ಇಂಡಿ: ಕೆಇಬಿ ವಿದ್ಯುತ್ ವಿತರಣಾ ಕೇಂದ್ರದ ಆವರಣದಲ್ಲಿ ಅಧಿಕಾರಿಯೋರ್ವ ಎಣ್ಣೆ ಪಾರ್ಟಿ ಮಾಡಿರುವ ಘಟನೆ ಜಿಲ್ಲೆಯ ಇಂಡಿ ತಾಲ್ಲೂಕಿನ ಹಿರೇಮಸಳಿ ಗ್ರಾಮದ ವಿದ್ಯುತ್ ವಿತರಣಾ ಕೇಂದ್ರದ ಆವರಣದಲ್ಲಿ ನಡೆದಿದೆ. ಕೆಇಬಿ ಜೆಇ ಗೊಲ್ಲಾಳಪ್ಪ ನಾನಾಗೌಡ ಪಾಟೀಲ ಎಣ್ಣೆ ಪಾರ್ಟಿ ಮಾಡಿದ್ದಾನೆ. ನೈಟ್ ಡ್ಯೂಟಿಯಲ್ಲಿ ಖಾಸಗಿ ವ್ಯಕ್ತಿಗಳೊಂದಿಗೆ ಜೆಇ ಪಾಟೀಲ ಸಕತ್ ಎಣ್ಣೆ ಪಾರ್ಟಿ ಮಾಡುವಾಗ ಸ್ಥಳೀಯರ ಕೈಗೆ ರೈಡ್‌ಹ್ಯಾಂಡ್‌ಯಾಗಿ ಸಿಕ್ಕಿಬಿದ್ದಿದ್ದಾನೆ. ನನಗೆ ಅವಕಾಶ ಇದೆ. ನಾನು ಪಾರ್ಟಿ ಮಾಡುತ್ತೇನೆ ಎಂದು ಜೆಇ ಪಾಟೀಲ ಹೇಳಿದ್ದಾನೆ. ಅದಕ್ಕಾಗಿ ಸ್ಥಳೀಯರು ಜೆಇ ವಿರುದ್ಧ ಸೂಕ್ತ ಕ್ರಮಕೈಗೊಳ್ಳಬೇಕು ಎಂದು ಆಗ್ರಹಿಸಿದ್ದಾರೆ.
ವಿದ್ಯುತ್ ವಿತರಣಾ ಕಛೇರಿಯ ಆವರಣದಲ್ಲಿ ಎಣ್ಣೆ ಪಾರ್ಟಿ ಮಾಡಿದ್ದು, ಇಲಾಖೆಗೆ ಹಾಗೂ ತಾಲ್ಲೂಕು ಮುಜಗರ ಪಡುವಂತಾಗಿದೆ. ವಿದ್ಯುತ್ ಅವಘಡದಿಂದ ಅನೇಕ ರೈತರು ಸಾವು ನೋವಿನ ಹಾನಿ ಅನುಭವಿಸಿದ್ದು ಉದಾಹರಣೆಗಳಿವೆ. ಎಷ್ಟೋ ಕುಟುಂಬಗಳು ಬೀದಿಗೆ ಬಂದಿವೆ. ಆದರೆ ಹಿರೇಮಸಳಿ ಹೆಸ್ಕಾಂ ಜೆಇ ಕುಡಿದ ಬಗ್ಗೆ ಹಲವು ಬಾರಿ ಪೋನ್ ಕರೆ ಮೂಲಕ ಮೇಲಾಧಿಕಾರಿಗಳ ಗಮನಕ್ಕೂ ತಂದರೂ ಪ್ರಯೋಜನವಾಗಿಲ್ಲ. ಆದರೆ ಸರಕಾರ ಇನ್ನಾದರೂ ತಪ್ಪಿಸ್ಥರ ವಿರುದ್ಧ ಕ್ರಮವಹಿಸಬೇಕು. ಇಲ್ಲವಾದರೆ ಉಗ್ರವಾದ ಪ್ರತಿಭಟನೆ ಮಾಡಲು ಸಹಕರಿದಂತಾಗುತ್ತದೆ.”
– ಶಿವು ಮಲಕಗೊಂಡ
ಅಧ್ಯಕ್ಷರು, ಕರವೇ ತಾಲ್ಲೂಕು ಘಟಕ ಇಂಡಿ (ಪ್ರವೀಣಶೇಟ್ಟಿ ಬಣ)

