ಆಲಮೇಲ: ಗುರುವಿಲ್ಲದ ಕಾರ್ಯ ಯಾವುದು ಸಾರ್ಥಕವಾಗುವದಿಲ್ಲ ಪ್ರತಿಯೊಂದಕ್ಕೂ ಗುರು ಬೇಕು. ಆ ಗುರುವಿನ ಸ್ಥಾನ ಭಾರತ. ಜಗತ್ತಿಗೆ ಗುರುವಿನ ಸ್ಥಾನದಲ್ಲಿದೆ. ಋಷಿಮುನಿಗಳು ನೀಡಿದ ಕೊಡಿಗೆ ಇಂದು ಜಗತ್ತಿಗೆ ಸ್ಪೂರ್ತಿಯಾದ ಯೋಗ ಇಂದು ಅಂತರಾಷ್ಟ್ರೀಯ ಯೋಗ ದಿನವಾಗಿ ಆಚರಿಸಲಾಗುತ್ತಿದೆ. ಅದನ್ನು ಭಾರತಿಯರು ಹೆಮ್ಮೆಪಡುವಂತದ್ದು. ಪ್ರತಿನಿತ್ಯದ ತಮ್ಮ ಜೀವನದಲ್ಲಿ ಯೋಗ ಪ್ರಾಣಾಯಾಮ ಅಳವಡಿಸಿಕೊಂಡು ನೆಮ್ಮದಿಯ ಜೀವನ ನಡೆಸಬೇಕು ಎಂದು ಡಾ.ಶಾರದಾ ಪಾಟೀಲ ಹೇಳಿದರು.
ಪಟ್ಟಣದ ಸಿಂದಗಿ ರಸ್ತೆಯ ಯುಕೆಪಿ ಕ್ಯಾಂಪ್ ಆವರಣದಲ್ಲಿ ಯೋಗೋತ್ಸವ ಸಮೀತಿ ಹಮ್ಮಿಕೊಂಡ ಉಚಿತ ಯೋಗ ಶೀಬಿರದ ಪ್ರಾರಂಭೋತ್ಸವ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು.
ಭಾರತದ ಪುರಾತನ ಋಷಿಮುನಿಗಳು ಕೊಟ್ಟಂತ ಯೋಗ, ಪ್ರಾಣಾಯಂ, ದ್ಯಾನ ಇಂದು ಜಗತ್ತಿಗೆ ಉತ್ತಮ ಆರೋಗ್ಯದ ಕವಚವಾಗಿದೆ. ಯೋಗ ಆದ್ಯಾತ್ಮದ ಪದ್ದತ್ತಿ ಭಾರತದ ಪುರಾತನ ಋಷಿಮುನಿಗಳ ಕಾಲದಿಂದ ಬಂದಿದೆ. ಆ ಯೋಗಮಯ ಜೀವನ ನಾವು ಮುಂದುವರೆಸಿಕೊಂಡು ಹೋಗಬೇಕು. ಭಾರತದ ಯೋಗ ಪ್ರಾಣಾಯಂದ ಪದ್ದತಿ ಜಗತ್ತೆ ಅಳವಡಿಸಿಕೊಳ್ಳುವಾಗ ನಮ್ಮ ಯುವ ಜನಾಂಗ ವಿದೇಶಿ ಸಂಸಕೃತಿಯ ಜಿಮ್ಮ ಮೋರೆ ಹೋಗುತ್ತಿದ್ದು ವಿರ‍್ಯಾಸ ಜಿಮ್ಮಗಿಂತಲು ಭಾರತಿಯ ಮೂಲ ಯೋಗ ಪ್ರಾಣಾಯಂವೆ ಶ್ರೇಷ್ಠ. ಇಂದಿನ ತಂತ್ರಜ್ಞಾನ ಯುಗದಲ್ಲಿ ವತ್ತಡದ ಜೀವನದಿಂದ ಮಾನಸಿಕ ನೆಮ್ಮದಿ ಸಂತೋಷ ಕಳೆದುಕೊಂಡಿದೆವೆ ಅದನ್ನು ಹೋಗಲಾಡಿಸಬೇಕು ಎಂದರೆ ಯೋಗ ಪ್ರಾಣಾಯಂ ಅವಶಕತೆ ಇದೆ ಎಂದು ಹೇಳಿದರು.
ಡಾ.ಮಂಜುಷಾ ಪಾಟೀಲ ಮಾತನಾಡಿ, ನಮ್ಮ ಆರೋಗ್ಯ ದೃಷ್ಠಿಯಿಂದ ಯೋಗ ಪ್ರಾಣಾಯಂ ಜ್ಞಾನ ನಿರಂತರ ಮಾಡುವದರಿಂದ ಮಾನಸಿಕ ನೆಮ್ಮದಿಯಿಂದ ಇರಲು ಸಾದ್ಯ. ನಮ್ಮ ಆರೋಗ್ಯ ದೃಷ್ಠಿಯಿಂದ ಯೋಗದ ಜೊತೆ ಸಾತ್ವಿಕ ಆಹಾರ ಪದ್ದತಿಯು ಅಳವಡಿಸಿಕೊಳ್ಳಬೇಕು ಎಂದು ಹೇಳಿದರು.
ಯೋಗ ಶಿಕ್ಷಕಿ ಪ್ರಭಾವತಿ ಮೇತ್ರಿ ಮಾತನಾಡಿ ಯೋಗ ಪ್ರಾಣಾಯಂ ದೇಹಕ್ಕೆ ಶಕ್ತಿ ನೀಡಿದರೆ ಆದ್ಯತ್ಮಿಕ ಪ್ರವಚನ ಮಾನಸಿಕ ನೆಮ್ಮದಿ ನೀಡುತ್ತದೆ ಎಂದು ಹೇಳಿದರು.
ಹಿಮಾಲಯದ ಯೋಗ ಗುರು ಪರಮ ಪೂಜ್ಯ ನಿರಂಜನ ಶ್ರೀಗಳು ಯೋಗೋತ್ಸವವನ್ನು ಆಸನಗಳ ಮೂಲಕ ಚಾಲನೆ ನೀಡಿದರು.
ಯೋಗೋತ್ಸವ ಸಮಿಯ ಮುಖಂಡರಾದ ಡಾ| ಶ್ರೀಶೈಲ ಪಾಟೀಲ, ಕಸಾಪ ಅಧ್ಯಕ್ಷ ಶಿವಶರಣ ಗುಂದಗಿ, ಶ್ರೀಶೈಲ ಮಠಪತಿ, ಎನ್.ಎ. ಬಿರಾದಾರ, ಡಾ| ಚನ್ನಬಸು ನಿಂಬಾಳ, ಡಾ| ರಾಜೇಶ ಪಾಟೀಲ ಶೇಷಾದ್ರಿ ಜ್ಯೋಶಿ, ಅಶೋಕ ಸದ್ಲಾಪೂರ ಮುಂತಾದವರು ಇದ್ದರು.
Subscribe to Updates
Get the latest creative news from FooBar about art, design and business.
Related Posts
Add A Comment

