ಸಿಂದಗಿ: ಯಶಸ್ವಿ ಹಾಗೂ ಸುಖ ಜೀವನ ಸಾಗಿಸಬೇಕೆಂಬುದು ಪ್ರತಿಯೊಬ್ಬರ ಕನಸಾಗಿದೆ. ನಿವೃತ್ತಿಯು ಬಳಿಕವೂ ಜೀವನ ಸುಂದರವಾಗಿರಬೇಕು ಎಂಬುದು ಪ್ರತಿಯೊಬ್ಬರ ಬಯಕೆ ಆಗಿದೆ ಎಂದು ಸಂಸ್ಥೆಯ ನಿರ್ದೇಶಕ ವಿವೇಕಾನಂದ ಸಾಲಿಮಠ ಹೇಳಿದರು.
ಪಟ್ಟಣದ ಶ್ರೀ ಪದ್ಮರಾಜ ವಿದ್ಯಾವರ್ಧಕ ಸಂಸ್ಥೆಯ ಆರ್.ಡಿ.ಪಾಟೀಲ ಪದವಿ ಪೂರ್ವ ಕಾಲೇಜಿನಲ್ಲಿ ಸೇವಾ ನಿವೃತ್ತಿಯಾದ ಪ್ರಯುಕ್ತ ೩೭ ವರ್ಷ ಸುದೀರ್ಘ ಸೇವೆ ಸಲ್ಲಿಸಿದ ಪ್ರಾಚಾರ್ಯ ವಿಮಲಕಾಂತ ಪಾಟೀಲ ಹಾಗೂ ೪೨ ವರ್ಷ ಸೇವೆಸಲ್ಲಿಸಿದ ಜವಾನ ಈರಣ್ಣ ಶಿವಸಿಂಪಿಗೇರ್ ಇರ್ವರ ಬಿಳ್ಕೋಡುವ ಸಮಾರಂಭದಲ್ಲಿ ಸನ್ಮಾನಿಸಿ ಅವರು ಮಾತನಾಡಿದರು.
ಸೇವಾವಧಿಯ ಸಂದರ್ಭದಲ್ಲಿ ಕರ್ತವ್ಯಕ್ಕೆ ಹೆಚ್ಚು ಮಹತ್ವ ನೀಡಿ ಪ್ರಾಮಾಣಿಕವಾದ ಸೇವೆ ಸಲ್ಲಿಸಿದರೇ ನಿವೃತ್ತಿಯ ನಂತರ ನೆಮ್ಮದಿ ತಾನೇ ಅರಸಿಕೊಂಡು ಬರುತ್ತದೆ. ಅಧಿಕಾರವಿದ್ದಾಗ ಸರ್ವರೊಂದಿಗೆ ಹೊಂದಾಣಿಕೆ ಮಾಡಿಕೊಂಡು ನ್ಯಾಯಯುತವಾಗಿ ಕೆಲಸ ಮಾಡಿದ್ದಲ್ಲಿ ನಿವೃತ್ತಿ ನಂತರ ಹೆಚ್ಚಿನ ಗೌರವ ಸಿಕ್ಕುತ್ತದೆ ಎಂದರು.
ಆಡಳಿತಾಧಿಕಾರಿ ಬಿ.ಜಿ.ಮಠ ಮಾತನಾಡಿ, ಹುಟ್ಟಿದ ಮನುಷ್ಯ ಸಾಯಲೇಬೇಕು ಅಂತೇಯೇ ಸೇವೆಗೆ ಸೇರಿದ ಮೇಲೆ ನಿವೃತ್ತಿ ಹೊಂದಲೇಬೇಕು ನಿವೃತ್ತರಾದ ಪ್ರಾಚಾರ್ಯ ವಿಮಲಕಾಂತ ಪಾಟೀಲ ಹಾಗೂ ಈರಣ್ಣ ಶಿವಸಿಂಪಿಗೇರ್ ಅವರು ಈ ಸಂಸ್ಥೆಯಲ್ಲಿ ಸೇವೆ ಸಲ್ಲಿಸಿದ್ದು ಸರಳ ಮತ್ತು ಸಾತ್ವಿಕ ಸ್ವಭಾವದವರಾಗಿದ್ದು ಎಲ್ಲರನ್ನು ಪ್ರೀತಿಯಿಂದ ಕಾಣುವ ಮನೋಭಾವ ಇವರದಾಗಿತ್ತು ಅವರ ನಿವೃತ್ತಿ ಜೀವನ ಸುಖಕರವಾಗಲಿ ಎಂದು ಹಾರೈಸಿದರು.
ಸೇವಾ ನಿವೃತ್ತಿಯಾದ ಪ್ರಾಚಾರ್ಯ ವಿಮಲಕಾಂತ ಪಾಟೀಲ ಸನ್ಮಾನ ಸ್ವೀಕರಿಸಿ ಮಾತನಾಡಿ, ಸೇವಾವಧಿಯಲ್ಲಿ ವೇತನಕ್ಕಾಗಿ ದುಡಿಯದೇ ಸಮಾಜದ ಏಳ್ಗೆಗಾಗಿ ದುಡಿಯಬೇಕು ಸಮಾಜದ ಋಣ ತೀರಿಸಬೇಕು ಪ್ರತಿ ಕೆಲಸ ದೇವರ ಕೆಲಸವೆಂದು ನಂಬಿ ಸಾಗಬೇಕು ಎಂದು ಸೇವಾವಧಿಯಲ್ಲಿ ಸಹಕಾರ ನೀಡಿದ ಸರ್ವ ಸಿಬ್ಬಂದಿಗಳನ್ನು ಸ್ಮರಿಸಿಕೊಂಡರು.
ನಿವೃತ್ತಿಯಾದ ಪ್ರಾಚಾರ್ಯ ವಿಮಲಕಾಂತ ಪಾಟೀಲ ಹಾಗೂ ಜವಾನ ಈರಣ್ಣ ಶಿವಸಿಂಪಿಗೇರ್ ಇರ್ವರನ್ನು ಸನ್ಮಾನಿಸಿ ಗೌರವಿಸಿದರು.
ಸಮಾರಂಭದಲ್ಲಿ ನೂತನ ಪ್ರಾಚಾರ್ಯ ಭೀಮನಗೌಡ ಸಿಂಗನಳ್ಳಿ, ಎಂ.ಎಸ್.ಹೈಯಾಳಕರ್, ಶಿವಮಾಂತ ಪೂಜಾರಿ, ಬಿ.ಜಿ.ಅವಟಿ, ಬಿ.ಬಿ.ಜಮಾದಾರ, ಪಿ.ವ್ಹಿ.ಮಹಲಿನಮಠ, ಎಸ್.ಆರ್.ಬೂದಿಹಾಳ, ಎಸ್.ಜಿ.ಮಾರ್ಸನಳ್ಳಿ, ಡಾ. ಶರಣಬಸವ ಜೋಗೂರ, ಸಂಗಮೇಶ ಚಾವರ್, ರೋಹಿತ ಸುಲ್ಪಿ, ಎಂ.ಐ.ಮುಜಾವರ್, ಆರ್.ಎಂ.ಕೊಳ್ಳುರೆ, ಶ್ರೀಮತಿ ಎ.ಬಿ.ಬಮ್ಮಣ್ಣಿ, ಭಾಗಮ್ಮ ಕೋರಿ, ಮೇಘಾ ಕಮರಡ್ಡಿ, ಎನ್.ಬಿ.ಪೂಜಾರಿ, ಎಸ್.ಎಚ್.ಜಾಧವ, ಎನ್.ಎಂ.ಶೆಳ್ಳಗಿ, ಗವಿಸಿದ್ದಪ್ಪ ಆನೆಗುಂದಿ, ವ್ಹಿ.ಕೆ.ಹಿರೇಮಠ, ಸುನೀಲ ಪಾಟೀಲ, ಪಿ.ಬಿ.ಜೋಗೂರ, ರಾಹುಲ ಕುನ್ನಾಳ, ಶಿವಯೋಗಿ ತಾಳಿಕೋಟಿ, ರಾಜೇಶ್ವರಿ ಗಾಣಿಗೇರ್ ಸೇರಿದಂತೆ ಇನ್ನಿತರರು ಇದ್ದರು.
Subscribe to Updates
Get the latest creative news from FooBar about art, design and business.
Related Posts
Add A Comment

