ವಿಜಯಪುರ: ಸಿಂದಗಿ ರಸ್ತೆಯಲ್ಲಿರುವ ಅಲ್ಲಾಪುರ ತಾಂಡಾದ ಶ್ರೀಧರ ಪೋಮ್‌ಸಿಂಗ ರಾಠೋಡ(೨೯) ಎಂಬ ಯುವಕ ಕಾಣೆಯಾಗಿದ್ದಾನೆ ಎಂದು ಗೋಲ್‌ಗುಮ್ಮಜ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ಈತ ಮಹಾರಾಷ್ಟ್ರದ ವಿಪ್ರೋ ಎನ್ನುವ ಕಂಪನಿಯಲ್ಲಿ ನೌಕರನಾಗಿದ್ದು, ಮೇ.೪ರಂದು ನಸುಕಿನ ಜಾವ ೫ ಗಂಟೆ ಸುಮಾರಿಗೆ ಪುಣೆಗೆ ಹೊಗಿ ತನಗೆ ಬರುವ ಬಾಕಿ ಸಂಬಳವನ್ನು ತೆಗೆದುಕೊಂಡು ಬರುತ್ತೇನೆಂದು ಹೋದವನು ಮನೆಗೆ ಬಾರದೇ ಹಾಗೂ ಪೋನ್ ಸಂಪರ್ಕಕ್ಕೆ ಸಿಗದೆ ಕಾಣೆಯಾಗಿದ್ದಾನೆಂದು ಕಾಣೆಯಾದ ಯುವಕನ ಅಣ್ಣ ಸತೀಶ್ ಪೋಮಸಿಂಗ್ ರಾಠೋಡ ದೂರು ದಾಖಲಿಸಿದ್ದಾರೆ.
ಕಾಣೆಯಾದ ಯುವಕ ಮೈಯಿಂದ ಸಾದಾರಣ ಮೈಕಟ್ಟು, ಕೋಲುಮುಖ, ನೆಟ್ಟನೆಯ ಮೂಗು, ಸಾದಗಪ್ಪು ಮೈ ಬಣ್ಣ, ತಲೆಯಲ್ಲಿ ಕರಿ-ಬಿಳಿ ಕೂದಲು, ಚಿಗುರು ಮೀಸೆ, ಕುರುಚಲ ಗಡ್ಡ ಬಿಟ್ಟಿದ್ದು, ಕನ್ನಡಕ ಧರಿಸಿದ್ದು, ಕನ್ನಡ, ಹಿಂದಿ, ಇಂಗ್ಲೀಷ್, ಲಂಬಾಣಿ ಭಾಷೆ ಮಾತನಾಡುತ್ತಾನೆ. ಬಲಗೈಯಲ್ಲಿ ಮಾಮ ಮತ್ತು ಡ್ಯಾಡ್ ಅಂತ ಇಂಗ್ಲಿಷ್‌ನಲ್ಲಿ ಟ್ಯಾಟೋ ಹಾಕಿಸಿದ್ದು ಇರುತ್ತದೆ.
ಸಾರ್ವಜನಿಕರು ಈ ವ್ಯಕ್ತಿಯ ಸುಳಿವು ಸಿಕ್ಕಲ್ಲಿ ಗೋಲಗುಮ್ಮಜ್ ದೂರವಾಣಿ ಠಾಣೆ ಸಂಖ್ಯೆ ೦೮೩೫೨-೨೫೦೨೧೪, ೦೮೩೫೨-೨೫೦೨೫೨, ೦೮೩೫೨-೨೫೩೧೦೦, ೦೮೩೫೨-೨೫೦೧೫೨, ೦೮೩೧-೨೪೦೫೨೦೧ ಸಂಖ್ಯೆಗೆ ಕರೆಮಾಡಿ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
Subscribe to Updates
Get the latest creative news from FooBar about art, design and business.
Related Posts
Add A Comment

