ಮುದ್ದೇಬಿಹಾಳ: ಪಟ್ಟಣದ ವಾರ್ಡ ನಂ ೧೫ ರ ನಿವಾಸಿಗಳು ಕುಡಿಯುವ ನೀರು ಸೇರಿದಂತೆ ಸಾಕಷ್ಟು ಸಮಸ್ಯೆಗಳನ್ನು ಎದುರಿಸುತ್ತಿದ್ದೇವೆ. ಇಲ್ಲಿನ ಸಮಸ್ಯೆಗಳ ಕುರಿತು ವಾರ್ಡ ನ ಸದಸ್ಯರ ಪತಿಗೆ ಸಾಕಷ್ಟು ಬಾರಿ ಕರೆ ಮಾಡಿದರೂ ನಮ್ಮ ಕರೆ ಸ್ವೀಕರಿಸದಿದ್ದಾಗ ನಾವು ಅನಿವಾರ್ಯವಾಗಿ ಪುರಸಭೆಗೆ ಖಾಲಿ ಕೊಡಗಳನ್ನು ಹಿಡಿದು ಹೋಗಿದ್ದೆವು. ಆದರೆ ನಾವು ಈ ವಿಷಯದಲ್ಲಿ ರಾಜಕೀಯ ಮಾಡುತ್ತಿದ್ದೇವೆ, ಈ ವಾರ್ಡ ನ ಸದಸ್ಯರೇ ಅಲ್ಲ ಎಂದು ಈ ವಾರ್ಡನ ಸದಸ್ಯೆ ಮತ್ತು ಮಾಜಿ ಪುರಸಭೆ ಅಧ್ಯಕ್ಷರು ಪತ್ರಿಕಾಗೋಷ್ಠಿ ನಡೆಸಿ ಹೇಳಿಕೆ ನೀಡಿದ್ದು ಖಂಡನೀಯ ಎಂದು ಕಳೆದ ಕೆಲ ದಿನಗಳ ಹಿಂದೆ ಪುರಸಭೆ ಎದುರು ಖಾಲಿ ಕೊಡಗಳನ್ನು ಹಿಡಿದು ದಿಢೀರ ಪ್ರತಿಭಟನೆ ನಡೆಸಿದ ನಿವಾಸಿಗಳು ಹೇಳಿದರು.
ಪಟ್ಟಣದ ಕುಂಬಾರಗಲ್ಲಿರುವ ದ್ಯಾಮವ್ವ ದೇವಿ ದೇವಸ್ಥಾನದ ಎದುರು ಸೋಮುವಾರ ಸಂಜೆ ಯಾಸೀನ ಅತ್ತಾರ, ಸೊಹೇಲ್ ಚೌದರಿ, ಇಸ್ರಾಯಿಲ್ ಇಂಡಿಕಾರ, ಆಸೀಫ ನಿಡಗುಂದಿ, ಜಬ್ಬಾರ ಗೋಲಂದಾಜ ಸೇರಿದಂತೆ ಕೆಲ ನಿವಾಸಿಗಳು ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದರು.
ನಾವು ೧೫ನೇ ವಾರ್ಡ ನ ಸದಸ್ಯರು. ನಾವು ಈ ವಾರ್ಡನ ಸದಸ್ಯರೇ ಅಲ್ಲ ಎಂದು ಹೇಳುತ್ತಿರುವ ಇವರು ರಾಜಕೀಯ ಮಾಡುತ್ತಿದ್ದಾರೆ. ನಾವು ಕಳೆದ ಕೆಲವುಗಳ ಹಿಂದೆ ಇಲ್ಲಿನ ವಿದ್ಯುತ್ ಕಂಬ, ನೀರು, ಕೈಬೋರ್ ಕೆಟ್ಟಿರುವ ಸೇರಿದಂತೆ ಸಾಕಷ್ಟು ಸಮಸ್ಯೆಗಳನ್ನು ಹೇಳಿದರೂ ಯಾವುದೇ ಪ್ರಯೋಜನವಾಗಿಲ್ಲ. ಪುರಸಭೆಯ ವಾಟ್ಸ್ಆಪ್ ನ ಗ್ರೂಪ್ ಗೆ ಹಾಕಿದರೂ ಸಮಸ್ಯೆ ಬಗೆರೆದಿರಲಿಲ್ಲ ಹಾಗಾಗಿ ನಾವು ಹೋರಾಟದ ಹಾದಿ ಹಿಡಿಯಬೇಕಾಯಿತು ವಿನಃ ಇದರಲ್ಲಿ ರಾಜಕೀಯ ಮಾಡೋ ಮನಸ್ಥಿತಿಯವರು ನಾವಲ್ಲ ಎಂದು ಸಮಸ್ಯೆಗಳ ಮತ್ತು ಕರೆ ಮಾಡಿದ ವಿವರಗಳ ಫೋಟೋ ತೋರಿಸಿ ಹೇಳಿದರು.
ಶೌಚಾಲಯಗಳನ್ನು ನಿರ್ಮಿಸಿರುವದಾಗಿ ಮಾಧ್ಯಮದವರೆದುರು ಹೇಳಿಕೊಂಡಿರುವ ಇವರು ಸದಸ್ಯರಾಗಿ ಶೌಚಾಲಯ ನಿರ್ಮಿಸಿಲ್ಲ. ಹಿಂದಿನ ಅವಧಿಯಲ್ಲಿ ಇವರು ಸದಸ್ಯರೂ ಇರಲಿಲ್ಲ. ತಾವೊಬ್ಬ ಗುತ್ತಿಗೆದಾರರಾಗಿ ಈ ಶೌಚಾಲಯಗಳನ್ನು ನಿರ್ಮಿಸಿದ್ದಾರೆೆ. ಅಲ್ಲದೇ ರಸ್ತೆ ಮಾಡಿರುವದಾಗಿ ಹೇಳಿಕೊಂಡಿರುವ ಇವರು ಯಾವ ಅವಧಿಯಲ್ಲಿ ಈ ರಸ್ತೆಯಾಗಿದೆ, ಅನುದಾನ ಬಿಡುಗಡೆಯಾಗಿದ್ದು ಯಾವಾಗ? ಎಸ್ಟಿಮೇಟ್ ಏನಿದೆ? ರಸ್ತೆ ಮಾಡಿದ ಗುತ್ತಿಗೆದಾರರು ಯಾರು ಅನ್ನೋದನ್ನ ಬಹಿರಂಗ ಪಡಿಸಲಿ ಎಂದು ಸವಾಲು ಹಾಕಿದರು.
ನಾವು ಈ ವಾರ್ಡ ಸದಸ್ಯರು ಅಲ್ಲ ಎಂದರೆ ನಮ್ಮ ವಾರ್ಡ ಯಾವದೆಂದು ಮತ್ತು ಸಮಸ್ಯೆ ಇರುವ ವಾರ್ಡ ಯಾವದೆಂದು ನಮಗೆ ಪುರಸಭೆ ಮುಖ್ಯಾಧಿಕಾರಿಗಳು ಕೂಡಲೇ ಸ್ಪಷ್ಟಪಡಿಸಬೇಕು. ಇಲ್ಲದಿದ್ದರೆ ನಾವು ನಮ್ಮ ಎಲ್ಲ ದಾಖಲೆಗಳನ್ನು ತೆಗೆದುಕೊಂಡು ಪುರಸಭೆ ಎದುರು ಧರಣಿ ಕೂರುತ್ತೇವೆ ಎಂದು ಆಕ್ರೋಷ ಹೊರಹಾಕಿದರು. ಸದಸ್ಯರು ಇಲ್ಲ ಸಲ್ಲದ ಹೇಳಿಕೆ ನೀಡಿದ್ದು ಕೂಡಲೇ ನಿವಾಸಿಗಳಿಗೆ ಕ್ಷಮೆ ಕೇಳಬೇಕು ಎಂದು ಒತ್ತಾಯಿಸಿದರು.
ಈ ವೇಳೆ ಬೀಬಿಮರಿಯಂ ಚೌದರಿ, ಶಿವಗಂಗವ್ವ ಚಿನಿವಾರ, ರಾಮತಬಿ ಅತ್ತಾರ, ನೂರಜಾನ ಬಾಗವಾನ, ಹುಸೇನಮಾ ಬಾಗವಾನ, ನಾಸಿರ ಮುಲ್ಲಾ ಸೇರಿದಂತೆ ಮತ್ತೀತರರು ಇದ್ದರು.
Subscribe to Updates
Get the latest creative news from FooBar about art, design and business.
Related Posts
Add A Comment

