ಚಿಮ್ಮಡ: ಗ್ರಾಮದ ಸರಕಾರಿ ಉರ್ದು ಕಿರಿಯ ಪ್ರಾಥಮಿಕ ಶಾಲೆಗೆ ಶಿಕ್ಷಣ ಇಲಾಖೆಯ ಅಧಿಕಾರಿಗಳ ತಂಡ ಬುಧವಾರದಂದು ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಇಲ್ಲಿನ ಉರ್ದು ಶಾಲೆಯ ದುಸ್ಥಿತಿಯ ಕುರಿತು ಬುಧವಾರ ’ಉದಯರಶ್ಮಿ’ ಪತ್ರಿಕೆಯಲ್ಲಿ ಪ್ರಕಟವಾದ “ಶಿಥಿಲ ಕೊಠಡಿಯಲ್ಲಿ ಮಕ್ಕಳಿಗೆ ವಿದ್ಯಾರ್ಜನೆ” ಎಂಬ ತಲೆಬರಹದ ವಿಶೇಷ ವರದಿ ಪ್ರಕಟಿಸಿದ ದಿನವೇ ಪ್ರಭಾರ ಕ್ಷೇತ್ರ ಶಿಕ್ಷಣಾಧಿಕಾರಿ ಶ್ರೀಮತಿ ಪಂಚಾಕ್ಷರಿ ನಂದೇಶ್ವರ, ಪ್ರಭಾರಿ ಕ್ಷೇತ್ರ ಸಮನ್ವಯಾಧಿಕಾರಿ ಆರ್.ಎಸ್. ಅವಟಿ, ಉರ್ದುವಿಭಾಗದ ಶಿಕ್ಷಣ ಸಂಯೋಜಕಿ ಶ್ರೀಮತಿ ಸಮೀನಾ ಕೌಸರ, ಸಮೂಹ ಸಂಪನ್ಮೂಲ ವ್ಯಕ್ತಿಗಳಾದ ಎ.ಐ. ಬಾಗೇವಾಡಿಯವರು ಶಾಲೆಗೆ ಭೇಟಿನೀಡಿ ಪರಿಶೀಲನೆ ನಡೆಸಿ ಶಾಲಾ ಮುಖ್ಯೋಪಾದ್ಯಾಯ ಝೆಡ್.ಎಚ್. ಇಂಡಿಕರ ಅವರಿಂದ ಮಾಹಿತಿ ಪಡೆದರು.
ಕ್ಷೇತ್ರ ಶಿಕ್ಷಣಾಧಿಕಾರಿ ಎ.ಕೆ. ಬಸನ್ನವರ ಪತ್ರಿಕೆಯೊಂದಿಗೆ ಮಾತನಾಡಿ, ಶಿಥಿಲ ಕೊಠಡಿಗಳನ್ನು ತರಗತಿ ನಡೆಸಲು ಹಾಗೂ ಬಿಸಿಯೂಟದ ಅಡುಗೆ ತಯಾರಿಸಲು ಬಳಸಬಾರದೆಂದು ಮುಖ್ಯ ಗುರುಗಳಿಗೆ ಸೂಚಿಸಲಾಗಿದ್ದು ಕೆರೆ ದಂಡೆಮೇಲೆ ನಿರ್ಮಿಸಲಾಗಿರುವ ಸುಸಜ್ಜಿತ ಕೊಠಡಿಗಳನ್ನು ದುರಸ್ಥಿ ಹಾಗೂ ಸ್ವಚ್ಛ ಗೊಳಿಸಿ ಕಛೇರಿಗಾಗಿ ಬಳಕೆ ಮಾಡಬೇಕೆಂದು ಸೂಚಿಸಲಾಗಿದ್ದು ಆದಷ್ಟು ಬೇಗ ಶಾಲೆಗೆ ಅವಶ್ಯವಿರುವಷ್ಟು ನೂತನ ಕೊಠಡಿಗಳನ್ನು ನಿರ್ಮಿಸಲು ಕ್ರಮ ಕೈಗೊಳ್ಳಲಾಗುವುದೆಂದರು.
Subscribe to Updates
Get the latest creative news from FooBar about art, design and business.
Related Posts
Add A Comment

