Author: editor.udayarashmi@gmail.com

ವಿಜಯಪುರ: ನಗರದಲ್ಲಿ ನಕಲಿ ಭೂ ದಾಖಲೆ ಸೃಷ್ಠಿಸಿ ಜನರನ್ನು ವಂಚಿಸುತ್ತಿರುವ ಭೂ-ಮಾಫಿಯಾವನ್ನು ಸಂಪೂರ್ಣವಾಗಿ ಮಟ್ಟ ಹಾಕಬೇಕೆಂದು ಮಾಜಿ ಸಚಿವ ಅಪ್ಪಾಸಾಹೇಬ(ಅಪ್ಪು) ಮ. ಪಟ್ಟಣಶೆಟ್ಟಿ ಆಗ್ರಹಿಸಿದ್ದಾರೆ.ಈ ಕುರಿತು ಮಂಗಳವಾರ ವಿಜಯಪುರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳನ್ನು ಬೇಟಿ ಮಾಡಿ ಮನವಿ ಮಾಡಿದ ಅವರು, ನಗರದಲ್ಲಿ ನಕಲಿ ಭೂ-ದಾಖಲೆ ಸೃಷ್ಟಿ ಮಾಡಿ ಜನರನ್ನು ದೊಡ್ಡ ಪ್ರಮಾಣದಲ್ಲಿ ವಂಚನೆ ಮಾಡುತ್ತಿರುವ ಅನೇಕ ಪ್ರಕರಣಗಳು ನಡೆಯುತ್ತಿವೆ. ಇದರಿಂದ ಬಡಜನರು ನಿತ್ಯ ಶೋಷಣೆಗೊಳಗಾಗುತ್ತಿದ್ದಾರೆ. ಜಮೀನು ಹಾಗೂ ನಿವೇಶನಗಳ ಖೊಟ್ಟಿ ದಾಖಲೆ ಸೃಷ್ಟಿ ಮಾಡಿ ಉಪನೋಂದಣಿ ಅಧಿಕಾರಿಗಳ ಕಚೇರಿಯಲ್ಲಿ ಖರೀದಿ ಹಾಗೂ ಮಾರಾಟ ಮಾಡುವ ಕಾನೂನು ಬಾಹಿರ ಕೃತ್ಯಗಳು ಅವ್ಯಾಹತವಾಗಿ ನಡೆದಿವೆ. ಜನರನ್ನು ವಂಚಿಸುವ ವ್ಯವಸ್ಥಿತ ಜಾಲವೇ ಜಿಲ್ಲೆಯಲ್ಲಿ ಹುಟ್ಟಿಕೊಂಡಿದೆ. ಈ ಜಾಲಕ್ಕೆ ಈಗಾಗಲೇ ನೂರಾರು ಜನ ಹಣ-ಆಸ್ತಿ ಕಳೆದುಕೊಂಡಿದ್ದಾರೆ. ಇಂತಹ ವಂಚಕರ ಜಾಲ ವಿಜಯಪುರ ಜಿಲ್ಲೆ ಹಾಗೂ ನಗರದಲ್ಲಿ ಹಲವಾರು ವರ್ಷಗಳಿಂದ ಕಾರ್ಯನಿರ್ವಹಿಸುತ್ತಿದೆ. ಸಾಕಷ್ಟು ಬಡ ಜನರು ಈಗಾಗಲೇ ಮೋಸ ಹೋಗಿದ್ದಾರೆ. ಕಷ್ಟಪಟ್ಟು ದುಡಿದು, ಸಾಲ-ಸೋಲ ಮಾಡಿ ನಿವೇಶನ, ಜಮೀನು…

Read More

ದೇವರಹಿಪ್ಪರಗಿ: ರೈತರ ಜಮೀನುಗಳಿಗೆ ಸಂಪರ್ಕ ಕಲ್ಪಿಸುವ ರಸ್ತೆ ಸಮಸ್ಯೆಗೆ ತ್ವರಿತವಾಗಿ ಸ್ಪಂದಿಸಿ ಪರಿಹಾರ ಒದಗಿಸುವ ಮೂಲಕ ತಹಶೀಲ್ದಾರರು ಉತ್ತಮ ಕಾರ್ಯ ಮಾಡಿದ್ದಾರೆ. ಅವರ ಸೇವೆ ಶ್ಲಾಘನೀಯ ಎಂದು ರೈತಸಂಘದ ಮಹಿಳಾ ಘಟಕದ ಜಿಲ್ಲಾಧ್ಯಕ್ಷೆ ರೇಣುಕಾ ಪಾಟೀಲ ಹೇಳಿದರು.ಪಟ್ಟಣದ ತಹಶೀಲ್ದಾರ ಕಾರ್ಯಾಲಯದಲ್ಲಿ ಮಂಗಳವಾರ ದೇವೂರ ಗ್ರಾಮದ ರಸ್ತೆ ಸಮಸ್ಯೆ ನಿವಾರಿಸಿ ಪರಿಹಾರ ದೊರಕಿಸಿದ ಕಾರಣ ತಹಶೀಲ್ದಾರ ಪ್ರಕಾಶ ಸಿಂದಗಿ ಅವರನ್ನು ಸನ್ಮಾನಿಸಿ ಮಾತನಾಡಿದರು. ಪ್ರತಿಯೊಂದು ಗ್ರಾಮದಲ್ಲಿ ರೈತರು ಜಮೀನುಗಳ ರಸ್ತೆ ವಿಷಯದಲ್ಲಿ ಸಮಸ್ಯೆ ಎದುರಿಸುತ್ತಿದ್ದು, ಕೆಲವರು ಹಲವು ವರ್ಷಗಳಿಂದ ಪೊಲೀಸ್ ಠಾಣೆ, ನ್ಯಾಯಾಲಯಗಳಿಗೆ ಅಲೆದಾಡುತ್ತಿದ್ದಾರೆ. ಅದಾಗ್ಯೂ ನ್ಯಾಯ ದೊರೆತಿಲ್ಲ. ಆದರೆ ನಮ್ಮ ತಾಲ್ಲೂಕಿನ ತಹಶೀಲ್ದಾರರು ದಿಟ್ಟ ಕ್ರಮ ಕೈಗೊಂಡು ರಸ್ತೆ ಸಮಸ್ಯೆಗೆ ಪರಿಹಾರ ನೀಡಿದ್ದಾರೆ. ಅವರಿಗೆ ಗ್ರಾಮಸ್ಥರ ಪರವಾಗಿ ಅಭಿನಂದನೆ ಎಂದರು.ರೈತಸಂಘದ ಗ್ರಾಮ ಘಟಕದ ಅಧ್ಯಕ್ಷ ಹಣಮಂತ್ರಾಯ ಪಾಟೀಲ, ಸೋಮು ಸಜ್ಜನ, ಶಿವಪುತ್ರಗೌಡ ಪಾಟೀಲ, ಶ್ರೀಮಂತ ರಾಠೋಡ, ಅಮೀನಪ್ಪಗೌಡ ಬಿರಾದಾರ, ಸುರೇಶ ಪವಾರ, ಸಾಹೇಬಗೌಡ ಬಿರಾದಾರ, ಮಂಜುನಾಥ ನಾಯಿಕ, ಮಡಿವಾಳಪ್ಪಗೌಡ ಬಿರಾದಾರ, ತುಕಾರಾಮ…

Read More

ದೇವರಹಿಪ್ಪರಗಿ ಕೃಷಿ ಕೇಂದ್ರ, ರಸಗೊಬ್ಬರ ಹಾಗೂ ಕೀಟನಾಶಕ ಮಾರಾಟ ಮಳಿಗೆಗಳಿಗೆ ಜಿಲ್ಲಾ ಜಂಟಿ ಕೃಷಿ ನಿರ್ದೇಶಕ ವಿಲಿಯಂ ರಾಜಶೇಖರ ಭೇಟಿ ದೇವರಹಿಪ್ಪರಗಿ: ಪಟ್ಟಣದ ಕೃಷಿ ಕೇಂದ್ರ ಸೇರಿದಂತೆ ವಿವಿಧ ರಸಗೊಬ್ಬರ ಹಾಗೂ ಕೀಟನಾಶಕ ಮಾರಾಟ ಮಳಿಗೆಗಳಿಗೆ ಜಿಲ್ಲಾ ಜಂಟಿ ಕೃಷಿ ನಿರ್ದೇಶಕ ವಿಲಿಯಂ ರಾಜಶೇಖರ ಹಾಗೂ ತಂಡ ಭೇಟಿ ನೀಡಿ ಪರಿಶೀಲನೆ ನಡೆಸಿತು.ಪಟ್ಟಣದ ರೈತ ಸಂಪರ್ಕ ಕೇಂದ್ರಕ್ಕೆ ಮಂಗಳವಾರ ಆಗಮಿಸಿದ ಜಿಲ್ಲಾ ಜಂಟಿ ಕೃಷಿ ನಿರ್ದೇಶಕರ ತಂಡ ಮುಂಗಾರು ಬಿತ್ತನೆಗೆ ಅಗತ್ಯವಾದ ಬೀಜ, ರಸಗೊಬ್ಬರಗಳ ಪರಿಶೀಲನೆ ಕೈಗೊಂಡರು. ನಂತರ ಪಟ್ಟಣದ ವಿವಿಧ ಮಾರಾಟ ಮಳಿಗೆಗಳಿಗೆ ಭೇಟಿ ನೀಡಿ, ಮಾರಾಟಗಾರರು ರೈತರಿಗೆ ಉತ್ತಮ ಸಲಹೆಯೊಂದಿಗೆ ಗುಣಮಟ್ಟದ ಕೃಷಿ ಪರಿಕರಗಳನ್ನು ಒದಗಿಸಬೇಕು ಹಾಗೂ ಕಡ್ಡಾಯವಾಗಿ ರಶೀದಿ ನೀಡಬೇಕು. ಈ ಸಂದರ್ಭದಲ್ಲಿ ಕೃತಕ ಅಭಾವ ಸೃಷ್ಟಿಸುವುದು, ದರಗಳಲ್ಲಿ ವ್ಯತ್ಯಾಸ ಮಾಡುವಂತ ಚಟುವಟಿಕೆಗಳು ಹಾಗೂ ಮುಖ್ಯವಾಗಿ ದೂರುಗಳು ಕಂಡು ಬಂದಲ್ಲಿ ಮಾರಾಟಗಾರರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಸಿದರು.ಜಿಲ್ಲಾ ಕೃಷಿ ಉಪನಿರ್ದೇಶಕ ಚಂದ್ರಕಾಂತ ಪವಾರ, ಜಾರಿದಳದ…

Read More

ಬಸವನಬಾಗೇವಾಡಿ: ಈ ವರ್ಷ ಮುಂಗಾರು ಮಳೆ ಉತ್ತಮ ನಿರೀಕ್ಷೆ ಮೂಡಿಸಿದೆ. ಮುಂಗಾರು ಬಿತ್ತನೆಗೆ ಬೇಕಾಗುವ ಎಲ್ಲ ಉತ್ಪನ್ನಗಳ ಬೆಲೆ ಹೆಚ್ಚಳವಾಗಿರುವ ಪರಿಣಾಮ ರೈತ ಬಾಂಧವರು ಮತ್ತೆ ಸಾಲಗಾರರ ಮೊರೆ ಹೋಗಬೇಕಾದ ಪರಿಸ್ಥಿತಿ ಬಂದಿದೆ. ಕಳೆದ ವರ್ಷ ಬರಗಾಲದಿಂದ ರೈತ ಬಾಂಧವರು ಮೊದಲೇ ಸಂಕಷ್ಟದಲ್ಲಿದ್ದಾರೆ. ಈ ವರ್ಷ ಬೀಜಗಳ ದರ ಶೇ. ೬೦ ರಷ್ಟು ಹೆಚ್ಚಿಸುವ ಮೂಲಕ ರಾಜ್ಯ ಸರ್ಕಾರ ರೈತ ಬಾಂಧವರ ಗಾಯದ ಮೇಲೆ ಬರ ಎಳೆದಂತೆ ಮಾಡಿದೆ. ಕೂಡಲೇ ರಾಜ್ಯ ಸರ್ಕಾರ ಬೀಜಗಳ ದರ ಕಡಿಮೆ ಮಾಡಬೇಕೆಂದು ಬಿಜೆಪಿ ಯುವ ಮೋರ್ಚಾ ಪ್ರಧಾನ ಕಾರ್ಯದರ್ಶಿ ರಾಹುಲ ಕಲಗೊಂಡ ಆಗ್ರಹಿಸಿದ್ದಾರೆ.

Read More

ಬಸವನಬಾಗೇವಾಡಿ: ಭಾರತೀಯ ಜನತಾ ಪಕ್ಷದ ಸಕ್ರಿಯ ಕಾರ್ಯಕರ್ತರಾಗಿ ಹಲವಾರು ವರ್ಷಗಳಿಂದ ಜಿಲ್ಲೆ ಸೇರಿದಂತೆ ರಾಜ್ಯದಲ್ಲಿ ಪಕ್ಷ ಸಂಘಟನೆಯಲ್ಲಿ ತೊಡಗಿರುವ ಹುಟ್ಟು ಹೋರಾಟಗಾರ, ರೈತ ಮುಖಂಡ, ಮಾಜಿ ಸಚಿವ ಎಸ್.ಕೆ.ಬೆಳ್ಳುಬ್ಬಿ ಅವರಿಗೆ ಪಕ್ಷದ ವರಿಷ್ಠರು ವಿಧಾನ ಪರಿಷತ್ ಚುನಾವಣೆಯಲ್ಲಿ ಟಿಕೆಟ್ ನೀಡಬೇಕೆಂದು ಬಿಜೆಪಿ ಅಲ್ಪಸಂಖ್ಯಾತ ಮೋರ್ಚಾ ಅಧ್ಯಕ್ಷ ಬಂದೇನವಾಜ ವಾಲೀಕಾರ ವರಿಷ್ಠರಲ್ಲಿ ಮನವಿ ಮಾಡಿಕೊಂಡಿದ್ದಾರೆ.ಈ ಕುರಿತು ಪತ್ರಿಕಾ ಪ್ರಕಟನೆ ನೀಡಿರುವ ಅವರು, ಎಸ್.ಕೆ.ಬೆಳ್ಳುಬ್ಬಿ ಅವರು ಕೊರ್ತಿ ಕೊಲ್ಹಾರ ಸೇತುವೆ ನಿರ್ಮಾಣವಾಗುವಲ್ಲಿ ನಿರಂತರವಾಗಿ ಹೋರಾಟ ಮಾಡಿದ್ದಾರೆ. ಅಲ್ಲದೇ ಜಿಲ್ಲೆಯ ನೀರಾವರಿ ಯೋಜನೆ ಜಾರಿಗೆಗಾಗಿ ಹೋರಾಟ ಮಾಡುವ ಮೂಲಕ ನೀರಾವರಿ ಯೋಜನೆ ಅನುಷ್ಠಾನವಾಗುವಂತೆ ಮಾಡುವಲ್ಲಿ ಪಾತ್ರ ವಹಿಸಿದ್ದಾರೆ. ಇವರು ತೋಟಗಾರಿಕೆ ಸಚಿವರಾಗಿದ್ದ ಸಂದರ್ಭದಲ್ಲಿ ಬಾಗಲಕೋಟೆಯಲ್ಲಿ ತೋಟಗಾರಿಕೆ ವಿವಿ ಸ್ಥಾಪನೆಯಾಗುವಲ್ಲಿ ಸಹಕಾರ ನೀಡಿದ್ದಾರೆ. ಈಚೆಗೆ ನಡೆದ ಲೋಕಸಭಾ ಚುನಾವಣೆಯಲ್ಲಿ ಜಿಲ್ಲೆ ಸೇರಿದಂತೆ ೧೪ ಲೋಕಸಭಾ ಅಭ್ಯರ್ಥಿಗಳ ಪರವಾಗಿ ಪ್ರಚಾರ ಕೈಗೊಂಡಿದ್ದಾರೆ. ಪಕ್ಷದ ಧೀಮಂತ ನಾಯಕರೆನಿಸಿಕೊಂಡಿರುವ ಇವರಿಗೆ ಪಕ್ಷದ ವರಿಷ್ಠರು ವಿಧಾನ ಪರಿಷತ್ ಚುನಾವಣೆಯಲ್ಲಿ ಟಿಕೆಟ್ ನೀಡುವ ಮೂಲಕ…

Read More

ಬಸವನಬಾಗೇವಾಡಿ: ತಾಲೂಕಿನ ಯಂಬತ್ನಾಳ ಗ್ರಾಮದ ಶಿಕ್ಷಕ, ರೈತ ಶಿವಾನಂದ ಮಂಗನಾವರ ಅವರು ಕೃಷಿಯಲ್ಲಿ ಅತ್ಯುತ್ತಮ ಸಾಧನೆ ಮಾಡಿರುವದನ್ನು ಗಮನಿಸಿ ಬೆಂಗಳೂರಿನ ಪರಿಪೂರ್ಣ ಪ್ರತಿಷ್ಠಾನ, ಕರ್ನಾಟಕ ನೇತಾಜಿ ಚಾರಿಟೇಬಲ್ ಟ್ರಸ್ಟ್, ಕನ್ನಡ ಮತ್ತು ಸಂಸ್ಕ್ರತಿ ಇಲಾಖೆಯ ಸಹಯೋಗದಲ್ಲಿ ಭಾನುವಾರ ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ೨೦೨೪ ನೇ ಸಾಲಿನ ನಾಲ್ವಡಿ ಕೃಷ್ಣರಾಜ ಒಡೆಯರ ಪ್ರಶಸ್ತಿಯನ್ನು ನಿವೃತ್ತ ಲೋಕಾಯುಕ್ತ ನ್ಯಾಯಮೂರ್ತಿ ಸಂತೋಷ ಹೆಗಡೆ ಪ್ರದಾನ ಮಾಡಿದರು. ಈ ಸಂದರ್ಭದಲ್ಲಿ ಪರಿಪೂರ್ಣ ಪ್ರತಿಷ್ಠಾನ ಪೌಂಡೇಶನ ಸಂಸ್ಥಾಪಕ ಅಧ್ಯಕ್ಷ ರವಿಕೋಟಿ ಸೂರ್ಯ, ಕರ್ನಾಟಕ ನೇತಾಜಿ ಚಾರಿಟೇಬಲ್ ಟ್ರಸ್ಟಿನ ಸಂಸ್ಥಾಪಕ ಅಧ್ಯಕ್ಷ ರವಿಕುಮಾರ ಇತರರು ಇದ್ದರು ಎಂದು ಪ್ರಕಟಣೆ ತಿಳಿಸಿದೆ.

Read More

ಬಸವನಬಾಗೇವಾಡಿ: ಪಟ್ಟಣದ ಮರಗಮ್ಮದೇವಿ ದೇವಸ್ಥಾನದ ಜಾತ್ರಾಮಹೋತ್ಸವ ಹಾಗೂ ಉಡಿ ತುಂಬುವ ಕಾರ್ಯಕ್ರಮ ಮಂಗಳವಾರ ಶ್ರದ್ಧಾ-ಭಕ್ತಿ, ಸಂಭ್ರಮದಿಂದ ಜರುಗಿತು.ಜಾತ್ರಾಮಹೋತ್ಸವದಂಗವಾಗಿ ಮರಗಮ್ಮದೇವಿಗೆ ಬೆಳಗ್ಗೆ ವಿಶೇಷ ಪೂಜೆ ಜರುಗಿತು. ಜನರು ಕುಟುಂಬ ಸಮೇತರಾಗಿ ಆಗಮಿಸಿ ದೇವಿ ದರ್ಶನ ಪಡೆದುಕೊಂಡು ಕಾಯಿ-ಕರ್ಪೂರ, ನೇವೈದ್ಯ ಅರ್ಪಿಸಿ ಧನ್ಯತಾಭಾವ ಅನುಭವಿಸಿದರು.ಜಾತ್ರಾಮಹೋತ್ಸವದಂಗವಾಗಿ ಬೆಳಗ್ಗೆ ದೇವಸ್ಥಾನದಿಂದ ಪಲ್ಲಕ್ಕಿ ಹಾಗೂ ದೇವಸ್ಥಾನದ ಕಳಸವು ಬಸವೇಶ್ವರ ದೇವಸ್ಥಾನದ ಬಸವ ತೀರ್ಥ ಬಾವಿಗೆ ವಾದ್ಯಮೇಳದೊಂದಿಗೆ ಗಂಗಾಸ್ಥಳಕ್ಕೆ ತೆರಳಿತು. ಗಂಗಾಸ್ಥಳ ಪೂಜೆ ನಂತರ ಪಲ್ಲಕ್ಕಿ ಉತ್ಸವ ಹಾಗೂ ಕಳಸವು ಅದ್ದೂರಿ ಮೆರವಣಿಗೆ ಮೂಲಕ ಪಟ್ಟಣದ ಪ್ರಮುಖ ಬೀದಿಗಳ ಮೂಲಕ ದೇವಸ್ಥಾನಕ್ಕೆ ಮರಳಿತು. ಮೆರವಣಿಗೆ ದೇವಸ್ಥಾನಕ್ಕೆ ಮರಳಿದ ನಂತರ ಕಳಸಾರೋಹಣ ನೆರವೇರಿಸಿ ಮರಗಮ್ಮದೇವಿಗೆ ಭಕ್ತರ ಸಮ್ಮುಖದಲ್ಲಿ ಉಡಿ ತುಂಬಿ ಉತ್ತಮ ಮಳೆ-ಬೆಳೆಗೆ, ಭಕ್ತರಿಗೆ ಸುಖ-ನೆಮ್ಮದಿ ನೀಡಲೆಂದು ಪ್ರಾರ್ಥನೆ ಸಲ್ಲಿಸಲಾಯಿತು. ಪಲ್ಲಕ್ಕಿ ಉತ್ಸವದ ಮೆರವಣಿಗೆಯಲ್ಲಿ ಸುತ್ತಟ್ಟಿಯ ಝಾಂಜಾ ಮೇಳ, ಬಸವನಬಾಗೇವಾಡಿಯ ಡೊಳ್ಳು ಮೇಳ, ಚಿಮ್ಮಲಗಿಯ ಕರಡಿ ಮಜಲು ಸೇರಿದಂತೆ ವಿವಿಧ ಜೋಗಮ್ಮರ ಕುಣಿತ ಮೆರಗು ತಂದಿತ್ತು. ಭಕ್ತರಿಗೆ ಪ್ರಸಾದ ವ್ಯವಸ್ಥೆ ಮಾಡಲಾಗಿತ್ತು.

Read More

ಇಂಡಿ‌: ಅಕ್ರಮವಾಗಿ ಅಕ್ಕಿ ಸಂಗ್ರಹಿಸಿದ ಅಡ್ಡೆಯ ಮೇಲೆ ಖಚಿತ ಮಾಹಿತಿ ಆಧರಿಸಿ ಆಹಾರ ನಿರೀಕ್ಷಕರ ಅಧಿಕಾರಿಗಳ ನೇತೃತ್ವದಲ್ಲಿ ಪೊಲೀಸರು ದಾಳಿಗೈದಿರುವ ಘಟನೆ ವಿಜಯಪುರ ಜಿಲ್ಲೆಯ ಇಂಡಿ ತಾಲ್ಲೂಕಿನ ಶಿರಶ್ಯಾಡ ಗ್ರಾಮದಲ್ಲಿ ನಡೆದಿದೆ.ಹಣಮಂತರಾಯಗೌಡ ಪಾಟೀಲ ಬಂಧಿತ ಆರೋಪಿ. ಇನ್ನು ಅಕ್ರಮವಾಗಿ ಶಿರಶ್ಯಾಡ ಗ್ರಾಮದಲ್ಲಿರುವ ಜಮೀನಿನಲ್ಲಿ ಅಕ್ರಮವಾಗಿ ಶೆಡ್‌ನಲ್ಲಿ ಪಡಿತರ ಅಕ್ಕಿಯಾದ ಅನ್ನಭಾಗ್ಯ ಅಕ್ಕಿ ಸಂಗ್ರಹಿಸಿದರು. ಅದಕ್ಕಾಗಿ ಪೊಲೀಸರು ದಾಳಿಗೈದು 1,89,290 ಮೌಲ್ಯದ 8230 ಕೆಜಿ ಅಕ್ಕಿಯನ್ನು ಜಪ್ತಿಗೈದಿದ್ದಾರೆ. ಅಲ್ಲದೇ, ವಾಹನ ಸಮೇತ ಅಕ್ಕಿಯನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. ಇಂಡಿ ಗ್ರಾಮೀಣ ಪೊಲೀಸ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.ಆಹಾರ ನಿರೀಕ್ಷಿಕ ಪರಮಾನಂದ ಹೂಗಾರ, ಗ್ರಾಮೀಣ ಪೋಲಿಸ್ ಠಾಣಾ ಪಿ ಎಸ್ ಐ ಮಂಜುನಾಥ ಹುಲಕುಂದ, ಎ ಎಸ್ ಐ ಪಿ.ಐ ಅರವತ್ತಿ, ಎಸ್ ಎಚ್ ನರೋಟಿ, ಎಸ್ ವೈ ಜೇರಟಗಿ, ಆರ್ ಗಡೇದ ಪೋಲಿಸ್ ಸಿಬ್ಬಂದಿ ಉಪಸ್ಥಿತರಿದ್ದರು.

Read More

ಶಿಥಿಲ ಕೊಠಡಿಯಲ್ಲೇ ಮಕ್ಕಳಿಗೆ ವಿದ್ಯಾರ್ಜನೆ | ಮಕ್ಕಳನ್ನು ಶಾಲೆಗೆ ಸೇರಿಸಲು ಪಾಲಕರ ಹಿಂದೇಟು – ಇಲಾಹಿ ಇ. ಜಮಖಂಡಿಚಿಮ್ಮಡ: ಗ್ರಾಮದ ಸರಕಾರಿ ಉರ್ದು ಕಿರಿಯ ಪ್ರಾಥಮಿಕ ಶಾಲೆಯ ಎರಡೂ ಕೋಣೆಗಳ ಛಾವಣಿ ಶಿಥಿಲಗೊಂಡು ಕುಸಿಯುವ ಹಂತದಲ್ಲಿದ್ದರೂ ಮಕ್ಕಳು ಪ್ರತಿದಿನ ಅನಿವಾರ್ಯವಾಗಿ ಇಂತಹ ಕಟ್ಟಡದಲ್ಲಿಯೇ ವಿದ್ಯಾರ್ಜನೆ ಮಾಡುವ ಸ್ಥಿತಿ ನಿರ್ಮಾಣಗೊಂಡಿದ್ದು ಮಕ್ಕಳನ್ನು ಶಾಲೆಗ ಕಳುಹಿಸಲು ಪಾಲಕರು ಹಿಂದೇಟು ಹಾಕುತಿದ್ದಾರೆ.ಸುಮಾರು ಇಪ್ಪತೈದು ವರ್ಷಗಳ ಹಿಂದೆ ನಿರ್ಮಿಸಲಾಗಿರುವ ಈ ಕಟ್ಟಡಗಳು ಸಂಪೂರ್ಣ ಶಿಥಿಲಗೊಂಡಿದ್ದು ಗೋಡೆಗಳು ಬಿರುಕುಗೊಂಡಿವೆ, ಪಿಲ್ಲರ್ ಗಳಂತೂ ಸಿಮೆಂಟೆಲ್ಲ ಉದುರಿ ಅಸ್ತಿಪಂಜರದಂತಾಗಿವೆ ಇಂತಹ ಶಾಲೆಗಳಲ್ಲಿ ಮಕ್ಕಳು ವಿದ್ಯಾರ್ಜನೆ ಮಾಡುವುದಾದರೂ ಹೇಗೆ? ಎಂದು ಪಾಲಕರು ಪ್ರಶ್ನಿಸುತಿದ್ದಾರೆ.ಈ ಕುರಿತು ಸಂಬಂಧಿಸಿದ ಅಧಿಕಾರಿಗಳಿಗೆ ಹಲವಾರು ಬಾರಿ ಲಿಖಿತವಾಗಿ, ಮೌಖಿಕವಾಗಿ ಮನವಿ ಮಾಡಿದರೂ ಇದುವರೆಗೂ ಯಾವುದೇ ಪ್ರಯೋಜನವಾಗಿಲ್ಲ. ಕೈ ಮುಗಿದು ಒಳಗೆ ಬರಬೇಕಾದಂತಹ ಜ್ಞಾನದೇಗುಲಗಳು ಅಧಿಕಾರಿಗಳ ಹಾಗೂ ಜನಪ್ರತಿನಿಧಿಗಳ ನಿರ್ಲಕ್ಷ ದೋರಣೆಯಿಂದ ಜೀವ ಕೈಯ್ಯಲ್ಲಿ ಹಿಡಿದು ಒಳಗೆ ಬರುವ ಸ್ಥಿತಿ ನಿರ್ಮಾಣಗೊಂಡಿದೆ.ವಿಚಿತ್ರವೆಂದರೆ ಈ ಶಿಥಿಲ ಶಾಲಾ ಕಟ್ಟಡಗಳ ಹಿಂಬದಿಯಲ್ಲಿಯೇ ಕಳೆದ…

Read More

ವಿಜಯಪುರ: ಸ್ವಾತಂತ್ರ್ಯ ವೀರ ಸಾವರ್ಕರ 141ನೇ ಜಯಂತಿ ಅಂಗವಾಗಿ ಮಂಥನ ವಿಜಯಪುರ ಚಿಂತಕರ ಚಾವಡಿಯ ವತಿಯಿಂದ ವೀರ್ ಸಾವರ್ಕರ್ ಪುತ್ತಳಿಗೆ ಮಾಲಾರ್ಪಣೆ ಮಾಡಲಾಯಿತು.ಈ ಸಂದರ್ಭದಲ್ಲಿ ಮಂಥನ ಸದಸ್ಯರಾದ ಶ್ರೀಧರ ಪಾರಶೆಟ್ಟಿ, ಬಸವರಾಜ ದಂಡೋತಿ, ಚನ್ನಬಸು ಕೋರಿ, ಶ್ರೀಮತಿ ಮನಿಷಾ ಕುಲಕರ್ಣಿ, ರಘೂತ್ತಮ ಅರ್ಜುಣಗಿ, ಶ್ರೀರಂಗ ಪುರಾಣಿಕ ಇನ್ನಿತರರು ಉಪಸ್ಥಿತರಿದ್ದರು..

Read More