ಬಸವನಬಾಗೇವಾಡಿ: ಪಟ್ಟಣದ ಮರಗಮ್ಮದೇವಿ ದೇವಸ್ಥಾನದ ಜಾತ್ರಾಮಹೋತ್ಸವ ಹಾಗೂ ಉಡಿ ತುಂಬುವ ಕಾರ್ಯಕ್ರಮ ಮಂಗಳವಾರ ಶ್ರದ್ಧಾ-ಭಕ್ತಿ, ಸಂಭ್ರಮದಿಂದ ಜರುಗಿತು.ಜಾತ್ರಾಮಹೋತ್ಸವದಂಗವಾಗಿ ಮರಗಮ್ಮದೇವಿಗೆ ಬೆಳಗ್ಗೆ ವಿಶೇಷ ಪೂಜೆ ಜರುಗಿತು. ಜನರು ಕುಟುಂಬ ಸಮೇತರಾಗಿ ಆಗಮಿಸಿ ದೇವಿ ದರ್ಶನ ಪಡೆದುಕೊಂಡು ಕಾಯಿ-ಕರ್ಪೂರ, ನೇವೈದ್ಯ ಅರ್ಪಿಸಿ ಧನ್ಯತಾಭಾವ ಅನುಭವಿಸಿದರು.
ಜಾತ್ರಾಮಹೋತ್ಸವದಂಗವಾಗಿ ಬೆಳಗ್ಗೆ ದೇವಸ್ಥಾನದಿಂದ ಪಲ್ಲಕ್ಕಿ ಹಾಗೂ ದೇವಸ್ಥಾನದ ಕಳಸವು ಬಸವೇಶ್ವರ ದೇವಸ್ಥಾನದ ಬಸವ ತೀರ್ಥ ಬಾವಿಗೆ ವಾದ್ಯಮೇಳದೊಂದಿಗೆ ಗಂಗಾಸ್ಥಳಕ್ಕೆ ತೆರಳಿತು. ಗಂಗಾಸ್ಥಳ ಪೂಜೆ ನಂತರ ಪಲ್ಲಕ್ಕಿ ಉತ್ಸವ ಹಾಗೂ ಕಳಸವು ಅದ್ದೂರಿ ಮೆರವಣಿಗೆ ಮೂಲಕ ಪಟ್ಟಣದ ಪ್ರಮುಖ ಬೀದಿಗಳ ಮೂಲಕ ದೇವಸ್ಥಾನಕ್ಕೆ ಮರಳಿತು. ಮೆರವಣಿಗೆ ದೇವಸ್ಥಾನಕ್ಕೆ ಮರಳಿದ ನಂತರ ಕಳಸಾರೋಹಣ ನೆರವೇರಿಸಿ ಮರಗಮ್ಮದೇವಿಗೆ ಭಕ್ತರ ಸಮ್ಮುಖದಲ್ಲಿ ಉಡಿ ತುಂಬಿ ಉತ್ತಮ ಮಳೆ-ಬೆಳೆಗೆ, ಭಕ್ತರಿಗೆ ಸುಖ-ನೆಮ್ಮದಿ ನೀಡಲೆಂದು ಪ್ರಾರ್ಥನೆ ಸಲ್ಲಿಸಲಾಯಿತು. ಪಲ್ಲಕ್ಕಿ ಉತ್ಸವದ ಮೆರವಣಿಗೆಯಲ್ಲಿ ಸುತ್ತಟ್ಟಿಯ ಝಾಂಜಾ ಮೇಳ, ಬಸವನಬಾಗೇವಾಡಿಯ ಡೊಳ್ಳು ಮೇಳ, ಚಿಮ್ಮಲಗಿಯ ಕರಡಿ ಮಜಲು ಸೇರಿದಂತೆ ವಿವಿಧ ಜೋಗಮ್ಮರ ಕುಣಿತ ಮೆರಗು ತಂದಿತ್ತು. ಭಕ್ತರಿಗೆ ಪ್ರಸಾದ ವ್ಯವಸ್ಥೆ ಮಾಡಲಾಗಿತ್ತು.
Subscribe to Updates
Get the latest creative news from FooBar about art, design and business.
Related Posts
Add A Comment

