ಇಂಡಿ: ವಿಜಯಪುರ ಲೋಕಸಭಾ ಅಭ್ಯರ್ಥಿ ರಮೇಶ ಚಂ. ಜಿಗಜಿಣಗಿ ಅವರು ಗೆಲುವು ಸಾಧಿಸುತ್ತಿದ್ದಂತೆ ಬಿಜೆಪಿ ಹಾಗೂ ಜೆಡಿಎಸ್ ಕಾರ್ಯಕರ್ತರು ಮಂಗಳವಾರ ಪಟ್ಟಣದ ಬಸವೇಶ್ವರ ವೃತ್ತದಲ್ಲಿ ಪಟಾಕಿ ಸಿಡಿಸಿ, ಸಿಹಿ ಹಂಚಿ ಸಂಭ್ರಮಿಸಿದರು.
ಬಿಜೆಪಿ ಮುಖಂಡ ಕಾಸುಗೌಡ ಬಿರಾದಾರ, ಸಂಜೀವ ಐಹೊಳೆ, ಅನೀಲ ಜಮಾದಾರ, ಅನೀಲಗೌಡ ಬಿರಾದಾರ, ದೇವೆಂದ್ರ ಕುಂಬಾರ, ಶೀಲವಂತ ಉಮರಾಣಿ ಮಾತನಾಡಿ ಕೇಂದ್ರ ಸರಕಾರದ ಸಾಧನೆಯನ್ನು ಹಾಗೂ ಸಂಸದ ಜಿಗಜಿಣಗಿ ಅವರು ಜಿಲ್ಲೆಗೆ ನೀಡಿದ ಅಭಿವೃಧ್ಧಿ ಯೋಜನೆಯನ್ನು ಗಮನಿಸಿ, ಜೊತೆರಗೆ ಜಿಗಜಿಣಗಿ ಅವರ ಸರಳತೆ ಕಂಡು ಜನತೆ ಬಿಜೆಪಿ ಸರಕಾರದ ಪರವಾಗಿ ಮತ ಚಲಾವಣೆ ಮಾಡಿ ಜಿಗಜಿಣಗಿ ಅವರನ್ನು ಗೆಲ್ಲಿಸಿದ್ದಾರೆ.
ಮತದಾರರು ಜಿಗಜಿಣಗಿ ಅವರ ಮೇಲೆ ಇಟ್ಟ ನಂಬಿಕೆಯನ್ನು ಉಳಿಸಿಕೊಳ್ಳುವ ಪ್ರಾಮಾಣಿಕ ಪ್ರಯತ್ನ ಜಿಗಜಿಣಗಿ ಅವರಿಂದ ಆಗಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಮಲ್ಲಿಕಾರ್ಜುನ ಹಾವಿನಾಳಮಠ, ಬಾಳು ಮುಳಜಿ, ರಾಮಸಿಂಗ ಕನ್ನೊಳ್ಳಿ, ಸಂಜೀವ ದಶವಂತ, ಅಶೋಕ ಬಳಬಟ್ಟಿ, ಮಾಧವರಾವ ಪವಾರ, ಹಣಮಂತ್ರಾಯಗೌಡ ಪಾಟೀಲ, ಮಲ್ಲಿಕಾರ್ಜುನ ಕಿವುಡೆ, ಶಾಂತು ಕಂಬಾರ, ಮಹೇಶ ಹೂಗಾರ, ಮಲ್ಲು ವಾಲೀಕಾರ, ಸೋಮು ನಿಂಬರಗಿಮಠ, ರಾಚು ಬಡಿಗೇರ, ನಾಗು ದಶವಂತ, ದತ್ತಾ ಬಂಡೇನವರ, ಸಚಿನ ಕುಂಬಾರ್, ಸಂಜೀವ ಬಡಿಗೇರ, ವೀರಬಸು ಅರಳಿ, ಸತೀಶ ಝಂಪಾ, ವಿಠ್ಠಲ ಪಟ್ಟಣ, ವೀರೇಂದ್ರ ಪಾಟೀಲ, ಎಸ್.ಆರ್. ಕುಂಬಾರ, ಭೀಮಾಶಂಕರ ಆಳೂರ ಸೇರಿದಂತೆ ಮತ್ತಿತರರು ಇದ್ದರು.
ಮಹಿಳೆಯರಿಂದ ಸಂಭ್ರಮಾಚರಣೆ:
ಜಿಗಜಿಣಗಿ ಅವರು ಗೆಲುವು ಸಾಧಿಸುತ್ತಿದ್ದಂತೆ ಬಿಜೆಪಿ ಮಹಿಳಾ ಮೋರ್ಚಾ ಕಾರ್ಯಕರ್ತೆಯರಾದ ಅನಸೂಯಾ ಮದರಿ, ಭೌರಮ್ಮ ನಾವಿ, ಶಾಮಲಾ ಬಗಲಿ, ಸುನಂದಾ ಗಿರಣಿವಡ್ಡರ, ವಿಜಯಲಕ್ಷ್ಮಿ ರೂಗಿಮಠ, ಮಾನಂದ ಸೋಲಂಕಾರ, ಶ್ರೀದೇವಿ ಕುಲಕರ, ಮಾಶ್ಯಾಳ ಬಸಪ್ಪ ಮರಡಿ, ದಿಶಾ ನಾದ ಮತ್ತಿತರರಿದ್ದರು.
ಜಿಗಜಿಣಗಿ ಅವರು ಗೆಲುವು ಸಾಧಿಸುತ್ತಿದ್ದಂತೆ ಗ್ರಾಮೀಣ ಭಾಗದ ಮಾವಿನಹಳ್ಳಿ, ಇಂಗಳಗಿ, ಲಚ್ಯಾಣ, ಪಡನೂರ, ಅಥರ್ಗಾ, ನಾಗಠಾಣ, ಜೇವೂರ, ಆಳೂರ, ಅಂಜುಟಗಿ, ಹಂಜಗಿ, ಶಿರಶ್ಯಾಡ, ನಾದ, ಸಂಗೋಗಿ, ಹಿರೇಬೇವನೂರ, ಅಗರಖೇಡ, ಗುಬ್ಬೇವಾಡ ಸೇರಿದಂತೆ ಇನ್ನಿತರ ಗ್ರಾಮಗಳ ಗ್ರಾಮಸ್ಥರು ಸಂಭ್ರಮಿಸಿದರು.
Subscribe to Updates
Get the latest creative news from FooBar about art, design and business.
Related Posts
Add A Comment

