ಸಿಂದಗಿ: ಕಳೆದ ಕೆಲ ದಿನಗಳ ಹಿಂದೆ ಅಕ್ರಮ ಮರಳು ಸಾಗಾಟ ಕುರಿತು ಸಿಂದಗಿ ತಾಲೂಕು ವರದಿಗಾರ ಗುಂಡು ಕುಲಕರ್ಣಿ ವರದಿ ಮಾಡಿದ ಹಿನ್ನಲೆಯಲ್ಲಿ ಸಿಂದಗಿ ಸ್ಥಳೀಯ ಪೋಲಿಸ್ ಇಲಾಖೆ ಅಧಿಕಾರಿಗಳು ವರದಿಗಾರನನ್ನು ಮಧ್ಯರಾತ್ರಿ ಅಪಹರಿಸಿ ಜೀವ ಬೆದರಿಕೆ ಹಾಕಿದ ಕುರಿತು ತಾಲೂಕು ದಂಡಾಧಿಕಾರಿಗಳ ಮೂಲಕ ರಾಜ್ಯಪಾಲರಿಗೆ ಮತ್ತು ಸಿಎಂ ಅವರಿಗೆ ಕಾರ್ಯನಿರತ ಪತ್ರಕರ್ತರ ಸಂಘ ಹಾಗೂ ಪತ್ರಕರ್ತರು ಶುಕ್ರವಾರ ಮನವಿ ಸಲ್ಲಿಸಿದರು.
ಈ ಸಂದರ್ಭದಲ್ಲಿ ಕಾನಿಪ ತಾಲೂಕಾಧ್ಯಕ್ಷ ಆನಂದ ಶಾಬಾದಿ ಮಾತನಾಡಿ, ಗುಂಡು ಕುಲಕರ್ಣಿ ಅಕ್ರಮ ಮರಳು ಸಾಗಣೆ ಕುರಿತು ವರದಿ ಮಾಡಿದ್ದಕ್ಕಾಗಿ ಗುಂಡು ಕುಲಕರ್ಣಿ ಅವರನ್ನು ಪೊಲೀಸ್ ಇಲಾಖೆಯ ಅಧಿಕಾರಿಗಳು ಅಪಹರಿಸಿ ಹೊರವಲಯಕ್ಕೆ ಕರೆದೊಯ್ದು ಜೀವ ಬೆದರಕೆ ಹಾಕಿದ್ದಾರೆ ಅಲ್ಲದೇ ವರದಿ ಮಾಡದಂತೆ ಎಚ್ಚರಿಕೆ ನೀಡಿದ್ದಾರೆ. ನನಗೆ ಜೀವ ಭಯವಿದೆ ಎಂದು ಗುಂಡು ಕುಲಕರ್ಣಿ ಅವರು ನಮ್ಮ ಸಂಘಕ್ಕೆ ಒಂದು ಮನವಿ ಸಲ್ಲಿಸಿದ್ದಾರೆ. ಸಾರ್ವಜನಿಕರ ಹಿತಾಸಕ್ತಿ ಮೇರೆಗೆ ಅವರಿಗೆ ಸ್ಪಂದಿಸಿ ಸುದ್ದಿ ಮಾಡುವುದು ಪತ್ರಕರ್ತರ ಕರ್ತವ್ಯ. ಮಾಡಿರುವ ಸುದ್ದಿಯನ್ನು ನೋಡಿದ ಮೇಲಾಧಿಕಾರಿಗಳು ಅದನ್ನು ನೋಡಿಕೊಂಡು ಮುಂದೆ ಈ ರೀತಿಯಾಗದಂತೆ ನೋಡಿಕೊಳ್ಳಬೇಕು. ಅದನ್ನು ಬಿಟ್ಟು ಸುದ್ದಿ ಮಾಡಿದ ಪತ್ರಕರ್ತನಿಗೆ ಪ್ರಾಣ ಭಯ ಹುಟ್ಟಿಸುವಂತಹ ಕಾರ್ಯ ಯಾವುದೇ ಇಲಾಖೆಯಿಂದ ಆಗಬಾರದು. ಇದರ ಕುರಿತಾಗಿ ಈಗಾಗಲೇ ಜಿಲ್ಲಾಧಿಕಾರಿ, ಎಸ್ಪಿ ಅವರಿಗೆ ಇದರ ಬಗ್ಗೆ ದೂರು ಸಲ್ಲಿಸಿದಾಗ ಅವರು ತಂಡ ರಚನೆ ಮಾಡಿ ಪರಿಶೀಲಿಸಿ ತನಿಖೆ ಮಾಡಲಾಗುವುದು ಎಂದು ಹೇಳಿದ್ದಾರೆ. ಇದರಲ್ಲಿ ತಪ್ಪು ಯಾರದೆಂದು ಕುಲಂಕುಶವಾಗಿ ಪರಿಶೀಲನೆ ಮತ್ತು ತನಿಖೆ ಮಾಡಿ ತಪ್ಪಿತಸ್ಥರ ವಿರುದ್ಧ ಸೂಕ್ತ ಕ್ರಮಕೈಗೊಳ್ಳಬೇಕು ಎಂದರು.
ಈ ವೇಳೆ ಮನವಿ ಸ್ವೀಕರಿಸಿದ ತಹಶೀಲ್ದಾರ್ ಪ್ರದೀಪಕುಮಾರ ಹಿರೇಮಠ ಮಾತನಾಡಿ, ಈಗಾಗಲೇ ಈ ವಿಚಾರದ ಕುರಿತು ನಾನು ಮತ್ತು ಇಂಡಿ ಉಪವಿಭಾಗ ಅಧಿಕಾರಿಗಳು ಎಚ್ಚರಿಕೆ ನೀಡಿದ್ದೇವೆ. ತಂಡ ರಚನೆ ಮಾಡಿ ತಪ್ಪಿತಸ್ಥರು ಯಾರು ಎಂದು ಪರಿಶೀಲಿಸಿ ತನಿಖೆ ಮಾಡಿ ಅವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುತ್ತೇವೆ ಎಂದು ಹೇಳಿದರು.
ಈ ವೇಳೆ ಪತ್ರಕರ್ತರಾದ ಮಲ್ಲಿಕಾರ್ಜುನ ಅಲ್ಲಾಪೂರ, ರಮೇಶ ಪೂಜಾರ, ಭೀಮು ಕೆಂಭಾವಿ, ಭೋಜರಾಜ ದೇಸಾಯಿ, ವಿಜಯ ಪತ್ತಾರ, ರವಿಚಂದ್ರ ಮಲ್ಲೇದ, ಅಂಬರೀಷ ಸುಣಗಾರ, ಶಿವಾನಂದ ಆಲಮೇಲ, ಸಲಿಂ ಮರ್ತೂರ, ನವೀನ ಶೆಳ್ಳಗಿ, ಮಹಾಂತೇಶ ನೂಲಾನವರ, ಶಾಂತವೀರ ಹಿರೇಮಠ, ಸಂಗಮೇಶ ಮನ್ನಿಕಟ್ಟಿ, ಖಾಜಾಅಮೀನ ಮಕಾಂದಾರ, ಇಸ್ಮಾಯಿಲ್ ಶೇಖ, ರಶೀದ ಕುಮಸಗಿ, ಅಬ್ದುಲಗಫುರ ಮುಜಾವರ, ವಸೀಮ್ ಗೋಗಿ ಸೇರಿದಂತೆ ಅನೇಕರಿದ್ದರು.
Subscribe to Updates
Get the latest creative news from FooBar about art, design and business.
ಪತ್ರಕರ್ತಗೆ ಬೆದರಿಕೆ ಹಾಕಿದ ಪೋಲಿಸರ ಮೇಲೆ ಕ್ರಮಕ್ಕೆ ಕಾನಿಪ ಆಗ್ರಹ
Related Posts
Add A Comment

