ದೇವರಹಿಪ್ಪರಗಿ: ರೈತರ ಜಮೀನುಗಳಿಗೆ ಸಂಪರ್ಕ ಕಲ್ಪಿಸುವ ರಸ್ತೆ ಸಮಸ್ಯೆಗೆ ತ್ವರಿತವಾಗಿ ಸ್ಪಂದಿಸಿ ಪರಿಹಾರ ಒದಗಿಸುವ ಮೂಲಕ ತಹಶೀಲ್ದಾರರು ಉತ್ತಮ ಕಾರ್ಯ ಮಾಡಿದ್ದಾರೆ. ಅವರ ಸೇವೆ ಶ್ಲಾಘನೀಯ ಎಂದು ರೈತಸಂಘದ ಮಹಿಳಾ ಘಟಕದ ಜಿಲ್ಲಾಧ್ಯಕ್ಷೆ ರೇಣುಕಾ ಪಾಟೀಲ ಹೇಳಿದರು.
ಪಟ್ಟಣದ ತಹಶೀಲ್ದಾರ ಕಾರ್ಯಾಲಯದಲ್ಲಿ ಮಂಗಳವಾರ ದೇವೂರ ಗ್ರಾಮದ ರಸ್ತೆ ಸಮಸ್ಯೆ ನಿವಾರಿಸಿ ಪರಿಹಾರ ದೊರಕಿಸಿದ ಕಾರಣ ತಹಶೀಲ್ದಾರ ಪ್ರಕಾಶ ಸಿಂದಗಿ ಅವರನ್ನು ಸನ್ಮಾನಿಸಿ ಮಾತನಾಡಿದರು. ಪ್ರತಿಯೊಂದು ಗ್ರಾಮದಲ್ಲಿ ರೈತರು ಜಮೀನುಗಳ ರಸ್ತೆ ವಿಷಯದಲ್ಲಿ ಸಮಸ್ಯೆ ಎದುರಿಸುತ್ತಿದ್ದು, ಕೆಲವರು ಹಲವು ವರ್ಷಗಳಿಂದ ಪೊಲೀಸ್ ಠಾಣೆ, ನ್ಯಾಯಾಲಯಗಳಿಗೆ ಅಲೆದಾಡುತ್ತಿದ್ದಾರೆ. ಅದಾಗ್ಯೂ ನ್ಯಾಯ ದೊರೆತಿಲ್ಲ. ಆದರೆ ನಮ್ಮ ತಾಲ್ಲೂಕಿನ ತಹಶೀಲ್ದಾರರು ದಿಟ್ಟ ಕ್ರಮ ಕೈಗೊಂಡು ರಸ್ತೆ ಸಮಸ್ಯೆಗೆ ಪರಿಹಾರ ನೀಡಿದ್ದಾರೆ. ಅವರಿಗೆ ಗ್ರಾಮಸ್ಥರ ಪರವಾಗಿ ಅಭಿನಂದನೆ ಎಂದರು.
ರೈತಸಂಘದ ಗ್ರಾಮ ಘಟಕದ ಅಧ್ಯಕ್ಷ ಹಣಮಂತ್ರಾಯ ಪಾಟೀಲ, ಸೋಮು ಸಜ್ಜನ, ಶಿವಪುತ್ರಗೌಡ ಪಾಟೀಲ, ಶ್ರೀಮಂತ ರಾಠೋಡ, ಅಮೀನಪ್ಪಗೌಡ ಬಿರಾದಾರ, ಸುರೇಶ ಪವಾರ, ಸಾಹೇಬಗೌಡ ಬಿರಾದಾರ, ಮಂಜುನಾಥ ನಾಯಿಕ, ಮಡಿವಾಳಪ್ಪಗೌಡ ಬಿರಾದಾರ, ತುಕಾರಾಮ ರಾಠೋಡ, ಸಿದ್ಧನಗೌಡ ಬಿರಾದಾರ ಇದ್ದರು.
Subscribe to Updates
Get the latest creative news from FooBar about art, design and business.
Related Posts
Add A Comment

