ವಿಜಯಪುರ: ಇತ್ತಿಚಿಗೆ ಮುಂಗಾರು ಹಂಗಾಮಿನ ಕುರಿತು ಕೇಂದ್ರ ಹಾಗೂ ರಾಜ್ಯ ಸರಕಾರ ನೀಡಿರುವ ಪರಿಹಾರದ ಮೊತ್ತದ ಬಗ್ಗೆ ಸಾಕಷ್ಟು ಗೊಂದಲಗಳಿದ್ದು ಅದರ ಬಗ್ಗೆ ಸ್ಪಷ್ಟತೆ ನೀಡಬೇಕೆಂದು ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ವತಿಯಿಂದ ಅಪರ ಜಿಲ್ಲಾಧಿಕಾರಿ ಮಹದೇವ ಮುರಗಿ ಅವರಿಗೆ ಮನವಿ ಸಲ್ಲಿಸಿ ಇದಕ್ಕೆ ಉತ್ತರ ನೀಡುವಂತೆ ಆಗ್ರಹಿಸಿದರು
ಈ ವೇಳೆ ರೈತಸಂಘದ ಜಿಲ್ಲಾಧ್ಯಕ್ಷ ಸಂಗಮೆಶ ಸಗರ ಮಾತನಾಡುತ್ತ, ಎನ್.ಡಿ.ಆರ್.ಎಫ್ ಹಾಗೂ ಎಸ್.ಡಿ.ಆರ್.ಎಫ್ ಮಾರ್ಗಸೂಚಿಯಂತೆ ಕೇಂದ್ರ ಸರಕಾರ ನೀಡಿರುವ ಬರ ಪರಿಹಾರದ ಮೊತ್ತದ ಸಮನಾಗಿ ರಾಜ್ಯ ಸರಕಾರ ಕೂಡಾ ಕೊಡಬೇಕು ಎಂಬ ನಿಯಮಾವಳಿ ಇದೆ, ಅಂದರೆ ಕೇಂದ್ರ ಸರಕಾರ ಒಂದು ಹೆಕ್ಟರ್‌ಗೆ ೮೫೦೦ ರೂ ಗರಿಷ್ಟ ೨ ಹೆಕ್ಷೆರ್ ಅಂದರೆ ೧೭೦೦೦ ಹಣ ಕೊಡಬಹುದು, ಅದಕ್ಕೆ ಸರಿಸಮನಾಗಿ ರಾಜ್ಯ ಸರಕಾರ ಕೂಡಾ ೮೫೦೦ ಒಂದು ಹೆಕ್ಟೆರಗೆ ಗರಿಷ್ಟ ೨ ಹೆಕ್ಟೆರ್ ಅಂದರೆ ಅವರು ಕೂಡಾ ೧೭೦೦೦ ಸೇರಿಸಿ ಒಟ್ಟಾರೆಯಾಗಿ ೨ ಹೆಕ್ಟೆರ ಇರುವ ರೈತರಿಗೆ ೩೪೦೦೦ ಪರಿಹಾರ ನೀಡಬೇಕೆಂಬುದು ಒಂದು ಮಾಹಿತಿ,
ಆದರೆ ಇತ್ತಿಚಿಗೆ ಕೇಂದ್ರ ಸರಕಾರ ನೀಡಿರುವ ಹಣದಲ್ಲಿ ರಾಜ್ಯ ಸರಕಾರ ಚುನಾವಣಾ ಸಂದರ್ಭದಲ್ಲಿ ಮುಂಗಡ ನೀಡಿರುವ ೨೦೦೦ ಹಣ ಮುರಿದುಕೊಂಡು ಉಳಿದ ಹಣವನ್ನು ರೈತರಿಗೆ ಹಾಕಿದ್ದಾರೆ ಎನ್ನುವುದು ಕಣ್ಣಿಗೆ ಕಾಣುತ್ತಿದೆ. ಆದ್ದರಿಂದ ಈ ಕುರಿತು ಸ್ಪಷ್ಟತೆ ನೀಡಬೇಕು ಎಂದರು.
ಜಿಲ್ಲೆಯಲ್ಲಿ ಇನ್ನು ಸುಮಾರು ೧೫೦೦೦ ಕ್ಕೂ ಹೆಚ್ಚಿನ ರೈತರಿಗೆ ಬರಗಾಲ ಪರಿಹಾರ ಬಂದಿಲ್ಲ, ರೈತರು ಈ ಬಗ್ಗೆ ಆತಂಕಗೊಂಡಿರುತ್ತಾರೆ, ಅವರಿಗೆ ಇಲಾಖೆಯ ಅಧಿಕಾರಿಗಳು ತಪ್ಪು ಸಂದೇಶ ನೀಡುತ್ತಿದ್ದಾರೆ, ಹೊಲದಲ್ಲಿ ತೊಗರಿ ಬೆಳೆ ಇದ್ದರೆ ಬರುವುದಿಲ್ಲ, ಕಾಲುವೆ ಹಾಯ್ದರೆ ಬರುವುದಿಲ್ಲ, ಹೀಗೆ ಬೇರೆ ಬೇರೆ ತಪ್ಪು ಮಾಹಿತಿ ನೀಡುತ್ತಿದ್ದಾರೆ, ಕೂಡಲೇ ತಂತ್ರಜ್ಞಾನದ ಅವಘಡದಿಂದ ಆಗಿರುವ ತಪ್ಪುಗಳನ್ನು ಸರಿಪಡಿಸಿ ಜಿಲ್ಲೆಯಲ್ಲಿ ಈ ವರ್ಷ ಸಂಪೂರ್ಣ ಬರಗಾರ ಎಂದು ಸರಕಾರವೇ ಘೋಷಣೆ ಮಾಡಿದೆ, ಆದ್ದರಿಂದ ಎಲ್ಲರಿಗೂ ತಪ್ಪದೇ ಪರಿಹಾರ ನೀಡಬೇಕು ಎಂಬುದು ನಮ್ಮ ಆಗ್ರಹವಾಗಿದೆ ಎಂದರು.
ಗೌರವಧನ ನೀಡಿ ಹೊರಗುತ್ತಿಗೆ ಮೂಲಕ ಸಮೀಕ್ಷೆ ಮಾಡಿರುವ ಇಲಾಖೆಯ ಯಡವಟ್ಟಿನಿಂದ ಜಮೀನು ಪಾಳು ಎಂದು ತೊರಿಸಿದ್ದಾರೆ, ಜೂನನಲ್ಲಿ ಬಿತ್ತನೆ ಮಾಡಿರುವ ರೈತರು ನಾಟಿ ಆಗದ ಕಾರಣ ಹರಗಿ ಹೊಲ ಖಾಲಿ ಮಾಡಿರುತ್ತಾರೆ, ಆದರೆ ಸಮೀಕ್ಷೆ ಮುಂದೆ ಒಂದೆರಡು ತಿಂಗಳ ನಂತರ ಸಮೀಕ್ಷೆ ಮಾಡಿರುತ್ತಾರೆ. ಆದ್ದರಿಂದ ಕೂಡಲೇ ಜಿಲ್ಲೆಯಲ್ಲಿ ಎಲ್ಲಾ ರೈತರಿಗೂ ಬರಗಾಲ ಪರಿಹಾರ ನೀಡಬೇಕು ಎಂದರು.
ಈ ವೇಳೆ ವಿಜಯಪುರ ತಾ ಅಧ್ಯಕ್ಷರಾದ ಮಹಾದೇವಪ್ಪ ತೇಲಿ, ಗೌರವಾಧ್ಯಕ್ಷರಾದ ಕಲ್ಲಪ್ಪ ಪಾರಶೆಟ್ಟಿ, ಜಿಲ್ಲಾ ಸಂಚಾಲಕರಾದ ರಾಮನಗೌಡ ಪಾಟೀಲ, ತಿಕೋಟಾ ತಾ.ಉಪಾಧ್ಯಕ್ಷರಾದ ಶಾನೂರ ನಂದರಗಿ, ಯುವ ಘಟಕದ ತಾ ಅಧ್ಯಕ್ಷರಾದ ಪ್ರಭುಲಿಂಗ ಕಾರಜೋಳ ಇದ್ದರು.
Subscribe to Updates
Get the latest creative news from FooBar about art, design and business.
ರೈತರಿಗೆ ಬರಗಾಲ ಪರಿಹಾರದ ಬಗ್ಗೆ ಸ್ಪಷ್ಟತೆ ನೀಡಲು ರೈತಸಂಘ ಆಗ್ರಹ
Related Posts
Add A Comment

