Subscribe to Updates
Get the latest creative news from FooBar about art, design and business.
Author: editor.udayarashmi@gmail.com
ಆಲಮೇಲ: ಗುರುವಿಲ್ಲದ ಕಾರ್ಯ ಯಾವುದು ಸಾರ್ಥಕವಾಗುವದಿಲ್ಲ ಪ್ರತಿಯೊಂದಕ್ಕೂ ಗುರು ಬೇಕು. ಆ ಗುರುವಿನ ಸ್ಥಾನ ಭಾರತ. ಜಗತ್ತಿಗೆ ಗುರುವಿನ ಸ್ಥಾನದಲ್ಲಿದೆ. ಋಷಿಮುನಿಗಳು ನೀಡಿದ ಕೊಡಿಗೆ ಇಂದು ಜಗತ್ತಿಗೆ ಸ್ಪೂರ್ತಿಯಾದ ಯೋಗ ಇಂದು ಅಂತರಾಷ್ಟ್ರೀಯ ಯೋಗ ದಿನವಾಗಿ ಆಚರಿಸಲಾಗುತ್ತಿದೆ. ಅದನ್ನು ಭಾರತಿಯರು ಹೆಮ್ಮೆಪಡುವಂತದ್ದು. ಪ್ರತಿನಿತ್ಯದ ತಮ್ಮ ಜೀವನದಲ್ಲಿ ಯೋಗ ಪ್ರಾಣಾಯಾಮ ಅಳವಡಿಸಿಕೊಂಡು ನೆಮ್ಮದಿಯ ಜೀವನ ನಡೆಸಬೇಕು ಎಂದು ಡಾ.ಶಾರದಾ ಪಾಟೀಲ ಹೇಳಿದರು.ಪಟ್ಟಣದ ಸಿಂದಗಿ ರಸ್ತೆಯ ಯುಕೆಪಿ ಕ್ಯಾಂಪ್ ಆವರಣದಲ್ಲಿ ಯೋಗೋತ್ಸವ ಸಮೀತಿ ಹಮ್ಮಿಕೊಂಡ ಉಚಿತ ಯೋಗ ಶೀಬಿರದ ಪ್ರಾರಂಭೋತ್ಸವ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು.ಭಾರತದ ಪುರಾತನ ಋಷಿಮುನಿಗಳು ಕೊಟ್ಟಂತ ಯೋಗ, ಪ್ರಾಣಾಯಂ, ದ್ಯಾನ ಇಂದು ಜಗತ್ತಿಗೆ ಉತ್ತಮ ಆರೋಗ್ಯದ ಕವಚವಾಗಿದೆ. ಯೋಗ ಆದ್ಯಾತ್ಮದ ಪದ್ದತ್ತಿ ಭಾರತದ ಪುರಾತನ ಋಷಿಮುನಿಗಳ ಕಾಲದಿಂದ ಬಂದಿದೆ. ಆ ಯೋಗಮಯ ಜೀವನ ನಾವು ಮುಂದುವರೆಸಿಕೊಂಡು ಹೋಗಬೇಕು. ಭಾರತದ ಯೋಗ ಪ್ರಾಣಾಯಂದ ಪದ್ದತಿ ಜಗತ್ತೆ ಅಳವಡಿಸಿಕೊಳ್ಳುವಾಗ ನಮ್ಮ ಯುವ ಜನಾಂಗ ವಿದೇಶಿ ಸಂಸಕೃತಿಯ ಜಿಮ್ಮ ಮೋರೆ ಹೋಗುತ್ತಿದ್ದು ವಿರ‍್ಯಾಸ ಜಿಮ್ಮಗಿಂತಲು ಭಾರತಿಯ…
ದೇವರಹಿಪ್ಪರಗಿ: ಬಿಜೆಪಿ ಮಂಡಲ ಹಾಗೂ ಯುವ ಮೋರ್ಚಾ ಕಾರ್ಯಕರ್ತರು ಕೇಂದ್ರದಲ್ಲಿ ಮತ್ತೋಮ್ಮೆ ಬಿಜೆಪಿ ಸರ್ಕಾರ ರಚನೆಗಾಗಿ ಕಲ್ಮೇಶ್ವರ ದೇವಸ್ಥಾನದಲ್ಲಿ ವಿಜಯ ಸಂಕಲ್ಪ ಅಭಿಷೇಕ ನೆರವೇರಿಸಿ ಪ್ರಾರ್ಥಿಸಿದರು.ಪಟ್ಟಣದ ಕಲ್ಮೇಶ್ವರ ದೇವಸ್ಥಾನದಲ್ಲಿ ಭಾನುವಾರ ಬೆಳಿಗ್ಗೆ ೬ ಗಂಟೆಗೆ ಸೇರಿದ ಕಾರ್ಯಕರ್ತರು ಹಾಗೂ ಪದಾಧಿಕಾರಿಗಳು ಸದೃಡ, ಸಮೃದ್ಧ ಭಾರತದ ನಿರ್ಮಾಣಕ್ಕಾಗಿ ಪ್ರಧಾನಮಂತ್ರಿ ನರೇಂದ್ರ ಮೋದಿಯವರ ನಾಯಕತ್ವದಲ್ಲಿ ೩ನೇಯ ಬಾರಿ ಬಿಜೆಪಿ ನೇತೃತ್ವದ ಎನ್‌ಡಿಎ ಸರ್ಕಾರ ರಚನೆಗಾಗಿ ವಿಜಯ ಸಂಕಲ್ಪ ಮಹಾರುದ್ರಾಭಿಷೇಕ ನೆರವೇರಿಸಿ ಪ್ರಾರ್ಥನೆ ಕೈಗೊಂಡರು. ನಂತರ ಪ್ರಸಾದ ವಿತರಿಸಲಾಯಿತು.ಜಿಲ್ಲಾ ಬಿಜೆಪಿ ಕಾರ್ಯದರ್ಶಿ ರಮೇಶ ಮಸಬಿನಾಳ, ಮಂಡಲ ಖಜಾಂಚಿ ಸೋಮಶೇಖರ ಹಿರೇಮಠ, ಯುವಮೋರ್ಚಾ ಉಪಾಧ್ಯಕ್ಷ ಕಲ್ಮೇಶ ಬುದ್ನಿ, ಹಿಂದುಳಿದ ಮೋರ್ಚಾ ಉಪಾಧ್ಯಕ್ಷ ರಾವುತ ಅಗಸರ, ಸೋಮು ದೇವೂರ, ಚಿದಾನಂದ ಕುಂಬಾರ, ವಿಶಾಲ್ ಭಾಸುತ್ಕರ್, ಚೇತನ ಇಂಡಿ, ಶ್ರೀಶೈಲ ಯಂಭತ್ನಾಳ, ಪ್ರಶಾಂತ ಹೊನ್ನುಟಗಿ, ಪುನೀತ ಹಿಪ್ಪರಗಿ, ರಮೇಶ ಮಾಳನೂರ, ಪವನ ನಾಯ್ಕೋಡಿ, ಸಾಗರ ತೋಟದ, ಸುಮೀತ ಬುದ್ನಿ, ಮಹಾಂತೇಶ ಬಿರಾದಾರ, ಸಂತೋಷ ಪತ್ತಾರ ಸೇರಿದಂತೆ ಇತರರು ಇದ್ದರು.
ಬಸವನಬಾಗೇವಾಡಿ: ತಾಲೂಕಿನ ಇವಣಗಿ ಗ್ರಾಮದ ವರದಾನಿ ಲಕ್ಕಮ್ಮದೇವಿ ಜಾತ್ರಾ ಮಹೋತ್ಸವದ ಅಂಗವಾಗಿ ಜೂ.5 ರಿಂದ ಜೂ.9 ರವರೆಗೆ ವಿವಿಧ ಧಾರ್ಮಿಕ, ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ.ಜೂ.5 ರಂದು ಬೆಳಗ್ಗೆ 10 ಗಂಟೆಗೆ ವಿವಿಧ ವಾದ್ಯಗಳೊಂದಿಗೆ ಏಳು ಪಾಂಡವರ ಗಿಡಕ್ಕೆ ಹೋಗಿ ಲಕ್ಕಮ್ಮದೇವಿಯನ್ನು ಬರಮಾಡಿಕೊಳ್ಳಲಾಗುವುದು. ಜಾತ್ರೆಯ ಅಂಗವಾಗಿಪಗಡಿ ಪಂದ್ಯಾವಳಿ ಹಮ್ಮಿಕೊಳ್ಳಲಾಗಿದೆ. ರಾತ್ರಿ 9 ಗಂಟೆಗೆ ಶ್ರೀಕೃಷ್ಣ ಪಾರಿಜಾತ ಬಯಲಾಟ ಜರುಗುವುದು.ಜೂ.6 ರಂದು ಬೆಳಗ್ಗೆ ಗಂಗಸ್ಥಳ ಪೂಜೆ ನೆರವೇರುವುದು. ಡೊಳ್ಳು, ವಿವಿಧ ವಾದ್ಯಗಳು ಸೇರಿದಂತೆ 11 ಪಲ್ಲಕ್ಕಿಗಳ ಉತ್ಸವವು ಗ್ರಾಮದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ಮೂಲಕ ದೇವಿಯನ್ನು ದೇವಸ್ಥಾನಕ್ಕೆ ಕರೆತರಲಾಗುವುದು. ನಂತರ ಗ್ರಾಮದೇವತೆಗೆ ಉಡಿ ತುಂಬುವ ಕಾರ್ಯಕ್ರಮ ನೆರವೇರುವುದು. ದೇವಿಯ ನುಡಿಮುತ್ತುಗಳು ಹಾಗೂ ಸಿದ್ಧಪುರುಷರ ಶಿವವಾಣಿ (ಹೇಳಿಕೆಗಳು) ಜರುಗುವುದು. ರಾತ್ರಿ 9 ಗಂಟೆಗೆ ವಾದಿ ಪ್ರತಿವಾದಿಗಳಿಂದ ಡೊಳ್ಳಿನ ಪದಗಳ ಕಾರ್ಯಕ್ರಮ ಜರುಗುವುದು.ಜೂ.7 ರಂದು ಬೆಳಗ್ಗೆ 9 ಗಂಟೆಗೆ ಬಾರ ಎತ್ತುವ ಸ್ಪರ್ಧೆ ಹಾಗೂ ಗುಂಡು, ಸಂಗ್ರಾಣಿ ಕಲ್ಲು, ಚೀಲ ಎತ್ತುವ ಕಾರ್ಯಕ್ರಮ ಜರುಗುವುದು. ಮಧ್ಯಾಹ್ನ 3…
ಬಸವನಬಾಗೇವಾಡಿ: ತಾಲೂಕಿನ ಮನಗೂಳಿ ಪಟ್ಟಣದ ಹಿರೇಮಠದ ಶತಾಯುಷಿ ಲಿಂ. ಸಂಗನಬಸವ ಶಿವಾಚಾರ್ಯ ಸ್ವಾಮೀಜಿಯವರ ೪೧ ನೇ ಪುಣ್ಯ ಸ್ಮರಣೋತ್ಸವ ಹಾಗೂ ಪಂಚಮಸಾಲಿ ಸಮಾಜದ ಪ್ರಥಮ ಜಗದ್ಗುರು ಲಿಂ. ಮಹಾಂತ ಶಿವಾಚಾರ್ಯ ಸ್ವಾಮೀಜಿಯವರ ೧೧ ನೇ ಜಾತ್ರಾಮಹೋತ್ಸವದಂಗವಾಗಿ ಭಾನುವಾರ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಉಭಯಶ್ರೀಗಳ ರಜತ ಮೂರ್ತಿಗಳ ಮೆರವಣಿಗೆ, ಧರ್ಮಸಭೆ ಜರುಗಿತು.ಪಟ್ಟಣದ ಬಸಪ್ಪ ಹುಣಶಿಕಟ್ಟಿ ಅವರ ತೋಟದಿಂದ ವಿವಿಧ ವಾದ್ಯಮೇಳದೊಂದಿಗೆ ಕುಂಭ ಮೆರವಣಿಗೆಯು ಪಟ್ಟಣದ ಪ್ರಮುಖ ಬೀದಿಗಳಲ್ಲಿ ಸಂಚರಿಸಿ ಶ್ರೀಮಠಕ್ಕೆ ತಲುಪಿತು. ನಂತರ ಉಭಯ ಶ್ರೀಗಳ ಕರ್ತೃ ಗದ್ದುಗೆಗೆ ಮಹಾರುದ್ರಭಿಷೇಕ, ವಿಶೇಷ ಪೂಜೆ ನೆರವೇರಿದ ಉಭಯ ಶ್ರೀಗಳ ರಜತ ಮೂರ್ತಿಗಳ ಪಲ್ಲಕ್ಕಿ ಮಹೋತ್ಸವ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಸಕಲ ವಾದ್ಯವೈಭವದೊಂದಿಗೆ ಭಕ್ತರ ಹರ್ಷೋದ್ಗಾರದೊಂದಿಗೆ ಜರುಗಿತು. ನಂತರ ಶ್ರೀಮಠದಲ್ಲಿ ಧರ್ಮಸಭೆ ಹಾಗೂ ಶಿವಶರಣೆ ಹೇಮರೆಡ್ಡಿ ಮಲ್ಲಮ್ಮಳ ಪುರಾಣ ಮಹಾಮಂಗಲ ಕಾರ್ಯಕ್ರಮ ಜರುಗಿತು.ಸಾನಿಧ್ಯ ವಹಿಸಿದ್ದ ಶ್ರೀಮಠದ ಅಭಿನವ ಸಂಗನಬಸವ ಶಿವಾಚಾರ್ಯ ಸ್ವಾಮೀಜಿ ಮಾತನಾಡಿ, ಶ್ರೀಮಠದ ಪರಂಪರೆಯಲ್ಲಿ ಎಲ್ಲ ಲಿಂಗೈಕ್ಯ ಶ್ರೀಗಳು ತಮ್ಮದೇ ಕೊಡುಗೆ ನೀಡುವ ಮೂಲಕ…
ಇಂಡಿ: ತಾಲೂಕಿನಲ್ಲಿ ಸೋಮವಾರ ನಸುಕಿನ ೩.೩೦ ಗಂಟೆಯಿಂದ ಮುಂಜಾನೆ ೭.೩೦ ಗಂಟೆಯ ವರೆಗೆ ತಾಲೂಕಿನಾದ್ಯಂತ ೪೪.೪ ಮೀ.ಮೀ ಮಳೆಯಾಗಿದೆ. ರೋಹಿಣಿ ಮಳೆ ಇದೇ ಪ್ರಥಮ ಬಾರಿಗೆ ಆಗಿದ್ದು ರೈತರಲ್ಲಿ ಹರ್ಷ ಮೂಡಿದೆ. ರೋಹಿಣಿ ಮಳೆಗೆ ಹೆಸರು ಬೆಳೆಯಲು ಅತೀ ಸರಿಯಾದ ಸಮಯದ ಮಳೆ ಎಂದು ನಂಬಲಾಗುತ್ತಿದೆ.ಇಂಡಿಯಲ್ಲಿ ೬೪ ಮಿ.ಮಿ, ನಾದ ಬಿಕೆ ೪೨.೨ ಮಿ.ಮಿ, ಅಗರಖೇಡ ೬೩.೧ ಮಿ.ಮಿ, ಹೊರ್ತಿ ೮.೨ ಮಿ.ಮಿ ಮಳೆಯಾಗಿದೆ ಎಂದು ಸಹಾಯಕ ಕೃಷಿ ನಿರ್ದೇಶಕ ಮಹಾದೇವಪ್ಪ ಏವೂರ ತಿಳಿಸಿದ್ದಾರೆ.ಬಿತ್ತನೆ ಗುರಿ – ತಾಲೂಕಿನಲ್ಲಿ ತೊಗರಿ ೯೧೭೫೦ ಹೇ, ಮೆಕ್ಕೆಜೋಳ ೧೫೭೧೬ ಹೇ,ಶೇಂಗಾ ೧೨೦೦ ಹೇ. ಸೂರ್ಯಕಾಂತಿ ೩೮೫೦ ಹೇ,ಹತ್ತಿ ೧೧೮೨೫ ಹೇ, ಹೀಗೆ ಒಟ್ಟು ಒಂದು ಲಕ್ಷ ೫೫ ಸಾವಿರ ೧೩೪ ಹೇಕ್ಟರ ಪ್ರದೇಶ ಬಿತ್ತನೆಯ ಗುರಿ ಹೊಂದಲಾಗಿದೆ.ಇದರಲ್ಲಿ ಕಬ್ಬು ಈಗಾಗಲೇ ೧೬೦೦೦ ಹೇ ಪ್ರದೇಶದಲ್ಲಿದ್ದು ಇನ್ನು ೭೦೦೦ ಹೇ ಗುರಿ ಹೊಂದಿದೆ ಎಂದು ಏವೂರ ತಿಳಿಸಿದರು.ಬೀಜ ಗೊಬ್ಬರ — ತಾಲೂಕಿನಲ್ಲಿ ಈಗಾಗಲೇ ರೈತ ಸಂಪರ್ಕ…
ಸಿಂದಗಿ: ಯಶಸ್ವಿ ಹಾಗೂ ಸುಖ ಜೀವನ ಸಾಗಿಸಬೇಕೆಂಬುದು ಪ್ರತಿಯೊಬ್ಬರ ಕನಸಾಗಿದೆ. ನಿವೃತ್ತಿಯು ಬಳಿಕವೂ ಜೀವನ ಸುಂದರವಾಗಿರಬೇಕು ಎಂಬುದು ಪ್ರತಿಯೊಬ್ಬರ ಬಯಕೆ ಆಗಿದೆ ಎಂದು ಸಂಸ್ಥೆಯ ನಿರ್ದೇಶಕ ವಿವೇಕಾನಂದ ಸಾಲಿಮಠ ಹೇಳಿದರು.ಪಟ್ಟಣದ ಶ್ರೀ ಪದ್ಮರಾಜ ವಿದ್ಯಾವರ್ಧಕ ಸಂಸ್ಥೆಯ ಆರ್.ಡಿ.ಪಾಟೀಲ ಪದವಿ ಪೂರ್ವ ಕಾಲೇಜಿನಲ್ಲಿ ಸೇವಾ ನಿವೃತ್ತಿಯಾದ ಪ್ರಯುಕ್ತ ೩೭ ವರ್ಷ ಸುದೀರ್ಘ ಸೇವೆ ಸಲ್ಲಿಸಿದ ಪ್ರಾಚಾರ್ಯ ವಿಮಲಕಾಂತ ಪಾಟೀಲ ಹಾಗೂ ೪೨ ವರ್ಷ ಸೇವೆಸಲ್ಲಿಸಿದ ಜವಾನ ಈರಣ್ಣ ಶಿವಸಿಂಪಿಗೇರ್ ಇರ್ವರ ಬಿಳ್ಕೋಡುವ ಸಮಾರಂಭದಲ್ಲಿ ಸನ್ಮಾನಿಸಿ ಅವರು ಮಾತನಾಡಿದರು.ಸೇವಾವಧಿಯ ಸಂದರ್ಭದಲ್ಲಿ ಕರ್ತವ್ಯಕ್ಕೆ ಹೆಚ್ಚು ಮಹತ್ವ ನೀಡಿ ಪ್ರಾಮಾಣಿಕವಾದ ಸೇವೆ ಸಲ್ಲಿಸಿದರೇ ನಿವೃತ್ತಿಯ ನಂತರ ನೆಮ್ಮದಿ ತಾನೇ ಅರಸಿಕೊಂಡು ಬರುತ್ತದೆ. ಅಧಿಕಾರವಿದ್ದಾಗ ಸರ್ವರೊಂದಿಗೆ ಹೊಂದಾಣಿಕೆ ಮಾಡಿಕೊಂಡು ನ್ಯಾಯಯುತವಾಗಿ ಕೆಲಸ ಮಾಡಿದ್ದಲ್ಲಿ ನಿವೃತ್ತಿ ನಂತರ ಹೆಚ್ಚಿನ ಗೌರವ ಸಿಕ್ಕುತ್ತದೆ ಎಂದರು.ಆಡಳಿತಾಧಿಕಾರಿ ಬಿ.ಜಿ.ಮಠ ಮಾತನಾಡಿ, ಹುಟ್ಟಿದ ಮನುಷ್ಯ ಸಾಯಲೇಬೇಕು ಅಂತೇಯೇ ಸೇವೆಗೆ ಸೇರಿದ ಮೇಲೆ ನಿವೃತ್ತಿ ಹೊಂದಲೇಬೇಕು ನಿವೃತ್ತರಾದ ಪ್ರಾಚಾರ್ಯ ವಿಮಲಕಾಂತ ಪಾಟೀಲ ಹಾಗೂ ಈರಣ್ಣ ಶಿವಸಿಂಪಿಗೇರ್ ಅವರು…
ಸಿಂದಗಿ: ಪಟ್ಟಣದ ಶ್ರೀ ಪದ್ಮರಾಜ ವಿದ್ಯಾವರ್ಧಕ ಸಂಸ್ಥೆಯ ಆರ್.ಡಿ.ಪಾಟೀಲ ಕಲಾ, ವಾಣಿಜ್ಯ ಹಾಗೂ ವಿಜ್ಞಾನ ಪದವಿ ಪೂರ್ವ ಮಹಾವಿದ್ಯಾಲಯದ ನೂತನ ಪ್ರಾಚಾರ್ಯರಾಗಿ ಭೀಮನಗೌಡ ಎಂ. ಸಿಂಗನಳ್ಳಿ ಅಧಿಕಾರ ಸ್ವೀಕರಿಸಿದರು.ಅಧಿಕಾರ ಸ್ವೀಕರಿಸಿ ಮಾತನಾಡಿದ ಅವರು, ಪರಮಪೂಜ್ಯ ಚೆನ್ನವೀರ ಸ್ವಾಮೀಜಿಯರ ಕೃಪಾಶೀರ್ವಾದೊಂದಿಗೆ ಸಂಸ್ಥೆಯ ಚೇರಮನ್ನ ಡಾ. ಪ್ರಭುಸಾರಂಗದೇವ ಶಿವಾಚಾರ್ಯರು ಈ ಭಾಗವನ್ನು ಶೈಕ್ಷಣಿಕ ಕೇಂದ್ರವನ್ನಾಗಿಸುವ ಸಂಕಲ್ಪ ತೊಟ್ಟಿದ್ದಾರೆ. ಗುಣಮಟ್ಟಕ್ಕೆ ಮತ್ತೊಂದು ಹೆಸರಾಗಿ ಶ್ರೀ ಪದ್ಮರಾಜ ವಿದ್ಯಾವರ್ಧಕ ಸಂಸ್ಥೆ ಇಂದು ಸಮಾಜದಲ್ಲಿ ಗುರುತಿಸಿಕೊಂಡಿದೆ. ಎಲ್ಲರೂ ಜತೆಜತೆಯಾಗಿ ಹೆಜ್ಜೆ ಹಾಕಿದರೆ ಸಂಸ್ಥೆ ಮತ್ತಷ್ಟು ಉನ್ನತಿಯನ್ನು ಸಾಧಿಸುವುದರಲ್ಲಿ ಅನುಮಾನವಿಲ್ಲ. ಈ ಸಂಸ್ಥೆ ಅತ್ಯಂತ ನನ್ನ ಮೇಲೆ ವಿಶ್ವಾಸ ಇರಿಸಿ ಗುರುತರ ಜವಾಬ್ದಾರಿ ನೀಡಿದೆ ಇದನ್ನು ನಿರ್ವಹಿಸುವಲ್ಲಿ ಎಲ್ಲರ ಸಹಕಾರದ ಅಗತ್ಯವಿದೆ ಎಂದರು.ಈ ಸಂದರ್ಭದಲ್ಲಿ ಸಂಸ್ಥೆಯ ನಿರ್ದೇಶಕರಾದ ವಿವೇಕಾನಂದ ಸಾಲಿಮಠ, ಆಡಳಿತಾಧಿಕಾರಿ ಬಿ.ಜಿ.ಮಠ, ನಿವೃತ್ತ ಪ್ರಾಚಾರ್ಯ ವಿಮಲಕಾಂತ ಪಾಟೀಲ, ಡಾ. ವಿಶ್ವನಾಥ ನಂದಿಕೋಲ ಸೇರಿದಂತೆ ಬೋಧಕ, ಬೋಧಕೇತರ ಸಿಬ್ಬಂದಿ ವರ್ಗ ಇದ್ದರು.
ವಿಜಯಪುರ: ಲೋಕಸಭಾ ಸಾರ್ವತ್ರಿಕ ಚುನಾವಣೆ 2024ರ ಮತ ಎಣಿಕೆಯು ಜೂನ್ 4 ರಂದು ನಗರದ ಸೈನಿಕ ಶಾಲೆಯಲ್ಲಿ ನಡೆಯಲಿದ್ದು,ಮತ ಎಣಿಕೆ ಕಾರ್ಯವನ್ನು ಶಾಂತಿ ಹಾಗೂ ಸುವ್ಯವಸ್ಥೆಯಿಂದ ನಡೆಯುವಂತೆ ಅನೂಕೂಲವಾಗಲು ಹಾಗೂ ಯಾವುದೇ ಅಹಿತಕರ ಘಟನೆಗಳು ಜರುಗದಂತೆ, ಸಾರ್ವಜನಿಕ ವಿತ್ತಿ – ಜೀವಿತಗಳನ್ನು ಸಂರಕ್ಷಣೆ ಮಾಡುವ ಹಿತದೃಷ್ಟಿಯಿಂದ ಜೂನ್ 4ರ ಬೆಳಗ್ಗೆ 6 ಗಂಟೆಯಿಂದ ಜೂನ್ 6 ರ ಮಧ್ಯರಾತ್ರಿ 12 ಗಂಟೆಯವರೆಗೆ ಸಿ ಆರ್ ಪಿ ಸಿ ಸೆ.144 ಅನ್ವಯ ಮತ ಎಣಿಕೆಯ ಸುತ್ತಲಿನ 200 ಮೀಟರ್ ಪ್ರದೇಶವನ್ನು ನಿರ್ಬಂಧಿತ ಪ್ರದೇಶ ಎಂದು ಜಿಲ್ಲಾ ದಂಡಾಧಿಕಾರಿ ಹಾಗೂ ಜಿಲ್ಲಾಧಿಕಾರಿ ಟಿ. ಭೂಬಾಲನ್ ಆದೇಶ ಹೊರಡಿಸಿದ್ದಾರೆ.
ವಿಜಯಪುರ: ಬರಟಗಿ ರಸ್ತೆಯಲ್ಲಿರುವ ಪೂನಂ ಲೇಔಟನಲ್ಲಿ ಜ್ಞಾನಯೋಗಾಶ್ರಮದ ಮಾರ್ಗದರ್ಶನದಲ್ಲಿ ನನ್ನ ಗಿಡ ನನ್ನ ಭೂಮಿ ಸೇರಿದಂತೆ ವಿವಿಧ ಪರಿಸರ ಪರ ಸಂಘಟನೆಗಳ ಸಂಯುಕ್ತ ಸಹಯೋಗದಲ್ಲಿ ಜೂ.05 ರಂದು ವಿಶ್ವ ಪರಿಸರ ದಿನಾಚರಣೆ ಆಚರಿಸಲಾಗುತ್ತಿದೆ.ನಡೆದಾಡುವ ದೇವರು ಶ್ರೀ ಸಿದ್ದೇಶ್ವರ ಸ್ವಾಮೀಜಿ ನಡೆದಾಡಿದ ನೆಲವನ್ನು ಹಸಿರ ನೆಲವನ್ನಾಗಿಸುವ ಧ್ಯೇಯದೊಂದಿಗೆ ಪರಿಸರ ದಿನ ಆಚರಿಸಲಾಗುತ್ತಿದ್ದು ಆ ಸ್ಥಳದಲ್ಲಿ ಏಕಕಾಲಕ್ಕೆ ೨೦೦ ಸಸಿಗಳನ್ನು ನೆಡಲಾಗುತ್ತದೆ. ಜ್ಞಾನಯೋಗಾಶ್ರಮದ ಅಧ್ಯಕ್ಷ ಗುರುಗಳಾದ ಶ್ರೀ ಬಸಗಲಿಂಗ ಮಹಾಸ್ವಾಮಿಜಿ, ಅಥರ್ಗಾದ ಗುರುದೇವಾಶ್ರಮದ ಶ್ರೀ ಈಶ ಪ್ರಸಾದ ಮಹಾಸ್ವಾಮಿಗಳು ಸಾನಿಧ್ಯ ವಹಿಸುವರು.ಎಂದು ಪತ್ರಿಕಾ ಪ್ರಟಣೆಯಲ್ಲಿ ನನ್ನ ಗಿಡ ನನ್ನ ಭೂಮಿ ಸಂಘಟನೆಯ ಸಂಚಾಲಕ ಬಸವರಾಜ ಬೈಚಬಾಳ ತಿಳಿಸಿದ್ದಾರೆ
ಮತ ಎಣಿಕೆ ಅಂತಿಮ ಹಂತದ ಸಿದ್ಧತೆ ಪರಿಶೀಲಿಸಿದ ಡಿಸಿ ಟಿ.ಭೂಬಾಲನ್ ವಿಜಯಪುರ: ಲೋಕಸಭಾ ಚುನಾವಣೆಯ ಮತ ಎಣಿಕೆಯು ಮಂಗಳವಾರ(ಜೂ.4) ನಡೆಯಲಿದ್ದು, ಚುನಾವಣಾ ಆಯೋಗದ ಮಾರ್ಗಸೂಚಿಯ ಪ್ರಕಾರ ಸಕಲ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ ಎಂದು ಜಿಲ್ಲಾ ಚುನಾವಣಾಧಿಕಾರಿ ಹಾಗೂ ಜಿಲ್ಲಾಧಿಕಾರಿಯೂ ಆಗಿರುವ ಜಿಲ್ಲಾಧಿಕಾರಿ ಟಿ. ಭೂಬಾಲನ್ ಹೇಳಿದರು.ವಿಜಯಪುರ ಮೀಸಲು(ಪ ಜಾ) ಲೋಕಸಭಾ ಕ್ಷೇತ್ರದ ಮತ ಎಣಿಕೆ ನಡೆಯಲಿರುವ ವಿಜಯಪುರ ನಗರದ ಸೈನಿಕ ಶಾಲೆಯ ಆವರಣದಲ್ಲಿ ಸೋಮವಾರದಂದು ಚುನಾವಣ ವೀಕ್ಷಕರೊಂದಿಗೆ ಅಂತಿಮ ಹಂತದ ಅಗತ್ಯ ಸಿದ್ಧತೆಗಳನ್ನು ಪರಿಶೀಲಿಸಿದ ನಂತರ ಮಾಧ್ಯಮದವರೊಂದಿಗೆ ಅವರು ಮಾತನಾಡಿದರು.ಮತ ಎಣಿಕೆ ಆರಂಭಕ್ಕೆ ಮುನ್ನ ಬೆಳಿಗ್ಗೆ 7 ಗಂಟೆಗೆ ಮತಯಂತ್ರಳನ್ನು ಇರಿಸಿದ ಭಧ್ರತಾ ಕೋಠಡಿಗಳನ್ನು ಚುನಾವಣಾ ವೀಕ್ಷಕರು, ಉಮೇದುವಾರರು ಹಾಗೂ ಚುನಾವಣಾ ಏಜೆಂಟರುಗಳ ಸಮ್ಮುಖದಲ್ಲಿ ತೆರೆಯಲಾಗುವುದು ಎಂದು ತಿಳಿಸಿದರು.ಬೆಳಿಗ್ಗೆ 8 ಗಂಟೆಯಿಂದ ಮತ ಎಣಿಕೆ ಕಾರ್ಯ ಆರಂಭಿಸಲಾಗುವುದು. ಅಂಚೆ ಮತಗಳ ಎಣಿಕೆಗೆ ಪ್ರತ್ಯೇಕ ಕೊಠಡಿಗಳನ್ನು ಸ್ಥಾಪಿಸಲಾಗಿದೆ. ಮತ ಎಣಿಕೆಯ ದಿನವಾದ ಮಂಗಳವಾರದ ಬೆಳಿಗ್ಗೆ 8 ಗಂಟೆಯವರೆಗೂ ಪೋಸ್ಟಲ್ ಬ್ಯಾಲೆಟ್ ಗಳನ್ನು ಸ್ವೀಕರಿಸಲಾಗುತ್ತದೆ ಎಂದರುಸೈನಿಕ್…
