ದೇವರಹಿಪ್ಪರಗಿ: ಬಿಜೆಪಿ ಮಂಡಲ ಹಾಗೂ ಯುವ ಮೋರ್ಚಾ ಕಾರ್ಯಕರ್ತರು ಕೇಂದ್ರದಲ್ಲಿ ಮತ್ತೋಮ್ಮೆ ಬಿಜೆಪಿ ಸರ್ಕಾರ ರಚನೆಗಾಗಿ ಕಲ್ಮೇಶ್ವರ ದೇವಸ್ಥಾನದಲ್ಲಿ ವಿಜಯ ಸಂಕಲ್ಪ ಅಭಿಷೇಕ ನೆರವೇರಿಸಿ ಪ್ರಾರ್ಥಿಸಿದರು.
ಪಟ್ಟಣದ ಕಲ್ಮೇಶ್ವರ ದೇವಸ್ಥಾನದಲ್ಲಿ ಭಾನುವಾರ ಬೆಳಿಗ್ಗೆ ೬ ಗಂಟೆಗೆ ಸೇರಿದ ಕಾರ್ಯಕರ್ತರು ಹಾಗೂ ಪದಾಧಿಕಾರಿಗಳು ಸದೃಡ, ಸಮೃದ್ಧ ಭಾರತದ ನಿರ್ಮಾಣಕ್ಕಾಗಿ ಪ್ರಧಾನಮಂತ್ರಿ ನರೇಂದ್ರ ಮೋದಿಯವರ ನಾಯಕತ್ವದಲ್ಲಿ ೩ನೇಯ ಬಾರಿ ಬಿಜೆಪಿ ನೇತೃತ್ವದ ಎನ್‌ಡಿಎ ಸರ್ಕಾರ ರಚನೆಗಾಗಿ ವಿಜಯ ಸಂಕಲ್ಪ ಮಹಾರುದ್ರಾಭಿಷೇಕ ನೆರವೇರಿಸಿ ಪ್ರಾರ್ಥನೆ ಕೈಗೊಂಡರು. ನಂತರ ಪ್ರಸಾದ ವಿತರಿಸಲಾಯಿತು.
ಜಿಲ್ಲಾ ಬಿಜೆಪಿ ಕಾರ್ಯದರ್ಶಿ ರಮೇಶ ಮಸಬಿನಾಳ, ಮಂಡಲ ಖಜಾಂಚಿ ಸೋಮಶೇಖರ ಹಿರೇಮಠ, ಯುವಮೋರ್ಚಾ ಉಪಾಧ್ಯಕ್ಷ ಕಲ್ಮೇಶ ಬುದ್ನಿ, ಹಿಂದುಳಿದ ಮೋರ್ಚಾ ಉಪಾಧ್ಯಕ್ಷ ರಾವುತ ಅಗಸರ, ಸೋಮು ದೇವೂರ, ಚಿದಾನಂದ ಕುಂಬಾರ, ವಿಶಾಲ್ ಭಾಸುತ್ಕರ್, ಚೇತನ ಇಂಡಿ, ಶ್ರೀಶೈಲ ಯಂಭತ್ನಾಳ, ಪ್ರಶಾಂತ ಹೊನ್ನುಟಗಿ, ಪುನೀತ ಹಿಪ್ಪರಗಿ, ರಮೇಶ ಮಾಳನೂರ, ಪವನ ನಾಯ್ಕೋಡಿ, ಸಾಗರ ತೋಟದ, ಸುಮೀತ ಬುದ್ನಿ, ಮಹಾಂತೇಶ ಬಿರಾದಾರ, ಸಂತೋಷ ಪತ್ತಾರ ಸೇರಿದಂತೆ ಇತರರು ಇದ್ದರು.
Subscribe to Updates
Get the latest creative news from FooBar about art, design and business.
Related Posts
Add A Comment

