ಮುದ್ದೇಬಿಹಾಳ: ಹೆಲ್ಮೆಟ್ ಇಲ್ಲದೇ ದ್ವಿಚಕ್ರ ವಾಹನ ಸವಾರಿ ಸೇರಿದಂತೆ ಸಂಚಾರಿ ನಿಯಮ ಪಾಲಿಸದ ವಾಹನ ಸವಾರರಿಗೆ ಇಲ್ಲಿನ ಪಿಎಸ್‌ಐ ಸಂಜೀವ ತಿಪರೆಡ್ಡಿ ದಂಡದ ಮತ್ತು ಪ್ರಕರಣದ ಬಿಸಿ ಮುಟ್ಟಿಸಿದರು.
ಸೋಮುವಾರ ಬೆಳಿಗ್ಗೆಯಿಂದಲೇ ಖುದ್ದು ತಾವೇ ಪ್ರಮುಖ ರಸ್ತೆಗಳಲ್ಲಿ ನಿಂತು ಸುಮಾರು ೮೦ ಕ್ಕೂ ಹೆಚ್ಚು ವಾಹನಗಳ ದಾಖಲೆಗಳನ್ನು ಪರಿಶೀಲಿಸಿದರು. ನಂಬರ್ ಪ್ಲೇಟ್ ಮೇಲೆ ಬರೆಸಲಾದ ಚಿತ್ರ ವಿಚಿತ್ರ ಸಂದೇಶಗಳನ್ನು ಕಿತ್ತಿಸಿದರು. ಆರ್.ಸಿ ಪುಸ್ತಕ, ಚಾಲನಾ ಪರವಾನಗೆ, ವಿಮೆ ಸೇರಿದಂತೆ ಅಗತ್ಯ ದಾಖಲೆಗಳನ್ನು ಪರಿಶೀಲಿಸಿ ದಾಖಲೆಗಳನ್ನು ನೀಡದವರ ಮೇಲೆ ಪ್ರಕರಣ ದಾಖಲಿಸಿದರು.
ಈ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ದ್ವಿಚಕ್ರ ವಾಹನ ಸವಾರರು ಕಡ್ಡಾಯವಾಗಿ ಹೆಲ್ಮೆಟ್ ಧರಿಸಿ ವಾಹನ ಸವಾರಿ ಮಾಡಬೇಕು. ಸುರಕ್ಷತಾ ನಿಯಮಗಳನ್ನು ತಪ್ಪದೇ ಪಾಲಿಸಬೇಕು. ಬಹಳ ಜನರು ಅಪ್ರಾಪ್ತ ವಯಸ್ಕರಿಗೆ ತಮ್ಮ ವಾಹನಗಳನ್ನು ಕೊಡುತ್ತಿದ್ದಾರೆ. ಇದು ನಿಯಮಬಾಹಿರ, ಬಿಸಿ ರಕ್ತದ ಪಡ್ಡೆ ಹುಡುಗರು ಯಾವ ನಿಯಮವನ್ನೂ ಪಾಲಿಸದೇ ಎಲ್ಲಂದರಲ್ಲಿ ಅತೀ ವೇಗವಾಗಿ ವಾಹನ ಚಲಾಯಿಸುತ್ತಿರುವ ಬಗ್ಗೆ ದೂರುಗಳು ಕೇಳಿ ಬರುತ್ತಿವೆ. ಯಾರೂ ಕೂಡ ತಮ್ಮ ವಾಹನಗಳನ್ನು ಅಪ್ರಾಪ್ತರ ಕೈಗೆ ಕೊಡಕೂಡದು. ಸಂಚಾರಿ ನಿಯಮಗಳ ಉಲ್ಲಂಘನೆಯಾದಲ್ಲಿ ಮುಲಾಜಿಲ್ಲದೇ ಸೂಕ್ತ ಕ್ರಮ ಕೈಗೊಳ್ಳುವದಾಗಿ ಎಚ್ಚರಿಸಿದರು.
ಬಸವೇಶ್ವರ ವೃತ್ತದದಲ್ಲಿ ಪರಿಶೀಲನೆ ಕಾರ್ಯಾಚರಣೆ ಕೈಗೊಂಡಿದ್ದರೆ ಬಸ್ ಇಲ್ದಾಣದ ಬಳಿ ಅದೆಷ್ಟೋ ವಾಹನಗಳು ತಮ್ಮ ಸವಾರಿಯ ದಿಕ್ಕನ್ನು ಬದಲಾಯಿಸಿದ್ದವು. ಈ ಪರಿಶೀಲನೆ ಕಾರ್ಯಾಚರಣೆ ಸಾರ್ವಜನಿಕರ ಮೆಚ್ಚುಗೆಗೆ ಪಾತ್ರವಾಯಿತು.
ಈ ವೇಳೆ ಎಎಸ್‌ಐಗಳಾದ ಬಿ.ಜೆ.ಕಾಸರ, ಕೆ.ಎಸ್.ಅಸ್ಕಿ, ಎಂ.ಪಿ.ಹೋಕಳೆ, ಡಿ.ಎಚ್.ಬಾಗೇವಾಡಿ, ಬಿ.ಡಿ.ಪವಾರ ಮತ್ತು ಸಿಬ್ಬಂದಿಗಳಾದ ಅರುಣ ಯಾಳವಾರ, ಮಲ್ಲನಗೌಡ ಬಿರಾದಾರ, ಸಿ.ಎಸ್.ಬಿರಾದಾರ, ಚಿದಾನಂದ ಸುರಗಿಹಳ್ಳಿ, ಶಿವರಾಜ ನಾಗರೆಡ್ಡಿ, ಎಂ.ಬಿ.ಮುಳವಾಡ ಇದ್ದರು.
Subscribe to Updates
Get the latest creative news from FooBar about art, design and business.
Related Posts
Add A Comment

