ಮುದ್ದೇಬಿಹಾಳ: ರವಿವಾರ ಸಂಜೆ ಪಟ್ಟಣದಲ್ಲಿ ಸದ್ದು ಮಾಡಿದ್ದ ಪೆಟ್ರೋಲ್ ಎರಚಿ ಬೆಂಕಿ ಹಚ್ಚಲಾಗಿದೆ ಎನ್ನುವ ಪ್ರಕರಣ ಭಾರಿ ತಿರುವು ಪಡೆದುಕೊಂಡಿದ್ದು ಇಲ್ಲಿನ ಪೊಲೀಸ್ ಠಾಣೆಯಲ್ಲಿ ಒಟ್ಟು ಎರಡು ಎಫ್‌ಆಯ್‌ಆರ್‌ಗಳು ದಾಖಲಾಗಿವೆ.
ಪ್ರಕರಣ ಹಿಂದೆ ಪ್ರೇಮ ಪಯಣ ಇರೋದಾಗಿ ಗಾಯಾಳುವಿನ ತಂದೆ ರಾಮನಗೌಡ ಸ್ಪಷ್ಟಪಡಿದ್ದಾರೆ. ಈ ಕುರಿತು ಮಾಧ್ಯಮದವರಿಗೆ ಚಿತ್ರೀಕರಿಸಿದ ವಿಡಿಯೋ ನೀಡಿರುವ ಅವರು, ನನ್ನ ಮಗ ಮತ್ತು ಮದರಿ ಕುಟುಂಬದ ಐಶ್ವರ್ಯ ಎಂಬ ಹುಡುಗಿ ಇಬ್ಬರೂ ಕಳೆದ ನಾಲ್ಕು ವರ್ಷಗಳಿಂದ ಪ್ರೀತಿಸುತ್ತಿದ್ದರು. ಕಳೆದ ವರ್ಷ ನಾನೇ ಅವರ ತಂದೆಗೆ ಹೇಳಿ ನಿಮ್ಮ ಮಗಳಿಗೆ ಬುದ್ದಿವಾದ ಹೇಳಿ ಎಂದು ಹೇಳಿದ್ದೆ. ಆ ಹುಡುಗಿ ಬಿಡದೇ ಬೇರೆಯವರ ಕಡೆಯಿಂದ ತಮ್ಮ ಮನೆಗೆ ನನ್ನ ಮಗನನ್ನು ಕರೆಸುತ್ತಿದ್ದಳು. ಘಟನೆಯ ದಿನವೂ ಮನೆಯವರೆಲ್ಲರೂ ಹೊಂಚು ಹಾಕಿ ಮದುವೆ ಮಾಡಿಸುವದಾಗಿ ಹೇಳಿ ಮನೆಗೆ ಒಬ್ಬನನ್ನೇ ಕರೆಯಿಸಿ ರಾಡ್‌ನಿಂದ ಹಲ್ಲೆ ಮಾಡಿ, ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ್ದಾರೆ ಎಂದು ಆರೋಪಿಸಿದ್ದಾರೆ. ಈ ಕುರಿತು ಮುತ್ತಣ್ಣ ಮದರಿ, ಸೀಮಾ ಮದರಿ, ಅಪ್ಪು ಮದರಿ, ನೀಲಕಂಠ ಹರನಾಳ, ಐಶ್ವರ್ಯಾ ಮದರಿ, ಕಿರಣ ಮದರಿ ಹೀಗೆ ೬ ಜನರ ಮೇಲೆ ನೀಡಿದ ದೂರಿನನ್ವಯ ಪ್ರಕರಣ ದಾಖಲಾಗಿದೆ.
ಇನ್ನೂ ಹುಡುಗಿಯ ತಂದೆ ಅಪ್ಪು ಮಾಧ್ಯಮಕ್ಕೆ ಮಾಹಿತಿ ನೀಡಿ ಕಳೆದ ಕೆಲವು ವರ್ಷಗಳಿಂದ ನನ್ನ ಮಗಳ ಹಿಂದೆ ರಾಹುಲ ಎನ್ನುವ ಹುಡುಗ ಬಿದ್ದಿದ್ದು ಪ್ರೇಮಿಸುವಂತೆ ಒತ್ತಾಯಿಸುತ್ತಿದ್ದ. ಆಕೆ ಪ್ರೆಮಕ್ಕೆ ಒಪ್ಪದಿದ್ದಾಗ ಆಕೆಯನ್ನು ಕೊಲೆ ಮಾಡುವದಾಗಿ ಬೆದರಿಕೆ ಹಾಕಿದ್ದ. ಕಳೆದ ಕೆಲ ದಿನಗಳ ಹಿಂದೆ ನಮ್ಮ ಕಲ್ಯಾಣ ಮಂಟಪಕ್ಕೆ ಚಾಕು ಮತ್ತು ಖಾರದ ಪುಡಿ ತಂದಿದ್ದ. ಅವರ ತಂದೆಯವರಿಗೆ ಈ ವಿಷಯ ತಿಳಿಸಿ ಸರಿಪಡಿಸುವಂತೆ ಕಣ್ಣೀರು ತೆಗೆದು ಹೇಳಿದ್ದೆ. ಆದರೂ ಬಿಟ್ಟಿಲ್ಲ. ಹೆಣ್ಣು ಮಕ್ಕಳನ್ನು ಹೆತ್ತವರು ಬದುಕುವದೇ ಕಷ್ಟಕರವಾಗಿದೆ ಎಂದು ವಿವರಿಸಿದರೆ ಐಶ್ವರ್ಯಳ ತಾಯಿ ರೇಖಾ ಕಳೆದ ಕೆಲವು ವರ್ಷಗಳಿಂದ ನನ್ನ ಮಗಳಿಗೆ ನನ್ನನ್ನು ಮದುವೆಯಾಗು ಇಲ್ಲದಿದ್ದರೆ ಪೆಟ್ರೋಲ್ ಸುರಿದು ಸುಡುತ್ತೇನೆ ಎಂದು ರಾಹುಲ ಬೆದರಿಕೆ ಹಾಕುತ್ತಿದ್ದ. ಘಟನೆಯ ದಿನ ಪೆಟ್ರೋಲ್ ತಂದು ನನ್ನ ಮಗಳಿಗೆ ಉಗ್ಗುವಾಗ ಈ ಘಟನೆ ಸಂಭವಿಸಿದ್ದು ಮುಂದೆಯೂ ನನ್ನ ಮಗಳನ್ನು ಬಿಡುವದಿಲ್ಲ ಸಾಯಿಸುತ್ತೇನೆ ಎಂದು ಓಡಿ ಹೋಗಿದ್ದಾನೆ ಎಂದು ನೀಡಿದ ದೂರಿನ ಅನ್ವಯ ರಾಹುಲ ಬಿರಾದಾರ, ರಾಮನಗೌಡ ಬಿರಾದಾರ ಮತ್ತು ರಾಹುಲ್ ತಾಯಿಯ ಮೇಲೆ ಪ್ರಕರಣ ದಾಖಲಾಗಿದೆ.
Subscribe to Updates
Get the latest creative news from FooBar about art, design and business.
Related Posts
Add A Comment
