ಇಂಡಿ: ತಾಲೂಕಿನಲ್ಲಿ ಸೋಮವಾರ ನಸುಕಿನ ೩.೩೦ ಗಂಟೆಯಿಂದ ಮುಂಜಾನೆ ೭.೩೦ ಗಂಟೆಯ ವರೆಗೆ ತಾಲೂಕಿನಾದ್ಯಂತ ೪೪.೪ ಮೀ.ಮೀ ಮಳೆಯಾಗಿದೆ. ರೋಹಿಣಿ ಮಳೆ ಇದೇ ಪ್ರಥಮ ಬಾರಿಗೆ ಆಗಿದ್ದು ರೈತರಲ್ಲಿ ಹರ್ಷ ಮೂಡಿದೆ. ರೋಹಿಣಿ ಮಳೆಗೆ ಹೆಸರು ಬೆಳೆಯಲು ಅತೀ ಸರಿಯಾದ ಸಮಯದ ಮಳೆ ಎಂದು ನಂಬಲಾಗುತ್ತಿದೆ.
ಇಂಡಿಯಲ್ಲಿ ೬೪ ಮಿ.ಮಿ, ನಾದ ಬಿಕೆ ೪೨.೨ ಮಿ.ಮಿ, ಅಗರಖೇಡ ೬೩.೧ ಮಿ.ಮಿ, ಹೊರ್ತಿ ೮.೨ ಮಿ.ಮಿ ಮಳೆಯಾಗಿದೆ ಎಂದು ಸಹಾಯಕ ಕೃಷಿ ನಿರ್ದೇಶಕ ಮಹಾದೇವಪ್ಪ ಏವೂರ ತಿಳಿಸಿದ್ದಾರೆ.
ಬಿತ್ತನೆ ಗುರಿ – ತಾಲೂಕಿನಲ್ಲಿ ತೊಗರಿ ೯೧೭೫೦ ಹೇ, ಮೆಕ್ಕೆಜೋಳ ೧೫೭೧೬ ಹೇ,ಶೇಂಗಾ ೧೨೦೦ ಹೇ. ಸೂರ್ಯಕಾಂತಿ ೩೮೫೦ ಹೇ,ಹತ್ತಿ ೧೧೮೨೫ ಹೇ, ಹೀಗೆ ಒಟ್ಟು ಒಂದು ಲಕ್ಷ ೫೫ ಸಾವಿರ ೧೩೪ ಹೇಕ್ಟರ ಪ್ರದೇಶ ಬಿತ್ತನೆಯ ಗುರಿ ಹೊಂದಲಾಗಿದೆ.
ಇದರಲ್ಲಿ ಕಬ್ಬು ಈಗಾಗಲೇ ೧೬೦೦೦ ಹೇ ಪ್ರದೇಶದಲ್ಲಿದ್ದು ಇನ್ನು ೭೦೦೦ ಹೇ ಗುರಿ ಹೊಂದಿದೆ ಎಂದು ಏವೂರ ತಿಳಿಸಿದರು.
ಬೀಜ ಗೊಬ್ಬರ — ತಾಲೂಕಿನಲ್ಲಿ ಈಗಾಗಲೇ ರೈತ ಸಂಪರ್ಕ ಕೇಂದ್ರ ಮತ್ತು ಕೃಷಿ ಕಚೇರಿಯಲ್ಲಿ ಬೀಜ ಮಾರಾಟ ಮತ್ತು ಗೊಬ್ಬರ ಮಾರಾಟ ಮಾಡಲು ಪ್ರಾರಂಭಿಸಲಾಗಿದೆ. ಗೊಬ್ಬರ ಮತ್ತು ಬೀಜ ಸಾಕಷ್ಟು ಪ್ರಮಾಣದಲ್ಲಿದ್ದು ರೈತರು ಯಾವದೇ ಆತಂಕ ಪಡಬಾರದು ಎಂದು ಏವೂರ ತಿಳಿಸಿದ್ದಾರೆ.
Subscribe to Updates
Get the latest creative news from FooBar about art, design and business.
ಇಂಡಿ ತಾಲೂಕು: ೪೪.೪ಮಿ.ಮಿ.ಮಳೆ: ೧.೫೫ಲಕ್ಷ ಹೆಕ್ಟರ್ ಬಿತ್ತನೆ ಗುರಿ
Related Posts
Add A Comment

