Subscribe to Updates
Get the latest creative news from FooBar about art, design and business.
Author: editor.udayarashmi@gmail.com
ವಿಜಯಪುರ: ಸಮಾಜವನ್ನು ಸಂಸ್ಕಾರಯುತವಾಗಿ ಮಾಡಲು ಶಿಕ್ಷಣದಿಂದ ಮಾತ್ರ ಸಾಧ್ಯ ಮಕ್ಕಳಿಗೆ ಎಳೆಯ ಹಂತದಲ್ಲೇ ದೊರೆಯುವ ಶಿಕ್ಷಣ ಗುಣಮಟ್ಟವಾಗಿದ್ದರೆ ನಾಳಿನ ವ್ಯಕ್ತಿತ್ವವನ್ನು ನಿರ್ಧರಿಸುತ್ತದೆ. ಆ ಹಂತದಲ್ಲಿ ಆರಂಭಿಕ ಶಿಕ್ಷಣವನ್ನು ಉತ್ತಮ ಶಿಕ್ಷಣವನ್ನು ನೀಡಿ ಭಾರತವನ್ನು ಭವಿಷ್ಯದಲ್ಲಿ ಭದ್ರ ಪಡಿಸಬೇಕಾಗಿದೆ ಎಂದು ಭಾರತ ಯುವ ವೇದಿಕೆ ಚಾರಿಟೇಬಲ್ ಫೌಂಡೇಶನ್ ಅಧ್ಯಕ್ಷ ಸುನಿಲ ಜೈನಾಪುರ ಅವರು ಹೇಳಿದರು.ನಗರದ ಆಲಕುಂಟೆ ಬಡಾವಣೆಯಲ್ಲಿ ಪೀನ್ಯಾಕಲ್ ಕರಿಯರ್ ಬಿಲ್ಡರ್ಸ್ ನಲ್ಲಿ ಜರುಗಿದ ಬೇಸಿಗೆ ಶಿಬಿರ ಮುಕ್ತಾಯ ಹಾಗೂ ನೂತನ ಪೂರ್ವ ಪ್ರಾಥಮಿಕ ಶಾಲೆ ಉದ್ಘಾಟನೆ ಮತ್ತು ಎಸ್ ಎಸ್ ಎಲ್ ಸಿ ಯಲ್ಲಿ ರ್‍ಯಾಂಕ್ ಪಡೆದ ವಿದ್ಯಾರ್ಥಿಗಳಿಗೆ ಸನ್ಮಾನ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದರು.ವಿದ್ಯಾರ್ಥಿಗಳಲ್ಲಿ ಎಳೆಯ ವಯಸ್ಸಿನಲ್ಲೇ ವೈಜ್ಞಾನಿಕ ಮನೋಭಾವ ಬೆಳೆಸಬೇಕು ಮತ್ತು ಕಲಿಕಾ ಹಾಗೂ ಗ್ರಹಿಕ ಸಾಮರ್ಥ್ಯ ಹೆಚ್ಚಿಸುವಲ್ಲಿ ಶಿಕ್ಷಕ – ಪಾಲಕರ ಜವಾಬ್ದಾರಿ ಗುರುತರವಾಗಿದೆ ಎಂದರು.ಸಾಹಿತಿ ಶಿವಶರಣಪ್ಪ ಶಿರೂರ್ ಮಾತನಾಡಿ, ಮಕ್ಕಳಿಗೆ ಶಿಕ್ಷಣದಲ್ಲಿ ದೇಶಪ್ರೇಮದ ಪಠ್ಯಗಳನ್ನು ಹೆಚ್ಚಿಸಬೇಕು ಸದೃಢ ಭಾರತದ ಸದ್ದುದ್ದೇಶದಿಂದ ವಿದ್ಯಾರ್ಥಿಗಳನ್ನು ಅಣೆಗೊಳಿಸಬೇಕು. ಭಾರತೀಯ ಸಂಸ್ಕೃತಿಯ ಆಚಾರ…
ಮುದ್ದೇಬಿಹಾಳ: ರವಿವಾರ ಸಂಜೆ ಪಟ್ಟಣದಲ್ಲಿ ಸದ್ದು ಮಾಡಿದ್ದ ಪೆಟ್ರೋಲ್ ಎರಚಿ ಬೆಂಕಿ ಹಚ್ಚಲಾಗಿದೆ ಎನ್ನುವ ಪ್ರಕರಣ ಭಾರಿ ತಿರುವು ಪಡೆದುಕೊಂಡಿದ್ದು ಇಲ್ಲಿನ ಪೊಲೀಸ್ ಠಾಣೆಯಲ್ಲಿ ಒಟ್ಟು ಎರಡು ಎಫ್‌ಆಯ್‌ಆರ್‌ಗಳು ದಾಖಲಾಗಿವೆ.ಪ್ರಕರಣ ಹಿಂದೆ ಪ್ರೇಮ ಪಯಣ ಇರೋದಾಗಿ ಗಾಯಾಳುವಿನ ತಂದೆ ರಾಮನಗೌಡ ಸ್ಪಷ್ಟಪಡಿದ್ದಾರೆ. ಈ ಕುರಿತು ಮಾಧ್ಯಮದವರಿಗೆ ಚಿತ್ರೀಕರಿಸಿದ ವಿಡಿಯೋ ನೀಡಿರುವ ಅವರು, ನನ್ನ ಮಗ ಮತ್ತು ಮದರಿ ಕುಟುಂಬದ ಐಶ್ವರ್ಯ ಎಂಬ ಹುಡುಗಿ ಇಬ್ಬರೂ ಕಳೆದ ನಾಲ್ಕು ವರ್ಷಗಳಿಂದ ಪ್ರೀತಿಸುತ್ತಿದ್ದರು. ಕಳೆದ ವರ್ಷ ನಾನೇ ಅವರ ತಂದೆಗೆ ಹೇಳಿ ನಿಮ್ಮ ಮಗಳಿಗೆ ಬುದ್ದಿವಾದ ಹೇಳಿ ಎಂದು ಹೇಳಿದ್ದೆ. ಆ ಹುಡುಗಿ ಬಿಡದೇ ಬೇರೆಯವರ ಕಡೆಯಿಂದ ತಮ್ಮ ಮನೆಗೆ ನನ್ನ ಮಗನನ್ನು ಕರೆಸುತ್ತಿದ್ದಳು. ಘಟನೆಯ ದಿನವೂ ಮನೆಯವರೆಲ್ಲರೂ ಹೊಂಚು ಹಾಕಿ ಮದುವೆ ಮಾಡಿಸುವದಾಗಿ ಹೇಳಿ ಮನೆಗೆ ಒಬ್ಬನನ್ನೇ ಕರೆಯಿಸಿ ರಾಡ್‌ನಿಂದ ಹಲ್ಲೆ ಮಾಡಿ, ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ್ದಾರೆ ಎಂದು ಆರೋಪಿಸಿದ್ದಾರೆ. ಈ ಕುರಿತು ಮುತ್ತಣ್ಣ ಮದರಿ, ಸೀಮಾ ಮದರಿ, ಅಪ್ಪು ಮದರಿ,…
ವಿಜಯಪುರ :ಶಿವಮೊಗ್ಗದ ವಾಲ್ಮೀಕಿ ಅಭಿವೃದ್ಧಿ ನಿಗಮದ ಅಧಿಕಾರಿ ಚಂದ್ರಶೇಖರ್ ಅವರ ಆತ್ಮಹತ್ಯೆಗೆ ಕಾರಣರಾದ ಪರಿಶಿಷ್ಟ ವರ್ಗಗಳ ಕಲ್ಯಾಣ ಖಾತೆ ಸಚಿವ ನಾಗೇಂದ್ರ ಅವರನ್ನು ತಕ್ಷಣವೇ ವಜಾ ಮಾಡಿ, ಬಂಧಿಸಿ ತನಿಖೆ ನಡೆಸುವಂತೆ ಬಿಜೆಪಿಯ ವ್ಯಾಪಾರ ಮತ್ತು ವಾಣಿಜ್ಯ ಪ್ರಕೋಷ್ಠದ ರಾಜ್ಯ ಸಂಚಾಲಕ ವಿಜಯಕುಮಾರ ಕುಡಿಗನೂರ ಅವರು ಆಗ್ರಹಿಸಿದರು.ಆತ್ಮಹತ್ಯೆ ಮಾಡಿಕೊಂಡಿರುವ ಅಧಿಕಾರಿ ಚಂದ್ರಶೇಖರ್ ಬರೆದಿಟ್ಟ ಡೆತ್ ನೋಟ್ನಲ್ಲಿ, ಪರಿಶಿಷ್ಟ ಪಂಗಡದ ಬಡವರಿಗೆ ಸೇರಬೇಕಾದ ೧೮೭ ಕೋಟಿ ರೂ.ಗಳನ್ನು ಸಚಿವರ ಸೂಚನೆ ಮೇರೆಗೆ ನಕಲಿ ಖಾತೆಗಳಿಗೆ ವರ್ಗಾಯಿಸಿ ಅವ್ಯವಹಾರ ನಡೆಸಲಾಗಿದೆ ಎಂದು ನೇರ ಆರೋಪ ಮಾಡಿದ್ದಾರೆ. ನಿಗಮದ ಆಡಳಿತ ನಿರ್ದೇಶಕ ಹಾಗೂ ಅಧಿಕಾರಿಗಳು ನಕಲಿ ಖಾತೆಗಳನ್ನು ತೆರೆದು ಈ ಹಣವನ್ನು ವರ್ಗಾವಣೆ ಮಾಡಿಕೊಂಡಿದ್ದಾರೆ. ಹೀಗಾಗಿ ಈ ಎಲ್ಲರ ವಿರುದ್ಧ ತಕ್ಷಣವೇ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.ಕಾಂಗ್ರೆಸ್ ಸರಕಾರದ ಭ್ರಸ್ಟಾಚಾರಕ್ಕೆ ಇದಕ್ಕಿಂತ ದೊಡ್ಡ ಸಾಕ್ಷ್ಯ ಬೇರೆ ಅಗತ್ಯವಿಲ್ಲ. ಅಂದು ಬಿಜೆಪಿ ಸರಕಾರವಿದ್ದಾಗ ಸಂತೋಷ ಪಾಟೀಲ್ ಆತ್ಮಹತ್ಯೆ ಪ್ರಕರಣದಲ್ಲಿ ಆಗಿನ ವಿಪಕ್ಷ ನಾಯಕ, ಈಗಿನ ಮುಖ್ಯಮಂತ್ರಿ…
ಇಂಡಿ: ಕಳಪೆ ಗುಣಮಟ್ಟದ ಆಹಾರ ಪದಾರ್ಥಗಳನ್ನು ಪೋಷಕರಿಗೆ ನೀಡುತ್ತಿರುವ ಘಟನೆ ವಿಜಯಪುರ ಜಿಲ್ಲೆಯ ಇಂಡಿ ಪಟ್ಟಣದಲ್ಲಿ ಬೆಳಕಿಗೆ ಬಂದಿದೆ.ಶಿಶು ಅಭಿವೃದ್ಧಿ ಯೋಜನೆ ಇಂಡಿಯವರು ಮಕ್ಕಳ ಪೋಷಕರಿಗೆ ಕಳಪೆ ಗುಣಮಟ್ಟದ ಬೆಲ್ಲ, ಖಾರದ ಪುಡಿ, ದವಸ ಧಾನ್ಯಗಳು ನೀಡುತ್ತಿದ್ದಾರೆ ಎಂದು ಸ್ಥಳೀಯರು ಆರೋಪಿಸಿದ್ದಾರೆ. ಅಲ್ಲದೇ, ಪಾಕೇಟ್ ಮೇಲಿನ ದಿನಾಂಕ ಅಳಿಸಿಹಾಕಿ ಡೆಟ್ ಬಾರ್ ಆಗಿರುವ ಪದಾರ್ಥಗಳನ್ನು ನೀಡಿದ್ದಾರೆ ಎಂದು ಸ್ಥಳೀಯರು ಆರೋಪಿಸಿದ್ದು, ಅದಕ್ಕಾಗಿ ಸಂಬಂಧಪಟ್ಟ ಅಧಿಕಾರಿಗಳು ಸೂಕ್ತ ಕ್ರಮಕೈಗೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ.
ವಿಜಯಪುರ: ರಾಜಕೀಯ, ಶೈಕ್ಷಣಿಕ, ಸಾಮಾಜಿಕವಾಗಿ ಹಿಂದುಳಿದ ಉಪ್ಪಾರ ಸಮಾಜಕ್ಕೆ ರಾಜಕೀಯ ಪ್ರಾತಿನಿಧ್ಯ ನೀಡುವಂತೆ ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ ಹಿಂದುಳಿದ ವರ್ಗಗಳ ವಿಭಾಗ ರಾಜ್ಯ ಪ್ರಧಾನ ಕಾರ್ಯದರ್ಶಿ ಹಾಗೂ ಕರ್ನಾಟಕ ರಾಜ್ಯ ಉಪ್ಪಾರ ಸಂಘದ ಕಾರ್ಯದರ್ಶಿ ಮಹಾಲಿಂಗ ಉಪ್ಪಾರ ಒತ್ತಾಯಿಸಿದ್ದಾರೆ.ಉಪ್ಪಾರ ಸಮುದಾಯ ಏಕೈಕ ಶಾಸಕ ಸಿ.ಪುಟ್ಟರಂಗಶೆಟ್ಟಿ ಅವರಿಗೆ ಸಚಿವ ಸ್ಥಾನ ನೀಡಿಲ್ಲ.ಜತೆಗೆ ಮೇಲ್ಮನೆಯಲ್ಲಿ ಒಬ್ಬರು ಸದಸ್ಯರಿಲ್ಲ. ಆದ್ದರಿಂದ ಧ್ವನಿಯಿಲ್ಲದ ಸಮಾಜಕ್ಕೆ ರಾಜಕೀಯ ಶಕ್ತಿ ತುಂಬಲು ವಿಧಾನ ಪರಿಷತ್ ಸ್ಥಾನ ನೀಡುವಂತೆ ಕೊರಿದ್ದಾರೆ.
ಚಡಚಣ: ಸಮುದಾಯ ಆರೋಗ್ಯ ಕೇಂದ್ರ ಚಡಚಣ ಇವರ ಸಂಯುಕ್ತ ಆಶ್ರಯದಲ್ಲಿ ಚಡಚಣದ 15ನೇ ನಂಬರ ಅಂಗನವಾಡಿ ಕೇಂದ್ರದಲ್ಲಿ ಇಂದು ವಿಶ್ವ ಋತುಚಕ್ರ ನೈರ್ಮಲ್ಯ ದಿನ ಆಚರಣೆ ಮಾಡಲಾಯಿತು.ಆರೋಗ್ಯ ಆಪ್ತ ಸಮಾಲೋಚಕರಾದ ಶ್ರೀ ಪ್ರಶಾಂತ ಸಾಳುಂಕೆ ಮಾತನಾಡಿ, ಋತುಸ್ರಾವದಲ್ಲಿ ಸ್ವಚ್ಚತೆ ಜೊತೆ ಕಬ್ಬಿಣದ ಅಂಶದ ಆಹಾರ ಸೇವನೆ ಮಾಡಬೇಕು ಎಂದರು.ಈ ಸಂದರ್ಭದಲ್ಲಿ ಆರೋಗ್ಯ ಮಿತ್ರರಾದ ಸಂಜಿವ ರೋಗಿ ಹಾಗೂ ಅಂಗನವಾಡಿ ಮೇಲ್ವಿಚಾರಕರು ಶ್ರೀಮತಿ ನೂತುನಾ ಬಿರಾದಾರ ಹಾಗೂ ಶ್ರೀಮತಿ ಪವಟೆ ಮಾನಂದಾ. ಹಸಿನಾ ನದಾಫ ಹಾಗೂ ಆಶಾ ಕಾರ್ಯಕರ್ತೆಯರು ಇದ್ದರು.
ದೇವರಹಿಪ್ಪರಗಿ: ಕೊಂಡಗೂಳಿ ಗ್ರಾಮದ ಶ್ರೀಸದ್ಗುರು ಸಮರ್ಥ ಚಂದ್ರಶೇಖರ ಶಿವಯೋಗಿಗಳ ಹಾಗೂ ಶ್ರೀಶಾಂತಾನಂದ ಸ್ವಾಮಿಗಳ ಪುಣ್ಯಸ್ಮರಣೋತ್ಸವ ಅಂಗವಾಗಿ ರಥೋತ್ಸವ ವಿಜೃಂಭಣೆಯಿಂದ ಜರುಗಿತು.ತಾಲ್ಲೂಕಿನ ಕೊಂಡಗೂಳಿ ಗ್ರಾಮದ ಸಿದ್ಧಾರೂಢಮಠದ ಶಾಂತಾಶ್ರಮದ ಆವರಣದಲ್ಲಿ ಭಾನುವಾರ ಶಿವಯೋಗಿಗಳು ಹಾಗೂ ಸ್ವಾಮೀಜಿಯವರ ಪುಣ್ಯಸ್ಮರಣೋತ್ಸವದ ಅಂಗವಾಗಿ ವಿವಿಧ ಧಾರ್ಮಿಕ ಕಾರ್ಯಗಳು ದಿನಪೂರ್ತಿ ಜರುಗಿದವು.ಬೆಳಿಗ್ಗೆ ೧೦ ಗಂಟೆಗೆ ಆರಂಭಗೊಂಡ ಪಲ್ಲಕ್ಕಿಉತ್ಸವ ಗ್ರಾಮದ ವಿವಿಧ ಬೀದಿಗಳಲ್ಲಿ ಸಂಚರಿಸಿ ಮಧ್ಯಾನ ಆಶ್ರಮ ತಲುಪಿತು. ನಂತರ ಪೂಜ್ಯರ ಆಶ್ವಾರೂಢ ರಥ ಮೆರವಣಿಗೆ ಜರುಗಿತು. ಈ ಸಂದರ್ಭದಲ್ಲಿ ಕುಂಭ, ಕಳಶ ಹೊತ್ತ ಮಹಿಳೆಯರು ತಮ್ಮ ಭಕ್ತಿ ಭಾವ ಮೆರೆದರು. ಗೊಂಬೆಕುಣಿತ, ಡೊಳ್ಳು ಕುಣಿತ ಸಹಿತ ವಿವಿಧ ವಾಧ್ಯವೃಂದಗಳು ಜನರ ಗಮನ ಸೆಳೆದವು. ಸಾಯಂಕಾಲ ಶಿವಯೋಗಿಗಳ ಜನ್ಮಸ್ಥಳ ಗೋಟಖಂಡಕಿ ಗ್ರಾಮದಿಂದ ಕಳಶ ಆಗಮನ ಆಗುವುದರ ಮೂಲಕ ರಥೋತ್ಸವ ಆರಂಭಗೊಂಡಿತು. ತಳಿರು ತೋರಣ, ಬಾವುಟಗಳಿಂದ ಸಿಂಗಾರಗೊಂಡ ರಥವನ್ನು ಅಧಿಕವಾಗಿ ಮಹಿಳೆಯರೇ ಎಳೆದು ತಮ್ಮ ಭಕ್ತಿ ಸಮರ್ಪಿಸಿದರು.ರಥೋತ್ಸವ ಸೇರಿದಂತೆ ವಿವಿಧ ಧಾರ್ಮಿಕ ಕಾರ್ಯಕ್ರಮದ ಅಂಗವಾಗಿ ೧೦ ದಿನಗಳ ಕಾಲ ಚಿಕ್ಕರೂಗಿಯ ಈರಣ್ಣಶಾಸ್ತ್ರಿ ಅವರಿಂದ…
ಮುದ್ದೇಬಿಹಾಳ: ಪಟ್ಟಣದ ವಾರ್ಡ ನಂ ೧೫ ರ ನಿವಾಸಿಗಳು ಕುಡಿಯುವ ನೀರು ಸೇರಿದಂತೆ ಸಾಕಷ್ಟು ಸಮಸ್ಯೆಗಳನ್ನು ಎದುರಿಸುತ್ತಿದ್ದೇವೆ. ಇಲ್ಲಿನ ಸಮಸ್ಯೆಗಳ ಕುರಿತು ವಾರ್ಡ ನ ಸದಸ್ಯರ ಪತಿಗೆ ಸಾಕಷ್ಟು ಬಾರಿ ಕರೆ ಮಾಡಿದರೂ ನಮ್ಮ ಕರೆ ಸ್ವೀಕರಿಸದಿದ್ದಾಗ ನಾವು ಅನಿವಾರ್ಯವಾಗಿ ಪುರಸಭೆಗೆ ಖಾಲಿ ಕೊಡಗಳನ್ನು ಹಿಡಿದು ಹೋಗಿದ್ದೆವು. ಆದರೆ ನಾವು ಈ ವಿಷಯದಲ್ಲಿ ರಾಜಕೀಯ ಮಾಡುತ್ತಿದ್ದೇವೆ, ಈ ವಾರ್ಡ ನ ಸದಸ್ಯರೇ ಅಲ್ಲ ಎಂದು ಈ ವಾರ್ಡನ ಸದಸ್ಯೆ ಮತ್ತು ಮಾಜಿ ಪುರಸಭೆ ಅಧ್ಯಕ್ಷರು ಪತ್ರಿಕಾಗೋಷ್ಠಿ ನಡೆಸಿ ಹೇಳಿಕೆ ನೀಡಿದ್ದು ಖಂಡನೀಯ ಎಂದು ಕಳೆದ ಕೆಲ ದಿನಗಳ ಹಿಂದೆ ಪುರಸಭೆ ಎದುರು ಖಾಲಿ ಕೊಡಗಳನ್ನು ಹಿಡಿದು ದಿಢೀರ ಪ್ರತಿಭಟನೆ ನಡೆಸಿದ ನಿವಾಸಿಗಳು ಹೇಳಿದರು.ಪಟ್ಟಣದ ಕುಂಬಾರಗಲ್ಲಿರುವ ದ್ಯಾಮವ್ವ ದೇವಿ ದೇವಸ್ಥಾನದ ಎದುರು ಸೋಮುವಾರ ಸಂಜೆ ಯಾಸೀನ ಅತ್ತಾರ, ಸೊಹೇಲ್ ಚೌದರಿ, ಇಸ್ರಾಯಿಲ್ ಇಂಡಿಕಾರ, ಆಸೀಫ ನಿಡಗುಂದಿ, ಜಬ್ಬಾರ ಗೋಲಂದಾಜ ಸೇರಿದಂತೆ ಕೆಲ ನಿವಾಸಿಗಳು ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದರು.ನಾವು ೧೫ನೇ ವಾರ್ಡ ನ ಸದಸ್ಯರು.…
ವಿಜಯಪುರ: ಸರಕಾರಿ ಉಪಕರಣಗಾರ ಮತ್ತು ತರಬೇತಿ ಕೇಂದ್ರದಲ್ಲಿ ೨೦೨೪-೨೫ನೇ ಸಾಲಿನ ಡಿಪ್ಲೋಮಾ ಕೋರ್ಸ್ಗಳಿಗೆ ಪ್ರವೇಶಾತಿ ಅರ್ಜಿಗಳನ್ನು ಆಹ್ವಾನಿಸಲಾಗಿದೆ.ಎಸ್‌ಎಸ್‌ಎಲ್‌ಸಿ ವಿದ್ಯಾರ್ಹತೆ ಹೊಂದಿರುವ ಅಭ್ಯರ್ಥಿಗಳು ಡಿಪಲೋಮಾ ಇನ್ ಟೂಲ್& ಡೈ ಮೆಕ್ಯಾನಿಕ್ ಇಂಜಿನಿಯರಿಂಗ್, ಡಿಪ್ಲೋಮಾ ಮೆಕಟ್ರಾನಿಕ್ಸ್ ಇಂಜಿನಿಯರಿಂಗ್, ಡಿಪ್ಲೋಮಾ ಎಲೆಕ್ಟ್ರಾನಿಕ್ಸ್ ಆ್ಯಂಡ್ ಕಮ್ಯುನಿಕೇಶನ್ ಇಂಜಿನಿಯರಿಂಗ್ ಕೋರ್ಸುಗಳಿಗೆ ಪ್ರವೇಶಾತಿ ಪಡೆಯಬಹುದಾಗಿದೆ. ಆಸಕ್ತ ಅರ್ಹವಿದ್ಯಾರ್ಥಿಗಳು ಪ್ರವೇಶಾತಿಯ ಅರ್ಜಿಗಾಗಿ ಕೆಇಎ ವೆಬ್‌ಸೈಟ್ ನಲ್ಲಿರುವ ಅರ್ಜಿಯನ್ನು ಭರ್ತಿ ಮಾಡಿ ಜೂನ್ ೩ ರೊಳಗಾಗಿ ಸರಕಾರಿ ಉಪಕರಣಾಗಾರ ಮತ್ತು ತರಬೇತಿ ಕೇಂದ್ರ ಕೂಡಲಸಂಗಮಕ್ಕೆ ಭೇಟಿ ನೀಡಿ ಅರ್ಜಿಯನ್ನು ಭರ್ತಿಮಾಡಿ ಸಂಬಂಧಿಸಿದ ಪ್ರಮಾಣಪತ್ರಗಳೊಂದಿಗೆ ಪ್ರವೇಶ ಪಡೆಯಬಹುದು.ಹೆಚ್ಚಿನ ಮಾಹಿತಿಗಾಗಿ ಸರಕಾರಿ ಉಪಕರಣಗಾರ ಮತ್ತು ತರಬೇತಿ ಕೇಂದ್ರ ಕಾರ್ಯಲಯ, ಮತ್ತು ದೂರವಾಣಿ ಸಂಖ್ಯೆ: ೯೯೦೨೫೫೬೧೧೦, ೭೪೧೧೮೧೧೯೧೬ಕ್ಕೆ ಸಂಪರ್ಕಿಸಬಹುದು ಎಂದು ಸಂಸ್ಥೆಯ ಪ್ರಾಶುಪಾಲರಾದ ಸುರೇಶ ರಾಥೋಡ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ವಿಜಯಪುರ: ಕರ್ನಾಟಕ ರಾಜ್ಯ ವಕ್ಫ್ ಮಂಡಳಿಯಲ್ಲಿ ನೋಂದಣಿಯಾದ ವಿಜಯಪುರ ಜಿಲ್ಲೆಯ ಎಲ್ಲಾ ವಕ್ಫ್ ಸಂಸ್ಥೆಗಳು ಕರ್ನಾಟಕ ರಾಜು ಉಚ್ಛ ನ್ಯಾಯಾಲಯವು ೨೦೨೪ ಎ.೨೩ ರಂದು ನೀಡಿರುವ ಆದೇಶದಂತೆ ರಾಜ್ಯ ವಕ್ಫ್ ಮಂಡಳಿಯ ಮಾದರಿ ನಿಯಮಾವಲಿ ನಮೂನೆ ನಂ-೪೨(ಬೈಲಾ)ನ್ನು ಅಂಗೀಕರಿಸಿಕೊಳ್ಳುವುದು ಕಡ್ಡಾಯವಾಗಿದೆ. ಈವರೆಗೂ ಮಾದರಿ ನಿಯಮಾವಳಿಯನ್ನು ಪಾಲಿಸದ ವಕ್ಫ್ ಸಂಸ್ಥೆಗಳು ಮಾದರಿ ನಿಯಮಾವಳಿಯ ನಮೂನೆ ನಂ.೪೨ನ್ನು ಸಂಬಂಧಪಟ್ಟ ದಾಖಲೆಗಳೊಂದಿಗೆ ವಿಜಯಪುರದ ವಕ್ಫ್ ಕಚೇರಿಯ ಮೂಲಕ ರಾಜ್ಯ ವಕ್ಫ್ ಮಂಡಳಿಯ ಅಂಗೀಕಾರಕ್ಕಾಗಿ ಅತೀ ಶೀಘ್ರ ಸಲ್ಲಿಸಬೇಕು ಎಂದು ವಿಜಯಪುರದ ಜಿಲ್ಲಾ ವಕ್ಫ್ ಅಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
