಕೊನೆಯ ದಿನವಾಗಿದೆ.
ಕಂಪ್ಯೂಟರ್ ತರಬೇತಿ, ಮೊಬೈಲ್ ರಿಪೇರಿ, ತೋಟಗಾರಿಕೆ, ನರ್ಸರಿ, ಬಿಸಿನೆಸ್ ಪ್ರೋಸೆಸ್ ಔಟ್‌ಸೊರ್ಸೊಂಗ್, ಬ್ಯೂಟೀಷಿಯನ್, ಟೈಲರಿಂಗ್, ಹೈನುಗಾರಿಕೆ, ಹೋಂ ಅಪ್ಲೈಯನ್ಸಸ್ ರಿಪೇರ್ ವಿಷಯದ ಕುರಿತು ಉಚಿತವಾಗಿ ತರಬೇತಿ ನೀಡಲಾಗುವುದು. ಅರ್ಜದಾರರು ಮೇಲಿನ ಗರಿಷ್ಠ ಎರಡು ವಿಷಯಗಳನ್ನು ಆಯ್ಕೆ ಮಾಡಬಹುದಾಗಿದೆ. ಆಸಕ್ತರು ಅರ್ಜಿ ಸಲ್ಲಿಸಲು ರವಿ ರಾಥೋಡ(ವಿಜಯಪುರ-೯೦೦೩೫೫೫೩೩೭), ಪರಶುರಾಮ ಬೋಸಲೆ (ಇಂಡಿ-೯೯೭೨೪೪೧೪೬೪), ಮುತ್ತುರಾಜ ಸಾತಿಹಾಳ(ಸಿಂದಗಿ-೯೯೮೦೦೧೯೬೩೫), ಎಸ್.ಡಿ. ಬಿರಾದಾರ ( ಬಸವನ ಬಾಗೇವಾಡಿ-೮೭೨೨೧೩೫೬೬೦) ಎಸ್. ಕೆ. ಘಾಟಿ(ಮುದ್ದೇಬಿಹಾಳ-೯೭೪೦೬೮೨೯೭೯) ಇವರನ್ನು ಹಾಗೂ ಕಚೇರಿ ದೂರವಾಣಿ ೦೮೩೫೨-೭೯೬೦೬೦ಗೆ ಸಂಒರ್ಕಿಸಬಹುದು ಎಂದು ಜಿಲ್ಲಾ ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲಿಕರಣದ ಅಧಿಕಾರಿ ರಾಜಶೇಖರ ಧೈವಾಡಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
Subscribe to Updates
Get the latest creative news from FooBar about art, design and business.
Related Posts
Add A Comment
