ಚಡಚಣ: ಪಟ್ಟಣದ ಶ್ರೀ ಸಂಗಮೇಶ್ವರ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಹಮ್ಮಿಕೊಂಡಿದ್ದ ಶಾಲಾ ಪ್ರಾರಂಭೋತ್ಸವ ಹಾಗೂ ದಾಖಲಾತಿ ಅಂದೋಲನ ಜಾಗೃತಿ ಕಾರ್ಯಕ್ರಮ ಆಯೋಜಿಸಲಾಯಿತು.
ಶ್ರೀ ಸಂಗಮೇಶ್ವರ ಆಂಗ್ಲ ಮಾಧ್ಯಮ ಶಾಲೆಯ ಮುಖ್ಯ ಗುರು ಅಮರೇಶ ಅಳಗುಂಡಗಿ ಅವರು ಮಾತನಾಡಿ, ಎರಡು ತಿಂಗಳಿಗೂ ಹೆಚ್ಚು ಕಾಲ ಬೇಸಿಗೆಯ ಅವಧಿಯಲ್ಲಿ ಮಕ್ಕಳು ಮಾನಸಿಕ ಹಾಗೂ ದೈಹಿಕವಾಗಿ ಶಾಲೆಯಿಂದ ದೂರವಿದ್ದು ಅನ್ಯ ಕೆಲಸ ಕಾರ್ಯದಲ್ಲಿ ತೊಡಗಿ ಶಾಲೆಯತ್ತ ಗಮನ ಹರಿಸದಿರುವುದು ಸಹಜ, ಆದರೆ ಮರಳಿ ಶೈಕ್ಷ ಣಿಕ ವರ್ಷದ ಅವಧಿಗಳು ಪ್ರಾರಂಭವಾಗುತ್ತಿದ್ದು ಮಕ್ಕಳ ಬರುವಿಕೆಗೆ ಸಹಕರಿಸುವುದು ತುಂಬಾ ಅಗತ್ಯವಿದೆ ಎಂದರು.
ಆಂಗ್ಲ ಮಾಧ್ಯಮ ಶಾಲೆಯ ಆಡಳಿತ ಅಧಿಕಾರಿಗಳಾದ ವರ್ಷಾ ಮುತ್ತಿನ ಮಾತನಾಡಿ, ಸಾರ್ವಜನಿಕ ಶಿಕ್ಷ ಣ ಇಲಾಖೆಯು ಈ ವರ್ಷವೂ ಕೂಡ ಜಾಗೃತೆಯಿಂದ ಕಾರ್ಯನಿರ್ವಹಿಸಲು ಮುಂದಾಗಿದೆ. ದಾಖಲಾತಿ ಹೊಂದಿದ ಎಲ್ಲಾ ಮಕ್ಕಳು ನಿತ್ಯ ತಪ್ಪದೆ ಶಾಲೆಗೆ ಆಗಮಿಸಿ ಹಾಜರಾತಿಯನ್ನು ಹೆಚ್ಚಿಸುವುದು ಕೂಡ ಮಹತ್ವದ್ದಾಗಿದೆ. ಆದ್ದರಿಂದ ಪಾಲಕ ಪೋಷಕರು ವಿಶೇಷವಾದ ಕಾಳಜಿವಹಿಸಿ ಮಕ್ಕಳನ್ನು ಶಾಲೆಗೆ ಕಳುಹಿಸಿ ದೇಶದ ಸತ್ಪ್ರಜೆಯನ್ನಾಗಿ ರೂಪಿಸಿ ಎಂದು ಕರೆನೀಡಿದರು.
ಈ ಸಂದರ್ಭದಲ್ಲಿ ಶಾಲೆಯ ಶಿಕ್ಷಕರು ಮತ್ತು ಸಿಬ್ಬಂದಿ ವರ್ಗ ಹಾಗೂ ಮಕ್ಕಳ ಪಾಲಕ ಪೋಷಕರು ಉಪಸ್ಥಿತರಿದ್ದರು.
ಶಾಲೆಯನ್ನು ಸ್ವಚ್ಛಗೊಳಿಸುವುದರೊಂದಿಗೆ ತಳಿರು ತೋರಣಗಳಿಂದ ಅಲಂಕರಿಸಿ ಮಕ್ಕಳನ್ನು ಕೈಬೀಸಿ ಕರೆಯುವಂತೆ ಮಾಡಿದ ಇಲ್ಲಿನ ಸಿಬ್ಬಂದಿಗಳು ಪ್ರಶಂಸೆಗೆ ಪಾತ್ರರಾದರು. ನಂತರ ಶಾಲಾ ಮಕ್ಕಳಿಗೆ ಸಿಹಿ ಹಂಚಲಾಯಿತು.
Subscribe to Updates
Get the latest creative news from FooBar about art, design and business.
Related Posts
Add A Comment

