Subscribe to Updates
Get the latest creative news from FooBar about art, design and business.
Author: editor.udayarashmi@gmail.com
ಚಿಮ್ಮಡ: ಪ್ರಸಕ್ತ ಲೋಕಸಭಾ ಚುನಾವಣೆಯಲ್ಲಿ ಬಾಗಲಕೋಟ ಮತಕ್ಷೇತ್ರದ ಬಿಜೆಪಿ ಅಭ್ಯರ್ಥಿ ಪಿ.ಸಿ.ಗದ್ದಿಗೌಡರ ಸತತವಾಗಿ ನಾಲ್ಕನೇ ಬಾರಿಗೆ ಆಯ್ಕೆಯಾಗಿದ್ದಕ್ಕೆ ಇಲ್ಲಿನ ಬಿಜೆಪಿ ಕಾರ್ಯಕರ್ತರು ವಿಜಯೋತ್ಸವ ಆಚರಿಸಿದರು.ಮದ್ಯಾಹ್ನ ಬಿಜೆಪಿ ಅಭ್ಯರ್ಥಿಯ ಗೆಲುವಿನ ಅಂತರ ಹೆಚ್ಚುತಿದ್ದಂತೆಯೇ ಪಟಾಕಿ ಸಿಡಿಸುತ್ತ ಬೈಕ್ ರ‍್ಯಾಲಿ ಮೂಲಕ ಗ್ರಾಮದ ತುಂಬೆಲ್ಲ ಪ್ರದಕ್ಷಣೆ ಹಾಕಿದರು ನಂತರ ಪಕ್ಷದ ಕಛೇರಿ ಮುಂದೆ ಗುಲಾಲು ಎರಚುತ್ತ ಸಿಹಿ ಹಂಚಿ ಸಂಭ್ರಮಿಸಿದರು.ಗ್ರಾ.ಪಂ. ಮಾಜಿ ಅಧ್ಯಕ್ಷ ಪ್ರಭು ಪಾಲಭಾವಿ, ಆನಂದ ಕವಟಿ, ಬಸವರಾಜ ಕುಂಚನೂರ, ವಿಜಯಕುಮಾರ ಪೂಜಾರಿ, ಪ್ರಭು ಮುಧೋಳ, ಗ್ರಾ.ಪಂ. ಸದಸ್ಯ ಮನೋಜ ಹಟ್ಟಿ, ನಾಗಪ್ಪ ಆಲಕನೂರ ತುಕಾರಾಮ ದೊಡಮನಿ, ಬಸವರಾಜ ಬಿಜಾಪೂರ, ಅಮಜದಖಾನ ಜಮಖಂಡಿ ಸೇರಿದಂತೆ ಹಲವರು ಉಪಸ್ಥಿತರಿದ್ದರು
ಇಂಡಿ: ಪಟ್ಟಣದದಲ್ಲಿ ಶ್ರೀ ಚೌಡೇಶ್ವರಿ ದೇವಿ ಜಾತ್ರಾ ಮಹೋತ್ಸವ ಇಂದಿನಿAದ ಜೂ.೫ ರಿಂದ ಪ್ರಾರಂಭವಾಗಲಿದೆ ಎಂದು ಜಾತ್ರಾ ಮಹೋತ್ಸವ ಸಮಿತಿಯ ಸತೀಶ ಕುಂಬಾರ ತಿಳಿಸಿದ್ದಾರೆ.೫ ರಂದು ಬೆಳಿಗ್ಗೆ ೬ ಗಂಟೆಗೆ ಶ್ರೀ ಚೌಡೇಶ್ವರಿ ದೇವಿಗೆ ಅಭಿಷೇಕ ಮತ್ತು ಮಹಾ ಮಂಗಳಾರತಿ,ರಾತ್ರಿ ೧೨ ಗಂಟೆಗೆ ಶ್ರೀ ಚೌಡೇಶ್ವರಿ ದೇವಿಯಿಂದ ಬಾಳ ಬಟ್ಟಲು ಮೆರವಣೆಗೆ, ಊರು ಸುತ್ತಿ ಪ್ರದಕ್ಷಣೆ ಹಾಕುವದು, ಭೂತ ಪೇಥಗಳ ಸಂಹಾರ ಮಾಡುವದು ಕಾರ್ಯಕ್ರಮ ನಡೆಯುತ್ತವೆ.೬ ರಂದು ಬೆಳಗ್ಗೆ ೯ ಗಂಟೆಗೆ ಚೌಡೇಶ್ವರಿ ಗುಡಿಯಿಂದ ಹೊರಟು ಬಜಾರದಲ್ಲಿ ಮಜ್ಜಿಗೆ ಮಾಡಿ, ಅಗ್ಗಿ ಹಾಯುವದುಊರ ಗೌಡರ ಮನೆಗೆ ಹೋಗಿ ಮತ್ತು ನಗರದ ಎಲ್ಲ ಭಕ್ತರ ಮನೆಗೆ ಹೋಗಿಉಡಿ ತುಂಬಿಕೊಂಡು ಬರುವಳು. ಹರಕೆಗಳನ್ನು ಹೇಳಿ ಶುಭ ಹಾರೈಸುತ್ತ ರಾತ್ರಿ ೮ ಗಂಟೆಗೆ ಗುಡಿಗೆ ಆಗಮನ ನಡೆಯುವದು.೭ ರಂದು ಮಧ್ಯಾಹ್ನ ೧ ಗಂಟೆಗೆ ಕುಂಬಾರ ಓಣಿ ದೇವಿ ಗುಡಿ ಮುಂದುಗಡೆ, ಬಡಿಗೇರ ಓಣಿ, ಶಾಂತೇಶ್ವರ ದೇವಸ್ಥಾನದ ಮುಂದುಗಡೆ, ಬಜಾರ,ಚವಡಿ ಮತ್ತು ಹುಷೇನ ಬಾಷಾ ದರ್ಗಾದ ಮುಂದುಗಡೆ…
ಇಂಡಿ: ತಾಲೂಕಿನಲ್ಲಿ ಹರಿಯುವ ಗುತ್ತಿ ಬಸವಣ್ಣ ಕಾಲುವೆಗೆ ನೀರು ಹರಿಯ ಬಿಡಲಾಗಿದೆ ಎಂದು ಕೃಷ್ಣಾ ಮೇಲ್ದಂಡೆ ಯೋಜನೆ ಅಧಿಕ್ಷಕ ಅಭಿಯಂತರ ಮನೋಜಕುಮಾರ ತಿಳಿಸಿದ್ದಾರೆ.ಸಿಂದಗಿಯ ತಾಲೂಕಿನ ೪೭ ಕಿ.ಮಿ ನಂತರ ೪೭ ಕಿ.ಮಿಯಿಂದ ತಾಂಬಾದ ವರೆಗೆ ೯೭ ಕಿ.ಮಿ ಸೇರಿದಂತೆ ತಾಲೂಕಿನ ಕೊನೆಯ ಭಾಗ ೧೪೭ ಕಿ.ಮಿ ವರೆಗೆ ನೀರು ಬಿಡಲಾಗಿದೆ.ಅದಲ್ಲದೆ ತಡವಲಗಾ ಕೆರೆಗೂ ಗುತ್ತಿ ಬಸವಣ್ಣ ಕಾಲುವೆಯಿಂದ ನೀರು ಬಿಟ್ಟಿದೆ.ಇದರಿಂದ ಜನ ಜಾನುವಾರುಗಳಿಗೆ ಕುಡಿಯುವ ನೀರಿನ ಅನುಕೂಲ ವಾಗುತ್ತದೆ ಎಂದು ಮನೋಜಕುಮಾರ ತಿಳಿಸಿದ್ದಾರೆ.ಅದಲ್ಲದೆ ಕೃಷ್ಣಾ ಕಾಲುವೆಯ ಮುಖ್ಯ ಕಾಲುವೆಗೂ ನೀರನ್ನು ಬಿಟ್ಟು ಕೆರೆಗಳನ್ನು ತುಂಬಿಸಲಾಗುತ್ತಿದೆ ಎಂದು ಮನೋಜಕುಮಾರ ತಿಳಿಸಿದ್ದಾರೆ.
ಮುದ್ದೇಬಿಹಾಳ: ಪಟ್ಟಣದ ಆಲಮಟ್ಟಿ ರಸ್ತೆಯಲ್ಲಿರುವ ಅರವಿಂದ ಬಡಾವಣೆಯಲ್ಲಿ ಜೂ.೫ ರಂದು ಬೆಳಿಗ್ಗೆ ೧೦ಗಂಟೆಗೆ ವಿಶ್ವ ಪರಿಸರ ದಿನಾಚರಣೆಯ ಕುರಿತು ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ.ತಾಲೂಕು ಕಾನೂನು ಸೇವಾ ಸಮಿತಿ, ನ್ಯಾಯವಾದಿಗಳ ಸಂಘ, ಅರಣ್ಯ ಇಲಾಖೆ ಹಾಗೂ ಇತರ ಎಲ್ಲ ಸರಕಾರಿ ಇಲಾಖೆಗಳ ಸಂಯುಕ್ತ ಆಶ್ರಯದಲ್ಲಿ ಜರುಗುವ ಕಾರ್ಯಕ್ರಮವನ್ನು ಹಿರಿಯ ಶ್ರೇಣಿ ಸಿವಿಲ್ ನ್ಯಾಯಾಧೀಶ ರವೀಂದ್ರಕುಮಾರ ಕಟ್ಟಿಮನಿ ಉದ್ಘಾಟಿಸುವರು. ಕಿರಿಯ ಶ್ರೇಣಿ ಸಿವಿಲ್ ನ್ಯಾಯಾಧೀಶ ಸಂಪತ್ತಕುಮಾರ ಬಳೂಳಗಿಡದ ಉಪಸ್ಥಿತಿಯಲ್ಲಿ ನ್ಯಾಯವಾದಿಗಳ ಸಂಘದ ಅಧ್ಯಕ್ಷ ಶಶಿಕಾಂತ ಮಾಲಗತ್ತಿ, ಸಹಾಯಕ ಸರ್ಕಾರಿ ಅಭಿಯೋಜಕರಾದ ನಾಗರಾಜ ಪೂಜಾರ ಮತ್ತು ಬಸವರಾಜ ಆಹೇರಿ, ಅಪರ ಸರ್ಕಾರಿ ವಕೀಲ ಎಚ್.ಎಲ್.ಸರೂರ, ತಹಶೀಲ್ದಾರ ಬಸವರಾಜ ನಾಗರಾಳ, ತಾಲೂಕು ಪಂಚಾಯತ ಪ್ರಭಾರ ಕಾರ್ಯ ನಿರ್ವಾಹಕ ಅಧಿಕಾರಿ ಎಸ್.ಎಸ್.ಕಲ್ಮನಿ, ಕ್ಷೇತ್ರ ಶಿಕ್ಷಣಾಧಿಕಾರಿ ಬಸವರಾಜ ಸಾವಳಗಿ, ವಲಯ ಅರಣ್ಯಾಧಿಕಾರಿ ಬಿ.ಐ.ಬಿರಾದಾರ, ಸಾಮಾಜಿಕ ವಲಯ ಅರಣ್ಯಾಧಿಕಾರಿ ಎಸ್.ಜಿ.ಸಂಗಾಲಕ, ಹಸಿರುತೋರಣ ಗೆಳೆಯರ ಬಳಗದ ಡಾ.ವಿರೇಶ ಇಟಗಿ, ಸಿಪಿಐ ಮಲ್ಲಿಕಾರ್ಜುನ ತುಳಸಿಗೇರಿ, ಸಿಡಿಪಿಓ ಶಿವಮೂರ್ತಿ ಕುಂಬಾರ ಮುಖ್ಯ ಅತಿಥಿಯಾಗಿ ಭಾಗಿಯಾಗಲಿದ್ದಾರೆ ಎಂದು ಪ್ರಕಟಣೆ…
ಮುದ್ದೇಬಿಹಾಳ: ಪಟ್ಟಣದ ಎ.ಪಿ.ಎಂ.ಸಿ ಆವರಣದಲ್ಲಿರುವ ಹನುಮಂತ ದೇವರ ಗುಡಿಯ ಹಿಂದೆ ತಮ್ಮ ಪಾಯಿದೆಗೋಸ್ಕರ ಇಸ್ಪೀಟ್ ಆಡುತ್ತಿದ್ದ ೮ ಜನರ ವಿರುದ್ಧ ಇಲ್ಲಿನ ಪಿಎಸ್‌ಐ ಸಂಜೀವ ತಿಪರೆಡ್ಡಿ ಪ್ರಕರಣ ದಾಖಲಿಸಿದ್ದಾರೆ.ಪಟ್ಟಣದ ಬಸವರಾಜ ಕಡಿ, ಸಂಗಪ್ಪ ಮದರಿ, ಈರಣ್ಣ ಬಿರಾದಾರ, ಬಸವರಾಜ ನರಸಲಗಿ, ಹನುಮಂತ ಕನ್ನೊಳ್ಳಿ, ಶ್ರೀಶೈಲ ರೇವಡಿ, ತಾಲೂಕಿನ ಕುಂಟೋಜಿ ಗ್ರಾಮದ ಮಹಾಂತೇಶ ಒಣರೊಟ್ಟಿ, ಮುರಾಳ ಗ್ರಾಮದ ಪರಶುರಾಮ ಜೋಗಿನ್ ಇವರ ಮೇಲೆ ಪ್ರಕರಣ ದಾಖಲಾಗಿದ್ದು ಇಸ್ಪೀಟ್ ಎಲೆಗಳು ಮತ್ತು ಹಣವನ್ನು ವಶಕ್ಕೆ ಪಡೆಯಲಾಗಿದೆ.
ಇಂಡಿ: ಯುವಕನೋರ್ವ ಕಾಲು ಜಾರಿ, ಕಾಲುವೆಯಲ್ಲಿ ಬಿದ್ದು ಮೃತಪಟ್ಟ ದುರ್ಘಟನೆ ತಾಲ್ಲೂಕಿನ ಹಿರೇಮಸಳಿ ಗ್ರಾಮದ ಹತ್ತಿರ ನಡೆದಿದೆ.ಮೃತನನ್ನು ಹಿರೇರೂಗಿ ಗ್ರಾಮದ ೨೮ ವರ್ಷದ ಯುವಕ ಮಹಾದೇವ ಶರಣಪ್ಪ ಮುಂಡೋಡಗಿ ಎಂದು ಗುರುತಿಸಲಾಗಿದೆ. ನಿ ಹಿರೇಮಸಳಿ ಗ್ರಾಮದ ಹತ್ತಿರ ಇರುವ ಮುಖ್ಯ ಕಾಲುವೆ (ಐಬಿಸಿ) ಕಾಲುವೆಯಿಂದ ತನ್ನ ಹೊಲಗದ್ದೆಗೆ ನೀರುಣಿಸಲು ಮೋಟಾರು ಮೂಲಕ ನೀರು ಹರಿಸುವ ಸಲುವಾಗಿ ಕಾಲುವೆಗೆ ತೆರಳಿದ್ದ, ಈ ಸಂದರ್ಭದಲ್ಲಿ ಆಯತಪ್ಪಿ ಕಾಲುವೆಯಲ್ಲಿ ಬಿದ್ದಿದ್ದು ತಲೆಗೆ ಪೆಟ್ಟಾಗಿ ಮೃತನಾಗಿದ್ದಾನೆ.ಆತನ ಶೋಧಕ್ಕಾಗಿ ಅಗ್ನಿಶಾಮಕ ಸಿಬ್ಬಂದಿ ಕಾರ್ಯಾಚರಣೆ ನಡೆಸಿ ಮೃತದೇಹವನ್ನು ಹೊರತೆಗೆದಿದ್ದಾರೆ.ಇಂಡಿ ಗ್ರಾಮೀಣ ಪೋಲಿಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇಂಡಿ: ಪಟ್ಟಣದ ಕುಂಬಾರ ಓಣಿಯಲ್ಲಿ ಜೂ. ೫ ರಿಂದ ೯ ರವರೆಗೆ ಚೌಡೇಶ್ವರಿ ದೇವರ ಜಾತ್ರಾ ಮಹೋತ್ಸವ ವಿಜೃಂಭಣೆಯಿಂದ ಜರುಗಲಿದೆ ಎಂದು ಜಾತ್ರಾ ಕಮೀಟಿ ತಿಳಿಸಿದೆ.ಜೂನ್.೫ ರಂದು ರಾತ್ರಿ ೧೨ ಘಂಟೆಗೆ ಚೌಡೇಶ್ವರಿ ದೇವಿಯ ಬಾಳ ಬಟ್ಟಿಲು ಮೆರವಣಿಗೆ ಊರು ಸುತ್ತಿ ಪ್ರದಕ್ಷಿಣೆ ಹಾಕಿ, ಭೂತ ಪ್ರೇತಗಳ ಸಂಹಾರ ಮಾಡುವಳು.ಜೂನ್ ೬ ರಂದು ಬೆಳಿಗ್ಗೆ ೯:೦೦ ಘಂಟೆಗೆ ಚೌಢೇಶ್ವರಿ ದೇವಸ್ಥಾನದಿಂದ ಮೆರವಣಿಗೆ ಹೊರಟು ಬಜಾರದಲ್ಲಿ ಮಜ್ಜಿಗೆ ಮಾಡಿ, ಅಕ್ಕಿ ಆಯುವಳು, ಊರ ಗೌಡರು (ದಾದಾಗೌಡರ) ಮನೆಗೆ ಹೋಗಿ ನಗರದ ಎಲ್ಲ ಭಕ್ತರ ಮನೆಗೆ ಹೋಗಿ ಉಡಿ ತುಂಬಿಕೊಂಡು, ಹರಕೆಗಳನ್ನು ಹೇಳಿ, ಶುಭ ಹಾರೈಸುತ್ತ ಅಂದು ರಾತ್ರಿ ೮:೦೦ ಘಂಟೆಗೆ ದೇವಸ್ಥಾನಕ್ಕೆ ಆಗಮಿಸುವಳು.ಜೂನ್ ೭ ರಂದು ಮದ್ಹಾö್ಯಹ್ನ ೧ ಘಂಟೆಗೆ ದೇವಸ್ಥಾನದಿಂದ ಹೊರಟು, ಕುಂಬಾರ ಓಣಿಯ ದೇವಿಯ ಗುಡಿಯ ಮುಂದೆ ಬಡಿಗೇರ ಓಣಿಯಲ್ಲಿ, ಶಾಂಥೇಶ್ವರ ದೇವಸ್ಥಾನದ ಮುಂದುಗಡೆ, ಬಜಾರದಲ್ಲಿ, ಚವಡಿ, ಗಣೇಶ ನಗರ, ಹುಸೇನ ಭಾಷಾ ದರ್ಗಾ ಮುಂದುಗಡೆ ಭಕ್ತರ ಜೊತೆ ಕೋಲಾಟ…
ಇಂಡಿ: ವಿಜಯಪುರ ಲೋಕಸಭಾ ಅಭ್ಯರ್ಥಿ ರಮೇಶ ಚಂ. ಜಿಗಜಿಣಗಿ ಅವರು ಗೆಲುವು ಸಾಧಿಸುತ್ತಿದ್ದಂತೆ ಬಿಜೆಪಿ ಹಾಗೂ ಜೆಡಿಎಸ್ ಕಾರ್ಯಕರ್ತರು ಮಂಗಳವಾರ ಪಟ್ಟಣದ ಬಸವೇಶ್ವರ ವೃತ್ತದಲ್ಲಿ ಪಟಾಕಿ ಸಿಡಿಸಿ, ಸಿಹಿ ಹಂಚಿ ಸಂಭ್ರಮಿಸಿದರು.ಬಿಜೆಪಿ ಮುಖಂಡ ಕಾಸುಗೌಡ ಬಿರಾದಾರ, ಸಂಜೀವ ಐಹೊಳೆ, ಅನೀಲ ಜಮಾದಾರ, ಅನೀಲಗೌಡ ಬಿರಾದಾರ, ದೇವೆಂದ್ರ ಕುಂಬಾರ, ಶೀಲವಂತ ಉಮರಾಣಿ ಮಾತನಾಡಿ ಕೇಂದ್ರ ಸರಕಾರದ ಸಾಧನೆಯನ್ನು ಹಾಗೂ ಸಂಸದ ಜಿಗಜಿಣಗಿ ಅವರು ಜಿಲ್ಲೆಗೆ ನೀಡಿದ ಅಭಿವೃಧ್ಧಿ ಯೋಜನೆಯನ್ನು ಗಮನಿಸಿ, ಜೊತೆರಗೆ ಜಿಗಜಿಣಗಿ ಅವರ ಸರಳತೆ ಕಂಡು ಜನತೆ ಬಿಜೆಪಿ ಸರಕಾರದ ಪರವಾಗಿ ಮತ ಚಲಾವಣೆ ಮಾಡಿ ಜಿಗಜಿಣಗಿ ಅವರನ್ನು ಗೆಲ್ಲಿಸಿದ್ದಾರೆ.ಮತದಾರರು ಜಿಗಜಿಣಗಿ ಅವರ ಮೇಲೆ ಇಟ್ಟ ನಂಬಿಕೆಯನ್ನು ಉಳಿಸಿಕೊಳ್ಳುವ ಪ್ರಾಮಾಣಿಕ ಪ್ರಯತ್ನ ಜಿಗಜಿಣಗಿ ಅವರಿಂದ ಆಗಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.ಮಲ್ಲಿಕಾರ್ಜುನ ಹಾವಿನಾಳಮಠ, ಬಾಳು ಮುಳಜಿ, ರಾಮಸಿಂಗ ಕನ್ನೊಳ್ಳಿ, ಸಂಜೀವ ದಶವಂತ, ಅಶೋಕ ಬಳಬಟ್ಟಿ, ಮಾಧವರಾವ ಪವಾರ, ಹಣಮಂತ್ರಾಯಗೌಡ ಪಾಟೀಲ, ಮಲ್ಲಿಕಾರ್ಜುನ ಕಿವುಡೆ, ಶಾಂತು ಕಂಬಾರ, ಮಹೇಶ ಹೂಗಾರ, ಮಲ್ಲು ವಾಲೀಕಾರ, ಸೋಮು…
ಬಸವನಬಾಗೇವಾಡಿ: ತಾಲೂಕಿನ ನಾಗೂರ ಗ್ರಾಮದ ಯಮನೂರೇಶ್ವರ ದೇವಸ್ಥಾನದ ಹತ್ತಿರ ಸಂಸದ ರಮೇಶ ಜಿಗಜಿಣಗಿ ಅವರು ಆಯ್ಕೆಯಾಗುವ ಸುದ್ದಿ ತಿಳಿಯುತ್ತಿದ್ದಂತೆ ಮಂಗಳವಾರ ಬಿಜೆಪಿ ಪಕ್ಷದ ಮುಖಂಡರು, ಕಾರ್ಯಕರ್ತರು ಪಟಾಕ್ಷಿ ಸಿಡಿಸಿ ಸಿಹಿ ಹಂಚಿ ಪರಸ್ಪರ ಗುಲಾಲು ಎರಚಿಕೊಂಡು ವಿಜಯೋತ್ಸವ, ಸಂಭ್ರಮಾಚರಣೆ ಆಚರಿಸಿದರು.ವಿಜಯೋತ್ಸವದಲ್ಲಿ ಮುಖಂಡರಾದ ಬಂದೇನವಾಜ ವಾಲೀಕಾರ, ಬಸಯ್ಯ ಶೀಕಳವಾಡಿ, ಶ್ರೀಶೈಲ ತೆಲಗಿ, ರೇವಣಸಿದ್ದ ನಂದಿಹಾಳ, ಸಂಗಪ್ಪ ಮಾದರ, ಕರಬಸಪ್ಪ ಮಸೂತಿ, ಬಾಬು ಗೌರಾ, ಶರಣಪ್ಪ ನಾಲತವಾಡ, ಮಹಾಂತೇಶ ಆಲಕೊಪ್ಪರ, ಯಮನಪ್ಪ ಕ್ವಾಟಿ, ಮಹೇಶ ಡೋಣೂರ, ಬಾಬು ನಂದಿಹಾಳ, ರಫೀಕ ವಾಲೀಕಾರ, ಬಸಪ್ಪ ಆಲಕೊಪ್ಪರ, ಸಂಗಮೇಶ ಬಿಜ್ಜೂರ ಇತರರು ಭಾಗವಹಿಸಿದ್ದರು.
ಬಸವನಬಾಗೇವಾಡಿ: ಇಂದಿನ ಆಧುನಿಕ ಯುಗದಲ್ಲಿ ಶುದ್ಧವಾದ ಆಹಾರ ಸೇವನೆ, ಶುದ್ಧ ಜೀವನ ನಡೆಸದೇ ಇರುವದರಿಂದಾಗಿ ಶತಾಯುಷಿಗಳಾಗಿ ಬಾಳುವುದು ಅಪರೂಪವಾಗಿದೆ. ಡೋಣೂರು ಗ್ರಾಮದಲ್ಲಿ ಇಬ್ಬರು ಶುದ್ಧ ಜೀವನ, ಶುದ್ಧ ಆಹಾರ ಸೇವನೆಯಿಂದಾಗಿ ಶತಾಯುಷಿಗಳಿರುವುದು ವಿಶೇಷ. ಇವರನ್ನು ಗುರುತಿಸಿ ಡೋಣೂರ ಕಟ್ಟೀಮನಿ ಹಿರೇಮಠದಿಂದ ಶ್ರೀಗಳು ಸನ್ಮಾನಿಸುತ್ತಿರುವುದು ಯುವಜನಾಂಗಕ್ಕೆ ಉತ್ತಮ ಸಂದೇಶ ನೀಡುತ್ತದೆ ಎಂದು ಬೆಂಗಳೂರಿನ ವಿಭೂತಿಪುರಮಠ ಹಾಗೂ ಮನಗೂಳಿ ಪಟ್ಟೀಕಂಥಿ ಹಿರೇಮಠದ ಡಾ.ಮಹಾಂತಲಿಂಗ ಶಿವಾಚಾರ್ಯ ಸ್ವಾಮೀಜಿ ಹೇಳಿದರು.ತಾಲೂಕಿನ ಡೋಣೂರು ಗ್ರಾಮದ ಕಟ್ಟೀಮನಿ ಹಿರೇಮಠದ ಗುರುಮರುಳಸಿದ್ದೇಶ್ವರ ಹಾಗೂ ಚೌಡಮ್ಮದೇವಿ ಜಾತ್ರಾಮಹೋತ್ಸವ ಹಾಗೂ ಹಜರತ್ ಸುಲೇಮಾನ್ ಉರುಸು ಅಂಗವಾಗಿ ಹಮ್ಮಿಕೊಂಡಿರುವ ಕಲಬುರಗಿ ಶರಣಬಸವೇಶ್ವರ ಪುರಾಣ ಕಾರ್ಯಕ್ರಮದಲ್ಲಿ ಸೋಮವಾರ ಸಂಜೆ ಶತಾಯುಷಿಗಳನ್ನು ಶ್ರೀಮಠದಿಂದ ಸನ್ಮಾನಿಸಿ ಮಾತನಾಡಿದ ಅವರು, ಇಂದಿನ ದಿನಗಳಲ್ಲಿ ಆಧುನಿಕತೆಯ ಬದುಕಿಗೆ ಮಾರುಹೋಗಿ ಉಡುಗೆ-ತೊಡುಗೆ ಆಟ-ಪಾಠ, ನಂಬಿಕೆ, ಶ್ರದ್ಧೆ, ಆಚಾರ-ವಿಚಾರ, ಸಂಸ್ಕ್ರತಿ, ಸಂಪ್ರದಾಯಗಳ ಬಹುದೊಡ್ಡ ಬದಲಾವಣೆ ಮತ್ತು ಅಂತರವನ್ನು ಕಾಣಲಾಗುತ್ತಿದೆ. ಜೀವನ ಶ್ರದ್ಧೆ ಶಿಥಿಲಗೊಳ್ಳುತ್ತಿರುವ ಬಗ್ಗೆ ಆತಂಕ ಪಡಿಸುತ್ತಾ ೪೬ ವರ್ಷಗಳಿಂದ ಪುರಾಣ ಪ್ರವಚನ, ಶತಾಯುಷಿಗಳಾಗಿರುವವರ ಸನ್ಮಾನ…
