ಇಂಡಿ: ಪಟ್ಟಣದ ಕುಂಬಾರ ಓಣಿಯಲ್ಲಿ ಜೂ. ೫ ರಿಂದ ೯ ರವರೆಗೆ ಚೌಡೇಶ್ವರಿ ದೇವರ ಜಾತ್ರಾ ಮಹೋತ್ಸವ ವಿಜೃಂಭಣೆಯಿಂದ ಜರುಗಲಿದೆ ಎಂದು ಜಾತ್ರಾ ಕಮೀಟಿ ತಿಳಿಸಿದೆ.
ಜೂನ್.೫ ರಂದು ರಾತ್ರಿ ೧೨ ಘಂಟೆಗೆ ಚೌಡೇಶ್ವರಿ ದೇವಿಯ ಬಾಳ ಬಟ್ಟಿಲು ಮೆರವಣಿಗೆ ಊರು ಸುತ್ತಿ ಪ್ರದಕ್ಷಿಣೆ ಹಾಕಿ, ಭೂತ ಪ್ರೇತಗಳ ಸಂಹಾರ ಮಾಡುವಳು.
ಜೂನ್ ೬ ರಂದು ಬೆಳಿಗ್ಗೆ ೯:೦೦ ಘಂಟೆಗೆ ಚೌಢೇಶ್ವರಿ ದೇವಸ್ಥಾನದಿಂದ ಮೆರವಣಿಗೆ ಹೊರಟು ಬಜಾರದಲ್ಲಿ ಮಜ್ಜಿಗೆ ಮಾಡಿ, ಅಕ್ಕಿ ಆಯುವಳು, ಊರ ಗೌಡರು (ದಾದಾಗೌಡರ) ಮನೆಗೆ ಹೋಗಿ ನಗರದ ಎಲ್ಲ ಭಕ್ತರ ಮನೆಗೆ ಹೋಗಿ ಉಡಿ ತುಂಬಿಕೊಂಡು, ಹರಕೆಗಳನ್ನು ಹೇಳಿ, ಶುಭ ಹಾರೈಸುತ್ತ ಅಂದು ರಾತ್ರಿ ೮:೦೦ ಘಂಟೆಗೆ ದೇವಸ್ಥಾನಕ್ಕೆ ಆಗಮಿಸುವಳು.
ಜೂನ್ ೭ ರಂದು ಮದ್ಹಾö್ಯಹ್ನ ೧ ಘಂಟೆಗೆ ದೇವಸ್ಥಾನದಿಂದ ಹೊರಟು, ಕುಂಬಾರ ಓಣಿಯ ದೇವಿಯ ಗುಡಿಯ ಮುಂದೆ ಬಡಿಗೇರ ಓಣಿಯಲ್ಲಿ, ಶಾಂಥೇಶ್ವರ ದೇವಸ್ಥಾನದ ಮುಂದುಗಡೆ, ಬಜಾರದಲ್ಲಿ, ಚವಡಿ, ಗಣೇಶ ನಗರ, ಹುಸೇನ ಭಾಷಾ ದರ್ಗಾ ಮುಂದುಗಡೆ ಭಕ್ತರ ಜೊತೆ ಕೋಲಾಟ ಆಡುವಳು ನಂತರ ಸಾಯಂಕಾಲ ೭:೦೦ ಘಂಟೆಗೆ ಗಂಗೆ ಸೀತಾಳ ಮುಗಿಸಿಕೊಂಡು ದೇವಸ್ಥಾನಕ್ಕೆ ಆಗಮಿಸುವಳು.
ಜೂನ್ ೮ ರಂದು ರಾತ್ರಿ ೯:೦೦ ಘಂಟೆಗೆ ದೇವಸ್ಥಾನದ ಆವರಣದಲ್ಲಿ ಗೋಪಾಲ ಹೂಗಾರ, ಗೋಪಾಲ ಇಂಚಗೇರಿ ಕಲಾ ಸಿಂಚನ ತಂಡದಿಂದ ಹಾಸ್ಯ ಮತ್ತು ರಸಮಂಜರಿ ಕಾರ್ಯಕ್ರಮ ಜರತುಗುವುದು.
ಜೂನ್: ೯ ರಂದು ದೇವಿಯ ಮೂರ್ತಿಯ ದಂಡಿ ಇಳಿಸುವ ಕಾರ್ಯಕ್ರಮದ ಜೊತೆಗೆ ಭಕ್ತಾದಿಗಳಿಗೆ ಪ್ರಸಾದ ವಿತರಣಾ ಕಾರ್ಯಕ್ರಮವಿರುತ್ತದೆ ಎಂದು ಜಾತ್ರಾ ಕಮೀಟಿ ಪ್ರಕಟಣೆ ತಿಳಿಸಿದೆ.
Subscribe to Updates
Get the latest creative news from FooBar about art, design and business.
Related Posts
Add A Comment

