Author: editor.udayarashmi@gmail.com

ಸಿಂದಗಿ: ಈ ಬಾರಿ ಶೈಕ್ಷಣಿಕ ಬಲವರ್ಧನೆ ಎಂಬ ಅಡಿಬರಹದಲ್ಲಿ ಮಕ್ಕಳಿಗೆ ಪಾಠವನ್ನು ಹೇಳಲಾಗುತ್ತಿದೆ ಎಂದು ಶಿಕ್ಷಣ ಸಂಯೋಜಕ ಆನಂದ ಮಾಡಗಿ ಹೇಳಿದರು.ಪಟ್ಟಣದ ಬಸವ ನಗರದಲ್ಲಿರುವ ಸರಕಾರಿ ಕನ್ನಡ ಹೆಣ್ಣು ಮಕ್ಕಳ ಮಾದರಿ ಪ್ರಾಥಮಿಕ ಶಾಲೆ ೨೦೨೪-೨೫ನೆಯ ಸಾಲಿನ ಶಾಲಾ ಪ್ರಾರಂಭೋತ್ಸವ ಕಾರ್ಯಕ್ರಮದಲ್ಲಿ ಶಾರದಾಂಬೆಯ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಮಾತನಾಡಿದ ಅವರು, ಅಧ್ಯಯನದಿಂದ ಯಾರು ಹಿಂದೆ ಉಳಿಯಬಾರದು. ಮಕ್ಕಳು ವಿದ್ಯಾಭ್ಯಾಸದೆಡೆಗೆ ಹೆಚ್ಚಿನ ಗಮನ ಹರಿಸಬೇಕು. ಆತ್ಮ ವಿಶ್ವಾಸವಿದ್ದರೆ ಯಾವುದೇ ಭಾಷೆ ಕಲಿಯನಹುದು ಎಂದು ಸಲಹೆ ನೀಡಿದರು.ಈ ವೇಳೆ ಸಿಆರ್‌ಪಿ ನೀಲಕಂಠ ತಿಳಗೂಳ ಮಾತನಾಡಿ, ಸರಕಾರದ ಎಲ್ಲ ಯೋಜನೆಗಳನ್ನು ಬಳಸಿಕೊಂಡು ಉನ್ನತ ಸಾಧನೆ ಮಾಡಬೇಕು ಎಂದು ಹೇಳಿದರು.ಶೈಕ್ಷಣಿಕ ವರ್ಷದ ಮೊದಲ ದಿನದಂದು ಆಗಮಿಸಿದ ವಿದ್ಯಾರ್ಥಿಗಳನ್ನು ಶಿಕ್ಷಕರು ಪ್ರೀತಿಯಿಂದ ಪುಷ್ಪಗುಚ್ಚ, ಪುಸ್ತಕ, ಪೆನ್ನು, ಹಣ್ಣಿನ ರಸ, ಸಿಹಿ ಪದಾರ್ಥ ನೀಡಿ ನೀಡಿ ಭವ್ಯವಾಗಿ ಸ್ವಾಗತಿಸಿಕೊಳ್ಳಲಾಯಿತು.ಇದೇ ಸಂದರ್ಭದಲ್ಲಿ ಶಾಲೆಯ ಮುಖ್ಯಗುರು ಶರಣಬಸವ ಲಂಗೋಟಿ, ಆಯ್.ಎಮ್.ವಾಲೀಕಾರ, ಎ.ಕೆ.ಬಿರಾದಾರ ಸೇರಿದಂತೆ ಶಾಲೆಯ ಶಿಕ್ಷಕರು ಇದ್ದರು.

Read More

ಸಿಂದಗಿ: ಕಳೆದ ಕೆಲ ದಿನಗಳ ಹಿಂದೆ ಅಕ್ರಮ ಮರಳು ಸಾಗಾಟ ಕುರಿತು ಸಿಂದಗಿ ತಾಲೂಕು ವರದಿಗಾರ ಗುಂಡು ಕುಲಕರ್ಣಿ ವರದಿ ಮಾಡಿದ ಹಿನ್ನಲೆಯಲ್ಲಿ ಸಿಂದಗಿ ಸ್ಥಳೀಯ ಪೋಲಿಸ್ ಇಲಾಖೆ ಅಧಿಕಾರಿಗಳು ವರದಿಗಾರನನ್ನು ಮಧ್ಯರಾತ್ರಿ ಅಪಹರಿಸಿ ಜೀವ ಬೆದರಿಕೆ ಹಾಕಿದ ಕುರಿತು ತಾಲೂಕು ದಂಡಾಧಿಕಾರಿಗಳ ಮೂಲಕ ರಾಜ್ಯಪಾಲರಿಗೆ ಮತ್ತು ಸಿಎಂ ಅವರಿಗೆ ಕಾರ್ಯನಿರತ ಪತ್ರಕರ್ತರ ಸಂಘ ಹಾಗೂ ಪತ್ರಕರ್ತರು ಶುಕ್ರವಾರ ಮನವಿ ಸಲ್ಲಿಸಿದರು.ಈ ಸಂದರ್ಭದಲ್ಲಿ ಕಾನಿಪ ತಾಲೂಕಾಧ್ಯಕ್ಷ ಆನಂದ ಶಾಬಾದಿ ಮಾತನಾಡಿ, ಗುಂಡು ಕುಲಕರ್ಣಿ ಅಕ್ರಮ ಮರಳು ಸಾಗಣೆ ಕುರಿತು ವರದಿ ಮಾಡಿದ್ದಕ್ಕಾಗಿ ಗುಂಡು ಕುಲಕರ್ಣಿ ಅವರನ್ನು ಪೊಲೀಸ್ ಇಲಾಖೆಯ ಅಧಿಕಾರಿಗಳು ಅಪಹರಿಸಿ ಹೊರವಲಯಕ್ಕೆ ಕರೆದೊಯ್ದು ಜೀವ ಬೆದರಕೆ ಹಾಕಿದ್ದಾರೆ ಅಲ್ಲದೇ ವರದಿ ಮಾಡದಂತೆ ಎಚ್ಚರಿಕೆ ನೀಡಿದ್ದಾರೆ. ನನಗೆ ಜೀವ ಭಯವಿದೆ ಎಂದು ಗುಂಡು ಕುಲಕರ್ಣಿ ಅವರು ನಮ್ಮ ಸಂಘಕ್ಕೆ ಒಂದು ಮನವಿ ಸಲ್ಲಿಸಿದ್ದಾರೆ. ಸಾರ್ವಜನಿಕರ ಹಿತಾಸಕ್ತಿ ಮೇರೆಗೆ ಅವರಿಗೆ ಸ್ಪಂದಿಸಿ ಸುದ್ದಿ ಮಾಡುವುದು ಪತ್ರಕರ್ತರ ಕರ್ತವ್ಯ. ಮಾಡಿರುವ ಸುದ್ದಿಯನ್ನು ನೋಡಿದ ಮೇಲಾಧಿಕಾರಿಗಳು…

Read More

ವಿಶ್ವ ತಂಬಾಕು ರಹಿತ ದಿನದ ಅಂಗವಾಗಿ ಕಾನೂನು ಅರಿವು ಕಾರ್ಯಕ್ರಮ ವಿಜಯಪುರ: ತಂಬಾಕು ಉತ್ಪನ್ನಗಳ ಸೇವನೆಯಿಂದ ದುಷ್ಪರಿಣಾಮಗಳು ಬೀರುತ್ತಿದ್ದು, ಇದಕ್ಕೆ ಕಡಿವಾಣ ಅತ್ಯವಶ್ಯಕವಾಗಿದ್ದು, ತಂಬಾಕು ಮುಕ್ತ ಸಮಾಜ ನಿರ್ಮಾಣ ಮಾಡುವುದು ಸಮಾಜದ ಪ್ರತಿಯೊಬ್ಬ ವ್ಯಕ್ತಿಯ ಜವಾಬ್ದಾರಿಯಾಗಿದೆ ಎಂದು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿಗಳಾದ ಹಿರಿಯ ಸಿವ್ಹಿಲ್ ನ್ಯಾಯಾಧೀಶ ಮಲ್ಲಿಕಾರ್ಜುನ ಅಂಬಿ ಹೇಳಿದರು.ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಮಹಾನಗರ ಪಾಲಿಕೆ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ಸರ್ವೇಕ್ಷಣಾಧಿಕಾರಿಗಳ ಕಚೇರಿ, ಜಿಲ್ಲಾ ತಂಬಾಕು ನಿಯಂತ್ರಣ ಘಟಕ, ಹಾಗೂ ವಿವಿಧ ಇಲಾಖೆ, ಸಂಘ ಸಂಸ್ಥೆಗಳ ಸಹಯೋಗದಲ್ಲಿ ನಗರದ ಜಿಲ್ಲಾ ಪಂಚಾಯತ್ ಹತ್ತಿರವಿರುವ ಗಾಂಧಿಭವನದ ಸಭಾಂಗಣದಲ್ಲಿ ವಿಶ್ವ ತಂಬಾಕು ರಹಿತ ದಿನದ ಅಂಗವಾಗಿ ಹಮ್ಮಿಕೊಂಡ ಕಾನೂನು ಅರಿವು ಕಾರ್ಯಕ್ರಮವನ್ನು ಉದ್ಘಾಟಿಸಿದ ಅವರು ಮಾತನಾಡಿದರು.ಸಮಾಜದ ಮಕ್ಕಳು, ಯುವಜನಾಂಗ ವಿವಿಧ ದುಶ್ಚಟಗಳಿಗೆ ಬಲಿಯಾಗುತ್ತಿವೆ. ಈ ವಿಷಯನ್ನು ಅತ್ಯಂತ ಗಂಭೀರವಾಗಿ ಪರಿಗಣಿಸಬೇಕು. ಇದಕ್ಕೆ…

Read More

ವಿಜಯಪುರ: ಶ್ರೀ ರುಕ್ಮಾಂಗದ ಶಿಕ್ಷಣ ಸಂಸ್ಥೆಯಲ್ಲಿ ವಿದ್ಯಾರ್ಥಿಗಳಿಗೆ ಸಸಿ ವಿತರಿಸುವ ಮೂಲಕ ಶಾಲಾ ಪ್ರಾರಂಭೋತ್ಸವನ್ನು ಅರ್ಥಪೂರ್ಣವಾಗಿ ಆಚರಿಸಲಾಯಿತು.ಇದೇ ಸಂದರ್ಭದಲ್ಲಿ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಅರುಣ ಸೋಲಾಪೂರಕರ, ಗೌರವ ಕಾರ್ಯದರ್ಶಿ ಮುಕುಂದ ಕುಲಕರ್ಣಿ, ಉಪಾಧ್ಯಕ್ಷರಾದ ವ್ಹಿ.ಎಸ್.ಗಾಯಿ, ಜಂಟಿ ಗೌರವ ಕಾರ್ಯದರ್ಶಿಗಳಾದ ಆರ್.ಎಸ್. ದೇಶಪಾಂಡೆ, ಕೆಬಿಎಸ್ ನಂ. ೦೪ ಸಿಆರ್‌ಪಿಯಾಧ ಶ್ರೀಮತಿ ಗೀತಾ ತಳಕಲ್, ಶ್ರೀ ರುಕ್ಮಾಂಗದ ಪ್ರಾಥಮಿಕ, ಬಾಲಕ ಮತ್ತು ಬಾಲಕಿಯರ ಪ್ರೌಢ ಶಾಲೆಯ ಮುಖ್ಯ ಗುರುಗಳು ಮತ್ತು ಸಿಬ್ಬಂಧಿವರ್ಗದವರು ಹಾಗೂ ವಿದ್ಯಾರ್ಥಿಗಳು ಭಾಗವಹಿಸಿದ್ದರು.

Read More

ವಿಜಯಪುರ: ವಿದ್ಯಾರ್ಥಿಯ ಸರ್ವತೋಮುಖ ಅಭಿವೃದ್ಧಿ ಶಿಕ್ಷಣದಿಂದ ಮಾತ್ರ ಸಾಧ್ಯ ಎಂದು ಬಂಜಾರಾ ಪ್ರೌಢ ಶಾಲೆಯ ಮುಖ್ಯ ಗುರು ಇ.ಡಿ.ಲಮಾಣಿ ಹೇಳಿದರು.ಶುಕ್ರವಾರದಂದು ಶಾಲಾ ಆರಂಭೋತ್ಸವ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು. ಶಿಕ್ಷಣ ಎಂದರೆ ಕೇವಲ ಪಠ್ಯಕ್ರಮದ ಅಧ್ಯಯನ ಪರೀಕ್ಷೆ, ಫಲಿತಾಂಶ ಮಾತ್ರವಲ್ಲ ಅದು ವಿದ್ಯಾರ್ಥಿಯ ಪರಿಪೂರ್ಣ ವ್ಯಕ್ತಿತ್ವದ ವಿಕಾಸ. ಅವನಲ್ಲಿ ಸುಪ್ತವಾಗಿರುವ ಅನನ್ಯ ಪ್ರತಿಭೆಯ ಅನಾವರಣ. ಹಾಗಾದಾಗ ಮಾತ್ರ ಶಿಕ್ಷಣಕ್ಕೆ ಒಂದು ಅರ್ಥಪೂರ್ಣತೆ ಬರುತ್ತದೆ ಎಂದು ಹೇಳಿದರು.ಈ ವೇಳೆಯಲ್ಲಿ ಪ್ರಾಥಮಿಕ ಶಾಲೆಯ ಮುಖ್ಯ ಗುರುಗಳಾದ ಎಂ.ಬಿ.ಪೂಜಾರಿಯವರು ಮಾತನಾಡುತ್ತ. ವಿದ್ಯೆ ಎಂಬುದು ಯಾರೂ ದೋಚಲಾಗದ, ಬಳಸದಷ್ಟು ಸಮೃದ್ಧವಾಗಿ ಬೆಳೆಯುವ, ಎಲ್ಲ ಸಂಪತ್ತಿಗಿಂತ ಮಿಗಿಲಾದದ್ದು. ಅದಕ್ಕಾಗಿ ಪಾಲಕರು ತಮ್ಮ ಮಕ್ಕಳಿಗೆ ಉತ್ತಮ ಶಿಕ್ಷಣ. ಸಂಸ್ಕಾರ ನೀಡಿ ಮಕ್ಕಳ ಜ್ಞಾನ ಭಂಡಾರದ ಶ್ರೀಮಂತಿಕೆ ಹೆಚ್ಚಿಸಬೇಕು ಎಂದು ಹೇಳಿದರು.ಈ ಸಂದರ್ಭದಲ್ಲಿ ಎಸ್.ವ್ಹಿ.ದೇಶಪಾಂಡೆ, ಎ.ಎಂ.ನಾಗೊಂಡ, ಆರ್.ಎನ್.ಬಕಾಟೆ, ಜೆ.ಕೆ.ರಾಠೋಡ, ಎಸ್.ಡಿ.ಚವ್ಹಾಣ್, ಎಸ್.ಬಿ.ಒಡೆಯರ, ಎಸ್.ಕೆ.ಶಿಂಧೆ, ಎಸ್.ಪಿ.ಧಡೇಕರ, ಎಸ್.ಎಂ.ಮಾಳಿ, ಆರ್.ಎಸ್.ಹಿರೇಮಠ, ಪಿ.ಎಸ್.ಕೌಲಗಿ, ಆರ್.ಕೆ.ರಜಪೂತ, ಎಂ.ಎಲ್.ಚವ್ಹಾಣ್, ಡಿ.ಬಿ.ದೊಡಮನಿ, ಎಚ್.ಎಂ.ಬೋರಾವತ ಹಾಗೂ ಎಲ್ಲ ಶಿಕ್ಷಕ ಸಿಬ್ಬಂದಿ…

Read More

ಚಡಚಣ: ಶಿಕ್ಷಣವೆಂದರೆ ಕೇವಲ ಅಕ್ಷರ ಜ್ಞಾನದ ಗಳಿಕೆ, ಪಠ್ಯದ ಓದು ಮಾತ್ರವಲ್ಲ, ಅದು ಮಕ್ಕಳ ಸರ್ವತೋಮುಖ ಬೆಳವಣಿಗೆಯ ಮಹತ್ವದ ಕಾಲಘಟ್ಟ. ಶಾಲೆಗಳ ಅಭಿವೃದ್ಧಿ ಹೊಂದಿದರೆ, ಭಾರತದ ಭವಿಷ್ಯ ಇನ್ನಷ್ಟು ಭದ್ರವಾಗುತ್ತದೆ ಎಂದು ರೇವತಗಾಂವ ಗ್ರಾಮದ ಮಾದರಿ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯ ಗುರು ಆರ್.ಎನ್.ಹತ್ತಳ್ಳಿಯವರು ಹೇಳಿದರು.ರಾಜ್ಯಾದ್ಯಂತ ಶುಕ್ರವಾರದಿಂದ ಶಾಲಾ ಪ್ರಾರಂಭೋತ್ಸವಕ್ಕೆ ಸರ್ಕಾರ ವಿದ್ಯುಕ್ತವಾಗಿ ಚಾಲನೆ ದೊರೆತ್ತಿದ್ದು, ಇತ್ತ ರೇವತಗಾಂವ ಗ್ರಾಮದ ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶಾಲೆಗೆ ಆಗಮಿಸಿದ ವಿದ್ಯಾರ್ಥಿಗಳಿಗೆ ಗುಲಾಬಿ ಹೂವುಗಳನ್ನು ನೀಡಿವ ಮೂಲಕ ಸ್ವಾಗತ ಕೋರಿ ಮಾತನಾಡಿದ ಅವರು. ೨೦೨೪-೨೫ನೇ ಶೈಕ್ಷಣಿಕ ವರ್ಷವನ್ನು ‘ಶೈಕ್ಷಣಿಕ ಬಲವರ್ಧನೆ ವರ್ಷ’ ಎಂದು ಸಂಕಲ್ಪ ಮಾಡಲಾಗಿದೆ. ಪ್ರಸ್ತುತ ಸನ್ನಿವೇಶದಲ್ಲಿ ಬದಲಾಗುತ್ತಿರುವ ಶೈಕ್ಷಣಿಕ ಅವಶ್ಯಕತೆಗಳು ಮತ್ತು ತಂತ್ರಜ್ಞಾನ ಆಧಾರಿತ ಕಲಿಕೆ ಹೊಂದಾಣಿಕೆ ಮಾಡಿಕೊಂಡು ಮಗುವಿನ ಕಲಿಕಾ ಬಲವರ್ಧನೆ ಆಗಬೇಕಾಗುತ್ತದೆ. ಅಲ್ಲದೇ ಮಕ್ಕಳನ್ನು ಇಂಗ್ಲಿಷ್ ಭಾಷೆಯ ಪರಿಣತರನ್ನಾಗಿಸುವ ನಿಟ್ಟಿನಲ್ಲಿ ‘ಸ್ಪೋಕನ್ ಇಂಗ್ಲಿಷ್’ ತರಗತಿಗಳನ್ನು ನಡೆಸಲಾಗುತ್ತದೆ ಎಂದು ಹೇಳಿದರು.ಈ ವೇಳೆ ಪಾಲಕ ಪ್ರತಿನಿಧಿ ಅಶೋಕ ಬಿಜ್ಜರಗಿಯವರು…

Read More

ವಿಜಯಪುರ: ಇತ್ತಿಚಿಗೆ ಮುಂಗಾರು ಹಂಗಾಮಿನ ಕುರಿತು ಕೇಂದ್ರ ಹಾಗೂ ರಾಜ್ಯ ಸರಕಾರ ನೀಡಿರುವ ಪರಿಹಾರದ ಮೊತ್ತದ ಬಗ್ಗೆ ಸಾಕಷ್ಟು ಗೊಂದಲಗಳಿದ್ದು ಅದರ ಬಗ್ಗೆ ಸ್ಪಷ್ಟತೆ ನೀಡಬೇಕೆಂದು ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ವತಿಯಿಂದ ಅಪರ ಜಿಲ್ಲಾಧಿಕಾರಿ ಮಹದೇವ ಮುರಗಿ ಅವರಿಗೆ ಮನವಿ ಸಲ್ಲಿಸಿ ಇದಕ್ಕೆ ಉತ್ತರ ನೀಡುವಂತೆ ಆಗ್ರಹಿಸಿದರುಈ ವೇಳೆ ರೈತಸಂಘದ ಜಿಲ್ಲಾಧ್ಯಕ್ಷ ಸಂಗಮೆಶ ಸಗರ ಮಾತನಾಡುತ್ತ, ಎನ್.ಡಿ.ಆರ್.ಎಫ್ ಹಾಗೂ ಎಸ್.ಡಿ.ಆರ್.ಎಫ್ ಮಾರ್ಗಸೂಚಿಯಂತೆ ಕೇಂದ್ರ ಸರಕಾರ ನೀಡಿರುವ ಬರ ಪರಿಹಾರದ ಮೊತ್ತದ ಸಮನಾಗಿ ರಾಜ್ಯ ಸರಕಾರ ಕೂಡಾ ಕೊಡಬೇಕು ಎಂಬ ನಿಯಮಾವಳಿ ಇದೆ, ಅಂದರೆ ಕೇಂದ್ರ ಸರಕಾರ ಒಂದು ಹೆಕ್ಟರ್‌ಗೆ ೮೫೦೦ ರೂ ಗರಿಷ್ಟ ೨ ಹೆಕ್ಷೆರ್ ಅಂದರೆ ೧೭೦೦೦ ಹಣ ಕೊಡಬಹುದು, ಅದಕ್ಕೆ ಸರಿಸಮನಾಗಿ ರಾಜ್ಯ ಸರಕಾರ ಕೂಡಾ ೮೫೦೦ ಒಂದು ಹೆಕ್ಟೆರಗೆ ಗರಿಷ್ಟ ೨ ಹೆಕ್ಟೆರ್ ಅಂದರೆ ಅವರು ಕೂಡಾ ೧೭೦೦೦ ಸೇರಿಸಿ ಒಟ್ಟಾರೆಯಾಗಿ ೨ ಹೆಕ್ಟೆರ ಇರುವ ರೈತರಿಗೆ ೩೪೦೦೦ ಪರಿಹಾರ ನೀಡಬೇಕೆಂಬುದು…

Read More

ಚಡಚಣ: ಊರಿಗೊಂದು ಮಠ, ಮಠಕ್ಕೊಬ್ಬ ಉತ್ತಮ ಗುರು ಬೇಕೆನ್ನುವಂತೆ ಇಲ್ಲಿಯ ವಿರಕ್ತಮಠವು ಇತಿಹಾಸದ ಪರಂಪರೆ ಸಾರುವಂತಿದೆ. ಈಗಿನ ವಿರಕ್ತಮಠದ ಷಡಕ್ಷರದೇವರು ಕಳೆದ ಹತ್ತು ವರ್ಷಗಳಿಂದ ಚಡಚಣ ಹಾಗೂ ಸುತ್ತಮುತ್ತಲಿನ ಗ್ರಾಮಗಳಲ್ಲಿ ಜರುಗುವ ಧಾರ್ಮಿಕ ಕಾರ್ಯಕ್ರಮಗಳಲ್ಲಿ ಮುಂಚೂಣಿಯಲ್ಲಿದ್ದು ಮಾರ್ಗದರ್ಶಕರಾಗಿದ್ದಾರೆ. ಇವರಿಂದ ಧಾರ್ಮಿಕ ಕಾರ್ಯಕ್ರಮಗಳು ನಿರಂತರ ಸಾಗುತ್ತಿವೆ ಎಂದು ನಿವೃತ್ತ ಪ್ರಾಚಾರ್ಯ ಆರ್. ಪಿ. ಬಗಲಿ ಹೇಳಿದರು.ಪಟ್ಟಣದ ವಿರಕ್ತಮಠದ ಲಿಂ. ಶಿವಾನಂದ ಮಹಾಸ್ವಾಮಿಗಳ 28 ನೇ ಪುಣ್ಯಸ್ಮರಣೆಯ ನಿಮಿತ್ತ ಲೋಕಾಪೂರದ ಮಹಾಂತಸ್ವಾಮಿಗಳು ಹಿರೇಮಠ ಇವರಿಂದ ಪ್ರವಚನ ಕಾರ್ಯಕ್ರಮದ ಉದ್ಘಾಟನೆಯ ಅಧ್ಯಕ್ಷತೆ ವಹಿಸಿ ಮಾತನಾಡುತ್ತ, ಮಠ ಮಾನ್ಯಗಳಿಂದ ಸಮಾಜದ ಉದ್ದಾರ. ಮಠಗಳು ಧಾರ್ಮಿಕ ರಕ್ಷಣೆಯ ಶಿಕ್ಷಣದ ಕೇಂದ್ರಗಳು. ಪುಣ್ಯಾರಾಧನೆ ಅದ್ದೂರಿಯಾಗಿ ಜರುಗಲಿ. ಎಲ್ಲರೂ ಭಾಗಿಯಾಗಿ ಧನ್ಯರಾಗಿರಿ ಎಂದು ಬಗಲಿ ಅವರು ಹೇಳಿದರು.ಸಾನ್ನಿಧ್ಯ ವಹಿಸಿದ್ದ ವಿರಕ್ತಮಠದ ಷಡಕ್ಷರದೇವರು ಮಾತನಾಡಿ, ಪಟ್ಟಣದ ಎಲ್ಲ ಭಕ್ತಾದಿಗಳು ಪ್ರವಚನ ಆಲಿಸಿ. ಸುಂದರ ಬದುಕಿಗೆ ಪ್ರವಚನ ಸಹಾಯಕಾರಿ. ಮಹಾಂತ ಸ್ವಾಮಿಗಳು ಉತ್ತಮ ಪ್ರವಚನ ಪಟುಗಳಾಗಿದ್ದಾರೆ ಎಂದರು.ಜಿ. ಡಿ. ಪಾವಲೆ ಮಾತನಾಡಿ, ಪ್ರತಿವರ್ಷವೂ ಪುಣ್ಯಾರಾಧನೆ…

Read More

ಚಡಚಣ: ಪಟ್ಟಣದ ಶ್ರೀ ಸಂಗಮೇಶ್ವರ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಹಮ್ಮಿಕೊಂಡಿದ್ದ ಶಾಲಾ ಪ್ರಾರಂಭೋತ್ಸವ ಹಾಗೂ ದಾಖಲಾತಿ ಅಂದೋಲನ ಜಾಗೃತಿ ಕಾರ್ಯಕ್ರಮ ಆಯೋಜಿಸಲಾಯಿತು.ಶ್ರೀ ಸಂಗಮೇಶ್ವರ ಆಂಗ್ಲ ಮಾಧ್ಯಮ ಶಾಲೆಯ ಮುಖ್ಯ ಗುರು ಅಮರೇಶ ಅಳಗುಂಡಗಿ ಅವರು ಮಾತನಾಡಿ, ಎರಡು ತಿಂಗಳಿಗೂ ಹೆಚ್ಚು ಕಾಲ ಬೇಸಿಗೆಯ ಅವಧಿಯಲ್ಲಿ ಮಕ್ಕಳು ಮಾನಸಿಕ ಹಾಗೂ ದೈಹಿಕವಾಗಿ ಶಾಲೆಯಿಂದ ದೂರವಿದ್ದು ಅನ್ಯ ಕೆಲಸ ಕಾರ್ಯದಲ್ಲಿ ತೊಡಗಿ ಶಾಲೆಯತ್ತ ಗಮನ ಹರಿಸದಿರುವುದು ಸಹಜ, ಆದರೆ ಮರಳಿ ಶೈಕ್ಷ ಣಿಕ ವರ್ಷದ ಅವಧಿಗಳು ಪ್ರಾರಂಭವಾಗುತ್ತಿದ್ದು ಮಕ್ಕಳ ಬರುವಿಕೆಗೆ ಸಹಕರಿಸುವುದು ತುಂಬಾ ಅಗತ್ಯವಿದೆ ಎಂದರು.ಆಂಗ್ಲ ಮಾಧ್ಯಮ ಶಾಲೆಯ ಆಡಳಿತ ಅಧಿಕಾರಿಗಳಾದ ವರ್ಷಾ ಮುತ್ತಿನ ಮಾತನಾಡಿ, ಸಾರ್ವಜನಿಕ ಶಿಕ್ಷ ಣ ಇಲಾಖೆಯು ಈ ವರ್ಷವೂ ಕೂಡ ಜಾಗೃತೆಯಿಂದ ಕಾರ್ಯನಿರ್ವಹಿಸಲು ಮುಂದಾಗಿದೆ. ದಾಖಲಾತಿ ಹೊಂದಿದ ಎಲ್ಲಾ ಮಕ್ಕಳು ನಿತ್ಯ ತಪ್ಪದೆ ಶಾಲೆಗೆ ಆಗಮಿಸಿ ಹಾಜರಾತಿಯನ್ನು ಹೆಚ್ಚಿಸುವುದು ಕೂಡ ಮಹತ್ವದ್ದಾಗಿದೆ. ಆದ್ದರಿಂದ ಪಾಲಕ ಪೋಷಕರು ವಿಶೇಷವಾದ ಕಾಳಜಿವಹಿಸಿ ಮಕ್ಕಳನ್ನು ಶಾಲೆಗೆ ಕಳುಹಿಸಿ ದೇಶದ ಸತ್ಪ್ರಜೆಯನ್ನಾಗಿ ರೂಪಿಸಿ ಎಂದು…

Read More

ಚಿಮ್ಮಡ: ಗ್ರಾಮದ ಸರಕಾರಿ ಉರ್ದು ಕಿರಿಯ ಪ್ರಾಥಮಿಕ ಶಾಲೆಗೆ ಶಿಕ್ಷಣ ಇಲಾಖೆಯ ಅಧಿಕಾರಿಗಳ ತಂಡ ಬುಧವಾರದಂದು ಭೇಟಿ ನೀಡಿ ಪರಿಶೀಲನೆ ನಡೆಸಿದರು.ಇಲ್ಲಿನ ಉರ್ದು ಶಾಲೆಯ ದುಸ್ಥಿತಿಯ ಕುರಿತು ಬುಧವಾರ ’ಉದಯರಶ್ಮಿ’ ಪತ್ರಿಕೆಯಲ್ಲಿ ಪ್ರಕಟವಾದ “ಶಿಥಿಲ ಕೊಠಡಿಯಲ್ಲಿ ಮಕ್ಕಳಿಗೆ ವಿದ್ಯಾರ್ಜನೆ” ಎಂಬ ತಲೆಬರಹದ ವಿಶೇಷ ವರದಿ ಪ್ರಕಟಿಸಿದ ದಿನವೇ ಪ್ರಭಾರ ಕ್ಷೇತ್ರ ಶಿಕ್ಷಣಾಧಿಕಾರಿ ಶ್ರೀಮತಿ ಪಂಚಾಕ್ಷರಿ ನಂದೇಶ್ವರ, ಪ್ರಭಾರಿ ಕ್ಷೇತ್ರ ಸಮನ್ವಯಾಧಿಕಾರಿ ಆರ್.ಎಸ್. ಅವಟಿ, ಉರ್ದುವಿಭಾಗದ ಶಿಕ್ಷಣ ಸಂಯೋಜಕಿ ಶ್ರೀಮತಿ ಸಮೀನಾ ಕೌಸರ, ಸಮೂಹ ಸಂಪನ್ಮೂಲ ವ್ಯಕ್ತಿಗಳಾದ ಎ.ಐ. ಬಾಗೇವಾಡಿಯವರು ಶಾಲೆಗೆ ಭೇಟಿನೀಡಿ ಪರಿಶೀಲನೆ ನಡೆಸಿ ಶಾಲಾ ಮುಖ್ಯೋಪಾದ್ಯಾಯ ಝೆಡ್.ಎಚ್. ಇಂಡಿಕರ ಅವರಿಂದ ಮಾಹಿತಿ ಪಡೆದರು.ಕ್ಷೇತ್ರ ಶಿಕ್ಷಣಾಧಿಕಾರಿ ಎ.ಕೆ. ಬಸನ್ನವರ ಪತ್ರಿಕೆಯೊಂದಿಗೆ ಮಾತನಾಡಿ, ಶಿಥಿಲ ಕೊಠಡಿಗಳನ್ನು ತರಗತಿ ನಡೆಸಲು ಹಾಗೂ ಬಿಸಿಯೂಟದ ಅಡುಗೆ ತಯಾರಿಸಲು ಬಳಸಬಾರದೆಂದು ಮುಖ್ಯ ಗುರುಗಳಿಗೆ ಸೂಚಿಸಲಾಗಿದ್ದು ಕೆರೆ ದಂಡೆಮೇಲೆ ನಿರ್ಮಿಸಲಾಗಿರುವ ಸುಸಜ್ಜಿತ ಕೊಠಡಿಗಳನ್ನು ದುರಸ್ಥಿ ಹಾಗೂ ಸ್ವಚ್ಛ ಗೊಳಿಸಿ ಕಛೇರಿಗಾಗಿ ಬಳಕೆ ಮಾಡಬೇಕೆಂದು ಸೂಚಿಸಲಾಗಿದ್ದು ಆದಷ್ಟು ಬೇಗ ಶಾಲೆಗೆ…

Read More