ವಿಜಯಪುರ: ಸಮಾಜವನ್ನು ಸಂಸ್ಕಾರಯುತವಾಗಿ ಮಾಡಲು ಶಿಕ್ಷಣದಿಂದ ಮಾತ್ರ ಸಾಧ್ಯ ಮಕ್ಕಳಿಗೆ ಎಳೆಯ ಹಂತದಲ್ಲೇ ದೊರೆಯುವ ಶಿಕ್ಷಣ ಗುಣಮಟ್ಟವಾಗಿದ್ದರೆ ನಾಳಿನ ವ್ಯಕ್ತಿತ್ವವನ್ನು ನಿರ್ಧರಿಸುತ್ತದೆ. ಆ ಹಂತದಲ್ಲಿ ಆರಂಭಿಕ ಶಿಕ್ಷಣವನ್ನು ಉತ್ತಮ ಶಿಕ್ಷಣವನ್ನು ನೀಡಿ ಭಾರತವನ್ನು ಭವಿಷ್ಯದಲ್ಲಿ ಭದ್ರ ಪಡಿಸಬೇಕಾಗಿದೆ ಎಂದು ಭಾರತ ಯುವ ವೇದಿಕೆ ಚಾರಿಟೇಬಲ್ ಫೌಂಡೇಶನ್ ಅಧ್ಯಕ್ಷ ಸುನಿಲ ಜೈನಾಪುರ ಅವರು ಹೇಳಿದರು.
ನಗರದ ಆಲಕುಂಟೆ ಬಡಾವಣೆಯಲ್ಲಿ ಪೀನ್ಯಾಕಲ್ ಕರಿಯರ್ ಬಿಲ್ಡರ್ಸ್ ನಲ್ಲಿ ಜರುಗಿದ ಬೇಸಿಗೆ ಶಿಬಿರ ಮುಕ್ತಾಯ ಹಾಗೂ ನೂತನ ಪೂರ್ವ ಪ್ರಾಥಮಿಕ ಶಾಲೆ ಉದ್ಘಾಟನೆ ಮತ್ತು ಎಸ್ ಎಸ್ ಎಲ್ ಸಿ ಯಲ್ಲಿ ರ್‍ಯಾಂಕ್ ಪಡೆದ ವಿದ್ಯಾರ್ಥಿಗಳಿಗೆ ಸನ್ಮಾನ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದರು.
ವಿದ್ಯಾರ್ಥಿಗಳಲ್ಲಿ ಎಳೆಯ ವಯಸ್ಸಿನಲ್ಲೇ ವೈಜ್ಞಾನಿಕ ಮನೋಭಾವ ಬೆಳೆಸಬೇಕು ಮತ್ತು ಕಲಿಕಾ ಹಾಗೂ ಗ್ರಹಿಕ ಸಾಮರ್ಥ್ಯ ಹೆಚ್ಚಿಸುವಲ್ಲಿ ಶಿಕ್ಷಕ – ಪಾಲಕರ ಜವಾಬ್ದಾರಿ ಗುರುತರವಾಗಿದೆ ಎಂದರು.
ಸಾಹಿತಿ ಶಿವಶರಣಪ್ಪ ಶಿರೂರ್ ಮಾತನಾಡಿ, ಮಕ್ಕಳಿಗೆ ಶಿಕ್ಷಣದಲ್ಲಿ ದೇಶಪ್ರೇಮದ ಪಠ್ಯಗಳನ್ನು ಹೆಚ್ಚಿಸಬೇಕು ಸದೃಢ ಭಾರತದ ಸದ್ದುದ್ದೇಶದಿಂದ ವಿದ್ಯಾರ್ಥಿಗಳನ್ನು ಅಣೆಗೊಳಿಸಬೇಕು. ಭಾರತೀಯ ಸಂಸ್ಕೃತಿಯ ಆಚಾರ ವಿಚಾರಗಳನ್ನು ಅಳವಡಿಸಿಕೊಳ್ಳುವ ಮೂಲಕ ಅತ್ಯುತ್ತಮ ನಾಗರಿಕರಾಗಿ ರೂಪಿಸಬೇಕು ಎಂದರು.
ಪಠ್ಯ ವಿಷಯದೊಂದಿಗೆ ಜೀವನ ಶಿಕ್ಷಣ ನೀಡುವ ಅನಿವಾರ್ಯತೆ ಇದೆ. ಮಕ್ಕಳು ಸರ್ವೋಮುಖ ಅಭಿವೃದ್ಧಿ ಹೊಂದಬೇಕು ಮಗುವಿನ ಶಾರೀರಿಕ ಬೌದ್ಧಿಕ ಭಾವಾತ್ಮಕ ಮತ್ತು ಸಮಾಜಿ ಕ ನಡುವಳಿಕೆಗಳನ್ನು ಕಲಿಸುವ ಮತ್ತು ತಿದ್ದುವ ಜವಾಬ್ದಾರಿ ಶಿಕ್ಷಕ ಮತ್ತು ಪಾಲಕರ ಮೇಲಿದೆ ಎಂದು ಹೇಳಿದರು.
ಡಿಸಿಸಿ ಬ್ಯಾಂಕಿನ ರಾಜು ಅವರು ಮಾತನಾಡಿ, ನಿರಂತರ ಓದು ವಿದ್ಯಾರ್ಥಿಗಳಿಗೆ ವಿಷಯದ ಮೇಲೆ ಪ್ರಭುತ್ವ ಸಾಧಿಸಲು ಸಾಧ್ಯವಾಗುತ್ತದೆ ಉತ್ತಮ ಆರೋಗ್ಯ ಸಂಪಾದಿಸಲು ಪೌಷ್ಟಿಕ ಆಹಾರ ನಿಮಿತ ವ್ಯಾಯಾಮ ಮತ್ತು ಉತ್ತಮ ಅಭಿವೃದ್ಧಿಗಳನ್ನು ಬೆಳೆಸಿಕೊಳ್ಳಬೇಕು ಎಂದರು.
ಆರ್ ಎಸ್ ಎಸ್ ಪ್ರಮುಖ ಸಿದ್ದು ಕಲರಗಿ ಅವರು ವಿದ್ಯಾರ್ಥಿಗಳು ಋಣಾತ್ಮಕ ಆಲೋಚನೆಗಳನ್ನು ಬದಿಗಿರಿಸಿ ಶ್ರದ್ಧೆ ಮತ್ತು ಪ್ರಮಾಣ ಕತೆಯನ್ನು ರೂಡಿಸಿಕೊಂಡಲ್ಲಿ ಉತ್ತಮ ವ್ಯಕ್ತಿತ್ವ ನೂರುಪಿಸಿಕೊಳ್ಳಬಹುದು. ಸಕರಾತ್ಮಕ ಯೋಚನೆಗಳಿಂದ ಕಲಿಕೆಯಲ್ಲಿ ಭಾವನಾತ್ಮಕ ತೊಡಕುಗಳನ್ನು ತೊಡೆದು ಓದಿನ ವೇಗವನ್ನು ಹೆಚ್ಚಿಸಬಹುದೆಂದರು.
ಕಾರ್ಯಕ್ರಮದಲ್ಲಿ ಸಿದ್ದು ಕಲರಗಿ, ಶಿವಕುಮಾರ್ ನೇಕಾರ್, ಕಾಂತೇಶ್ ದಾಶಾಲ್, ದೇವಿಂದ್ರ ರಾಥೋಡ್, ಮಹೇಶ್ ಕುಮಾರ್ ಪತ್ತಾರ್, ವಿಟ್ಟಲ್ ಅಲ್ಕುಂಟೆ, ಅಕ್ಷಯ್ ಹಿರೇಮಠ, ಬಾಪುರಾಯ್ ಮೆಡಗಾರ್, ಉಪನ್ಯಾಸಕಿ ಕುಮಾರಿ ಮಂಗಳ, ಶ್ರೀಮತಿ ಗೀತಾ, ಶ್ರೀಮತಿ ಬೋರಮ್ಮ, ಕುಮಾರಿ ಪ್ರೀತಿ ಬಸುರ್, ಪ್ರೀತಿ ಕನಸೆ, ಮುಂತಾದವರು ಉಪಸ್ಥಿತರಿದ್ದರು ಕಾರ್ಯಕ್ರಮವನ್ನು ನಿರೂಪಿಸಿದವರು ಕುಮಾರಿ ಪ್ರಜ್ಞಾ ಲೋನಿ, ಸ್ವಾಗತ ನವ್ಯ ಶ್ರೀ ಪತ್ತಾರ್, ವಂದನಾರ್ಪಣೆಯನ್ನು ವರುಣ್ ಬಡಚಿ ನೆರವೇರಿಸಿದರು.
Subscribe to Updates
Get the latest creative news from FooBar about art, design and business.
ವಿದ್ಯಾರ್ಥಿಗಳಲ್ಲಿ ಶಿಕ್ಷಣಕ್ಕಿಂತ ಸಂಸ್ಕಾರ ಮುಖ್ಯ :ಜೈನಾಪುರ
Related Posts
Add A Comment

